BBK10: ಸಂಗೀತಾ ಹೆಸರಿನ ಮುಂದೆ ಶೃಂಗೇರಿ ಬಂದಿದ್ದೇಗೆ? ರಾಘಣ್ಣ ಸ್ಪೂರ್ತಿಯಾಗಿದ್ದೇಗೆ?

By ಎಸ್ ಸುಮಂತ್

777 ಚಾರ್ಲಿಯಿಂದ ಮಿಂಚಿದ ನಟಿ ಸಂಗೀತಾ ಶೃಂಗೇರಿ . ಈಗಂತೂ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಸಂಗೀತಾ ಶೃಂಗೇರಿಗೆ ಅಭಿಮಾನಿಗಳ ಬಳಗ ಜಾಸ್ತಿಯೇ ಆಗಿದೆ. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಅವರ ಗತ್ತು, ಗಾಂಭಿರ್ಯಕ್ಕೆ ಮನಸೋತವರೇ ಹೆಚ್ಚು. ಹೀಗಾಗಿಯೇ ಬಿಗ್ ಬಾಸ್ ನ ಆರಂಭದಲ್ಲಿಯೇ ನ್ಯೂ ಕ್ರಶ್ ಎಂಬ ಬಿರುದನ್ನು ಪಡೆದುಕೊಂಡಿದ್ದರು. ಚಾರ್ಲಿ ಸಿನಿಮಾ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದವರು ಸಂಗೀತಾ ಶೃಂಗೇರಿ.

ಸಂಗೀತಾ ಬಿಗ್ ಬಾಸ್ ಮನೆಯಲ್ಲಿಯೇ ತನ್ನ ಓದು, ಬೆಳೆದ ರೀತಿ, ಕುಟುಂಬದ ಹಿನ್ನೆಲೆ ಬಗ್ಗೆ ಹೇಳಿದ್ದರು. ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿದ್ದ ಕಾರಣ, ಒಂದು ಊರಲ್ಲ ಹಲವು ಕಡೆ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ. ಕೇಂದ್ರೀಯ ವಿವಿಯಲ್ಲಿ ಓದಿದವರು. ಸಾಕಷ್ಟು ಜನರಿಗೆ ಸಂಗೀತಾ ಅವರನ್ನು ನೋಡಿದರೆ ಬೆಂಗಳೂರಿನ ಹುಡುಗಿ ಏನೋ ಎಂಬಂತೆ ಫೀಲ್ ಆಗುತ್ತೆ. ಆದರೆ, ಸಂಗೀತಾ ಮುಂದಿರುವ ಶೃಂಗೇರಿ ಬಂದಿದ್ದು ಹೇಗೆ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.

Bigg Boss Kannada Season 10 Raghavendra Rajkumar suggested Sangeetha Sringeri

ಶೃಂಗೇರಿಯಲ್ಲಿ ಅಣ್ಣಾವ್ರ ಸಿನಿಮಾಗಳ ನೆನಪು

"ನಮ್ಮ ಅಪ್ಪ ಶೃಂಗೇರಿಯವರು. ಅವರು ಡಿಫೆನ್ಸ್ ನಲ್ಲಿ ಇರುವ ಕಾರಣ ಬೇರೆ ಬೇರೆ ರಾಜ್ಯದಲ್ಲಿ ನನ್ನ ವಿದ್ಯಾಭ್ಯಾಸ ಆಯಿತು. ಒಮ್ಮೆ ಒಂದು ಸಿನಿಮಾದ ಪ್ರಮೋಷನ್ ಸಮಯದಲ್ಲಿ ರಾಘಣ್ಣರನ್ನ ಭೇಟಿ ಮಾಡಿದ್ದೆ. ಆಗ ನನ್ನ ಹುಟ್ಟೂರು ಶೃಂಗೇರಿ ಅಂತ ಹೇಳಿದ್ದೆ. ಆಗ ರಾಘಣ್ಣ ಸುಮಾರು ವಿಚಾರಗಳನ್ನು ಹೇಳಿದ್ದರು. ಅಪ್ಪಾಜಿ ಎಷ್ಟೆಲ್ಲಾ ಸಿನಿಮಾಗಳನ್ನು ಮಾಡಿದ್ದಾರೆ ಎಂಬುದು. ಅಲ್ಲಿಂದ ಬಂದ ಕಲಾವಿದರು ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ನಿನಗೂ ಒಳ್ಳೆಯ ಫ್ಯೂಚರ್ ಇದೆ" ಎಂದು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

