BBK 10: ಅಸಮರ್ಥರಿಂದ ನಾಲಾಯಕ್ ಪಟ್ಟ ಪಡೆದವರು ಯಾರು..? ಫಸ್ಟ್ ಕ್ಯಾಪ್ಟನ್ ಅವಕಾಶ ಮಿಸ್ ಮಾಡಿಕೊಂಡ ಇಶಾನಿ..!
ಬಿಗ್ ಬಾಸ್ ಮನೆ ಮೂರೇ ದಿನಕ್ಕೇ ಒಂದಷ್ಟು ಕುತೂಹಲವನ್ನು ತರುತ್ತಿದೆ. ಒಂದಷ್ಟು ಜಗಳಗಳು ಆರಂಭದಲ್ಲಿಯೇ ನಡೆಯುತ್ತಿವೆ. ಅದಕ್ಕೆ ಕಾರಣ ಒಳಗಿರುವ ಅಭ್ಯರ್ಥಿಗಳು. ರಕ್ಷಕ್ ಹಾಗೂ ಡ್ರೋನ್ ಪ್ರತಾಪ್ ಬೇಗ ಟ್ರಿಗರ್ ಆಗುತ್ತಾರೆ. ಹಾಗೇ ಸ್ನೇಹಿತ್ ಎಲ್ಲವನ್ನು ವೈಯಕ್ತಿಕವಾಗಿ ಕೆಣಕುವ ನಡವಳಿಕೆ ತೋರುತ್ತಿದ್ದಾರೆ. ಸದ್ಯಕ್ಕೆ ನಿನ್ನೆಯಷ್ಟೇ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಇಂದು ಕ್ಯಾಪ್ಟನ್ ಆಯ್ಕೆ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಬಯಕೆ ಎಲ್ಲಾ ಸ್ಪರ್ಧಿಗಳಲ್ಲೂ ಇದ್ದೇ ಇರುತ್ತದೆ. ಅದಕ್ಕಾಗಿಯೇ ಸಾಕಷ್ಟು ಶ್ರಮ ಹಾಕುತ್ತಾರೆ. ಅದರಲ್ಲೂ ಮೊದಲ ಕ್ಯಾಪ್ಟನ್ ಆಗುವುದು ಎಲ್ಲರ ದೊಡ್ಡ ಕನಸು. ಸದ್ಯಕ್ಕೆ ಈ ಸೀಸನ್‌ನ ಮೊದಲ ಕ್ಯಾಪ್ಟನ್ ರೇಸ್‌ನಿಂದ ಇಶಾನಿ ಹೊರಗುಳಿದಿದ್ದಾರೆ.

ಇನ್ನೆಷ್ಟು ದಿನ ಈ ಶಿಕ್ಷೆ?
ಬಿಗ್ ಬಾಸ್ ಮನೆಯೊಳಗೆ ಈ ಬಾರಿ ಸಮರ್ಥರು ಹಾಗೂ ಅಸಮರ್ಥರು ಎಂಬ ಕಾನ್ಸೆಪ್ಟ್‌ನಲ್ಲಿ ಆಯ್ಕೆ ನಡೆಯುತ್ತಿದೆ. ಹೀಗಾಗಿ ಏಳು ಜನ ಅಸಮರ್ಥರಾಗಿ ಒಳಗೆ ಬಂದಿದ್ದಾರೆ. ಬಿಗ್ ಬಾಸ್ ಅವರಿಗೇನೆ ಎಲ್ಲಾ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಹಾಗೆ ನೆಲದಲ್ಲಿಯೇ ಮಲಗಬೇಕು. ಇಷ್ಟೆಲ್ಲ ಶಿಕ್ಷೆಯ ನಡುವೆಯೂ ಕ್ಯಾಪ್ಟನ್ ರೇಸ್‌ನಲ್ಲೂ ಅಸಮರ್ಥರು ಇಲ್ಲ.
ಅಸಮರ್ಥರಿಗೆ ಸಿಕ್ಕಿತು ಸ್ಪೆಷಲ್ ಅಧಿಕಾರ
ಬಿಗ್ ಬಾಸ್ ಮನೆಯಲ್ಲಿ ಮೊದಲ ಕ್ಯಾಪ್ಟನ್ ಆಗಬೇಕು ಎಂಬುದು ಎಲ್ಲರ ಆಸೆ. ಆದರೆ, ಈಗಾಗಲೇ ನಾಮಿನೇಷನ್ ಆಗಿರುವವರಿಗೆ ಜೊತೆಗೆ ಅಸಮರ್ಥರಿಗೆ ಈ ಅವಕಾಶವಿಲ್ಲ. ಇನ್ನುಳಿದ ಏಳು ಮಂದಿ ಕ್ಯಾಪ್ಟನ್ ರೇಸ್‌ನಲ್ಲಿದ್ದಾರೆ. ಈ ಏಳು ಮಂದಿಯಲ್ಲಿ ಒಬ್ಬರನ್ನು ನಾಲಾಯಕ್ ಎಂದು ಅಸಮರ್ಥರು ಆಯ್ಕೆ ಮಾಡಬೇಕು. ಆ ಒಂದು ಸ್ಪೆಷಲ್ ಅಧಿಕಾರವನ್ನು ವೋಟಿಂಗ್ ಮೂಲಕ ಆಯ್ಕೆ ಮಾಡುವ ಅವಕಾಶ ನೀಡಿದ್ದಾರೆ.
