BBK 10: ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದ ಹಾಗೇ ರಕ್ಷಕ್ ಕಣ್ಣೀರು.. ಸಮಾಧಾನ ಮಾಡಲು ಸಂಗೀತಾ, ತನಿಷಾ ಹರಸಾಹಸ

By ಎಸ್ ಸುಮಂತ್

ಬಿಗ್ ಬಾಸ್‌ಗೆ ಹೋಗುವುದಕ್ಕೂ ಮುನ್ನ ರಕ್ಷಕ್ ಜನರಿಗೆ ಕಂಡ ರೀತಿಯೇ ಬೇರೆ. ಆದರೆ, ಬಿಗ್ ಬಾಸ್ ಮನೆಯೊಳಗೆ ಇರುವ ರೀತಿಯೆ ಬೇರೆ. ಒಬ್ಬ ಮನುಷ್ಯನ ಬಗ್ಗೆ ಹತ್ತಿರದಿಂದ ಅರಿಯುವ ತನಕ, ಜಡ್ಜ್ ಮಾಡಬಾರದು ಎಂಬ ಮಾತನ್ನ ಅದಕ್ಕೆ ಹಲವು ಬಾರಿ ನೆನಪಿಸುವುದು. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬುದು ಕೂಡ ಇದೇ ಕಾರಣಕ್ಕೇನೆ.

ಬಿಗ್ ಬಾಸ್ ಮನೆಯಲ್ಲಿ ರಕ್ಷಕ್ ತಾನಾಯ್ತು ತನ್ನ‌ ಕೆಲಸವಾಯ್ತು ಎಂಬ ರೀತಿ ಇರುತ್ತಾರೆ. ತುಕಾಲಿ ಸಂತೋಷ್ ಜೊತೆ ಸೇರಿದಾಗಲೂ ಹೆಚ್ಚಾಗಿ ಬೇರೆಯವರ ಬಗ್ಗೆ ಮಾತನಾಡುವುದಿಲ್ಲ. ಯಾವಾಗಾದ್ರೂ ಅಲ್ಲಿ ತಾನೂ ಮಾತನಾಡಬೇಕು ಎಂದಾಗ ಮಾತ್ರ ಧ್ವನಿ ಜೋರಾಗುತ್ತದೆ. ಇಲ್ಲವಾದರೆ ಸುಮ್ಮ ಸುಮ್ಮನೇ ಬೇರೊಬ್ಬರ ಮಾತಿಗೆ ಬಾಯಿ ಸೇರಿಸುವುದಿಲ್ಲ.

Bigg Boss Kannada Season 10 October 27th Rakshak Crying Episode

ಅಮ್ಮನಿಗೆ ಸಂದೇಶ ಕಳುಹಿಸಿದ ರಕ್ಷಕ್

ಬಿಗ್ ಬಾಸ್‌ನಲ್ಲಿ ಹೊರಗಿನ ಪ್ರಪಂಚದ ಸುಳಿವಿಲ್ಲ. ಮೊಬೈಲ್ ಇಲ್ಲ. ಮನೆಯಲ್ಲಿರುವ ಅಷ್ಟು ಮಂದಿ ಬಿಟ್ಟರೆ ಮಾತನಾಡುವುದಕ್ಕೆ ಇನ್ಯಾರು ಇಲ್ಲ. ನಡುವೆ ಟಾಸ್ಕ್‌ಗಳು. ಮನೆಯವರು ನೆನಪಾದಗೆಲ್ಲಾ ಎಲ್ಲರಿಗೂ ಇರುವ ಆಪ್ಶನ್ ಬಿಗ್ ಬಾಸ್‌ನ ಕ್ಯಾಮೆರಾ ಕಣ್ಣುಗಳು. ಇದೀಗ ರಕ್ಷಕ್ ಕ್ಯಾಮರಾ ಮುಂದೆ ನಿಂತು ಮನೆಗೆ ಸಂದೇಶ ಕಳುಹಿಸಿದ್ದಾರೆ. "ಮನೆಯಲ್ಲಿ ನಾನೊಬ್ಬ ಮಿಸ್ಸಿಂಗ್. ಅಕ್ಕ ಎರಡನೇ ವಾರದ ಬಟ್ಟೆ ಬಂದಿದೆ. ತುಂಬಾ ಚೆನ್ನಾಗಿದೆ. ನನ್ನಿಂದ ಬೇಜಾರಾಗಿದ್ರೆ ಸಾರಿ. ನಾನು ಹ್ಯಾಪಿಯಾಗಿದ್ದೀನಿ. ರೆಗ್ಯೂಲರ್ ಆಗಿ ನಾನು ಹೇಗಿದ್ದೀನೋ ಹಾಗೇ ಇದ್ದೀನಿ. ಎಲ್ರೂ ಚೆನ್ನಾಗಿದ್ದೀರಾ ಅಂದುಕೊಳ್ತೀನಿ. ಎಲ್ಲಾ ಆರಾಮವಾಗಿರಿ. ಪ್ಲೀಸ್ ಬಿಗ್ ಬಾಸ್ ಈ ಸಂದೇಶವನ್ನು ಅಮ್ಮನಿಗೆ ಕಳುಹಿಸಿಕೊಡಿ" ಎಂದಿದ್ದಾರೆ.

