BBK 10: ಮನೆಗೆ ಎರಡನೇ ಕ್ಯಾಪ್ಟನ್ ರಕ್ಷಕ್ ಬುಲೆಟ್.. ನಿರೀಕ್ಷೆ ಏನೇನಿದೆ..?
ಬಿಗ್ ಬಾಸ್ ಮನೆಯಲ್ಲಿ ಮೊದಲ ಕ್ಯಾಪ್ಟನ್ ಅವಧಿ ಇಂದಿಗೆ ಮುಗಿದಿದೆ. ಇದೀಗ ಇಂದಿನಿಂದ ಮನೆಗೆ ಹೊಸ ಕ್ಯಾಪ್ಟನ್ ಆಯ್ಕೆಯಾಗಿದೆ. ಬಿಗ್ ಬಾಸ್ ಮನೆಯ ಎರಡನೇ ಕ್ಯಾಪ್ಟನ್. ನಿರೀಕ್ಷೆಯೇ ಮಾಡದಂತ ಕ್ಯಾಪ್ಟನ್ ಆಯ್ಕೆಯಾಗಿದೆ. ಅವರೇ ರಕ್ಷಕ್ ಬುಲೆಟ್.
ಬಿಗ್ ಬಾಸ್ ಮನೆಯಲ್ಲಿ ಏನನ್ನೇ ಪಡೆಯಬೇಕು ಅಂದರು ಅದಕ್ಕೆ ಅಂತ ಒಂದಷ್ಟು ಶ್ರಮವನ್ನು ವ್ಯಯಿಸಲೇಬೇಕು. ಅದರಲ್ಲೂ ಕ್ಯಾಪ್ಟನ್ ಆಗುವುದಕ್ಕೆ ಇನ್ನು ಜಾಸ್ತಿಯೇ ಶ್ರಮಪಡಬೇಕಾಗುತ್ತದೆ. ಆದರೆ, ಆ ಶ್ರಮದಲ್ಲಿ ರಕ್ಷಕ್ ಗೆದ್ದಿದ್ದಾರೆ. ರಕ್ಷಕ್‌ಗೆ ಇಡೀ ಮನೆಯನ್ನು ನಿಭಾಯಿಸುವ ಶಕ್ತಿ ಇದೆಯಾ ಎಂಬುದೇ ಹಲವರ ಅನುಮಾನ. ಅವರ ಟೀಂಗೆ ಆ ನಂಬಿಕೆ ಇದೆ. ನಾಳೆಯಿಂದಾನೇ ಗೊತ್ತಿಲ್ಲದ ರಕ್ಷಕ್ ಮುಖ ಖಂಡಿತ ಗೊತ್ತಾಗುತ್ತೆ.

ಕ್ಯಾಪ್ಟನ್ ಟಾಸ್ಕ್‌ನಲ್ಲಿ ರಕ್ಷಕ್ ಗೆಲುವು
ಬಿಗ್ ಬಾಸ್‌ನಲ್ಲಿ ಕ್ಯಾಪ್ಟನ್ ಆಗಬೇಕು ಅಂದರೇನೆ ಕೊಡುವ ರಿಸ್ಕ್‌ಗಳನ್ನು ದಾಟಬೇಕು. ಫಸ್ಟ್ ಟೈಮ್ ಕೊಟ್ಟ ಟಾಸ್ಕ್‌ನಿಂದ ಭಯಪಟ್ಟ ನಮ್ರತಾ, ಎರಡನೇ ಕ್ಯಾಪ್ಟೆನ್ಸಿ ಟಾಸ್ಕ್ ಮುಂದೇನೇ ಬರಲಿಲ್ಲ. ಎರಡು ರೀತಿಯಲ್ಲಿ ಆಯ್ಕೆ ಮಾಡಲಾಗಿತ್ತು. ಕ್ಯಾಪ್ಟನ್ ಆಗುವುದಕ್ಕೆ ಅರ್ಹರಲ್ಲ ಎಂಬುವವರನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಬೇಕಿತ್ತು. ಕಡಿಮೆ ಸಮಯ ನೀರಿಗೆ ಬಿದ್ದವರು, ಎರಡನೇ ಹಂತಕ್ಕೆ ಆಯ್ಕೆಯಾಗಿತ್ತು. ಅದರಲ್ಲಿ ರಕ್ಷಕ್ ಹಾಗೂ ಸ್ನೇಹಿತ್ ಆಯ್ಕೆಯಾದರು. ಎರಡನೇ ಹಂತದಲ್ಲಿ ಸಿಲಿಂಡರ್ ಆಕಾರಕ್ಕೆ ತಿರುಗುವ ದಿಂಬಿನ ಮೇಲೆ ಬಾಲ್ ಜೋಡಿಸುವ ಆಟದಲ್ಲಿ, ರಕ್ಷಕ್ ವಿನ್ ಆದರು.
