BBK 10: ನಾಮಿನೇಟ್ ಮಾಡುವುದಕ್ಕೆ ಸ್ಪರ್ಧಿಗಳಿಗೆ ಕಾರಣವೇ ಇಲ್ವಾ..? ಸಿಲ್ಲಿ ಕಾರಣಕ್ಕೆ ಮನೆ ರಣರಂಗ..!

By ಎಸ್ ಸುಮಂತ್

ಬಿಗ್ ಬಾಸ್ ಮನೆ ಒಂದು ಗೇಮ್ ಝೋನ್. ಇಲ್ಲಿ ನಾವೂ ಗೆಲ್ಲಬೇಕು ಎಂದೇ ಎಲ್ಲರೂ ಬರುತ್ತಾರೆ. ಒಬ್ಬರು ಗೆಲ್ಲಬೇಕು ಎಂದರೆ ಒಬ್ಬೊಬ್ಬರು ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ. ಅದಕ್ಕೆಂದೇ ನಾಮಿನೇಷನ್ ಪ್ರಕ್ರಿಯೆಯನ್ನು ಇಡಲಾಗುತ್ತದೆ. ಅದರಲ್ಲಿ ಬಿಗ್ ಬಾಸ್ ಸೂಕ್ತ ಕಾರಣ ನೀಡಿ ಎಂದೇ ಹೇಳುತ್ತೆ. ಆದರೆ, ಅದೇ ನಾಮಿನೇಷನ್ ಪ್ರಕ್ರಿಯೆಯಿಂದ ಇಂದು ಮನೆ ರಣರಂಗವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಆಗಾಗ ಹೊಸತನ ಇದ್ದೇ ಇರುತ್ತದೆ. ಅದು ಟಾಸ್ಕ್‌ನಲ್ಲಾದರು ಸರಿ, ಇನ್ಯಾವುದರಲ್ಲಾದರೂ ಸರಿ. ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ ಎದ್ದ ಕೂಡಲೆ ಸಾಂಗ್ ಹಾಕಿ ಡ್ಯಾನ್ಸ್ ಮಾಡುವುದಕ್ಕೆ ಅವಕಾಶ ನೀಡುತ್ತಾರೆ. ಆದರೆ, ಇದು ಮೊದಲ ಬಾರಿಗೆ ಸ್ಪರ್ಧಿಗಳು ಎದ್ದ ಕೂಡಲೇ ನಾಮಿನೇಷನ್ ಮಾಡುವುದಕ್ಕೆ ಹೇಳಿದ್ದಾರೆ. ಎಲ್ಲರೂ ನಿದ್ದೆಗಣ್ಣಿನಲ್ಲಿಯೇ ನಾಮಿನೇಷನ್ ಮಾಡಿದ್ದಾರೆ. ನಾಮಿನೇಷನ್ ಮುಗಿದ ಮೇಲೆ ಬಿಗ್ ಬಾಸ್ ಒಂದು ಹಾಡನ್ನು ಹಾಕಿದ್ದಾರೆ. ಅದು ಹೇಗಿತ್ತು ಅಂದ್ರೆ ಯಾರಾದ್ರೂ ಹಾಳಾಗೋಗ್ಲಿ ನಾವ್ ನೆಟ್ಟಗಿದ್ರೆ ಸಾಕು ಎಂಬ ಹಾಡು. ನಾಮಿನೇಷನ್ ಪ್ರಕ್ರಿಯೆ ಮುಗಿದು ಎಲ್ಲರೂ ಕುಣಿದಿದ್ದಾರೆ.

bbk-10-nomination-fight-

ನಾಮಿನೇಷನ್‌ಗೆ ಅಲ್ಲಿಯೇ ತಿರುಗೇಟು

ನಾಮಿನೇಷನ್ ಮಾಡುವಾಗ ಎಲ್ಲರೂ ಒಂದೊಂದು ಕಾರಣ ಹೇಳಬೇಕಿತ್ತು. ಈ ವಾರ ಭಾಗ್ಯಶ್ರೀ, ತುಕಾಲಿ ಸಂತು, ಮೈಕೆಲ್, ಗೌರೀಶ್, ಸಂಗೀತ ನಾಮಿನೇಟ್‌ ಆಗಿದ್ದಾರೆ. ಈ ವೇಳೆ ಸಾಕಷ್ಟು ಜನ ಭಾಗ್ಯಶ್ರೀ ಅವರ ಹೆಸರನ್ನು ತೆಗೆದುಕೊಂಡರು. ಅದರಲ್ಲಿ ನೀತು ಹೇಳಿದ ಕಾರಣ ಭಾಗ್ಯಶ್ರೀ ಇಷ್ಟವಾಗಲಿಲ್ಲ. ತಕ್ಷಣ ಭಾಗ್ಯಶ್ರೀ ಪ್ರತಿಕ್ರಿಯೆ ನೀಡಿದರು. ಬಳಿಕ ವರ್ತೂರು ಸಂತೋಷ್ ನೀಡಿದ ಕಾರಣ ನಮ್ರತಾಗೆ ಸರಿ ಹೋಗಲಿಲ್ಲ. ಅದನ್ನ ನಾನು ಒಪ್ಪಲ್ಲ ಅಂದ್ರು. ಗೌರೀಶ್‌ಗೆ ತನಿಶಾ ಹೇಳಿದ ಕಾರಣ ಮ್ಯಾಚ್ ಆಗಲ್ಲ ಅನ್ನಿಸಿದೆ. ತುಕಾಲಿ ಸಂತು ಹಾಗೂ ಕಾರ್ತಿಕ್ ನಡುವೆ ಜೋರು ಜಗಳವೇ ನಡೆದಿದೆ.

