BBK 10: ಟಾಸ್ಕ್ ನಡುವೆ ತುಕಾಲಿಗೆ ಕ್ಯಾಕರಿಸಿ ಉಗಿದ ಇಶಾನಿ.. ಅಂತಹದ್ದೇನಾಯ್ತು?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕಳೆದು ಸ್ಪರ್ಧಿಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಆದರೆ, ಆಟದಲ್ಲಿ ಇನ್ನು ಗಾಂಭೀರ್ಯತೆ ಕಾಣಿಸುತ್ತಿಲ್ಲ. ಈಗಾಗಲೇ ಮನೆಗೆ ಬಂದಿದ್ದಂತ ದಿನಸಿ ಪದಾರ್ಥಗಳು ಇದೇ ಕಾರಣದಿಂದಾನೇ ಅರ್ಧಕರ್ಧ ವಾಪಾಸ್ ಹೋಗಿದೆ. ಆದರೂ ರೂಲ್ಸ್ ಬ್ರೇಕ್ ನಲ್ಲೇನು ಬುದ್ದಿ ಕಲಿತಂತೆ ಕಾಣುತ್ತಿಲ್ಲ.

ಸದ್ಯಕ್ಕೆ ಈ ವಾರ ಸಂಗೀತಾ, ಮೈಕೆಲ್, ಗೌರೀಶ್ ಅಕ್ಕಿ, ತುಕಾಲಿ ಸಂತೋಷ್, ಭಾಗ್ಯಶ್ರೀ ನಾಮಿನೇಟ್ ಆಗಿದ್ದಾರೆ. ಇವರಿಗಾಗಿ ನಾಮಿನೇಟ್ ಆಗಿಲ್ಲದೆ ಇರುವವರು ಆಡಬೇಕಾಗಿದೆ. ಆದರೆ, ಹೆಚ್ಚಿನ ಮಂದಿ ಸಂಗೀತಾಗೆ ಸಪೋರ್ಟ್ ಮಾಡಿದ್ದಾರೆ. ಆದರೆ, ಭಾಗ್ಯಶ್ರೀಗಾಗಿ ಆಡುತ್ತೀನಿ ಎಂದಿದ್ದ ವಿನಯ್ ಉಲ್ಟಾ ಹೊಡೆದಿದ್ದಾರೆ. ಅಲ್ಲಿ ಸ್ವಾರ್ಥದ ಯೋಚನೆ ಮಾಡಿದ್ದಾರೆ.

Bigg Boss Kannada season 10: October 16th episode of Tukali Santhu and Eshani fight

ತುಕಾಲಿಗಾಗಿ ಆಡಿದ ರಕ್ಷಕ್

ನಾಮಕರಣ ನೇಟ್ ಆಗಿರುವವರು ನಮ್ಮ ಪರವಾಗಿ ಆಡಿ ಎಂದು ಮನವಿ ಮಾಡಬೇಕು. ಅದರಂತೆ ತುಕಾಲಿ ಸಂತು ಪರವಾಗಿ ರಕ್ಷಕ್ ಆಡುವುದಕ್ಕೆ ನಿಂತಿದ್ದರು. ಇದನ್ನು ಸೇವ್ ಮಾಡುವುದಕ್ಕೆ ಎಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ತನ್ನ ಸಾಮರ್ಥ್ಯವನ್ನು ತೋರಿಸಲೇಬೇಕೆಂದು ರಕ್ಷಕ್ ಹಠ ಮಾಡಿ ನಿಂತಿದ್ದರು. ರಕ್ಷಕ್ ಎನರ್ಜಿ ಎಲ್ಲರಿಗೂ ಖುಷಿ ಕೊಟ್ಟಿತ್ತು. ಯಾಕಂದ್ರೆ, ಬಿಗ್ ಬಾಸ್ ಮನೆಗೆ ಬಂದಾಗಿನಿಂದ ರಕ್ಷಕ್ ಸ್ವಲ್ಪ ಸೈಲೆಂಟ್ ಆಗಿಯೇ ಇದ್ದರು. ಆದರೆ, ಈಗ ಆಟವಾಡುವುದಕ್ಕೆ ನಿಂತಾಗ ತಾನು ಕೂಡ ಸ್ಟ್ರಾಂಗ್ ಎಂಬುದನ್ನು ತೋರಿಸಿದ್ದಾರೆ.

