BBK 10: ಕಾರ್ತಿಕ್ ಪರ ನಿಂತ ಸಂಗೀತಾ ಶೃಂಗೇರಿ.. ವಿನಯ್ ಪರ ನಮ್ರತಾ.. ಬಿಗ್ ಬಾಸ್ ಮನೆಯಲ್ಲಿ ಜಡೆ ಜಗಳ ಶುರು!
ಕೆಲವೊಮ್ಮೆ ಸಣ್ಣ ಮನ:ಸ್ತಾಪವೇ ಮುಂದೆ ದೊಡ್ಡ ಜಗಳವಾಗುವುದಕ್ಕೆ ಕಾರಣವಾಗುತ್ತದೆ. ಬಿಗ್ ಬಾಸ್ ಮನೆಯಲ್ಲೂ ಆಗಿರುವುದು ಅದೇ. ವಿನಯ್ ಹಾಗೂ ಸಂಗೀತಾ ನಡುವೆ ಸಣ್ಣ ಬಿರುಕು ಮೂಡಿದೆ. ಅದೇ ಈಗ ದೊಡ್ಡದಾಗಿ ಬೆಳೆದಿದೆ.
ವಿನಯ್ ಹೇಳುವ ಕೆಲವೊಂದು ಮಾತುಗಳು ಸಂಗೀತಾಗೆ ಇಷ್ಟವಾಗುವುದಿಲ್ಲ. ಹೀಗಾಗಿ ನೇರವಾಗಿ ವಿನಯ್ ಬಳಿ ವಾದಕ್ಕೆ ಇಳಿಯುತ್ತಾರೆ. ಇಂದು ಕೂಡ ಆಗಿದ್ದು ಅದೇ. ವಿನಯ್ ಮಾತಿಗೂ ಸಂಗೀತಾಗೂ ಸಂಬಂಧವೇ ಇರಲಿಲ್ಲ. ಆದರೂ, ವಿನಯ್ ಜೊತೆಗೆ ಯುದ್ಧಕ್ಕೆ ನಿಂತು ಬಿಟ್ಟರು ಸಂಗೀತಾ.

ಬೆದರಿಕೆ ಹಾಕುತ್ತಿದ್ದೀರಾ ಎಂದ ಸಂಗೀತಾ
ಅದೇನೋ ಸಂಗೀತಾ ಮತ್ತು ವಿನಯ್ ಮಾತನಾಡುವುದಕ್ಕೆ ಶುರು ಮಾಡಿದಾಗೆಲ್ಲಾ ಜಗಳ ಶುರುವಾಗುತ್ತದೆ. ಪ್ರತಾಪ್ ಟೀಂ ಸೋತಿದೆ. ಅದಕ್ಕೆ ಇಬ್ಬರೂ ಶಿಕ್ಷೆಯನ್ನು ಅನುಭವಿಸಿದ್ದಾರೆ. ಆದರೆ, ಪ್ರತಾಪ್ ಇದು ಅನ್ಯಾಯದ ಗೆಲುವು ಎಂದಿದ್ದರು. ಇದಕ್ಕೆ ವಿನಯ್ ಕ್ಲಾರಿಟಿಯನ್ನಷ್ಟೇ ಕೊಡುತ್ತಿದ್ದರು. ಅಷ್ಟರಲ್ಲೇ ಮಧ್ಯ ಪ್ರವೇಶ ಮಾಡಿದ ಸಂಗೀತಾ, ನೀವೂ ಬೆದರಿಕೆ ಹಾಕಿದಂತೆ ಇದೆ ಎಂದಿದ್ದಾರೆ. ನಿಮ್ಮ ಧ್ವನಿಯಲ್ಲಿ ಅದು ಕಾಣಿಸುತ್ತಾ ಇದೆ. ನನಗೆ ಆ ಫೀಲ್ ಆಗುತ್ತಾ ಇದೆ ಎಂದೇ ವಾದ ಮಾಡಿದ್ದಾರೆ.
