BBK 10: ಸ್ನೇಹಿತ್ ಕ್ಯಾಪ್ಟನ್ ಅಲ್ಲ ಹೆಲ್ಪರ್.. ಮನೆ ಮಂದಿಗೆಲ್ಲ ಸ್ನೇಹಿತ್ ಟಾರ್ಗೆಟ್
ಬಿಗ್ ಬಾಸ್ ದಿನೇ ದಿನೆ ಬದಲಾಗುತ್ತಾ ಹೋಗುತ್ತಿದೆ. ಮೊದಲ ವಾರದಂತೆ ಎರಡನೇ ವಾರ ಆ ಶಾಂತತೆ ಕಾಣುತ್ತಿಲ್ಲ. ಈ ವಾರಕ್ಕೆ ಕ್ಯಾಪ್ಟನ್ ಆಟ ಮುಗಿದಿದೆ. ಹೊಸ ಕ್ಯಾಪ್ಟನ್ ಆಯ್ಕೆಯಾಗಬೇಕಿದೆ. ಕ್ಯಾಪ್ಟನ್ ಆಗಬೇಕೆಂದುಕೊಂಡವರು ಸುಖಾ ಸುಮ್ಮನೆ ಆಗುವುದಕ್ಕೆ ಆಗಲ್ಲ. ಅದಕ್ಕೆಂದೆ ಟಫ್ ಟಾಸ್ಕ್‌ಗಳು ಇರುತ್ತವೆ. ಇವತ್ತಿಗೆ ಸ್ನೇಹಿತ್ ಕ್ಯಾಪ್ಟೆನ್ಸಿ ಮುಗಿದಿದ್ದು, ಹೊಸ ಕ್ಯಾಪ್ಟನ್‌ಗೆ ಯಾವ ರೀತಿಯ ಟಾಸ್ಕ್ ಸಿಗುತ್ತೆ ಎಂಬ ಕುತೂಹಲವಿದೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂದೇ ಎಲ್ಲರೂ ಹಂಬಲಿಸುತ್ತಾರೆ. ಯಾಕಂದ್ರೆ ಸಿಗುವ ಸೌಲಭ್ಯಗಳು ವಿಶೇಷವಾಗಿರುತ್ತವೆ. ಲೀಡರ್‌ಶಿಪ್ ಸಿಕ್ಕಿದರೆ ಯಾರು ತಾನೇ ಬೇಡ ಅಂತಾರೆ ಅಲ್ವಾ. ಕಳೆದ ವಾರ ಸಂತೋಷ್, ನಮ್ರತಾ, ಸ್ಮೇಹಿತ್ ನಡುವಿನ ಕಾಂಪಿಟೇಷನ್‌ನಲ್ಲಿ ಸ್ನೇಹಿತ್ ಗೆದ್ದಿದ್ದರು.

ಬಿಗ್ ಬಾಸ್ ಸೀಸನ್ 10 ಮೊದಲ ಕ್ಯಾಪ್ಟೆನ್ಸಿ ಹೇಗಿತ್ತು..?
ಬಿಗ್ ಬಾಸ್ ಎಷ್ಟೇ ಸೀಸನ್‌ಗಳನ್ನು ಮನೆಯಲ್ಲಿ ಕೂತು ನೋಡಿದ್ದರೂ ಒಳಗೆ ಬಂದು ಆಟ ಆಡುವಾಗ ಎಲ್ಲವೂ ನಿರೀಕ್ಷೆಗೆ ನಿಲುಕದ್ದೇ ಆಗಿರುತ್ತದೆ. ನೋಡಿದಂತೆ ಬಿಗ್ ಬಾಸ್ ಕಾಣಿಸುವುದಿಲ್ಲ. ತನ್ನ ದೇಹದ ಶಕ್ತಿ ಸಾಮರ್ಥ್ಯದಿಂದ ಸ್ನೇಹಿತ್ ಕ್ಯಾಪ್ಟನ್ ಆಗಿ ಬಿಟ್ಟರು. ಬಿಗ್ ಬಾಸ್ ಮನೆಯಲ್ಲಿ ದೈಹಿಕ ಶಕ್ತಿಯೂ ಬಹಳ ಮುಖ್ಯವೇ ಆಗಿದೆ. ಆದರೆ, ಯಾರು ಕ್ಯಾಪ್ಟನ್ ಆಗಿ ಏನು ಮಾಡುತ್ತಾರೆ..? ಯಾವುದನ್ನು ಹೇಗೆ ಸಂಭಾಳಿಸಬೇಕು..? ಯಾವ ಐಡಿಯಾವೂ ಇಲ್ಲದೆ ಸ್ನೇಹಿತ್ ಕೂಡ ಗೊಂದಲಮಯಿಯಾಗಿದ್ದರು.
