BBK 10: ಬಿಗ್ ಬಾಸ್ ಮನೆಯಲ್ಲಿ ರಕ್ಷಕ್, ಪ್ರತಾಪ್, ಸಂತೋಷ್‌ಗೆ ಜೋಡಿ ಇಲ್ಲದೆ ಪರದಾಟ..!
ಬಿಗ್ ಬಾಸ್ ಮನೆಗೆ ಇಂದು ಹೊಸ ಅತಿಥಿಗಳ ಆಗಮನವಾಗಿದೆ. ಮನೆಯೊಳಗೆ ಇದ್ದ ಹದಿನೇಳು ಜನರಿದ್ದರು. ಅವರ ಜೊತೆಗೆ 'ಬೃಂದಾವನ' ಧಾರಾವಾಹಿಯ ಕುಟುಂಬಸ್ಥರು ಬಂದಿದ್ದರು. ಇಡೀ ಮನೆ ಗಿಜಿಗಿಜಿ ಎನ್ನುತ್ತಿತ್ತು. 40-50 ಜನ ಒಟ್ಟಿಗೆ ಸೇರಿದರೆ ಹೇಗಿರುತ್ತೆ ಹೇಳಿ. ಅಷ್ಟೇ ಕಿರುಚಾಟ, ಜೋರು ಧ್ವನಿ ಇತ್ತು.
ಆದರೆ ಅವರು ಬಂದಿದ್ದು ಅತಿಥಿಗಳಾಗಿ ಮಾತ್ರ. ಹೀಗಾಗಿ ಸ್ವಲ್ಪ ಸಮಯದ ಬಳಿಕ ವಾಪಾಸ್ಸಾದರು. ಬಳಿಕ ಅದೇ ಹದಿನೇಳು ಮಂದಿ. ಮನೆಯಲ್ಲಿ ಏನನ್ನೋ ಕಳೆದುಕೊಂಡ ಅನುಭವ.

ಬಿಗ್ ಬಾಸ್ ಮನೆಗೆ ಬೃಂದಾವನ ಟೀಂ ಬರುತ್ತಾ ಇದೆ ಎಂಬುದನ್ನು ಮೊದಲೇ ಮನೆ ಮಂದಿಗೆ ತಿಳಿಸಲಾಗಿತ್ತು. ಅದರ ಜೊತೆಗೆ ಮನೆಯವರಿಗೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಸಮಯವನ್ನು ನೀಡಿತ್ತು. ಅಡುಗೆ, ಊಟ ಅಂತೆಲ್ಲಾ ಏನಿಲ್ಲ. ಆದರೆ, ಅವರಿಗಾಗಿ ಮನರಂಜನೆಯ ಅಗತ್ಯ ತುಂಬಾ ಇತ್ತು.
ಬಿಗ್ ಬಾಸ್ ಸ್ಪರ್ಧಿಗಳಿಗೆ ಪಾರ್ಟ್ನರ್ ಹೇಗಿರಬೇಕು?
ಬಿಗ್ ಬಾಸ್ ಮನೆಗೆ 'ಬೃಂದಾವನ'ದ ಇಡೀ ಟೀಂ ಬಂದಿದೆ. ಮೊದಲೇ ಮೊಮ್ಮಗನಿಗೆ ಹುಡುಗಿಯನ್ನು ಹುಡುಕುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಾದರು ಹುಡುಗಿ ಸಿಗಬಹುದಾ ಎಂಬ ನಿರೀಕ್ಷೆಯಿಂದ ಲೈಫ್ ಪಾರ್ಟ್ನರ್ ಹೇಗಿರಬೇಕೆಂಬುದನ್ನು ಕೇಳಿದ್ದಾರೆ. ಅದರಲ್ಲಿ ಸ್ನೇಹಿತ್ ಹೇಳಿದ್ದು, ದಿನ ಒಂದೊಂದು ಬೇಕು ಎನಿಸುತ್ತೆ ಅಂತ. ಅದು ಗುಣಗಳ ವಿಚಾರಕ್ಕೆ. ಇನ್ನು ನಮ್ರತಾಗೆ ಕೂಡ ಕುಟುಂಬದ ಹುಡುಗ ಬೇಕಂತೆ. ಕಾರ್ತಿಕ್‌ಗೆ ಇಂಡಿಪೆಂಡೆಂಟ್ ಹುಡುಗಿ ಬೇಕಂತೆ.