ಕ್ಲಾರಿಟಿ ಕೊಟ್ಟ ವಿನಯ್
ಈ ಮಾತಿನಿಂದ ವಿನಯ್ ಕೋಪ ಮತ್ತಷ್ಟು ಹೆಚ್ಚಾಗಿದೆ. ನಾನು ಬೆದರಿಕೆ ಹಾಕಿದ್ದೀನಾ ಎಂದೇ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ತಮ್ಮ ವಾಯ್ಸ್ ಬಗ್ಗೆ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. "ನನ್ನ ವಾಯ್ಸ್ ಇರುವುದೇ ಹೀಗೆ. ಏನು ಹೊಸದಾಗಿ ಕೇಳುತ್ತಾ ಇಲ್ಲ. ಯಾರಿಗೋಸ್ಕರನೋ ನನ್ನ ವಾಯ್ಸ್ ಬದಲಾಯಿಸುವುದಕ್ಕೂ ಆಗಲ್ಲ. ಬೆದರಿಕೆ ಎನಿಸಿದರೆ ಬಿಗ್ ಬಾಸ್ ಬಳಿ ಹೋಗಿ ಹೇಳಲಿ. ಅವರು ನಿರ್ಧಾರ ಮಾಡುತ್ತಾರೆ. ಸುಮ್ಮನೆ ಸಿಂಪತಿ ಗಿಟ್ಟಿಸಿಕೊಳ್ಳಬಾರದು. ಎಲ್ಲಾ ಒಳ್ಳೆ ಫ್ಯಾಮಿಲಿಯಿಂದ ಬಂದಿರುವುದು. ಈ ರೀತಿಯ ಬೋರ್ಡ್‌ಗಳನ್ನು ಹಾಕುವುದಕ್ಕೆ ಹೋಗಬಾರದು. ಬೆಳಗ್ಗೆಯಿಂದ ಎಲ್ಲಾ ಚೆನ್ನಾಗಿತ್ತು. ಈಗ ಶಿಕ್ಷೆಯಾಗಿದ್ದಕ್ಕೆ ಬೆದರಿಕೆ ಆಗಿ ಬಿಡ್ತು ಅಲ್ವಾ" ಎಂದು ಪ್ರಶ್ನಿಸಿದ್ದಾರೆ.
ಸಂಗೀತಾ ಪರ ನಿಲ್ಲಲು ಹೋಗಿ ಕಾರ್ತಿಕ್ ಯಡವಟ್ಟು
ಕಾರ್ತಿಕ್ ಬಳಿ ಈಗಾಗಲೇ ಕ್ಯಾಪ್ಟನ್ ವಿಚಾರವಾಗಿ ಮಾತನಾಡುತ್ತಾ ಇದ್ದರು. ಕಾರ್ತಿಕ್ ಕೂಡ ಆಟ, ನಿಯಮದ ವಿಚಾರದಲ್ಲಿ ಎಲ್ಲೂ ಅನ್ಯಾಯವಾಗಿಲ್ಲ ಎಂದೇ ಒಪ್ಪಿಕೊಂಡಿದ್ದರು. ಆದರೆ, ಸಂಗೀತಾ ಪಕ್ಕದಲ್ಲಿ ಬೇರೆ ಕೂತಿದ್ದರಲ್ವಾ, ಹೀಗಾಗಿ ಎದುರುಗಡೆ ಇದ್ದ ಟೀಂ ಏನೋ ಹೇಳಿತು ಎಂದಾಕ್ಷಣಾ ಜೋರು ಮಾಡುವುದಕ್ಕೆ ಶುರು ಮಾಡಿದರು. ಅಕ್ಷರಶಃ ಕಾರ್ತಿಕ್ ಧ್ವನಿ ಸಿಕ್ಕಾಪಟ್ಟೆ ಹೈ ಪಿಚ್‌ನಲ್ಲಿ ಇತ್ತು.
ನಮ್ರತಾ ಮತ್ತು ಸಂಗೀತಾ ನಡುವೆ ಜಗಳ
ಇದನ್ನು ಕೇಳಿದ ಕೂಡಲೇ ನಮ್ರತಾ, ಇದು ಬೆದರಿಕೆ ಅಲ್ವಾ ಎಂದೇ ಪ್ರಶ್ನೆ ಮಾಡಿದರು. ನಮ್ರತಾ ಜೊತೆಗೆ ರಕ್ಷಕ್ ಕೂಡ ಮಾತು ಜೋಡಿಸಿದರು. ಈ ಜಗಳಕ್ಕೆ ಸಂಗೀತಾ ಕೂಡ ಎಂಟ್ರಿಯಾದರು. ಓ ನಿಮಗೆ ಇದು ಬೆದರಿಕೆ ಅನ್ನಿಸ್ತಾ ಇದೆಯಾ. ಅದು ಅನ್ನಿಸ್ತಾ ಇರಲಿಲ್ವಾ" ಎಂದೇ ಕೇಳಿದರು. ಆಗ ನಮ್ರತಾ ಮತ್ತೆ ಪ್ರಶ್ನೆ ಮಾಡಿದರು. ವಿನಯ್ ಬೆದರಿಕೆ ಹಾಕಿದರು ಅಂದರೆ ಈಗ ಕಾರ್ತೀಕ್ ಹಾಕುತ್ತಿರುವುದು ಬೆದರಿಕೆಯೇ ಎಂದೇ ವಾದಿಸಿದರು. ಜೊತೆಗೆ ನನ್ನ ಹತ್ರ ಚಪ್ಪಾಳೆ ಹೊಡೆದು ವಾವ್ ಅನ್ನೋದೆಲ್ಲಾ ಇಟ್ಟುಕೊಳ್ಳಬೇಡಿ ಎಂದು ಎಚ್ಚರಿಕೆ ಕೊಟ್ಟು ಹೊರಟರು.


Click it and Unblock the Notifications











