BBK 10: ಸಗಣಿ ನೀರಲ್ಲಿ ಮಿಂದೆದ್ದ ಸಂಗೀತಾ.. ಬೇಸರದಲ್ಲಿ ತಲೆತಗ್ಗಿಸಿದ ಕಾರ್ತಿಕ್
ಬಿಗ್ ಬಾಸ್‌ನ ಟಾಸ್ಕ್ ಹಾಗೂ ಸೋತವರಿಗೆ ಕೊಡುವ ಶಿಕ್ಷೆ ನೋಡುವುದಕ್ಕೇ ಕುತೂಹಲ. ಸ್ಪರ್ಧಿಗಳ ರಿಯಾಲಿಟಿಗಿಂತ ಹಲವು ರೀತಿಯ ಟಾಸ್ಕ್‌ಗಳನ್ನು ಬಿಗ್ ಬಾಸ್ ನೀಡುತ್ತದೆ. ಎಷ್ಟೋ ಸಲ ಎಲ್ಲರಿಗೂ ಅನ್ನಿಸುವುದು, ಅದೆಲ್ಲೆಲ್ಲಿಂದ ಹುಡುಕಿ ಟಾಸ್ಕ್‌ಗಳನ್ನು ತರುತ್ತಾರೋ ಎಂದು. ಅಂತಹ ಟಫ್ ಎನಿಸುವಂತ, ವಾವ್ ಎನಿಸುವಂತ ಟಾಸ್ಕ್‌ಗಳನ್ನೇ ನೀಡುತ್ತಾರೆ.
ಬಿಗ್ ಬಾಸ್ ಎರಡನೇ ವಾರ ನಡೆಯುತ್ತಿದೆ. ಟಾಸ್ಕ್‌ಗಳು ಶುರುವಾಗಿವೆ. ಬಂದ ವಾರದಲ್ಲಿಯೇ ಒಂದಷ್ಟು ಗುಂಪುಗಳು ಇದ್ದವು. ಈಗ ಗುಂಪುಗಳಲ್ಲಿ ಬರೀ ಜಗಳಗಳೇ ಶುರುವಾಗಿವೆ. ನಾಮಿನೇಷನ್ ಬಂದಾಗಲೂ ಜಗಳ, ಆಟವಾಡುವಾಗಲೂ ಜಗಳಗಳೇ ಶುರುವಾಗುತ್ತಿವೆ.

ಒಡೆದ ಪಾಟ್‌ನಲ್ಲಿ ಜೋಡಿಸುವ ಟಾಸ್ಕ್
ಇಂದು ಬಿಗ್ ಬಾಸ್ ಟಾಸ್ಕ್‌ಗಳನ್ನು ಶುರು ಮಾಡಿದೆ. ಅದರಲ್ಲಿ ಒಡೆದ ಪಾಟ್‌ಗಳನ್ನು ನೀಡಿ, ಆ ಪಾಟ್ ಮೂಲಕ ಇಬ್ಬರು ವಸ್ತುಗಳನ್ನು ಎತ್ತಿಕೊಂಡು ಬರುವುದೇ ಆಗಿತ್ತು. ಇದು ನೋಡುವುದಕ್ಕೆ ಸುಲಭವಾದರೂ, ಮಾಡುವಾಗಲೇ ಪಾಟ್‌ಗಳ ಭಾಗಗಳು ಛಿದ್ರ ಛಿದ್ರವಾಗುತ್ತಾ ಇತ್ತು. ಟಾಸ್ಕ್ ಆದ ಮೇಲೆ ಬಿಗ್ ಬಾಸ್ ಶಿಕ್ಷೆಯ ಟಾಸ್ಕ್ ಒಂದನ್ನು ನೀಡಿತ್ತು. ಅದುವೇ, ಸೋತವರ ಟೀಂನಲ್ಲಿ ಒಬ್ಬರಿಗೆ ಶಿಕ್ಷೆ ಕೊಡಬೇಕೆಂದು.
ಸೋತ ಟೀಂಗೆ ಶಿಕ್ಷೆ ವಿಧಿಸಿದ ಬಿಗ್ ಬಾಸ್
ಬಿಗ್ ಬಾಸ್ ಮಾತಿನಂತೆ ಮನೆಯಲ್ಲಿ ಎರಡು ಟೀಂ ಆಗಿತ್ತು. ಅದಕ್ಕೆ ಒಂದು ಕಡೆಯ ಟೀಂನಲ್ಲಿ ಕಾರ್ತಿಕ್ ಕ್ಯಾಪ್ಟನ್, ಇನ್ನೊಂದು ಕಡೆ ವಿನಯ್ ಕ್ಯಾಪ್ಟನ್ ಆಗಿದ್ದರು. ಬಿಗ್ ಬಾಸ್ ಸೂಚನೆಯಂತೆ ಒಬ್ಬರನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಸಂಗೀತಾರನ್ನು ಆಯ್ಕೆ ಮಾಡಲಾಯಿತು. ಎಲ್ಲರೂ ಒಪ್ಪಿಯೇ ಆಯ್ಕೆ ಮಾಡಿದ್ದರು.
