BBK 10: ಬಿಗ್ ಬಾಸ್ ಕನ್ನಡ ಸ್ಪರ್ಧಿ ಸಿರಿ ಮದುವೆಯಾಗದೆ ಇರುವುದಕ್ಕೆ ಕಾರಣ ಏನು ಗೊತ್ತಾ..?
ಇತ್ತೀಚೆಗಿನ ದಿನಗಳಲ್ಲಿ ಮದುವೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಂತ ವಿಚಾರ. ಸುಮಾರು ಜನರಲ್ಲಿ ಮದುವೆ ವಿಚಾರ ಆಸಕ್ತಿಯಿಂದ ದೂರವಾದಂತ ವಿಚಾರವಾಗಿದೆ. ಸಾಕಷ್ಟು ಸರ್ವೇಗಳಲ್ಲೂ ಮದುವೆಯಾಗುವುದಕ್ಕೆ 90% ಮಂದಿ ನಿರಾಸಕ್ತಿ ತೋರಿಸಿರುವ ಉದಾಹರಣೆ ಇದೆ.
ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ ಹಲವು ವಿಭಿನ್ನ ವ್ಯಕ್ತಿತ್ವದ ವ್ಯಕ್ತಿಗಳು ಬಂದಿದ್ದಾರೆ. ಪ್ರತಿ ಸೀಸನ್‌ನಲ್ಲಿಯೂ ಅದು ಸಹಜವೇ ಸರಿ. ಅದಕ್ಕೆ ಹಲವು ಟೀಂಗಳು ಆಗುತ್ತವೆ. ಇನ್ನು ಹಲವರು ಶತ್ರುಗಳಾಗಿಯೂ ಬದಲಾಗುತ್ತಾರೆ. ಈ ಬಾರಿಯೂ ವಿಭಿನ್ನ ಮನಸ್ಥಿತಿಗಳನ್ನು ನೋಡುತ್ತಾ ಇದ್ದೀವಿ. ಜೊತೆಗೆ ಒಂದಷ್ಟು ಹಾಡು ಹರಟೆ ಹೊಡೆಯುವುದಕ್ಕೂ ಟೀಂಗಳು ಆಗುತ್ತವೆ. ಇದೀಗ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರಗಳ ಚರ್ಚೆಗಳು ನಡೆಯುತ್ತಿವೆ.

ಸಿರಿ ಮದುವೆಯ ವಿಚಾರ ಚರ್ಚೆ
ಎಲ್ಲರೂ ವೈಯಕ್ತಿಕ ವಿಚಾರಗಳನ್ನು ಎಲ್ಲೆ ಬಳಿಯೂ ಹಂಚಿಕೊಳ್ಳುವುದಿಲ್ಲ. ಅದಕ್ಕೆ ಅಂತ ಒಂದು ಬಾಂಡಿಂಗ್ ಬೇಕಾಗಿರುತ್ತದೆ. ಬಿಗ್ ಬಾಸ್ ಮನೆಯಲ್ಲಿ ಸಿರಿ ವಿಚಾರಕ್ಕೆ ಅದು ಬೇಗನೇ ಸಿಕ್ಕಿದೆ. ಸಿರಿ ತನ್ನ ವೈಯಕ್ತಿಕ ವಿಚಾರವನ್ನು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ಮದುವೆ ವಿಚಾರವನ್ನು. ಫ್ರೆಂಡ್ಸ್ ಜೊತೆಗೆ ಕೂತು ಮಾತನಾಡಿದ್ದಾರೆ. ಮದುವೆ ಯಾಕೆ ಆಗಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಮದುವೆಯಾಗದೆ ಇರುವುದಕ್ಕೆ ಕಾರಣವೇನು..?
