BBK 10: ಕಿಚ್ಚನ ಪಂಚಾಯ್ತಿಯಲ್ಲಿ ಬಂತು ಫೈನಲಿಸ್ಟ್ ಹೆಸರು.. ವಿನಯ್ ಬಗ್ಗೆ ಸುದೀಪ್ ಎಚ್ಚರಿಸಿದ್ದೇನು..?

By ಎಸ್ ಸುಮಂತ್

ಬಿಗ್ ಬಾಸ್ ಮನೆಗೆ ಬಂದಾಗಿದೆ. ಇನ್ನೇನಿದ್ದರು ಗೆಲುವಿನ ಕಡೆಗಷ್ಟೇ ಗಮನ ಕೊಡಬೇಕು. ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇರುತ್ತಾರೆ. ಒಬ್ಬರು ಸ್ಟ್ರಾಂಗ್, ಒಬ್ಬರು ವೀಕ್ ಹೀಗೆಯೇ ಕಾಂಪಿಟೇಷನ್ ಆರಂಭವಾಗುವುದು.

ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ವಿನಯ್ ಸ್ಟ್ರಾಂಗ್ ಆಗಿ ಎಲ್ಲರ ಕಣ್ಣಲ್ಲೂ ಉಳಿದು ಬಿಟ್ಟಿದ್ದಾರೆ. ವಿನಯ್ ಮುಂದೆ ಬಂದರೆ ಯಾರಿಗೂ ಅವರನ್ನು ಎದುರಿಸುವ ಮನಸ್ಸೇ ಇಲ್ಲ. ವಿನಯ್ ತನಗೆ ತಾವೇ ತನ್ನ ಪ್ರತಿಸ್ಪರ್ಧಿ ಇಲ್ಲ ಎಂಬುದಾಗಿ ಫಿಕ್ಸ್ ಆಗಿದ್ದಾರೆ. ಹೀಗಾಗಿಯೇ ಕಿಚ್ಚ ಕೇಳಿದಾಗ ಯಾರಿಗೂ 10ರಲ್ಲಿ 8 ಕೊಟ್ಟಿಲ್ಲ. ಸ್ವಲ್ಪ ಟಫ್ ಎನಿಸುವುದು ನಮ್ರತಾ, ಕಾರ್ತಿಕ್, ಮೈಕೆಲ್ ಹೆಸರು ಬಂದಿದೆ.

bbk-10-kichcha-sudeep-vinay

ಮನೆಯವರ ಧ್ವನಿಯ ಬಗ್ಗೆ ಕಿಚ್ಚನ ಪ್ರಶ್ನೆ

ಮನೆಯವರ ಧ್ವನಿ ಅಡಗಿರುವ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. "ಸಿರಿ ಅವರು ಅಂದರೆ ಸೀರಿಯಲ್‌ನಲ್ಲಿ ಮಾಡಿದ್ದೀರಿ, ಧ್ವನಿ ಜೋರು ಎಂದುಕೊಂಡಿದ್ದೆವು. ಆದರೆ ಇಲ್ಲಿ ಎಲ್ಲಿ ಹೋಗಿದೆ. ಸಂಗೀತಾ ಅವರಿಗೆ ಬರ್ತೀನಿ, ವಿನಯ್ ಅವರು ಪ್ರತಾಪ್ ಬಳಿ ಮಾತಾಡುವಾಗ ಥ್ರೆಟ್ನಿಂಗ್ ಅಂತೀರಾ.. ಈಗ ವಾಯ್ಸ್ ಇಲ್ಲ. ತನಿಷಾ ನೀವು ಹೇಳಿ, ನಮ್ರತಾ ಕ್ರಿಕೆಟ್ ವಿಚಾರಕ್ಕೆ ಕೇಳಿದಾಗ ಅಷ್ಟು ಮಾತನಾಡಿದ್ರಿ. ಆದರೆ, ವಿನಯ್ ವಿಚಾರ ಬಂದಾಗ ಸೈಲೆಂಟ್ ಆಗುತ್ತೀರಿ. ಕಾರ್ತಿಕ್ ನೀವೂ ಅಡುಗೆ ಮನೆಗೆ ಬರ್ತೀರಿ. ಎಲ್ಲರ ಧ್ವನಿ ಎಲ್ಲಿದೆ ಅಂತ ಕೇಳುತ್ತೀರಿ. ಮ್ಯಾನ್ ಟು ಮ್ಯಾನ್ ಮಾತನಾಡೋಣಾ ಬಾ ಅಂತ ವಿನಯ್ ಕರೆದಾಗಲೂ ನಿಮ್ಮ ಧ್ವನಿ ಬರುವುದಿಲ್ಲ" ಎಂದು ಪ್ರಶ್ನಿಸಿದ್ದಾರೆ.

ವಿನಯ್ ಬಗ್ಗೆ ಎಚ್ಚರಿಸಿದ್ದೇನು..?