ವಿನಯ್ ಕಡೆಯಿಂದ ಸಿಕ್ತು ಬೆಂಬಲ
ರಕ್ಷಕ್ ಹಾಗೂ ಸ್ನೇಹಿತ್ ಇಬ್ಬರು ಒಂದೇ ಟೀಂ. ರಕ್ಷಕ್ ಬಗ್ಗೆ ಹಲವರಿಗೆ ಅಷ್ಟೇನು ನಂಬಿಕೆಯಿಲ್ಲ. ಯಾಕಂದ್ರೆ ಮನೆಯಲ್ಲಿ ಎಲ್ಲರಿಗಿಂತ ಚಿಕ್ಕ ಹುಡುಗ ಎಂಬ ಕಾರಣಕ್ಕೆ. ಆದರೆ ವಿನಯ್ ಮಾತ್ರ ರಕ್ಷಕ್‌ಗೆ ಸಿಕ್ಕಾಪಟ್ಟೆ ಸಪೋರ್ಟಿವ್ ಆಗಿ ನಿಂತಿದ್ದರು. ಅದಾಗಲೇ ಸ್ನೇಹಿತ್ ಕ್ಯಾಪ್ಟನ್ ಆಗಿದ್ದರಿಂದ ರಕ್ಷಕ್ ಕಡೆಗೆ ಗಮನ ನೀಡಿದರು. ಬಾಲ್ ಅನ್ನು ಯಾವ ರೀತಿ ಹಾಕಬೇಕು, ನಿಧಾನ, ಫಾಸ್ಟ್ ಎಲ್ಲವನ್ನು ಸಮಾಧಾನದಲ್ಲೇ ಹೇಳಿಕೊಟ್ಟರು.
ರಕ್ಷಕ್‌ಗೆ ಸಿಕ್ತು ಸ್ಪೆಷಲ್ ಗಿಫ್ಟ್
ಈ ವಾರ ಕ್ಯಾಪ್ಟನ್ ಆದವರಿಗೆ ಬಿಗ್ ಬಾಸ್ ಕಡೆಯಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಆ ಗಿಫ್ಟ್ ರಕ್ಷಕ್ ಬಹಳ ಇಷ್ಟವಾಗುವಂತದ್ದು. ಅಷ್ಟೇ ಅಲ್ಲ, ಒಂದು ಕ್ಷಣ ಮನೆಯವರೆಲ್ಲ ಆ ಗಿಫ್ಟ್ ನೋಡಿ, ಗೌರವ ಸೂಚಿಸುವಂತ ಗಿಫ್ಟ್ ಅದು. ಬಿಗ್ ಬಾಸ್ ಕಳುಹಿಸಿದ ಸ್ಪೆಷಲ್ ಗಿಫ್ಟ್ ಅಂದ್ರೆ ಬುಲೆಟ್ ಪ್ರಕಾಶ್ ಇರುವ ಫೋಟೋ. ರಕ್ಷಕ್‌ನ ಫ್ಯಾಮಿಲಿ ಫೋಟೋ. ಕಣ್ಣೀರು ಹಾಕಲಿಲ್ಲ. ಆದರೆ, ಬಾಲ್ಯದ ನೆನಪು ನೆನೆದು ಆ ಫೋಟೊವನ್ನು ರಕ್ಷಕ್ ಕ್ಯಾಪ್ಟನ್ ರೂಮಿನಲ್ಲಿಟ್ಟುಕೊಂಡರು. ಗೆದ್ದಾಗ ಸೋತಾಗ ರಕ್ಷಕ್ ಸದಾ ತಂದೆಯನ್ನು ನೆನೆಯುತ್ತಾರೆ.
