BBK 10: ಬಿಗ್ ಬಾಸ್ ಮನೆಯಿಂದ ಹೊರ ಬಂದ್ರಾ ಸಂಗೀತಾ..? ಮನೆಯಿಂದ ಹೊರ ಹೋಗಿದ್ಯಾರು? ಏನಿದು ಹೊಸ ಟ್ವಿಸ್ಟ್?

By ಶೃತಿ ಹರೀಶ್ ಗೌಡ

ಬಿಗ್ ಬಾಸ್ ರಿಯಾಲಿಟಿ ಶೋ ಈಗ ಆರು ವಾರ ಕಳೆದು 7ನೇ ವಾರಕ್ಕೆ ಕಾಲಿಟ್ಟಿದೆ. ಏಳನೇ ವಾರಕ್ಕೆ ಕಾಲಿಟ್ಟ ಕ್ಷಣಗಳಿಂದಲೇ ಶತ್ರುಗಳಾಗಿದ್ದವರು ಮಿತ್ರರಾಗಿದ್ದಾರೆ. ಮಿತ್ರರಾಗಿದ್ದವರು ಶತ್ರುಗಳಾಗಿದ್ದಾರೆ. ವಿನಯ್ ಟೀಮ್ ಸೇರಿದ ಸಂಗೀತಾಗೆ ಯಾಕೋ ಪಶ್ಚಾತಾಪ ಆದಂತೆ ಇದೆ. ಯಾಕೆಂದರೆ, ನಿನ್ನೆ ನಡೆದ ಟಾಸ್ಕ್ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಸಂಗೀತಾ ನೀಡಿದ ಟಾಸ್ಕ್‌ಗಳು ತನಿಷಾ, ಕಾರ್ತಿಕ್ ಹಾಗೂ ವರ್ತೂರು ಸಂತೋಷ್‌ರನ್ನು ಟಾರ್ಗೆಟ್ ಮಾಡಿದಂತೆ ಇತ್ತು. ಇದಕ್ಕಾಗಿ ಸಂಗೀತಾ ಕಣ್ಣೀರನ್ನು ಹಾಕಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಸಂಗೀತಾರನ್ನು ಸಮಾಧಾನ ಮಾಡುವ ಕೆಲಸ ನಡೆದಿದೆ.

ಆದರೆ, ಸಂಗೀತಾನೇ ಯಾಕೋ ಸಮಾಧಾನಗೊಂಡಂತೆ ಆಗುತ್ತಿಲ್ಲ. ನನಗೆ ಬಿಗ್ ಬಾಸ್ ಮನೆಯಲ್ಲಿ ಇರಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗ ಹಲವಾರು ಟಾಸ್ಕ್ ನೀಡಲಾಗುತ್ತಿದೆ. ಅದರಲ್ಲಿ ಯಾರು ಗೆಲ್ಲುತ್ತಾರೆ? ಅವರಿಗೆ ಹೆಚ್ಚು ಪಾಯಿಂಟ್ ಹೋಗುತ್ತೆ. ನಿನ್ನೆ (ನವೆಂಬರ್ 21) ನಡೆದ ಟಾಸ್ಕ್‌ನಲ್ಲಿ 'ಸಂಪತ್ತಿಗೆ ಸವಾಲ್' ತಂಡ ತಮ್ಮ ಎಲ್ಲಾ ಚಾಲೆಂಜ್ ಸ್ವೀಕರಿಸಿ ಗೆಲುವನ್ನು ಸಾಧಿಸಿದೆ. ಆದರೆ, ಟಾಸ್ಕ್ ನೀಡಿದ ಸಂಗೀತಾ ಬೇಸರಗೊಂಡಿದ್ದಾರೆ.

