BBK10: "ಕಾಗೆ ಕಕ್ಕ ಮಾಡ್ಬಿಟ್ಟು ಎಲ್ಲಾ ಕಡೆ ಹೋಗ್ತಾನೆ ಇರುತ್ತೆ" ಎಂದ ಇಶಾನಿ; ಡ್ರೋನ್ ಫ್ಯಾನ್ಸ್ ಗರಂ
ಬಿಗ್ ಬಾಸ್ ಮನೆ ಈಗ ಸಂಪೂರ್ಣ ಬದಲಾಗಿ ಹೋಗಿದೆ. ಟಾಸ್ಕ್, ಗೆಲುವಿನ ನಾಗಲೋಟದ ಪ್ರಯತ್ನ ಇನ್ನೊಂದು ವಾರವಷ್ಟೇ. ಬಳಿಕ ಫಿನಾಲೆಗೆ ಮನೆ ಮಂದಿ ತಯಾರಾಗಬೇಕಾಗುತ್ತದೆ. ಸದ್ಯಕ್ಕೆ ಸ್ಪರ್ಧೆಯಲ್ಲಿ ಎಂಟು ಜನ ಇದ್ದಾರೆ. ಫಿನಾಲೆ ತಲುಪುವುದಕ್ಕೆ ಐದು ಜನರಿಗೆ ಮಾತ್ರ ಅವಕಾಶ. ಹೀಗಾಗಿ ಫಿನಾಲೆ ಒಳಗೆ ಮೂವರು ಎಲಿಮಿನೇಟ್ ಆಗಲಿದ್ದಾರೆ.
ಈ ಸೀಸನ್ ಕೊನೆ ಕೊನೆ ಗಳಿಗೆಯಲ್ಲಿ ಮನೆ ಮತ್ತೆ ತುಂಬಿದೆ. ಎಲಿಮಿನೇಟ್ ಆಗಿ ಹೋಗಿದ್ದ ಎಲ್ಲಾ ಸ್ಪರ್ಧಿಗಳನ್ನು ಮತ್ತೆ ಕರೆಸಿದ್ದಾರೆ. ಹಾಗಂತ ಸ್ಪರ್ಧೆಗಳಲ್ಲ, ಮನೆಯಲ್ಲಿ ಗೆಲುವಿಗಾಗಿ ನೋಡುತ್ತಿರುವ ಸ್ಪರ್ಧಿಗಳಿಗೆ ಒಂದಷ್ಟು ಎನರ್ಜಿ ಬರಲಿ ಎಂಬ ಕಾರಣಕ್ಕೆ ಕರೆಸಿದ್ದಾರೆ. ಆದರೆ, ಇಶಾನಿ ಈಗ ಗೆಸ್ಟ್ ಅನ್ನೋದನ್ನು ಮರೆತು ಮತ್ತೆ ಜೋರು ಧ್ವನಿಯನ್ನೇ ಮಾಡಿದ್ದಾರೆ. ಅದು ಪ್ರತಾಪ್ ವಿಚಾರದಲ್ಲಿ. ಹೀಗಾಗಿ ಪ್ರತಾಪ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರತಾಪ್‌ರನ್ನು ಕಾಗೆ ಎಂದಿದ್ದ ಇಶಾನಿ
ಬಿಗ್ ಬಾಸ್ ಮನೆಯೊಳಗಿದ್ದಾಗಿನಿಂದ ಪ್ರತಾಪ್ ಹಾಗೂ ಇಶಾನಿ ನಡುವಿನ ಬಾಂಧವ್ಯ ಅಷ್ಟಕ್ಕೆ ಅಷ್ಟೇ. ಆದರೆ, ಈಗ ಹೊರಗೆ ಹೋಗಿ ಬಂದಾಗಲೂ ಬದಲಾಗಿಲ್ಲ ಇಶಾನಿ. ಮನೆಗೆ ಬಂದ ದಿನವೇ ಪ್ರತಾಪ್ ಮೇಲೆ ಕೆಂಡಕಾರಿದ್ದಾರೆ. ವಿನಯ್ ಹಾಗೂ ನಮ್ರತಾ ಜೊತೆಗೆ ಜ್ಯೂಸ್ ಕುಡಿಯುತ್ತಾ ಕುಳಿತಿದ್ದ ಇಶಾನಿ, ನೇರವಾಗಿಯೇ ಪ್ರತಾಪ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. "ಕಾಗೆ ಗೊತ್ತಿಲ್ವಾ..? ಕಾಗೆ ಕಕ್ಕ ಮಾಡ್ಬಿಟ್ಟು ಎಲ್ಲಾ ಕಡೆ ಹೋಗ್ತಾನೆ ಇರುತ್ತೆ. ಸಿಂಪಥಿ ಕಾರ್ಡ್ ಯೂಸ್ ಮಾಡಿ ಉಳ್ಕೊಂಡಿದ್ದಾರೆ ಅಲ್ವಾ" ಎಂದಿದ್ದಾರೆ.
