BBK 10: ಕಿಚ್ಚನ ಮೊದಲ ಚಪ್ಪಾಳೆ ಪಡೆದ ನೀತೂ.. ಆದರೆ ಸುದೀಪ್‌ಗೆ ವಾರದ ಯಾವ ಖುಷಿಯೂ ಸಿಕ್ಕಿಲ್ಲ!
ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ಸ್ಪರ್ಧಿಗಳ ಆಟ. ವಾರದ ಕೊನೆಯಲ್ಲಿ ಸುದೀಪ್ ಪಂಚಾಯತಿ. ಪ್ರತಿ ದಿನ ಎಪಿಸೋಡ್ ನೋಡದವರು ಕೂಡ ವಾರದ ಕಥೆ ಕಿಚ್ಚನ ಜೊತೆ, ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ ನೋಡುವುದಕ್ಕೆ ಕಾಯುತ್ತಾ ಇರುತ್ತಾರೆ. ಯಾಕಂದ್ರೆ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ರೀತಿ ಹಾಗಿರುತ್ತದೆ.
ವಾರಪೂರ್ತಿ ನಡೆದ ಎಪಿಸೋಡ್‌ನಲ್ಲಿ ಕಾಮಿಡಿ, ಸೀರಯಸ್ ವಿಚಾರಗಳು, ಟಾಸ್ಕ್‌ಗಳು ಈ ಎಲ್ಲಾ ಆಯಾಮಗಳನ್ನು ಆಯ್ಕೆ ಮಾಡಿಕೊಳ್ಳುವ ಕಿಚ್ಚ, ಒಂದು ಗಂಟೆಗಳ ಕಾಲ ಸ್ಪರ್ಧಿಗಳ ಆ ವಿಚಾರದ ಮೇಲೆ ಮಾತನಾಡಿಸಿಕೊಳ್ಳುತ್ತಾ ಹೋಗುತ್ತಾರೆ. ಜೊತೆಗೆ ಕಿಚ್ಚನ ಚಪ್ಪಾಳೆಯನ್ನು ನೀಡುತ್ತಾರೆ.

ನೀತೂಗೆ ಸಿಕ್ಕಿತು ಚಪ್ಪಾಳೆ
ಬಿಗ್ ಬಾಸ್ ಮನೆಯಲ್ಲಿಒಂದು ಸ್ಪೆಷಲ್ ಇದೆ. ಅದುವೇ ಕಿಚ್ಚನ ಚಪ್ಪಾಳೆ. ಸೀಸನ್ ಶುರುವಾದಾಗ ಇಡೀ ವಾರ ಯಾರು ಚೆನ್ನಾಗಿ ಆಟ ಆಡುತ್ತಾರೆ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ. ಇದೀಗ ಈ ವಾರ ನೀತೂಗೆ ಚಪ್ಪಾಳೆ ಕೊಟ್ಟ ಕಿಚ್ಚ, "ಈ ವಾರದ ಚಪ್ಪಾಳೆ ನೀತೂಗೆ ಸಿಕ್ತಾ ಇದೆ. ಕಳೆದ ವಾರ ನಾಲ್ಕೈದು ಬೋರ್ಡ್ ಬಿದ್ದಿದೆ. ಆದರೆ, ಈ ವಾರ ತುಂಬಾ ಸ್ಪಿರಿಟ್ ಇತ್ತು. ಮುಂದೆ ಬಂದ್ರಿ, ಆಟ ಆಡಿದ್ರಿ, ನಿಂತ್ರಿ, ಮಾತಾಡೋ ಕಡೆ ಮಾತಾಡಿದ್ರಿ, ಸೈಲೆಂಟ್ ಆಗಿರುವ ಕಡೆ ಸೈಲೆಂಟ್ ಆಗಿದ್ರಿ" ಎಂದು ಕಿಚ್ಚ ಸುದೀಪ್ ಹೊಗಳಿದ್ದಾರೆ. ಅದರಲ್ಲೂ ಸೀಸನ್ 10ರ ಮೊದಲ ಚಪ್ಪಾಳೆ ಇದು.