bbk-10-sangeeth-left-bigg-boss-house

ಸಂಗೀತಾ ತನಿಷಾ ಹಾಗೂ ವರ್ತೂರು ಸಂತೋಷ್‌ಗೆ ಮೆಣಸಿನಕಾಯಿ ತಿನ್ನುವ ಚಾಲೆಂಜ್ ಅನ್ನು ನೀಡಿದ್ದರು. ಸಂಗೀತಾ ನೀಡಿದ ಚಾಲೆಂಜ್ ಸ್ವೀಕರಿಸಿ ವರ್ತೂರ್ ಸಂತೋಷ್ ಗೆಲುವು ಸಾಧಿಸಿದ್ದರು. ಈ ವೇಳೆ ಸಂಗೀತಾಗೆ ವಿನಯ್ ಬಳಿ ನಾನು ಏನಾದರೂ ತಪ್ಪು ಮಾಡಿ ಬಿಟ್ನಾ ಎಂದು ಕೇಳಿದ್ದರು. ಇದಕ್ಕೆ ವಿನಯ್ "ನೀನು ಏನು ತಪ್ಪು ಮಾಡಿಲ್ಲ. ಗೇಮ್ ಅನ್ನ ಗೇಮ್ ರೀತಿ ಆಡೋಣ" ಎಂದು ಸಮಾಧಾನ ಪಡಿಸಿದ್ದರು.

ಊಟದ ವಿಷಯಕ್ಕೆ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಸಣ್ಣ ವಾಗ್ವಾದ ನಡೆದಿದೆ. ಅದು ಸ್ನೇಹಿತ್‌ಗೆ ಹೇಳಿದರೆ ಸಂಗೀತಾ ತನಗೆ ಎಂದುಕೊಂಡು ಆಗಲೂ ಸಹ ಕಣ್ಣೀರು ಹಾಕಿ, ಊಟ ಬಿಟ್ಟು ಮಲಗಿದರು. ಇದೇ ಬೇಸರದಲ್ಲಿ "ನನಗೆ ಬಿಗ್ ಬಾಸ್ ಮನೆಯಲ್ಲಿ ಇರಲು ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಹೊರಗಡೆ ಕಳುಹಿಸಿ" ಎಂದು ಚಾರ್ಲಿ ಬೆಡಗಿ ಹೇಳಿದ್ದು ಎಲ್ಲರಲ್ಲೂ ಸಹ ಕುತೂಹಲ ಮೂಡಿಸಿದೆ. ಜಿಯೋ ಸಿನಿಮಾ ರಿಲೀಸ್ ಮಾಡಿದ ಪ್ರೋಮೊದಲ್ಲಿ ಈ ದೃಶ್ಯ ರಿವೀಲ್ ಆಗಿದೆ.

ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ್ರಾ ಸಂಗೀತಾ?

ಸಂಗೀತಾ ಜೋರಾಗಿ ಅತ್ತುಕೊಂಡು ಬಂದು ಮೈಕ್ ಅನ್ನು ಹೊರಗಡೆ ತೆಗೆದು ಅಳುತ್ತಾ ಕುಳಿತುಕೊಂಡಿದ್ದಾರೆ. ಸಂಗೀತಾ ಬಳಿ ಬಂದ ಕಾರ್ತಿಕ್ ಏನಾಯ್ತು ಎಂದು ಕೇಳಿದ್ದಾರೆ. ನಾನೇನಾದರೂ ತಪ್ಪು ಮಾಡಿದ್ನಾ? ನನ್ನನ್ನೇ ನಾನು ಏನಾದರೂ ಬದಲಾಯಿಸಿ ಕೊಂಡು ಬಿಟ್ಟಿದ್ದೇನಾ? ನನ್ನ ನಡವಳಿಕೆಯಲ್ಲಿ ಏನೋ ಬದಲಾವಣೆಯಾದಂತೆ ನನಗೆ ಕಾಣುತ್ತಿದೆ" ಎಂದು ಜೋರಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ಕಾರ್ತಿಕ್, ಸಂಗೀತಾಗೆ ಸಮಾಧಾನ ಮಾಡಲು ಮುಂದಾಗಿದ್ದರು. ಆಗಲೂ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಜಗಳ ಆಗಿದೆ.