ಸಂಗೀತಾಗೆ ಸಗಣಿ ಸ್ನಾನ
ಶಿಕ್ಷೆಗೆ ಗುರಿಯಾದವರಿಗೆ ಸಗಣಿ ಶಿಕ್ಷೆಯನ್ನು ನೀಡಲಾಗಿತ್ತು. ಟಬ್‌ನಲ್ಲಿ ನಿಲ್ಲಿಸಿ ಮನೆಯವರೆಲ್ಲಾ ಸಗಣಿ ನೀರನ್ನು ಮೈಮೇಲೆ ಹಾಕಬೇಕಿತ್ತು. ಅದರಂತೆ ಸಂಗೀತಾ ಸಗಣಿಯಲ್ಲಿ ಮಿಂದೆದ್ದರು. ಬಳಿಕ ಬಿಗ್ ಬಾಸ್ ಅಭಿಪ್ರಾಯ ಕೇಳಿತ್ತು. ಆಗ ಸಂಗೀತಾ ಕಣ್ಣೀರು ಹಾಕುತ್ತಲೆ, ನಾನು ರೂಲ್ಸ್ ಬ್ರೇಕ್ ಮಾಡಿದೆ ಅನ್ನಿಸ್ತಾ ಇಲ್ಲ. ಆದರೆ, ಪನಿಷ್ಮೆಂಟ್ ಅಂತ ನೀಡುವಾಗ ನನ್ನ ಹೆಸರನ್ನೇ ನೀಡಿದರು. ಅದು ಬೇಸರ ಆಯ್ತು ಎಂದಿದ್ದಾರೆ.
ಡ್ರೋನ್ ಪ್ರತಾಪ್‌ಗೂ ಸಿಕ್ತು ಶಿಕ್ಷೆ
ಬರೀ ಸಂಗೀತಾಗೆ ಮಾತ್ರ ಶಿಕ್ಷೆ ಆಗಲಿಲ್ಲ. ಬಿಗ್ ಬಾಸ್ ಮತ್ತೊಬ್ಬರಿಗೂ ಶಿಕ್ಷೆ ವಿಧಿಸಿದೆ. ಅದಕ್ಕೂ ಮನೆಯವರಿಗೆ ಆಯ್ಕೆಗೆ ಬಿಟ್ಟಿದೆ. ಈ ಸಲ ಪ್ರತಾಪ್ ಅವರನ್ನು ಆಯ್ಕೆ ಮಾಡಲಾಗಿತ್ತು. ಹೀಗಾಗಿ ಪ್ರತಾಪ್‌ನ ಎಲ್ಲಾ ಬಟ್ಟೆಯನ್ನು ಸ್ವಿಮ್ಮಿಂಗ್ ಪೂಲ್‌ಗೆ ಹಾಕುವಂತ ಶಿಕ್ಷೆ ಇದಾಗಿತ್ತು.
ಸಂಗೀತಾಳಿಗೆ ಸಮಾಧಾನ ಮಾಡಿದ ಕಾರ್ತಿಕ್
ಇನ್ನು ಸಂಗೀತಾಗೆ ಶಿಕ್ಷೆಯಾದ ಕೂಡಲೇ ಕಾರ್ತಿಕ್ ತುಂಬಾ ಹರ್ಟ್ ಆಗಿದೆ. ಸಂಗೀತಾಗೆ ಸಗಣಿ ನೀರು ಹಾಕುವಾಗಲೇ ಬೇಸರದಿಂದ ತಲೆ ತಗ್ಗಿಸಿದ್ದರು. ಬಳಿಕ ಶಿಕ್ಷೆ ಮುಗಿದ ಮೇಲೆ ಸಂಗೀತಾ ಸ್ನಾನ ಮುಗಿಸಿ ಬಂದಾಗ, ಕಾರ್ತಿಕ್ ಮಾತನಾಡಿಸುವುದಕ್ಕೆ ಹೋಗಿದ್ದಾರೆ. ಅಲ್ಲಿ ಮಾತಲ್ಲಿಯೇ ಫ್ಲರ್ಟ್ ಮಾಡಿದ್ದಾರೆ. ಸಾರಿ ಎಂದು ಕೇಳಿದ ಕಾರ್ತಿಕ್, ನೀನು ಸ್ಟ್ರಾಂಗ್ ಅಂತ ನನಗೆ ಗೊತ್ತು. ಅದೆಂಗೆ ಸಗಣಿಯಲ್ಲೂ ಅಷ್ಟು ಚೆನ್ನಾಗಿ ಕಾಣುತ್ತಿದ್ದಲ್ಲ ಅಂತ ನಗು ತರಿಸಿದ್ದಾರೆ.


Click it and Unblock the Notifications