ಅಮ್ಮನನ್ನು ನೆನೆದು ರಕ್ಷಕ್ ಕಣ್ಣೀರು

ಬಿಗ್ ಬಾಸ್ ಬಳಿ ಸಾಕಷ್ಟು ಬಾರಿ ಅಮ್ಮನ ಬಗ್ಗೆ ಮಾತನಾಡಿದ್ದಾರೆ. ಬುಲೆಟ್ ಪ್ರಕಾಶ್ ಹೋದ ಮೇಲೆ ರಕ್ಷಕ್ ಅಮ್ಮ ಬೆಂಬಲವಾಗಿ ನಿಂತಿದ್ದಾರೆ. ಮಗ ಆಕ್ಟಿಂಗ್ ಮಾಡ್ತೀನಿ ಅಂದ್ರು, ಬ್ಯುಸಿನೆಸ್ ಮಾಡ್ತೀನಿ ಅಂದರು ಎಲ್ಲದಕ್ಕೂ ಬೆಂಬಲ ನೀಡುತ್ತಾರೆ. ಹೀಗಾಗಿ ರಕ್ಷಕ್‌ಗೆ ಅಮ್ಮನ ನೆನಪು ತುಂಬಾ ಕಾಡಿದೆ. ಕ್ಯಾಮರಾಗೆ ಹೇಳಿದ ಬಳಿಕ, ಕಣ್ಣೀರು ಹಾಕುತ್ತಲೇ ವಾಶ್ ರೂಮಿಗೆ ಹೋಗಿದ್ದಾನೆ.

ತನಿಷಾ, ಸಂಗೀತಾ, ಭಾಗ್ಯಶ್ರೀ ಸಮಾಧಾನ

ರಕ್ಷಕ್ ಅಳುತ್ತಾ ಇದ್ದದ್ದನ್ನು ಕಂಡು, ತನಿಷಾ ಮತ್ತು ಭಾಗ್ಯಶ್ರೀ ಸಮಾಧಾನ ಮಾಡಿದ್ದಾರೆ. ಬಳಿಕ ಅಲ್ಲಿಗೆ ಸಂಗೀತಾ ಕೂಡ ಬಂದಿದ್ದಾರೆ. "ನಾವೆಲ್ಲಾ ಇಲ್ಲಿ ಇದ್ದೀವಿ ತಾನೇ. ನಾವೆಲ್ಲಾ ಏನೋ ಮಾತಾಡ್ತಾ ಇದ್ವಿ. ಅಮ್ಮನ್ನ ಬಿಟ್ಟು ಇರೋದಕ್ಕೆ ಆಗಲ್ಲ ಅಂದ್ರು. ಅದಕ್ಕೆ ಬೇಜಾರ್ ಆಗಿದ್ದಾನೆ. ಬುಲೆಟ್ ಕಣಪ್ಪ ನೀನು ಬುಲೆಟ್. ಧೈರ್ಯವಾಗಿರು" ಎಂದು ತನಿಷಾ ಅಂಡ್ ಭಾಗ್ಯಾಶ್ರೀ ಸಮಾಧಾನ ಮಾಡಿದ್ದಾರೆ.

ರಕ್ಷಕ್ ಕಣ್ಣೀರು ನೋಡಿ ತನ್ನ ಮಗು ನೆನೆದ ಭಾಗ್ಯಶ್ರೀ

ರಕ್ಷಕ್‌ ಕಣ್ಣೀರು ಕಂಡು ಭಾಗ್ಯಶ್ರೀ ತನ್ನ ಮಗು ಬಗ್ಗೆ ಮಾತನಾಡಿದ್ದಾರೆ. "ಎಲ್ಲರೂ ನನ್ನ ಅಳ್ತಾರೆ ಅಳ್ತಾರೆ ಅಂತಿದ್ರು. ಈಗ ನೋಡು ಇಷ್ಟು ದೊಡ್ಡ ಹುಡುಗ ಅಮ್ಮನ್ನು ನೆನೆಸಿಕೊಂಡು ಅಳ್ತಾ ಇದ್ದಾನೆ. ನಾನು ಎಳೆ ಮಗು ಬಿಟ್ಟು ಬಂದಿರೋದು. ನಂಗೆ ಹೇಗೆ ಅನ್ನಿಸುತ್ತೆ. ಅದರಲ್ಲೂ ಜೈಲಲ್ಲಿ ಕೂತ್ಕೊಂಡಾಗ ಅದೆಷ್ಟು ಅಳು ಬಂತು ಗೊತ್ತಾ. ಎಮೋಷನ್ಸ್ ನ ತೋರಿಸುವುದು ತಪ್ಪು ಅಂತಾರೆ. ಇಲ್ಲಿ ಅಂತಾನೆ ಅಲ್ಲ. ಸಮಾಜದಲ್ಲೂ ಅಷ್ಟು ಅತ್ತರೆ ವೀಕ್ನೆಸ್ ಅಂದುಕೊಳ್ಳುತ್ತಾರೆ. ರಾತ್ರಿ 8 ದಾಟಿದ್ರೆ ಮಗು ಚಿಂತೆ' ಎಂದಿದ್ದಾರೆ. ಇದನ್ನು ಕೇಳಿದ ತನಿಷಾ, ಭಾಗ್ಯಶ್ರೀ ಅವರಿಗೆ ಸಮಾಧಾನ ಮಾಡಿದ್ದಾರೆ.

More from Filmibeat

English summary
BBK 10: Rakshak suddenly get upset. Sangeetha Sringeri and Tanisha try to calm down
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X