ಇಶಾನಿ ಹೇಳಿಕೆ ಪ್ರತಾಪ್ ಫ್ಯಾನ್ಸ್ ವಿರೋಧ
ಪ್ರತಾಪ್ ವಿಚಾರದಲ್ಲಿ ಈ ರೀತಿ ಮಾತನಾಡಿದ ಇಶಾನಿ ಸದ್ಯಕ್ಕೆ ಪ್ರತಾಪ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಶಿಯಲ್‌ಮೀಡಿಯಾದಲ್ಲಂತು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಪ್ರತಾಪ್ ಬಗ್ಗೆ ಕಾಗೆ ಎಂದಿದ್ದಕ್ಕೆ ಬೆಂಬಲಿಗರು ಕೂಡ ಇಶಾನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇಶಾನಿಗೆ ದಾಖಲೆಯ ಕಮೆಂಟ್
ಇಶಾನಿ ಬಿಗ್ ಬಾಸ್ ಮನೆಯೊಳಗೆ ಇರುವುದರಿಂದ ನೇರ ಟಾರ್ಗೆಟ್ ಮಾಡುವುದಕ್ಕೆ ಆಗುತ್ತಿಲ್ಲ. ಆದರೆ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ಗೆ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ದಾಖಲೆಯ ಮಟ್ಟಕ್ಕೆ ಇಶಾನಿಯ ಪೋಸ್ಟರ್‌ಗಳಿಗೆ ಕಮೆಂಟ್ ಬರುತ್ತಾ ಇದೆ. ಡ್ರೋನ್ ಪ್ರತಾಪ್ ಹೆಸರಾಕಿ "ಮತ್ತೆ ಹುಟ್ಟಿ ಬರಬೇಡ ಇಶಾನಿ", "ನಿಮ್ಮ ಹೊಲಸು ಗುಂಪು ಒಂದು ಕಡೆ, ಪ್ರತಾಪ್ ಒಂದು ಕಡೆ", "ಇಶಾನಿ ನೀನು ಪ್ರತಾಪ್ ಬಗ್ಗೆ ಮಾತನಾಡುತ್ತೀಯಾ? ಅವನ ಚಪ್ಪಲಿಗೆ ಸಮ" ಹೀಗೆಲ್ಲಾ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಅಷ್ಟೇ ಯಾಕೆ, ಪ್ರತಾಪ್, ಬೆಂಕಿ, ಪ್ರತಾಪ್ ಹಾರ್ಟ್ ಸಿಂಬಲ್ ಎಲ್ಲಾ ಹಾಕುತ್ತಿದ್ದಾರೆ.
ಪ್ರತಾಪ್‌ಗೆ ಹೆಚ್ಚಿದ ಜನ ಬಲ
ಡ್ರೋನ್ ಪ್ರತಾಪದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಹೊರಗಡೆ ಇದ್ದಾಗ ನೆಗೆಟಿವ್ ವಿಚಾರಕ್ಕೇನೆ ಸುದ್ದಿಯಾಗಿದ್ದರು. ಸುಳ್ಳುಗಾರ, ಮೋಸಗಾರ ಎಂಬೆಲ್ಲಾ ರೀತಿ ಪ್ರಚಾರ ಪಡೆದುಕೊಂಡಿದ್ದರು. ಆದರೆ, ಬಿಗ್ ಬಾಸ್ ಮನೆಯಲ್ಲಿ ಅವರ ನಡವಳಿಕೆಗೆ ತಪ್ಪು ತಿಳಿದಿದ್ದವರೆಲ್ಲ ವ್ಹಾವ್ ಎನ್ನುತ್ತಿದ್ದಾರೆ. ಯಾರು ಇಷ್ಟ ಅಂದ್ರೆ ಪ್ರತಾಪ್ ಅಂತಾರೆ. ಯಾರು ಗೆಲ್ಲಬೇಕು ಅಂದರೆ ಪ್ರತಾಪ್ ಅಂತಾರೆ. ಹೀಗೆ ಪ್ರತಾಪ್‌ಗೆ ಬೆಂಬಲ ನೀಡುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. ಅಷ್ಟೇ ಅಲ್ಲ ಎಷ್ಟೋ ಜನಕ್ಕೆ ಅವರ ಮೇಲಿದ್ದ ಅಭಿಪ್ರಾಯವೂ ಬದಲಾಗಿ ಹೋಗಿದೆ.


Click it and Unblock the Notifications