ಕಾರ್ತಿಕ್ ಮತ್ತು ಸ್ನೇಹಿತ್ ನಡುವೆ ಯುದ್ಧ

ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಬಿಗ್ ಬಾಸ್ ಸ್ನೇಹಿತ್‌ಗೆ ಒಂದು ವಿಶೇಷ ಅಧಿಕಾರ ನೀಡಿದರು. ಅದು ನೇರವಾಗಿ ಇಬ್ಬರನ್ನು ನಾಮಿನೇಷನ್ ಮಾಡುವುದಕ್ಕೆ ಹೇಳಿದರು. ಆಗ ತನಿಶಾ, ಕಾರ್ತಿಕ್ ಹೆಸರನ್ನು ತೆಗೆದುಕೊಂಡರು. ಆದರೆ, ಕಾರ್ತಿಕ್‌ಗೆ ಈ ಕಾರಣ ಸೂಕ್ತ ಎನಿಸಲೇ ಇಲ್ಲ. ಯಾಕಂದ್ರೆ, ಟೊಮೆಟೊ ಕಟ್ ಮಾಡಿದ್ದನ್ನು ನಾಮಿನೇಟ್ ಮಾಡುವುದಕ್ಕೆ ಕಾರಣ ಎಂದಿದ್ದಾರೆ. ಅದು ಕಾರ್ತಿಕ್‌ಗೆ ಕೋಪ ತರಿಸಿತ್ತು. "ನೀನು ಕ್ಯಾಪ್ಟನ್ ಆಗುವುದಕ್ಕೆ ನಾಲಾಯಕ್. ಅದು ಒಂದು ಕಾರಣವಾ? ನೇರವಾಗಿ ನಾಮಿನೇಟ್ ಮಾಡಿದ್ದಕ್ಕೆ ಸರಿಯಾದ ಕಾರಣ ಕೊಡಬೇಕು ಅಲ್ವಾ. ನಾನ್ ಸೆನ್ಸ್? ಎಂದೇ ಬೈದು ಹೋಗಿದ್ದಾನೆ.

ಮೊದಲೆಲ್ಲಾ ಈ ರೀತಿ ಇರಲಿಲ್ಲ

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಮಾಡುವಾಗ ಸೂಕ್ತ ಕಾರಣ ನೀಡಿ ಎಂದು ಬಿಗ್ ಬಾಸ್ ಹೇಳುವುದಕ್ಕೆ ಒಂದು ಕಾರಣವಿದೆ. ತಪ್ಪು ಮಾಡುತ್ತಿರುವವರು ತಿದ್ದಿಕೊಳ್ಳಲಿ ಎಂದು. ಆ ತಪ್ಪು ತಿಳಿದಾಗ ಮತ್ತೆ ಆ ತಪ್ಪನ್ನು ಮಾಡಲ್ಲ ಎಂದು. ಬಿಗ್ ಬಾಸ್‌ನ ಇಷ್ಟು ಎಪಿಸೋಡ್, ಕಳೆದ ಎಪಿಸೋಡ್ ಹೊರತುಪಡಿಸಿ, ಇನ್ನೆಲ್ಲಾ ಬಿಗ್ ಬಾಸ್‌ನಲ್ಲೂ ಕಾರಣಗಳನ್ನು ಹೇಳಿದರೆ ಓಕೆ ಥ್ಯಾಂಕ್ಯೂ ಎಂದು ನಗುತ್ತಲೇ ಆ ಕಾರಣಗಳನ್ನು ಸ್ಪರ್ಧಿಗಳು ಸ್ವೀಕಾರ ಮಾಡುತ್ತಾ ಇದ್ದರು. ಆದರೆ, ಈಗಿನ ಸ್ಪರ್ಧಿಗಳು‌ ನಾಮಿನೇಷನ್‌ಗೆ ಒಂದು ಅರ್ಥವೇ ಇಲ್ಲದಂತೆ ಮಾಡಿಟ್ಟಿದ್ದಾರೆ.

More from Filmibeat

English summary
Bigg Boss Kannada Season 10 October 16th Episode Nomination Time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X