BBK 10: ಕಾರ್ತಿಕ್ ಗೆ ಶಿಕ್ಷೆ ಆಗಿದ್ದು ವಿನಯ್ ಸಹವಾಸ ದೋಷದಿಂದಾನಾ ? ಸಂಗೀತಾ ಬೇಸರ ಏನು..?

By ಎಸ್ ಸುಮಂತ್

ಬಿಗ್ ಬಾಸ್‌ನಲ್ಲಿ ಸಾಕಷ್ಟು ನೀತಿ ಮತ್ತು ನಿಯಮಗಳಿವೆ. ಬಿಗ್ ಬಾಸ್‌ನಲ್ಲಿ ಮನೆಯ ಒಳಗೆ ಇರಬೇಕು, ಇರುವ ಸದಸ್ಯರ ಜೊತೆಗೇನೆ ಮಾತನಾಡಬೇಕು, ಆಡಬೇಕು, ಕುಣಿಯಬೇಕು. ಕೆಲವೊಂದು ಸಲ ಒಂದೇ ಕಡೆ ಇದ್ದಾಗ ನಿದ್ದೆ ಬರುವುದು ಸಾಮಾನ್ಯ. ಆದರೆ ಬಿಗ್ ಬಾಸ್‌ನಲ್ಲಿ ನಿದ್ದೆ ಮಾಡುವಂತೆ ಇಲ್ಲ. ಆ ನಿಯಮವನ್ನು ಮೀರಿದವರಿಗೆ ಬಿಗ್ ಬಾಸ್ ಎಚ್ಚರಿಸುತ್ತದೆ.

ಇಷ್ಟು ಸೀಸಸ್‌ಗಳಲ್ಲಿ ಯಾರಾದರೂ ನಿದ್ದೆಗೆ ಜಾರಿದರೆ ಬಿಗ್ ಬಾಸ್ ಅಲ್ಲಿಯೇ ಹಾಡನ್ನು ಹಾಕಿ ಎಚ್ಚರಿಸುತ್ತಾ ಇತ್ತು. ಆದರೆ, ಈ ಬಾರಿಯ ಸೀಸನ್‌ನಲ್ಲಿ ಅದೆಷ್ಟು ಬಾರಿ ಹೇಳಿದರೂ ಮೂಲ ನಿಯಮಗಳನ್ನೇ ಪಾಲನೆ‌ ಮಾಡುತ್ತಿಲ್ಲ. ಹೀಗಾಗಿ ಬಿಗ್ ಬಾಸ್ ಹಾಗೇ ಬಿಟ್ಟಿದೆ. ಕಡೆಯಲ್ಲಿ ಶಿಕ್ಷೆ ಕೊಟ್ಟೆ ಕೊಡುತ್ತೆ.

bbk10-vinay-karthik-sangeetha-sringeri-


ಮಲಗಿ ನಿಯಮ ಮುರಿದರಾ..?

ಬಿಗ್ ಬಾಸ್ ಮನೆಯಲ್ಲಿ ಒಂದೇ ಸೋಫಾದಲ್ಲಿ ಮಲಗಿದ್ದರು. ಇದನ್ನು ಮನೆಯವರಿಗೆಲ್ಲಾ ಎಚ್ಚರಿಸಿದ ಬಿಗ್ ಬಾಸ್, ಮನೆಯ ಸದಸ್ಯರು ಬಿಗ್ ಬಾಸ್ ನಿಯಮವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ಅದಕ್ಕೆ ಈಗಾಗಲೇ ಮನೆಯ ಎಲ್ಲಾ ಸದಸ್ಯರು ಶಿಕ್ಷೆ ಅನುಭವಿಸಿದ್ದಾರೆ. ಮನೆಯ ಮೂಲ ನಿಯಮವನ್ನು ಯಾರೇ ಬ್ರೇಕ್ ಮಾಡಿದರು, ಅವರಿಗೆ ಶಿಕ್ಷೆ ನೀಡಬಹುದು. ಈಗ ಗಾರ್ಡನ್ ಏರಿಯಾಗೆ ಬನ್ನಿ, ಖುರ್ಚಿಗಳ ಹಿಂದೆ ನಿಲ್ಲಿ ಎಂದು ಸೂಚನೆ ನೀಡಿದ್ದು, ವಿನಯ್ ಹಾಗೂ ಕಾರ್ತಿಕ್ ಮುರಿದ ನಿಯಮವನ್ನು ಬಿಗ್ ಬಾಸ್ ತಿಳಿಸಿದ್ದಾರೆ.