ರಾಘಣ್ಣ ಮಾತಿನಿಂದ ಬದಲಾಯಿತು ಹೆಸರು

"ನಾನು ಸಾಕಷ್ಟು ಸಲ ಸರ್ ನೇಮ್ ಬೇಕು ಅಂತ ಅಂದುಕೊಳ್ಳುತ್ತಾ ಇದ್ದೆ. ರಾಘಣ್ಣ ನಿಂಗೆ ಒಳ್ಳೆ ಭವಿಷ್ಯವಿದೆ, ಅಪ್ಪಾಜಿ ಆಶೀರ್ವಾದವಿದೆ ಎಂದೇ ಹೇಳಿದ್ದರು. ಅದಕ್ಕೂ ಮುನ್ನ ನನ್ನ ಹೆಸರು ಬರೀ ಸಂಗೀತಾ ಅಂತ ಇತ್ತು. ಆಮೇಲೆ ಶೃಂಗೇರಿ ಅಂತ ಸೇರಿಸಿಕೊಂಡೆ. ನಾನು ಹುಟ್ಟಿದ್ದು ಅಲ್ಲಿನ ಮಠದ ಆಸ್ಪತ್ರೆಯಲ್ಲಿಯೇ. ಹೀಗಾಗಿ ರಾಘಣ್ಣ ಅಷ್ಟು ಹೇಳಿದ ಮೇಲೆ ನಾನು ಸಂಗೀತಾ ಶೃಂಗೇರಿ ಅಂತ ಬದಲಾಯಿಸಿಕೊಂಡೆ" ಎಂದಿದ್ದಾರೆ.

Bigg Boss Kannada Season 10 Raghavendra Rajkumar suggested Sangeetha Sringeri

ಸಂಗೀತಾ ಅಷ್ಟು ರಗಡ್ ಯಾಕೆ?

"ನಂಗೆ ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಚಿಕ್ಕ ವಯಸ್ಸಿನಿಂದ ಏನು ಇರಲಿಲ್ಲ. ಏರ್ ಫೋರ್ಸ್‌ ಜಾಯಿನ್ ಆಗಬೇಕು ಅಂತ ಇದ್ದದ್ದು. ಸ್ಕೂಲಲ್ಲೂ ಚಿಕ್ಕಪುಟ್ಟ ಡ್ರಾಮಾ ಮಾಡ್ತಾ ಇದ್ದೆ. ಆದರೆ, ಹರಹರ ಮಹಾದೇವ ಮಾಡಿದ ಮೇಲೆ ನಟನೆ ಅಂದರೆ ಏನೆಂದು ಗೊತ್ತಾಯ್ತು. ಇದೆಷ್ಟು ಕಷ್ಟ ಎನಿಸಿತ್ತು. ನಾನು ಏನೇ ಮಾಡಿದರೂ ನಗುತ್ತಾ ಇದ್ದರು. ನನಗಾಗ 18 ವರ್ಷ ಅಷ್ಟೇ. ಬೇಗ ರಿಯಾಕ್ಟ್ ಮಾಡಿ ಬೈದು ಬಿಡುತ್ತಾ ಇದ್ದೆ. ಬೇರೆಯೊಬ್ಬರು ನನ್ನನ್ನು ನೋಡಿ ಟೀಕಿಸಿದಾಗ ಅದನ್ನು ಹಠವಾಗಿ ತೆಗೆದುಕೊಂಡೆ. ಇಲ್ಲಿಯೇ ಇದ್ದು ಏನಾದರೂ ಸಾಧಿಸಬೇಕು ಎನಿಸಿ, ಈ ಫೀಲ್ಡ್ ಆಯ್ಕೆ ಮಾಡಿಕೊಂಡೆ. ಅದಕ್ಕೆ ಅಂತ ಆಕ್ಟಿಂಗ್ ಕ್ಲಾಸ್ ಜಾಯಿನ್ ಆಗಿ, ಕಲಿತಿದ್ದೀನಿ" ಎಂದಿದ್ದಾರೆ.

ಮುಂಬೈನಲ್ಲಿ ಅಭಿಮಾನಿ ಸಿಕ್ಕಿದ್ದಕ್ಕೆ ಬಚಾವ್

"ಅವತ್ತು ಒಂದು ಶೂಟಿಂಗ್ ಮುಗೀತು. ನನ್ನ ಪಾತ್ರ ಮುಗಿದ ಮೇಲೆ ಫ್ಲೈಟ್ ಟಿಕೆಟ್ ಬುಕ್ ಮಾಡಿರಲಿಲ್ಲ. ನಂಗೇ ಏನು ಮಾಡಬೇಕು ಎಂಬ ಚಿಂತೆ ಆಯಿತು. ಅವತ್ತು ನನ್ನ ಹತ್ತಿರ ಒಂದು ಪೈಸೆ ಹಣ ಕೂಡ ಇರಲಿಲ್ಲ. ಅಪ್ಪ ಅಮ್ಮನಿಗೆ ಆ ಸಮಯದಲ್ಲಿ ಕಾಲ್ ಮಾಡಿದರೆ ಮತ್ತೆ ಇಂಡಸ್ಟ್ರಿಗೆ ಕಾಲು ಇಡುವುದಕ್ಕೆ ಬಿಡಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಮುಂಬೈ ತನಕ ಬಿಟ್ಟಿದ್ದಾರೆ. ಅವತ್ತು ನನ್ನ ಅಭಿಮಾನಿ ವಿನಯ್ ಕಶ್ಯಪ್ ಎನ್ನುವವರು ಸಹಾಯ ಮಾಡಿದರು" ಎಂದು ಜರ್ನಿ ಬಗ್ಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Bigg Boss Kannada Season 10 Raghavendra Rajkumar suggested Sangeetha Sringeri
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X