BBK 10: ಬಿಗ್ ಬಾಸ್‌ನಲ್ಲಿ ಬೆಸ್ಟ್ ಫ್ರೆಂಡ್ಸ್ ಅಂದ್ರೆ ಯಾರು ಗೊತ್ತಾ..? ಗಾಸಿಪ್‌ನಲ್ಲೂ ಇವರೇ ಮುಂದು..!
ಸಮಾನ ಮನಸ್ಕರು ಮಾತ್ರ ಹೆಚ್ಚು ಬಾಂಡಿಂಗ್ ನಲ್ಲಿರುತ್ತಾರೆ ಎಂಬ ಮಾತಿದೆ. ಅದನ್ನು ಸಾಕಷ್ಟು ಕ್ಷೇತ್ರಗಳಲ್ಲೂ ನೋಡಿದ್ದೀವಿ. ಸಮಾನ ಮನಸ್ಕರು ಅಂದರೆ ಯೋಚನೆ ಮಾಡುವುದರಿಂದ ಹಿಡಿದು ಗಾಸಿಪ್‌ನಲ್ಲೂ ಅದೇ ರೀತಿ ಮಾತನಾಡುವವರು. ಗೇಲಿ ಮಾಡಿದರು. ಹೌದು.. ಹೌದು ಅವರು ಹೀಗೆ ಅಂತ ಮಾತಿಗೆ ಮಾತು ಜೋಡಿಸುವವರನ್ನೇ ಸಮಾನ ಮನಸ್ಕರು ಎನ್ನಲಾಗುತ್ತದೆ. ಬಿಗ್ ಬಾಸ್‌ನಲ್ಲೂ ಅಂಥದ್ದೊಂದು ಬಳಗ ಕಾಣಿಸುತ್ತಿದೆ.
ಬಿಗ್ ಬಾಸ್‌ನಲ್ಲಿ ದಿನ ಕಳೆದಂತೆ ಟೀಂ ಆಗುವುದು ಸಹಜ. ಅದು ಎಲ್ಲ ಸೀಸನ್‌ನಲ್ಲಿಯೂ ಇದು ಸಹಜವೇ ಸರಿ. ಆದರೆ, ಈ ಸೀಸನ್‌ನಲ್ಲಿ ಬಾಯ್ಸ್ ಮೊದಲಿಗೆ ಗ್ರೂಪ್ ಮಾಡಿಕೊಂಡಿದ್ದಾರೆ. ಅದು ಗಾಸಿಪ್ ಮಾಡುವುದಕ್ಕೆ ಈ ಗುಂಪು ಸಿಕ್ಕಾಪಟ್ಟೆ ಸಮಯ ಕೊಡುತ್ತದೆ.

ತುಕಾಲಿ ಹಾಸಿಗೆಗೆ ಬಂದ ಸಂತೋಷ್
ವರ್ತೂರು ಸಂತೋಷ್ ಒಂದು ವಾರಗಳ ಕಾಲ ಅಸರ್ಮಥರ ಪಟ್ಟಿಯಲ್ಲಿದ್ದರು. ಹೀಗಾಗಿ ನೆಲದ ಮೇಲೆಯೇ ಮಲಗಬೇಕಿತ್ತು. ಕಿಚ್ಚನ ಪಂಚಾಯತಿ ಆದಮೇಲೆ ಈಗ ಮನೆಯಲ್ಲಿ ಎಲ್ಲರೂ ಸಮರ್ಥರೆ. ಹೀಗಾಗಿ ಬೆಡ್ ಮೇಲೆಯೇ ಮಲಗಬಹುದು. ಈ ಅವಕಾಶ ಸಿಕ್ಕ ಕೂಡಲೇ ವರ್ತೂರು ಸಂತೋಷ್ ಆಯ್ಕೆ ಮಾಡಿಕೊಂಡಿದ್ದು, ತುಕಾಲಿ ಬೆಡ್ ಅನ್ನೇ.
ಗಾಸಿಪ್ ಮಾಡುತ್ತಾ ಕೂತ ಮೂವರು
ಬಿಗ್ ಬಾಸ್ ಮನೆಯಲ್ಲಿ ಸದ್ಯ ಸಿಕ್ಕಾಪಟ್ಟೆ ಕ್ಲೋಸ್ ಫ್ರೆಂಡ್ ಎಂಬ ಲೀಸ್ಟ್ ತೆಗೆದುಕೊಂಡರೆ ಅದರಲ್ಲಿ ಸಂತೋಷ್ ಮತ್ತೊಂದು ರಕ್ಷಕ್ ಸೇರಿಕೊಳ್ಳುತ್ತಾರೆ. ವರ್ತೂರು ಸಂತೋಷ್ ಅಸಮರ್ಥ ಟೀಂನಲ್ಲಿದ್ದಾಗಲೂ ಹೆಚ್ಚು ಕಾಣಿಸಿಕೊಂಡಿದ್ದು ಸಮರ್ಥರ ಜೊತೆಗೇನೆ. ಇನ್ನುಳಿದ ಸಮರ್ಥರೆಲ್ಲಾ ಒಂದಾಗಿದ್ದರು. ಆದರೆ ಅಸಮರ್ಥರ ತಂಡದಲ್ಲೇ ಇದ್ದರು ಅವರದ್ದೇ ಟೀಂ ಪ್ರತಾಪ್ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಿದ್ದಾರೆ. ತುಕಾಲಿ ಹೇಳುವ ಮಾತಿಗೆಲ್ಲಾ ಹೌದು ಅಣ್ಣಾ ಹೌದು ಅಂತ ಮಾತು ಜೋಡಿಸಿದ್ದಾರೆ.
