BBK 10: ಕಿಚ್ಚನ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ ಶೃಂಗೇರಿ.. ಕಾರಣ ಹೀರೋಯಿಸಂ

By ಎಸ್ ಸುಮಂತ್

ಬಿಗ್ ಬಾಸ್ ವಾರಪೂರ್ತಿ ನೋಡುವುದು ಒಂದು ಮನರಂಜನೆಯಾದರೆ ವೀಕೆಂಡ್‌ನಲ್ಲಿ ಬರುವ 'ವಾರದ ಕಥೆ ಕಿಚ್ಚನ ಜೊತೆ' ಹಾಗೂ 'ಸಂಡೇ ವಿತ್ ಸುದೀಪ' ಕಾರ್ಯಕ್ರಮಕ್ಕಾಗಿಯೇ ಸಾಕಷ್ಟು ಜನ ಕಾಯುತ್ತಾ ಕೂರುತ್ತಾರೆ. ಈ ಸೀಸನ್‌ನಲ್ಲಂತೂ ಆದಷ್ಟೂ ಬೇಗ ಶನಿವಾರ ಬರಲಿ ಎಂದೆ ಕಾಯುತ್ತಿದ್ದರು.

ಕಿಚ್ಚ ಸುದೀಪ್ ಪಂಚಾಯತಿಯಲ್ಲಿ ಹಲವು ವಿಚಾರಗಳು ಚರ್ಚೆಯಾಗುತ್ತವೆ. ಹಲವು ತಪ್ಪುಗಳ ಅರಿವು ಮೂಡಿಸುತ್ತಾರೆ. ಸರಿ ತಪ್ಪುಗಳ ವಿಶ್ಲೇಷಣೆಯಾಗುತ್ತದೆ. ಅಷ್ಟೇ ಅಲ್ಲ ಹಲವು ಅವಾರ್ಡ್ ಗಳು ಸಿಗುತ್ತವೆ. ಈ ವಾರ ಸಂಗೀತ ಎಲ್ಲರ ಹೀರೋ ಆಗಿದ್ದಾರೆ.

bbk-10-sangeeth-sringeri-got-hearts

ಹೊಸ ಟಾಸ್ಕ್ ಕೊಟ್ಟ ಕಿಚ್ಚ ಸುದೀಪ್

ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳ ನಡುವೆಯೇ ಆಗಾಗ ಒಂದಷ್ಟು ಕಾಂಪಿಟೇಷನ್ ನಡೆಯುತ್ತೆ. ಒಂದೇ ಮನೆ ಹದಿನೇಳು ಮಂದಿ. ನೋಡಿದವರ ಮುಖವನ್ನೇ ನೋಡಬೇಕು. ಮಾತನಾಡಿದವರ ನಡುವೆಯೇ ಮಾತನಾಡಬೇಕು. ಇದರ ನಡುವೆ ಗೆಲ್ಲಬೇಕೆಂಬ ಸ್ಪರ್ಧೆಯೂ ಇರುತ್ತೆ. ಇದೆಲ್ಲವನ್ನು ಮೀರಿ ಒಬ್ಬರ ಬಗ್ಗೆ ಇನ್ನೊಬ್ಬರ ಅಭಿಪ್ರಾಯ ಏನಾಗಿರುತ್ತದೆ ಎಂಬುದನ್ನು ತಿಳಿಯಲು ಹಲವು ರೀತಿಯ ಟಾಸ್ಕ್‌ಗಳನ್ನು ಶುರು ಮಾಡುತ್ತಾರೆ. ಸಂಡೇ ವಿತ್ ಸುದೀಪ ಪಂಚಾಯತಿಯಲ್ಲಿ ಹೀರೋ, ವಿಲನ್, ಖಾಲಿ ಡಬ್ಬದ ಟಾಸ್ಕ್ ನೀಡಲಾಗಿತ್ತು.

ಸಂಗೀತಾ ಎಲ್ಲರ ಹೀರೋ

ಸಂಗೀತಾ ಮೊದಲಿಗೆ ಬಂದಾಗಿನಿಂದ ಅಸಮರ್ಥರ ಪಟ್ಟಿಯಲ್ಲಿ ಬಂದಿದ್ದರು. ಎಲ್ಲಾ ಕೆಲಸವನ್ನು ಅಸಮರ್ಥರೇ ಮಾಡಬೇಕಿತ್ತು. ಸಂಗೀತ, ತನಿಶಾ, ಕಾರ್ತಿಕ್ ಅಡುಗೆ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಎಲ್ಲಾ‌ ಕೆಲಸದಲ್ಲೂ ಭಾಗವಹಿಸುತ್ತಾರೆ. ಪ್ರೀತಿಯಿಂದ ಎಲ್ಲರನ್ನು ನೋಡಿಕೊಳ್ಳುತ್ತಾರೆ. ಎಲ್ಲರೂ ಹಿಂದೆ ಇದ್ರೆ ಅವರು ಮುಂದೆ‌ ನಿಂತು ಮೆಂಟೈನ್ ಮಾಡಿದ್ದಾರೆ. ಟಾಯ್ಲೆಟ್ ರೂಮೆಲ್ಲ ಕ್ಲೀನ್ ಮಾಡಿದ್ದಾರೆ. ಮೊದಲ ದಿನದ ಟಾಸ್ಕ್‌ನಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ. ತಲೆ ತಿರುಗುವಂತೆ ತಿರುಗಿಸಿದರು ಅವರು ಗೆಲ್ಲುವಂತೆ ನೋಡಿಕೊಂಡರು. ಅಡುಗೆ ಮಾಡುವುದು ದೊಡ್ಡದಲ್ಲ. ಅಡುಗೆ ಮಾಡುವುದಕ್ಕೆ ಬೇಕಾದ ಪದಾರ್ಥಗಳಿಗೆ ಟಫ್ ಟಾಸ್ಕ್‌ನಲ್ಲಿ ಗೆದ್ದಿದ್ದಾರೆ ಎಂದು ಮನೆಯಲ್ಲಿ ಇರುವ ಹದಿನೇಳು ಮಂದಿಯಲ್ಲಿ ಏಳು ಹಾರ್ಟ್‌ಗಳು ಸಂಗೀತಾ ಪಾಲಾಗಿದೆ.

ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ

ಇಷ್ಟೊಂದು ಹಾರ್ಟ್ ಕಂಡು ಸಂಗೀತಾ ನಿಜಕ್ಕೂ ಖುಷಿಯಾಗಿದ್ದಾರೆ. ಸುದೀಪ್ ಅಭಿಪ್ರಾಯ ಕೇಳಿದಾಗ, "ನಾನು ಒಂದು ಸಿಗಲ್ಲ ಅಂದುಕೊಂಡಿದ್ದೆ. ನನ್ನ ಲೈಫ್‌ನಲ್ಲೂ ಅಷ್ಟೇ ಮಾಡಿದ ಕೆಲಸಕ್ಕೆ ಗೌರವ ಸಿಕ್ಕಿಲ್ಲ ಅಂತ. ಮೊನ್ನೆ ಕೂಡ ನಾನು ಮಾಡಿದ ಕೆಲಸವನ್ನು ಯಾರೂ ಗುರುತಿಸಲಿಲ್ಲ. ಅದು ಬೇಸರ ಆಗಿತ್ತು. ನಿಜಕ್ಕೂ ಅಳು ಬರುತ್ತಾ ಇದೆ. ಶ್ಯಾಮ್ ಸರ್‌ಗೆ ನಾನು ರಾಂಗ್ ವೋಟ್ ಹಾಕಿದ್ದರು ಕೂಡ ಅವರು ಅವರ ನಿರ್ಧಾರದ ಮೇಲೆ ನಿಂತಿದ್ದಾರೆ. ಥ್ಯಾಂಕ್ಯೂ ಸೋ ಮಚ್" ಎಂದಿದ್ದಾರೆ.

ಹಾರ್ಟ್ ಪಡೆದ ಸಂಗೀತಾಗೆ ಕಿಚ್ಚ ಹೇಳಿದ್ದೇನು..?

ಸಂಗೀತಾ ಒಂದು ಸಿಗಲ್ಲ ಎಂದುಕೊಂಡಿದ್ದರು. ಹೀಗೆ ಇಷ್ಟೊಂದು ಹಾರ್ಟ್ ಸಿಕ್ಕಿದ್ದು ಆಶ್ಚರ್ಯ ಆಯ್ತು ಎಂದ ಸಂಗೀತಾಗೆ ಸುದೀಪ್ ಸಲಹೆ ನೀಡಿದ್ದಾರೆ. "ಒಂದು ಸಿಕ್ಕಿಲ್ಲ ನಿಜ. ಹಾರ್ಟ್ ಬಿಟ್ರೆ ಬೇರೆ ಸಿಕ್ಕಿಲ್ಲ. ಇದು ಸಿಗುತ್ತೆ ಎಂದು ಗೊತ್ತಾಗಿ ಕೆಲಸ ಮಾಡಿದ್ದರೆ ಈ ಖುಷಿ ಇರುತ್ತಾ ಇತ್ತಾ..?" ಎಂದು ಪ್ರಶ್ನಿಸಿದ್ದಾರೆ.

ವಿಲನ್ ಅಂಡ್ ಖಾಲಿ ಡಬ್ಬ ಈ ತುಕಾಲಿ

ತುಕಾಲಿ ಸಂತೋಷ್ ಹಾಗೂ ವಿನಯ್‌ಗೆ ವಿಲನ್ ಹಾಗೂ ಖಾಲಿ ಡಬ್ಬದ ಅವಾರ್ಡ್ ನೀಡಿದ್ದಾರೆ. ಇದಕ್ಕೆ ಕೊಟ್ಟ ಉದಾಹರಣೆ, ಪ್ರತಾಪ್‌ನ ಅಳಿಸಿದ್ದೇ ಹೆಚ್ಚಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ತುಕಾಲಿ ಸಂತು, "ಎಲ್ಲರೂ ನಮ್ಮವರೇ. ಪ್ರತಿ ವಿಲನ್ ಹಾಕುವಾಗ ಎಚ್ಚರಿಸಿದಂತೆ ಇದೆ. ಖಾಲಿ ಡಬ್ಬ ಅಂತ ಕೊಟ್ಟಿರುವುದು ಸೌಂಡ್ ಮಾಡುವುದಕ್ಕೆ ಕೊಟ್ಟಿದ್ದಾರೆ‌" ಎಂದಿದ್ದಾರೆ.

More from Filmibeat

English summary
Bigg Boss Kannada season 10 October 12th episode Sangeetha Sringeri got hearts do you know why
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X