ಯಾರೆಲ್ಲಾ ಹೊರಗುಳಿದರು..?
ಅಸಮರ್ಥರು ಒಬ್ಬೊಬ್ಬರಾಗಿಯೇ ಬಂದು ಅವರಿಗೆ ಯಾರು ಕ್ಯಾಪ್ಟನ್ ಆಗುವುದಕ್ಕೆ ಅನರ್ಹರು ಎಂಬುದನ್ನು ತಿಳಿಸಿದ್ದಾರೆ. ಮೊದಲಿಗೆ ಬಂದಂತ ಸಂತೋಷ್, ಇಶಾನಿ ಹೆಸರನ್ನು ತೆಗೆದುಕೊಂಡಿದ್ದಾರೆ. ನಿನ್ನೆ ನಾಮಿನೇಟ್ ಮಾಡುವಾಗ ವೋಟ್ ಗೋಸ್ಕರ ಬಂದು ಮಾತಾಡಿಸ್ತಾರೆ ಅಂತ ಹೇಳಿದ್ರು. ತನಿಷಾ, ನಮ್ರತಾ ಅವರನ್ನು ನಾಮಿನೇಷನ್ ಮಾಡಿದ ಮೇಲೆ ವಾದ ವಿವಾದ ನಡೆಯಿತು. ಕ್ಯಾಪ್ಟನ್ ಅಂತ ಬಂದಾಗ ಒಂದು ನಾಣ್ಯದಲ್ಲಿ ಎರಡು ಮುಖವನ್ನು ತಿರುವಿ ನೋಡಬೇಕು. ಆದರೆ, ನಮ್ರತಾ ವಿಚಾರದಲ್ಲಿ ಹಾಗಾಗಿಲ್ಲ ಎಂದಿದ್ದಾರೆ. ಪ್ರತಾಪ್, ಸ್ನೇಹಿತ್ ಹೆಸರನ್ನು ತೆಗೆದುಕೊಂಡಿದ್ದು, ಎಷ್ಟೊ ಜನ ನನ್ನ ಕಾಮಿಡಿಯನ್ನು ಮಾಡುತ್ತಾರೆ. ಆದರೆ ಅದು ಜೆನ್ಯೂನ್ ಆಗಿರಲಿಲ್ಲ ಎಂದಿದ್ದಾರೆ. ಸಂಗೀತಾ, ವಿನಯ್ ಹೆಸರು, ರಕ್ಷಕ್ ಕೂಡ ಈಶಾನಿ ಹೆಸರನ್ನೇ ತೆಗೆದುಕೊಂಡಿದ್ದಾರೆ. ಕಾರ್ತಿಕ್ , ತುಕಾಲಿ ಸಂತೋಷ್ ಹೆಸರನ್ನು ತೆಗೆದುಕೊಂಡು ನಾಲಾಯಕ್ ಬೋರ್ಡ್ ತಗಲಾಕಿದ್ದಾರೆ.
ಕ್ಯಾಪ್ಟನ್ ಆಯ್ಕೆಯಿಂದ ಇಶಾನಿ ಹೊರಗೆ
ಅಸಮರ್ಥರು ಯಾರನ್ನು ಹೆಚ್ಚು ಆಯ್ಕೆ ಮಾಡುತ್ತಾರೆ ಅವರು ಕ್ಯಾಪ್ಟನ್ ಸ್ಪರ್ಧೆಯಲ್ಲಿ ಇರುವುದಿಲ್ಲ. ಅದರಂತೆ ಆರು ಜನರಲ್ಲಿ ಐದು ಜನರ ಆಯ್ಕೆ ಮಾಡಲಾಗಿತ್ತು. ಇಶಾನಿ ಎರಡು ಬಾರಿ ಆಯ್ಕೆಯಾಗಿದ್ದರಿಂದ ಕ್ಯಾಪ್ಟನ್ ರೇಸ್‌ನಿಂದ ಹೊರಗೆ ಉಳಿದಿದ್ದಾರೆ. ಇನ್ನುಳಿದ ಆರು ಜನ ಕ್ಯಾಪ್ಟನ್ ಚಾಲೆಂಜ್ ಸ್ವೀಕರಿಸಿದ್ದಾರೆ. ಇದರ ಮಧ್ಯೆ ಅಸಮರ್ಥರೆಲ್ಲಾ ಖುಷಿ ಪಟ್ಟಿದ್ದಾರೆ. ನಾವ್ಯಾರು ಒಬ್ಬರನ್ನು ಟಾರ್ಗೆಟ್ ಮಾಡಿಲ್ಲ. ಇದರಲ್ಲಿ ಅರ್ಥ ಆಗುತ್ತೆ ಜೆನ್ಯೂನ್ ಅಂತ ಎಂದು ಖುಷಿ ಪಟ್ಟಿದ್ದಾರೆ.


Click it and Unblock the Notifications