ಮದುವೆ ಎಂಬುದು ಸಾಕಷ್ಟು ಜನರಲ್ಲಿ ಸಾಕಷ್ಟು ಅಭಿಪ್ರಾಯಗಳು ಇರುತ್ತವೆ. ಇನ್ನು ಕೆಲವರಿಗೆ ಫೋಬಿಯಾ ಕೂಡ ಇದೆ. ಸಿರಿ ಹೇಳಿದ ಮಾತು ಕೇಳಿದಾಗ ಅದು ಫೋಬಿಯಾ ಇರಬಹುದಾ ಎಂಬ ಪ್ರಶ್ನೆಯೂ ಕಾಡಿದೆ. ಗೌರೀಶ್ ಬಳಿ ಹೇಳುವಾಗ "ಜಗಳಗಳು ಬೆಳಗ್ಗೆ ಶುರುವಾಗಿ ರಾತ್ರಿಗೆ ಎಂಡ್ ಆಗಿ ಬಿಡಬೇಕು. ಆದರೆ, ಅದೇಗೆ ಆ ರೀತಿ ಅಡ್ಜೆಸ್ಟ್ ಆಗುವುದು. ನನ್ನ ಸ್ನೇಹಿತರು ಇದ್ದಾರೆ. ದಿನ ಕಳೆದಂತೆ ಅವೆಲ್ಲಾ ಕಾಮನ್ ಆಗಿ ಹೋಗುತ್ತದೆ. ನಾನು ಯಾಕೆ ಮದುವೆಯಾಗಿಲ್ಲ ಅಂದ್ರೆ, ಕಾಂಪ್ರಮೈಸ್ ಆಗಲೇಬೇಕು. ಮದುವೆಯಾಗಲಿ, ರಿಲೇಷನ್ ಶಿಪ್ ಅಂತ ಬಂದಾಗ ಕಾಂಪ್ರಮೈಸ್ ಆಗಬೇಕು. ಅದು ನಂಗೆ ಇಷ್ಟ ಇಲ್ಲ. ಸುಮ್ಮನೆ ಅವನ ಜೀವನವೂ ಹಾಳು, ನನ್ನ ಜೀವನವೂ ಹಾಳು" ಎಂದಿದ್ದಾರೆ.
ಸಿರಿ ಬಗ್ಗೆ ಗೊತ್ತಿಲ್ಲದ ವಿಚಾರ ರಿವೀಲ್
ಸಿರಿ ಅಂದರೆ ಇಂಥವರಿಗೆ ಗೊತ್ತಿಲ್ಲ ಎಂಬುದಿಲ್ಲ. ಸಾಕಷ್ಟು ವರ್ಷಗಳಿಂದ ಧಾರಾವಾಹಿ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಆದರೆ, ಸಾಕಷ್ಟು ಜನರಿಗೆ ಅವರ ವೈಯಕ್ತಿಕ ವಿಚಾರ ಗೊತ್ತಿರಲಿಲ್ಲ. ಅಂದರೆ ಅವರಿಗೆ ಮದುವೆಯಾಗಿಲ್ಲ ಎಂಬ ವಿಚಾರ ಗೊತ್ತಿರಲಿಲ್ಲ. ಬಿಗ್ ಬಾಸ್ ಬಂದ ಮೇಲೆ ಸಿರಿ ಅವರಿಗೆ ಇನ್ನು ಮದುವೆಯಾಗಿಲ್ವಾ ಎಂಬುದು ಹಲವರಿಗೆ ತಿಳಿದಿದೆ.
ಟ್ರೋಲಿಗರಿಗೆಲ್ಲಾ ಕ್ರಶ್ ಆಗಿದ್ರು ಸಿರಿ
ಸಿರಿ ಆಗಲೂ ಹೀರೋಯಿನ್.. ಈಗಲೂ ಹೀರೋಯಿನ್.. ವಿಭಿನ್ನ ಪಾತ್ರಗಳ ಮೂಲಕವೇ ಎಲ್ಲರ ಮನಸ್ಸನ್ನು ಮುಟ್ಟಿದವರು. ಹೀಗಾಗಿ ಸಿರಿ ಅಂದ್ರೆ ಟ್ರೋಲಿಗರಿಗೂ ಸಿಕ್ಕಾಪಟ್ಟೆ ಇಷ್ಟ. ಬಿಗ್ ಬಾಸ್‌ಗೆ ಬಂದ ಮೇಲೆ ಅದ್ಯಾವಾಗ ಸಿರಿಗೆ ಮದುವೆಯಾಗಿಲ್ಲ ಎಂಬುದು ತಿಳಿಯಿತೋ, ಆಗಿನಿಂದ ಸಕಾರಾತ್ಮಕ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ನೋಡ್ರೋ ನಮ್ಮ ನಟಿಗೆ ಇನ್ನು ಮದುವೆಯಾಗಿಲ್ಲವಂತೆ" ಎಂದು ಪಿಂಕ್ ಬಣ್ಣದ ಸೀರೆಯ ಫೋಟೋ ಹಾಕಿ, ಟ್ರೋಲ್ ಮಾಡಿದ್ದರು. ತಮ್ಮ ನಟಿಗೆ ಮದುವೆಯಾಗಿಲ್ಲ ಎಂಬುದನ್ನು ಎಂಜಾಯ್ ಮಾಡಿದ್ದಾರೆ.


Click it and Unblock the Notifications