ನೀತೂಗೆ ಕಿಚ್ಚನಿಂದ ಬಹುಪರಾಕ್
ನೀತೂಗೆ ಕಳೆದ ವಾರದವರೆಗೂ ಸಾಕಷ್ಟು ನೆಗೆಟಿವ್ ಪಾಯಿಂಟ್‌ಗಳು ಸಿಕ್ಕಿದ್ದವು. ಅದನ್ನು ಕಿಚ್ಚ ಸುದೀಪ್ ಕೂಡ ಹೇಳಿದ್ದಾರೆ. "ಕಳೆದ ವಾರ ಅವರ ಮೇಲೆ ಸಾಕಷ್ಟು ಮಾತು ಬರುತ್ತೆ. ಆರೋಪ ಬರುತ್ತೆ. ಆದರೆ, ಆ ವ್ಯಕ್ತಿ ಈ ವಾರ ಸಖತ್ತಾಗಿ ಆಡಿ, ರಾಯಲ್ ಆಗಿ ಮಲಗುತ್ತಾನೆ" ಎಂದು ನೀತೂ ಬಗ್ಗೆ ಹೊಗಳಿದ್ದಾರೆ.
ಮನೆ ಮಂದಿಯಿಂದ ಕಿಚ್ಚನಿಗೆ ಬೇಸರ
ಕಿಚ್ಚ ಸುದೀಪ್‌ಗೆ ಈ ವಾರ ತುಂಬಾ ಬೇಸರ ತರಿಸಿದೆ. ಮನೆಯವರ ಬಳಿಯೇ ಕೇಳಿದ್ದಾರೆ. ಈ ವಾರದ ಡಿಫ್ರೆನ್ಸ್ ಏನು ಅಂತ. ಆಗ ಹಲವರು ನಿಮಗೆ ಖುಷಿ ಇಲ್ಲ, ನಿಮ್ಮ ಮುಖದಲ್ಲಿ ನಗು ಇಲ್ಲ, ಮನೆಯಲ್ಲಿ ವಾರ ಪೂರ್ತಿ ಜಗಳ, ಈ ಪಂಚಾಯ್ತಿ ಶುರುವಾಗಿದ್ದೆ ವಾರ್ ಮೂಲಕ ಎಂದೆಲ್ಲಾ ಹೇಳಿದ್ದಾರೆ. ಸುದೀಪ್ ಕೂಡ ಈ ವಾರ ತುಂಬಾ ಬೇಸರ ಇದೆ. ಮಾತನಾಡುವುದಕ್ಕೆ ಏನು ಇಲ್ಲ ಎಂದಿದ್ದಾರೆ.
ಮನೆ ಮಂದಿಗೆ ಕಿಚ್ಚ ಹೇಳಿದ್ದೇನು..?
ಕಿಚ್ಚ ಸುದೀಪ್ ಮನೆಯವರಿಗೆಲ್ಲಾ, ಇವತ್ತು ಚರ್ಚೆಯಾಗಿದ್ದು ಬರೀ ಪರ್ಸನಾಲಿಟಿ ಅಂಡ್ ಕ್ಯಾರೆಕ್ಟರ್ ಬಗ್ಗೆ. ಚೆನ್ನಾಗಿ ಆಡ್ತಾ ಇಲ್ವಾ. ಆಡ್ತಾ ಇದ್ದೀರಾ.. ನಿಮ್ಮದೆ ಒಂದು ಪರ್ಸನಲಿಟಿ ಇದೆ. ಆದರೆ, ಈ ವಾರ ಏನು ಸಿಕ್ಕಿಲ್ಲ. ಮೈಕ್ರೋಸ್ಕೋಪ್ ಹಾಕಿ ಹುಡುಕಿದರೂ ಏನು ಸಿಕ್ತಾ ಇಲ್ಲ. ಪ್ಲೀಸ್ ಏನಾದರೂ ಸಂಥಿಂಗ್ ಕೊಡಿ. ನೀವೂಗಳೆಲ್ಲಾ ಎದ್ದೇಳೋ ಸಮಯ. ಎದ್ದೇಳುತ್ತೀರಾ ಅಲ್ವಾ ಎಂದು ಅವರ ಪರ್ಸನಾಲಿಟಿ ಇಂಪ್ರೂವ್ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ.


Click it and Unblock the Notifications