ಎದ್ದೇಳು ಕಾರ್ತಿಕ್.. ಎದ್ದೇಳು ವಿನಯ್

ವಿನಯ್ ಹಾಗೂ ಕಾರ್ತಿಕ್ ಲೈಟ್ಸ್ ಆಫ್ ಆಗುವುದಕ್ಕೂ ಮುನ್ನ ಮಲಗಿದ್ದರು. ಅವರನ್ನು ಎಬ್ಬಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಅವರಿಬ್ಬರಿಗೆ ಬಿಗ್ ಬಾಸ್‌ನ ಆದೇಶದ ತನಕ ನೀರನ್ನು ಮುಖದ ಮೇಲೆ ಎರಚಬೇಕು. ಎದ್ದೇಳು ವಿನಯ್.. ಎದ್ದೇಳು ಕಾರ್ತಿಕ್‌ ಎಂದು ಜೋರಾಗಿ ಹೇಳಬೇಕು. ಬಿಗ್ ಬಾಸ್ ಮುಂದಿನ ಸೂಚನೆ ತನಕ ನೀರು ಎರಚಬೇಕು ಎಂದರು.

bbk10-vinay-karthik-sangeetha-sringeri-

ವಿನಯ್‌ನಿಂದ ಕಾರ್ತಿಕ್ ಈ ಥರ ಆದ್ರಾ..?

ಸಂಗೀತಾಗೆ ಕಾರ್ತಿಕ್ ಮೇಲೆ ಕಾಳಜಿ ಜಾಸ್ತಿಯಾಗಿದೆ. ಸ್ನಾನ ಮಾಡಿಕೊಂಡು ಬಂದಂತಹ ಕಾರ್ತಿಕ್‌ ತಲೆಯನ್ನು ಒರೆಸಿ ಬುದ್ದಿ ಹೇಳಿದ್ದಾರೆ. "ಎಲ್ಲಾ ವಾರವೂ ನಾಮಿನೇಷನ್‌ನಲ್ಲಿ ಇರುತ್ತಾರೆ. ಪ್ರತಿ ವಾರವೂ ಕಷ್ಟಪಡಬೇಕು ನಿಮಗೋಸ್ಕರ. ನಾಚಿಕೆ ಆಗಲ್ವಾ. ನಾನು ಬೀಸಿ ಬೀಸಿ ಹೊಡಿತಾ ಇದ್ದೆ. ಎದ್ರಾ, ಇನ್ನು ಮೇಲಾದರೂ ಎದ್ದೇಳುತ್ತಾರಾ ಅಂತ. ಇದಕ್ಕೆ ಸಹವಾಸ ದೋಷ ಅಂತಾರೆ" ಅಂತ ಪರೋಕ್ಷವಾಗಿ ವಿನಯ್ ಬಗ್ಗೆ ಮಾತನಾಡಿದ್ದಾರೆ.


ಕನ್ನಡವನ್ನೇ ಮಾತನಾಡಲು ಹೇಳಿದ ಬಿಗ್ ಬಾಸ್

ಬಿಗ್ ಬಾಸ್ ಮನೆಯಲ್ಲಿ ಮೂಲ‌ ನಿಯಮ ಅಂದರೆ ಅದು ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನು ಹೆಚ್ಚಾಗಿ ಮಾತನಾಡಬಾರದು. ನಿದ್ರೆ ಮಾಡಬಾರದು. ಸ್ಮೋಕಿಂಗ್ ಝೋನ್ ಇಬ್ಬರು ಬಳಸಬಾರದು. ಹೀಗೆ ಮೂಲ ನಿಯಮಗಳು ಇದೆ. ಆದರೆ, ಬಿಗ್ ಬಾಸ್ ಸೀಸನ್ 10ರಲ್ಲಿ ಸಿಕ್ಕಾಪಟ್ಟೆ ಮಾತನಾಡಿದ ಭಾಷೆ ಅಂದರೆ ಕನ್ನಡ ಭಾಷೆ ಬಿಟ್ಟು ಹೆಚ್ಚು ಇಂಗ್ಲೀಷ್ ಅನ್ನೇ ಮಾತನಾಡುತ್ತಾರೆ. ಕನ್ನಡದ ಬಿಗ್ ಬಾಸ್ ಸೀಸನ್ ಇದೇನಾ ಎನ್ನಿಸುವಷ್ಟು ಅನುಮಾನ ಮೂಡಿಸಿದೆ. ಇದರಿಂದ ಕೋಪಗೊಂಡ ಬಿಗ್ ಬಾಸ್ ಈ ವಾರದ ಕ್ಯಾಪ್ಟನ್ ಆದ ನೀತೂಗೆ ಸಲಹೆ ಹಾಗೂ ಅಧಿಕಾರವನ್ನು ನೀಡಿದೆ. ಇನ್ನು ಮುಂದೆ ಯಾರಾದರೂ ಮೂಲ ನಿಯಮ ಮೀರಿದರೆ ಶಿಕ್ಷೆ ನೀಡಬಹುದು. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು. ಮೂಲ ನಿಯಮ ಮೀರಬಾರದು ಎಂದು ಸೂಚಿಸಿದೆ.

More from Filmibeat

English summary
Bigg Boss Kannada Season 10 October 27th episode about Karthik Vinay Punishment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X