ಇಶಾನಿ ಮತ್ತು ಸಂತು ನಡುವೆ ಗಲಾಟೆ

ಆಟವಾಡುತ್ತಿರುವವರನ್ನು ಡಿಸ್ಟರ್ಬ್ ಮಾಡಬೇಕಿತ್ತು. ನೀರು ಎರಚಿ ಡಿಸ್ಟರ್ಬ್ ಮಾಡುವ ಅವಕಾಶವಿತ್ತು. ಆದರೆ, ಇಶಾನಿ ಬೇರೆ ರೀತಿಯಾಗಿಯೇ ಡಿಸ್ಟರ್ಬ್ ಮಾಡುವುದಕ್ಕೆ ಪ್ರಯತ್ನ ಪಟ್ಟರು. ರಕ್ಷಕ್ ಕೈ ಬಿಡು ಅವರಿಗಾಗಿ ನೀನು ಆಟವಾಡಬೇಡ. ಅವರಿಂದ ಏನು ಆಗಲ್ಲ ಅಂತ. ಆದರೆ, ಈ ಜಗಳ ನೇರವಾಗಿ ಸಂತೋಷ್ ಕಡೆಗೆ ತಿರುಗಿತ್ತು. ಸಂತೋಷ್ ಹಾಗೂ ಇಶಾನಿ ನಡುವೆ ನೋಡ ನೋಡುತ್ತಿದ್ದಂತೆ ಜಗಳ ಜೋರಾಗಿದೆ. ಮನೆಯವರೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದರು.

ಕ್ಯಾಕರಿಸಿ ಉಗಿದ ಇಶಾನಿ

ಇಶಾನಿಗೆ ಜಗಳ ಎಷ್ಟು ಜೋರಾಗಿತ್ತು ಎಂದರೆ ಸಂತುಗೆ ಏಕವಚನದಲ್ಲಿಯೇ ಬೈಯ್ಯುವುದಕ್ಕೆ ಶುರಿ ಮಾಡಿದರು. ಸಂತುಗೂ ಅದೆಲ್ಲಿಂದ ಕೋಪ ಬಂತೋ ಏನೋ ಅವರು ಕೂಡ ಏಕವಚನದಲ್ಲಿಯೇ ಮಾತಾನಡುವುದಕ್ಕೆ ಶುರು ಮಾಡಿದರು. ಕಡೆಯಲ್ಲಿ ಕ್ಯಾಕರಿಸಿ, ಹೇ ಥೂ ಎಂದೆಲ್ಲಾ ಉಗಿದರು. ಆಗ ಅಲ್ಲಿದ್ದ ಹುಡುಗಿಯರೆಲ್ಲಾ ಇಶಾನಿಗೆ ಸಮಾಧಾನ ಮಾಡುವ ಕೆಲಸ ಮಾಡಿದರು. ಆದರೆ ತುಕಾಲಿಗೆ ಇದು ಯಾಕೆ ಈ ರೀತಿ ಆಯ್ತಲ್ಲ ಎಂದು ಗೊಂದಲ ಶುರುವಾಯಿತು. ನಾನು ಏನು ಮಾಡಲಿಲ್ಲ. ಆದರೂ ಈ ರೀತಿ ಆಡುತ್ತಿದ್ದಾರಲ್ಲ ಎಂದೇ ಸುಮ್ಮನಾದರು.

Bigg Boss Kannada season 10: October 16th episode of Tukali Santhu and Eshani fight

ಇಶಾನಿಗೆ ಮತ್ತಷ್ಟು ಎನರ್ಜಿ ತುಂಬಿದ ತನಿಶಾ

ಇಶಾನಿ ಕೋಪ, ಎಮೋಷನಲ್ ಎರಡನ್ನು ತೋರಿಸಿದರು. ಕಣ್ಣೀರಿಡುತ್ತಾ, ಜೋರು ಧ್ವನಿಯಲ್ಲಿಯೇ ಮಾತನಾಡುತ್ತಿದ್ದರು. ಈ ವೇಳೆ ನಮ್ರತಾ, ಸಂಗೀತಾ, ತನಿಶಾ ಎಲ್ಲರೂ ಸಮಾಧಾನ ಮಾಡಿದರು. ಆದರೆ, ತನಿಶಾ ಮತ್ತು ಸಂಗೀತಾ ಮತ್ತಷ್ಟು ಹುಮ್ಮಸ್ಸು ತುಂಬಿದರು. ಹೇಗೆ ಅಂದ್ರೆ ತನಿಶಾ ಕಣ್ಣೀರು ಹಾಕುತ್ತಲೆ ಮತ್ತೆ ಡಿಸ್ಟರ್ಬ್ ಮಾಡುವುದಕ್ಕೆ ಹೋದರು. ಅದರ ಜೊತೆಗೆ ರಕ್ಷಕ್‌ಗೆ ಮತ್ತೆ ಮತ್ತೆ ಕೈಬಿಡುವುದಕ್ಕೆ ಮನವಿ ಮಾಡಿದರು. ರಕ್ಷಕ್ ನೋವೇ ಅಂತಾನೇ ಹೇಳಿದರು. ಆದರೆ, ಬ್ಯಾಡ್ ಲಕ್ ಕಡೆಯಲ್ಲಿ ಕೈ ಬಿಟ್ಟರು.

More from Filmibeat

English summary
Bigg Boss Kannada season 10: October 16th episode of Tukali Santhu and Eshani fight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X