ಕ್ಯಾಪ್ಟನ್‌ಗೂ ಸಿಗಲಿದೆ ಉತ್ತಮ-ಕಳಪೆ ಅವಾರ್ಡ್
ಬಿಗ್ ಬಾಸ್ ಯಾರನ್ನು ಸುಮ್ಮನೆ ಬಿಡುವುದಿಲ್ಲ. ಅದು ಕ್ಯಾಪ್ಟನ್ ಆಗಲಿ, ಸ್ಪರ್ಧಿಯೇ ಆಗಲಿ. ಸ್ನೇಹಿತ್ ಒಂದು ವಾರದ ಕ್ಯಾಪ್ಟನ್ ಆಗಿದ್ದವರು. ಇವತ್ತಿಗೆ ಅವರ ಕ್ಯಾಪ್ಟನ್ ಹುದ್ದೆಯ ಅವಧಿ ಮುಗುಯಲಿದೆ. ಹೀಗಾಗಿ ಮನೆಯವರ ಅಭಿಪ್ರಾಯ ಬಹಳ ಮುಖ್ಯ. ಕ್ಯಾಪ್ಟನ್ ಆಗಿ ಸ್ನೇಹಿತ್ ಹೇಗಿದ್ದರು..? ಎಷ್ಟು ಬೆಸ್ಟ್ ಎನಿಸಿದರು ಎಂಬುದರ ಬಗ್ಗೆ ಬಿಗ್ ಬಾಸ್ ಅಭಿಪ್ರಾಯ ತಿಳಿಸಲು ಮನೆ ಮಂದಿಗೆ ಸೂಚಿಸಿದೆ.
ಸ್ನೇಹಿತ್ ಬಗ್ಗೆ ನೆಗೆಟಿವ್ ಒಪಿನಿಯನ್
ಸ್ನೇಹಿತ್ ಕ್ಯಾಪ್ಟನ್ ಆದ ಮೇಲೆ ತನ್ನ ಮಾತಿನ ದಾಟಿ ಬದಲಾಯಿಸಿಕೊಂಡರೆ ವಿನಹ, ಮನೆಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಯಲಿಲ್ಲ. ಅಲ್ಲಿ ಕುಳಿತುಕೊಳ್ಳಬೇಡಿ, ಟವೆಲ್ ಇಲ್ಲಿ ಹಾಕಬೇಡಿ ಎಂದೇ ಹೇಳುತ್ತಿದ್ದರು. ಹೀಗಾಗಿ ಮನೆಯವರಲ್ಲಿ ಹಲವರು ನೆಗೆಟಿವ್ ಅಭಿಪ್ರಾಯವನ್ನೇ ತಿಳಿಸಿದ್ದಾರೆ. ಇದರಿಂದ ಸ್ನೇಹಿತ್ ಯಡವಿದ್ದು ಎಲ್ಲಿ ಎಂಬುದು ಗೊತ್ತಾಗುತ್ತಿದೆ.
ಹಳೆ ಕ್ಯಾಪ್ಟನ್‌ಗೆ ಸಿಕ್ತು ಶಿಕ್ಷೆ
ಒಬ್ಬೊಬ್ಬರಾಗಿಯೇ ತಮ್ಮ ಅಭಿಪ್ರಾಯ ತಿಳಿಸಿದ್ದು, "ಸ್ನೇಹಿತ್ ನಿರ್ಧಾರ ಕೆಲವೊಂದು ಕಡೆ ಸರಿ ಇರಲಿಲ್ಲ. ಕ್ಯಾಪ್ಟನ್ ಅಲ್ಲ, ವೈಯಕ್ತಿಕವಾಗಿ ಹೆಲ್ಪರ್ ಥರ ಇದ್ದರು, ಒಬ್ಬರಿಗೊಂದು ಒಬ್ಬರಿಗೊಂದು ರೀತಿ ನಡೆದುಕೊಳ್ಳುತ್ತಾರೆ. ದುಡುಕಿ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ. ನಮ್ಮನ್ನು ನೇರವಾಗಿ ನಾಮಿನೇಟ್ ಮಾಡಿದ್ದು ನಮಗೆ ಸರಿ ಕಾಣಿಸಲಿಲ್ಲ" ಹೀಗೆ ಮನೆಯವರೆಲ್ಲಾ ಸ್ನೇಹಿತ್ ಕ್ಯಾಪ್ಟನ್ ಆಗಿದ್ದಂತೆ ಸಮಯದಲ್ಲಿ ಇಷ್ಟವಾಗದೆ ಇರುವುದನ್ನು ತಿಳಿಸಿದ್ದಾರೆ. ಕ್ಯಾಪ್ಟನ್ ತಪ್ಪು ಮಾಡಿದರೂ ಕೂಡ ಅವರಿಗೂ ಬಿಗ್ ಬಾಸ್ ಶಿಕ್ಷೆ ನೀಡದೆ ಇರುವುದಿಲ್ಲ. ಹೀಗಾಗಿ ನೆಗೆಟಿವ್ ಕಾರಣ ಹೇಳಿದವರು ಒಂದೊಂದು ಬಾರಿಯೂ ಸ್ವಿಮ್ಮಿಂಗ್ ಪೂಲ್‌ಗೆ ನೂಕುವಂತ ಶಿಕ್ಷೆ ವಿಧಿಸಲಾಗಿದೆ.


Click it and Unblock the Notifications