ಕಿಚ್ಚ ಸುದೀಪ್ ಮನೆಯವರಿಗೆ ಹೇಳುವುದಕ್ಕೆ ಹೊರಟಿದ್ದು, ವಿನಯ್‌ನ ಕಂಡು ಮನೆಯವರೆಲ್ಲ ಭಯ ಪಡುತ್ತಿದ್ದಾರೆ ಅಂತ. ವಿನಯ್ ತಪ್ಪು ಮಾಡಿದಾಗ ಯಾಕೆ ಯಾರು ಮಾತನಾಡುತ್ತಿಲ್ಲ. ಅವರ ಎದುರು ಮಾತನಾಡುವುದಕ್ಕೆ ಎಲ್ಲರೂ ಹೆದರುತ್ತಾ ಇದ್ದೀರಾ. ಅಂದರೆ, ನೀವೆಲ್ಲಾ ಸೇರಿ ಒಬ್ಬ ಫೈನಲಿಸ್ಟ್‌ನ ರೆಡಿ ಮಾಡಿದ್ದೀರಿ ಎಂದಿದ್ದಾರೆ.

bbk-10-kichcha-sudeep-vinay

ಕಾರ್ತಿಕ್ ತಪ್ಪು ಕಲ್ಪನೆಗೆ ಕಿಚ್ಚನ ಸಲಹೆ

ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಇರುವವರು ಎದುರು ಬದುರೇ ಇರಬೇಕು. ಸದ್ಯಕ್ಕೆ‌ ಮನೆಯಲ್ಲಿ ವಿನಯ್‌ಗೆ ಪ್ರತಿಸ್ಪರ್ಧಿ ಎನಿಸಿಕೊಂಡಿರುವವರು ಕಾರ್ತಿಕ್ ಹಾಗೂ ಮೈಕೆಲ್. ಆದರೆ, ಕಾರ್ತಿಕ್ ಯಾವತ್ತಿಗೂ ವಿನಯ್‌ನ ಪ್ರತಿಸ್ಪರ್ಧಿ ಎನಿಸಿಕೊಳ್ಳಲೇ ಇಲ್ಲ. ಬದಲಿಗೆ ತುಂಬಾ ಕ್ಲೋಸ್ ಆಗಿದ್ದಾರೆ. ಹೀಗಾಗಿ ಅದು ತಪ್ಪು ಎಂಬುದನ್ನು ಸುದೀಪ್ ಕಿವಿ ಮಾತಿನ ಮೂಲಕ ಸೂಚನೆ ನೀಡಿದ್ದಾರೆ. "ಅವ್ರು ಸ್ಟ್ರಾಂಗ್ ಇದ್ದಾರೆ. ಸ್ಟ್ರಾಂಗೆಸ್ಟ್ ಎಂದುಕೊಂಡಿರುವುದು ತಪ್ಪು. ಅವತ್ತು ನಡೆದ ತಪ್ಪಿನಲ್ಲಿ ಒಮ್ಮೆ‌ ನಾನು ಭಾಗಿಯಾಗಿದ್ದೆ. ಹೀಗಾಗಿ ನಾನು ಮಾತನಾಡುವುದು ಸರಿಯಲ್ಲ ಅಂತ ಮನೆಯವರಿಗೆ ಮಾತನಾಡುವುದಕ್ಕೆ ಹೇಳಿದ್ದೆ" ಎಂದು ಕಾರ್ತಿಕ್ ಹೇಳಿದಾಗ, ಸುದೀಪ್ "ಅದು ತಪ್ಪೇ ಅಲ್ಲ. ಎಲ್ಲರೂ ಸೇರಿ‌ ಒಬ್ಬ ಫೈನಲಿಸ್ಟ್ ನ ರೆಡಿ‌ ಮಾಡಿದ್ದೀರಿ" ಎಂದಿದ್ದಾರೆ.

ಇನ್ನು ಮುಂದೆ ಸರಿ ಆಗ್ತಾರಾ ಮನೆ ಮಂದಿ?

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಎಲ್ಲಾ ಕ್ಷೇತ್ರದಲ್ಲೂ ಹುಡುಕಿ ತಡುಕಾಡಿ ಆಯ್ಕೆ‌ ಮಾಡುತ್ತಾರೆ. ಒಳಗೆ ಆ ನಿರೀಕ್ಷೆಗೆ ತಕ್ಕ ಹಾಗೇ ಆಟ ಆಡುತ್ತಾರೆ ಎಂದು. ಆದರೆ ವಿನಯ್ ಕಂಡರೆ ಎಲ್ಲರೂ ಭಯ ಬೀಳುತ್ತಿರುವುದಕ್ಕೆ ಕಿಚ್ಚ ಸುದೀಪ್ ಕಿವಿ ಮಾತಿನ ಮೂಲಕ ಎಚ್ಚರಿಸಿದ್ದಾರೆ. ಇನ್ನಾದರೂ ಬಿಗ್ ಬಾಸ್ ಮನೆಯೊಳಗೆ ಎಲ್ಲರೂ ಆಕ್ಟೀವ್ ಆಗ್ತಾರಾ ನೋಡೋಣಾ.

More from Filmibeat

English summary
Bigg Boss Kannada Season 10. Varada Kathe Kicchana Jothe Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X