BBK10: ಎಲಿಮಿನೇಟ್ ಆದವರು ಮತ್ತೆ ಬಂದಿದ್ದು ದ್ವೇಷ ತೀರಿಸಿಕೊಳ್ಳೋದಕ್ಕಾ..? ಏನಾಗ್ತಿದೆ ಮನೆಯ ವಾತಾವರಣ?
ಬಿಗ್ ಬಾಸ್ ಮನೆ 101 ದಿನಗಳನ್ನು ಪೂರೈಸಿದೆ. ಮನೆ ಮಂದಿಗೆ ಎನರ್ಜಿ ತುಂಬುವುದಕ್ಕೆ ಅಂತ ಎಲಿಮಿನೇಟ್ ಆಗಿ ಹೋದವರೆಲ್ಲ ಮನೆಗೆ ವಾಪಾಸ್ ಆಗಿದ್ದಾರೆ. ಇದರಿಂದ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಚೈತನ್ಯ ಬರಬಹುದು ಎಂದೇ ಭಾವಿಸಿದ್ದರು. ಆಡುವುದಕ್ಕೆ ಇನ್ನಷ್ಟು ಹುಮ್ಮಸ್ಸು ತುಂಬುತ್ತಾರೆ ಎಂದೇ ಜನ ನಂಬಿದ್ದರು. ಆದರೆ, ಮನೆಯೊಳಗೆ ನಡೆಯುತ್ತಿರುವುದೇ ಬೇರೆಯಾಗಿದೆ.
ಬಿಗ್ ಬಾಸ್ ಮನೆಯೊಳಗೆ ನೂರು ದಿನ ಪೂರೈಸಿ, ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸ್ಪರ್ಧಿಗಳಿಗೆ ಹೊರಗೆ ಏನಾಗುತ್ತಿದೆ ಎಂಬುದರ ಸುಳಿವು ಇಲ್ಲ. ಮನೆಯವರು ಬಂದಾಗಲೂ ಹೊರಗೆ ಯಾವ ರೀತಿ ಕಾಣಿಸುತ್ತಾ ಇದ್ದೀರಾ ಎಂಬುದರ ಸುಳಿವು ನೀಡಿರಲಿಲ್ಲ. ಬದಲಿಗೆ ಪ್ರೋತ್ಸಾಹ ನೀಡಿ ಹೋಗಿದ್ದರು. ಆದರೆ ಈಗ ಆಗುತ್ತಿರುವುದೇ ಬೇರೆ ರೀತಿ.