ಮಿಮಿಕ್ರಿ ಮಾಡಿ ನಗಿಸಿದ ಸಂತೋಷ್
ಕೂಡು ಕುಟುಂಬವನ್ನು ರಂಜಿಸಬೇಕು ಅಂದ್ರೆ ಒಂದಷ್ಟು ಮನರಂಜನೆ ನೀಡಬೇಕು. ಹೀಗಾಗಿ ಒಬ್ಬೊಬ್ಬರು ಒಂದೊಂದು ಪ್ರಾಕ್ಟೀಸ್ ಮಾಡಿದ್ದರು. ಅದರಲ್ಲೂ ತುಕಾಲಿ ಸಂತು ಮಿಮಿಕ್ರಿ ಮಾಡಿ ಎಲ್ಲರನ್ನು ನಗಿಸಿದ್ದಾರೆ. ಹಳೆಯ ನಟರ ಮಿಮಿಕ್ರಿ ಮಾಡಿದ್ದಾರೆ. ಅದರಲ್ಲೂ ಅಂಬರೀಶ್ ಅವರ ವಾಯ್ಸ್ ಗೆ ಎಲ್ಲರೂ ಫಿದಾ ಆದ್ರೂ. ಹುಚ್ಚ ವೆಂಕಟ್ ಆಕ್ಟಿಂಗ್ ಅಂತು ಸೂಪರ್ ಆಗಿತ್ತು.
ವರ್ತೂರು ಸಂತೋಷ್ ಪ್ರೊಡ್ಯೂಸರ್ ಆಗ್ಬಿಟ್ರೆ ?
ಇನ್ನು ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತು ಸಿನಿಮಾ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ. ಈಗ ಬೃಂದಾವನದ ಟೀಂ ಮುಂದೆ ಒಂದು ಸಿನಿಮಾ ಆಡಿಷನ್ ಮಾಡುತ್ತಿದ್ದರು. ಮೊದಲಿಗೆ ಭಾಗ್ಯಶ್ರೀ ಆಡಿಷನ್‌ಗೆ ಬಂದರು. ಆದರೆ, ಅವರಿಗೆ 'ಹ' ಕಾರ 'ಅ' ಕಾರ ಕಲಿಸಿಕೊಟ್ಟೆ ಸಾಕಾಯ್ತು. ಆಮೇಲೆ ತನಿಷಾ ಬಂದರು. ನಿರ್ಮಾಪಕನಾಗಿದ್ದ ವರ್ತೂರು ಸಂತೋಷ್ ಆ ನಟಿಯ ಹಿಂದೆಯೇ ಹೋಗಿ ಬಿಟ್ಟರು. ಅಲ್ಲಿಗೆ ಸಿನಿಮಾ ಕಥೆ ಮುಗೀತು.
ಮನೆಯವರೆಲ್ಲರ ಫ್ಯಾಷನ್ ಶೋ
ಇನ್ನು ಕಡೆಯದಾಗಿ ಮನೆಯವರೆಲ್ಲಾ ಫ್ಯಾಷನ್ ಶೋ ಮಾಡಿದ್ದರು. ಹೌದು ಬಿಗ್ ಬಾಸ್ ಮನೆಯಲ್ಲಿ ಜೋಡಿ ಹಕ್ಕಿಗಳು ತೀರಾ ಕಡಿಮೆಯೆ. ಯಾಕಂದ್ರೆ, ಇರುವ ಸ್ನೇಹಿತ್ ಹಾಗೂ ನಮ್ರತಾ ಜೋಡಿಯಾಗಿ ಬಂದರೆ, ಸಂಗೀತಾ ಮತ್ತು ಕಾರ್ತೀಕ್, ಮೈಕೆಲ್ ಹಾಗೂ ಇಶಾನಿ ಇವರುಗಳು ಜೋಡಿಯಾಗಿ ಕಾಣಿಸುತ್ತಾರೆ. ಇಷ್ಟೇ ಜೋಡಿ ಇರುವುದು. ಆದರೆ, ಫ್ಯಾಷನ್ ಶೋನಲ್ಲಿ ಪಾಪ ಅನ್ನಿಸಿದ್ದು ರಕ್ಷಕ್, ಪ್ರತಾಪ್, ಸಂತೋಷ್ ಬಗ್ಗೆ. ಪ್ರತಾಪ್‌ಗೆ ಜೋಡಿಯಾಗಿ ಭಾಗ್ಯಶ್ರೀ, ರಕ್ಷಕ್‌ಗೆ ಜೋಡಿಯಾಗಿ ಸಿರಿ, ಸಂತೋಷ್‌ಗೆ ಜೋಡಿಯಾಗಿ ಸಂತೋಷ್ ಬಂದರು. ಇದನ್ನು ನೋಡಿ ಆದರೂ ಇವರಿಗೂ ಜೋಡಿ ಇರಬೇಕಿತ್ತು ಅನ್ನಿಸಿತು.


Click it and Unblock the Notifications