bbk-10-sangeeth-left-bigg-boss-house

"ನೀವು ಸಣ್ಣ ಸಣ್ಣ ವಿಚಾರಕ್ಕೂ ನನ್ನ ಬಳಿ ಜಗಳವಾಡುತ್ತಾ ಇದ್ರಿ. ಜೋರಾಗಿ ಮಾತನಾಡುತ್ತಾ ಇದ್ರಿ. ಎಲ್ಲದಕ್ಕೂ ನಾನೇ ಹೊಣೆ ಎಂದು ಹೇಳಿದ ಮಾತು ನನಗೆ ಇಷ್ಟವಾಗಲಿಲ್ಲ. ಅದಕ್ಕೆ ನಾನು ವಿನಯ್ ತಂಡ ಸೇರಿಕೊಂಡೆ" ಎಂಬ ಕಾರಣವನ್ನು ನೀಡಿದ್ದಾರೆ. ಬಳಿಕ ಕಾರ್ತಿಕ್ ಸಮಾಧಾನ ಮಾಡಿದರು ಸಮಾಧಾನವಾಗಿಲ್ಲ. "ಬಿಗ್ ಬಾಸ್ ನನಗೆ ಮನೆಯಲ್ಲಿ ಇರಲು ಆಗುತ್ತಿಲ್ಲ. ದಯವಿಟ್ಟು ನನ್ನನ್ನು ಹೊರಗಡೆ ಕಳುಹಿಸಿ" ಎಂದು ಕೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಹೊರಗಡೆ ಹೋಗುವ ಬಾಗಿಲು ತೆರೆದುಕೊಂಡಿದೆ. ನಿಜವಾಗಿಯೂ ಬಿಗ್ ಬಾಸ್ ಮನೆಯಿಂದ ಸಂಗೀತಾ ಹೊರಗೆ ಹೋದ್ರಾ? ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.

ತಪ್ಪು ನಿರ್ಧಾರ ಮಾಡಿದ್ರಾ ಸಂಗೀತಾ?

ಸಂಗೀತಾ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿ ತಪ್ಪು ನಿರ್ಧಾರ ತೆಗೆದುಕೊಂಡ್ರಾ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಆದರೆ, ಹೋಗಿರುವುದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಎಂಬುದು ವೀಕ್ಷಕರ ಅಭಿಪ್ರಾಯ. ಮನೆಗೆ ಬಂದಿದ್ದವರು ಈಗ ಹೋಗಿದ್ದಾರೆ. ಆದರೆ, ಸಂಗೀತಾ ವಿಷಯವನ್ನು ಪೋಮೋದಲ್ಲಿ ಲಿಂಕ್ ಮಾಡಲಾಗಿದೆ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

"ಸಂಗೀತಾ ಬೇಕಾದರೆ ಬಿಗ್ ಬಾಸ್ ಮನೆಯಿಂದ ಹೋಗಲಿ. ಅವರು ಅವಕಾಶವಾದಿ" ಎಂದು ಕೆಲ ನೆಟ್ಟಿಗರು ಕಿಡಿ ಕಾರಿದ್ದಾರೆ. "ಕಾರ್ತಿಕ್‌ಗೆ ಬುದ್ಧಿ ಇಲ್ಲ ಸುಮ್ಮನೆ ಇರುವುದು ಬಿಟ್ಟು ಸಂಗೀತಾಗೆ ಸಮಾಧಾನ ಮಾಡುತ್ತಿದ್ದಾರೆ", "ಬೆನ್ನಿಗೆ ಚೂರಿ ಹಾಕಿದವರನ್ನು ದೂರವಿಡಬೇಕು ಅದು ಬಿಟ್ಟು ಈ ರೀತಿ ಸಮಾಧಾನ ಮಾಡುವುದು ಸರಿಯಲ್ಲ" ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ. ನಿಜವಾಗಿಯೂ ಸಂಗೀತಾ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಿದ್ದಾರಾ ಅನ್ನೋದು ರಾತ್ರಿ ಎಪಿಸೋಡ್‌ನಲ್ಲಿ ತಿಳಿಯಲಿದೆ.

More from Filmibeat

English summary
BBK 10: Here is the details about Sangeetha requested to leaving Bigg Boss House
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X