ಗುಸಗುಸ ಪಿಸು ಪಿಸು.. ಆದರೆ ಏನು ಕೇಳಿಸಿಲ್ಲ
ಸೂಪರ್ ಸಂಡೇ ವಿತ್ ಸುದೀಪ ಪಂಚಾಯತಿ ಮುಗಿದ ಮೇಲೆ ಇವರ ಪಂಚಾಯತಿ ಶುರುವಾಗಿತ್ತು. ಎರಡು ಸಂತೋಷ್ ನಡುವೆ ಒಂದು ಬುಲೆಟ್ ಕೂತು ಗುಸುಗುಸು ಪಿಸುಪಿಸು ಶುರು ಮಾಡಿದ್ದರು. ಕಾರ್ತೀಕ್, ಪ್ರತಾಪ್, ವಿನಯ್ ಎಂಬ ಹೆಸರು ಬಿಟ್ಟರೆ ಇನ್ನೇನು ಸ್ಪಷ್ಟವಾಗಿ ಕೇಳಿಸಲೇ ಇಲ್ಲ. ಟಿವಿಯ ಸ್ಪೀಕರ್‌ಗೆ ಕಿವಿ ಇಟ್ಟು ಕೇಳಿದರೂ ಅವರಾಡುತ್ತಿದ್ದ ಮಾತುಗಳು ಕೇಳಿಸುತ್ತಾ ಇರಲಿಲ್ಲ. ಇದರ ನಡುವೆ ವರ್ತೂರು ಸಂತೋಷ್‌ಗೆ ಅನುಮಾನ ಬೇರೆ. ನಾವಾಡುವ ಮಾತುಗಳು ಕೇಳಿಸುತ್ತಿವೆಯಾ ಅಂತ. ಅದಕ್ಕೆ ತುಕಾಲಿ ನೋ.. ನೋ.. ಅಂದಿದ್ದೇ ಆಯ್ತು.
ತಪ್ಪಾದಾಗ ಎಚ್ಚರಿಕೆ ಕೊಡದ ಬಿಗ್ ಬಾಸ್
ಬಿಗ್ ಬಾಸ್ ಒಂದು ವಾರವಾದರೂ ಸೈಲೆಂಟ್ ಆಗಿರುವುದು ಯಾಕೆ ಎಂಬುದೇ ಎಲ್ಲರ ಪ್ರಶ್ನೆ. ಯಾಕಂದ್ರೆ ಮನೆಯೊಳಗೆ ಯಾರಾದರೂ ಪಿಸುಪಿಸು ಎನ್ನುತ್ತಿದ್ದರೆ ಬಿಗ್ ಬಾಸ್ ಅವರಿಗೆ ಶಿಕ್ಷೆ ನೀಡುತ್ತಿತ್ತು. ರೂಲ್ಸ್ ಬ್ರೇಕ್ ಮಾಡಿದರೆ ಎಚ್ಚರಿಸುತ್ತಾ ಇತ್ತು, ಮೈಕ್ ಮರೆತರೆ ನೆನಪಿಸುತ್ತಾ ಇತ್ತು. ಆದರೆ ಈ ಬಾರಿ ಸ್ಪರ್ಧಿಗಳು ಈಗಾಗಲೇ ಈ ಎಲ್ಲಾ ತಪ್ಪನ್ನು ಮಾಡಿದ್ದಾರೆ. ಆದರೂ ಬಿಗ್ ಬಾಸ್ ಧ್ವನಿ ಮಾತ್ರ ಕೇಳಿಸುತ್ತಿಲ್ಲ. ಒಂದು ವಾರ ಅಲ್ವಾ, ಆಡಿಕೊಂಡಂತೆ ಆಡಲಿ ಎಂದೇನಾದರೂ ಬಿಗ್ ಬಾಸ್ ಬಿಟ್ಟಿರಬಹುದು. ಇಂದು ಬಿಗ್ ಬಾಸ್ ಕಡೆಯಿಂದ ಯಾವ ರೀತಿಯ ಎಚ್ಚರಿಕೆ ಬರುತ್ತೆ ಎಂಬುದನ್ನು ನೋಡೋಣ.


Click it and Unblock the Notifications