ಬಿಗ್ ಬಾಸ್ ರೂಲ್ಸ್ ಬ್ರೇಕ್
ಬಿಗ್ ಬಾಸ್ ಮನೆಯೊಳಗೆ ಎಲಿಮಿನೇಟ್ ಆದವರೆಲ್ಲಾ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಅವರೆಲ್ಲ ಈಗಾಗಲೇ ಸಂದರ್ಶನಗಳನ್ನು ಕೊಟ್ಟಿರುವವರು, ಹಳೆ ಎಪಿಸೋಡ್‌ಗಳನ್ನು ನೋಡಿರುವವರು. ಆದರೆ, ಈಗ ಒಳಗೆ ಹೋದ ಮೇಲೆ ಮನೆಯಿಂದ ಆಚೆ ಯಾವ ರೀತಿ ಕಾಣುತ್ತಿದ್ದಾರೆ ಎಂಬುದನ್ನು ತಿಳಿಸುತ್ತಿದ್ದಾರೆ. ಜನ ಹೇಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂಬಂತೆ ಹೇಳುತ್ತಿದ್ದಾರೆ.
ಬಿಗ್ ಬಾಸ್ ಬೇಕಂತಾನೇ ಬಿಟ್ಟಿರೋದಾ?
ಬಿಗ್ ಬಾಸ್ ಒಂದಷ್ಟು ನಿಯಮಗಳಿವೆ. ಆ ನಿಯಮದಲ್ಲಿ ಹೊರಗಡೆಯ ವಿಚಾರ ಯಾವುದು ಕೂಡ ಮನೆ ಮಂದಿಗೆ ತಿಳಿಯಬಾರದು. ಆದರೆ, ಹೊರಗಡೆ ಹೇಗೆ ಅಭಿಪ್ರಾಯ ಹೇಗಿದೆ?, ಮನೆಯಲ್ಲಿ ನಿಮ್ಮ ಆಟ ಹೇಗಿದೆ?, ಗೆಲ್ಲುವುದಕ್ಕೆ ಏನೆಲ್ಲಾ ಮಾಡಬೇಕು? ಎಂಬುದನ್ನು ಹೇಳುತ್ತಿದ್ದಾರೆ. ಮನೆ ಮಂದಿ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ ಎಂಬುದು ನೋಡುಗರಿಗೆ ಅರ್ಥವಾಗಿದೆ. ಆದರೆ, ನಿಜಕ್ಕೂ ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದರೆ ಬಿಗ್ ಬಾಸ್ ಎಚ್ಚರ ನೀಡುತ್ತಾ ಇತ್ತು. ಆದ್ರೀಗ ಬೇಕಂತಾನೇ ಈ ವಿಚಾರಗಳನ್ನು ಮಾತನಾಡಲು ಸೂಚನೆ ನೀಡಿದೆಯಾ ಎಂಬ ಅನುಮಾನವೂ ಇದೆ.
ಬೆಡ್ ಶೀಟ್ ವಿಚಾರವಿಟ್ಟುಕೊಂಡು ಗಲಾಟೆ
ಮನೆಯೊಳಗೆ ಹೋದ ಹಳೆ ಸ್ಪರ್ಧಿಗಳು ದ್ವೇಷ ತೀರಿಸಿಕೊಳ್ಳುವುದಕ್ಕೆ ಹೋಗಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಯಾಕಂದ್ರೆ ಇಶಾನಿ, ಪ್ರತಾಪ್ ಮೇಲೆ ಎಗರಾಡಿದ್ದಾರೆ. ಈಗ ರಕ್ಷಕ್, ಪ್ರತಾಪ್ ಮೇಲೆ ಜೋರು ಮಾಡಿದ್ದಾರೆ. ಬೆಡ್ ಶೀಟ್ ವಿಚಾರ ತೆಗೆದು, ನನ್ನ ಬೆಡ್ ಶೀಟ್ ತೆಗೆದುಕೊಡು ಎಂದು ರೋಪ್ ಹಾಕಿದ್ದಾರೆ. ಈ ಜಗಳ ತಾರಕಕ್ಕೇರುವ ಮುನ್ನ ಸಂಗೀತಾ ತಿಳಿ ಮಾಡಿದ್ದಾರೆ. ಬೆಡ್ ಶೀಟ್ ತಂದುಕೊಟ್ಟು ಸಮಾಧಾನ ಮಾಡಿದ್ದಾರೆ.

ಸ್ನೇಹಿತ್ ನಡವಳಿಕೆಗೆ ಬೇಸತ್ತ ನಮ್ರತಾ!
ಇತ್ತ ಸ್ನೇಹಿತ್ ಬದಲಾದವರಂತೆ ಕಂಡಿದ್ದಾರೆ. ನಮ್ರತಾ ಜೊತೆಗೆ ಮೊದಲಿನಂತೆ ಮಾತನಾಡುತ್ತಿಲ್ಲ. ಹೊರಗಡೆ ಆಗುತ್ತಿರುವ ನೆಗೆಟಿವ್ ಟಾಕ್ ಬಗ್ಗೆ ಮಾತನಾಡಿದ್ದಾರೆ. ವಿನಯ್‌ಗೆ ಸಪೋರ್ಟ್ ಮಾಡುತ್ತೀನಿ ಅಂತಿದ್ದಾರೆ. ಇದೆಲ್ಲ ನಮ್ರತಾಗೆ ಸಹಿಸುವುದಕ್ಕೆ ಆಗುತ್ತಿಲ್ಲ. ಸ್ನೇಹಿತ್ ಬದಲಾವಣೆಯಿಂದ ನಮ್ರತಾ ಇವತ್ತು ಬರೀ ಕಣ್ಣೀರು ಹಾಕಿದ್ದೇ ಆಗಿದೆ. ಮೊದಲೆಲ್ಲಾ ಫ್ರೆಂಡ್ ಎಂದು ಓಡಾಡುತ್ತಿದ್ದ. ಈಗ ಈ ರೀತಿ ಮಾತನಾಡುತ್ತಿದ್ದಾರೆ. ನಾನು ಏನು ತಿಳಿದುಕೊಳ್ಳಬೇಕು ಎಂದು ಕಣ್ಣೀರು ಹಾಕಿದ್ದಾರೆ. ನೆಗೆಟಿವ್ ಕಮೆಂಟ್‌ಗಳ ವಿಚಾರಕ್ಕೂ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ.


Click it and Unblock the Notifications