ರಕ್ಷಕ್ ಮನೆಗೆ ಬಂದಾಗಿನಿಂದ ಸೈಲೆಂಟ್
ರಕ್ಷಕ್ ನನ್ನು ನೋಡಿರುವ ದೃಷ್ಟಿಕೋನವೇ ಬೇರೆ. ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುನ್ನ ಸೋಷಿಯಲ್ ಮೀಡಯಾದಲ್ಲಿ ಜನರ ಕಣ್ಣಿಗೆ ಬೇರೆ ರೀತಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಯಾವಾಗಲೂ ಮಾಸ್ ಡೈಲಾಗ್ ಹೊಡೆಯುತ್ತಾ, Attitude ಇರುವಂತಹ ಹುಡುಗ ಎಂದೇ ಎಲ್ಲರ ಮನಸ್ಸಲ್ಲಿ ಬೇರೂರಿ ಬಿಟ್ಟಿದ್ದರು. ವೇದಿಕೆ ಮೇಲೆ ಕೂಡ, ಸುದೀಪ್ ಬಳಿ ಫೇಮಸ್ ಆಗ್ಬೇಕು ಅಣ್ಣ ಎಂದಿದ್ದರು. ಬಿಗ್ ಬಾಸ್ ಮನೆಯೊಳಗೆ ಹೋದ ಕೂಡಲೇ ಇನ್ನು ರಕ್ಷಕ್ ಮಾಸ್ ಡೈಲಾಗ್‌ನಿಂದಾನೇ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಶುರುವಾಗುತ್ತೇನೊ ಎಂದುಕೊಂಡಿದ್ದರು. ಆದರೆ, ರಕ್ಷಕ್ ಬಿಗ್ ಬಾಸ್‌ನಲ್ಲಿ ಇರುವ ರೀತಿಗೆ ಎಲ್ಲರ ಮೆಚ್ಚುಗೆ ಸಿಕ್ಕಿದೆ.
ಕ್ಯಾಪ್ಟನ್ ಆಗಿ ಪ್ರೂವ್ ಮಾಡ್ತಾರಾ ರಕ್ಷಕ್?
ರಕ್ಷಕ್ ಚಿಕ್ಕ ಹುಡುಗ, ಅಂದ್ರೆ ಮನೆಯಲ್ಲಿರುವವರಿಗೆಲ್ಲಾ ಹೋಲಿಕೆ ಮಾಡಿದರೆ ಚಿಕ್ಕ ಹುಡುಗ. ಈಗ ಕ್ಯಾಪ್ಟನ್ ಬೇರೆ ಆಗಿದ್ದಾರೆ. ಅದೇಗೆ ನಿಭಾಯಿಸಬಹುದು..? ಕ್ಯಾಪ್ಟನ್ ಅಧಿಕಾರ ಸಿಕ್ಕ ಕೂಡಲೇ ಸೋಷಿಯಲ್ ಮೀಡಿಯಾಲ್ಲಿ ಕಂಡ ರಕ್ಷಕ್ ಪತ್ತೆಯಾಗಬಹುದಾ..? ಎಂಬೆಲ್ಲಾ ಪ್ರಶ್ನೆಗಳು ಇದೆ. ಆದರೆ ರಕ್ಷಕ್‌ಗೆ ಜವಾಬ್ದಾರಿ ನಿಭಾಯಿಸುವುದು ಎಂದರೆ ಹೊಸದೇನು ಅಲ್ಲ. ಬಿಗ್ ಬಾಸ್‌ಗೆ ಹೋಗುವುದಕ್ಕೂ ಮುನ್ನ ಅವರ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿ ಅನುಭವವಿದೆ. ಜೊತೆಗೆ ಎಲ್ಲರೊಟ್ಟಿಗೂ ಒಳ್ಳೆ ಬಾಂಧವ್ಯ ಇದೆ. ಎಲ್ಲಿಯೂ ಬಿಗ್ ಬಾದ್ ಮನೆಯೊಳಗೆ ಈಗೋ ತೋರಿಸಿಲ್ಲ. ದುರಹಂಕಾರದ ಮಾತುಗಳನ್ನ ಆಡಿಲ್ಲ. ಅನಾವಶ್ಯಕ ಮಾತುಗಳನ್ನು ಆಡಿಲ್ಲ. ಹಿರಿಯರಿಗೂ ಬೆಲೆ ಕೊಡುತ್ತಾ ಇದ್ದಾರೆ. ಹೀಗಾಗಿ ಹಿರಿಯರ ಸಲಹೆಯನ್ನು ಪರಿಗಣಿಸಿ ಬಿಗ್ ಬಾಸ್ ಮನೆಯನ್ನು ಒಂದು ವಾರ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಬಹುದು ಎಂಬ ನಿರೀಕ್ಷೆ ಎಲ್ಲರದ್ದು. ನಾಳೆಯಿಂದಾನೇ ಎಲ್ಲವೂ ಗೊತ್ತಾಗಲಿದೆ.


Click it and Unblock the Notifications











