Rakshak Bullet: "ಹತ್ತು ಮಾಸ್ ಡೈಲಾಗ್ ಬಿಟ್ರೆ ಇಡೀ ಕರ್ನಾಟಕನೇ ನಮ್ದು" ಎಂದಿದ್ದ ರಕ್ಷಕ್ ದೊಡ್ಮನೆಗೆ ಎಂಟ್ರಿ

ಸಂದರ್ಶನವೊಂದರಲ್ಲಿ "ಇನ್ನೊಂದು ಹತ್ತು ಮಾಸ್ ಡೈಲಾಗ್ ಬಿಟ್ರೆ ಇಡೀ ಕರ್ನಾಟಕನೇ ನಮ್ದು, ಕೊಂಡ್ಕೊಬಹುದು" ಎಂದು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟ ರಕ್ಷಕ್ ಬುಲೆಟ್ ಇದೀಗ ಬಿಗ್‌ಬಾಸ್ ವೇದಿಕೆಗೆ ಬಂದಿದ್ದರು. ವೇದಿಕೆಗೆ ಬಂದಿದ್ದ ಅಭಿಮಾನಿಗಳ ವೋಟಿಂಗ್ ಕಮ್ಮಿಯಾಗಿ ಮನೆಯೊಳಗೆ ರಕ್ಷಕ್ ಹೋಗ್ತಾರಾ? ಇಲ್ವಾ? ಅನ್ನುವ ಗೊಂದಲ ಇತ್ತು.

ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಈಗಾಗಲೇ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶರಣ್ ನಟನೆಯ 'ಗುರುಶಿಷ್ಯರು' ಚಿತ್ರದಲ್ಲಿ ಬಾಷಾ ಎನ್ನುವ ಪಾತ್ರದಲ್ಲಿ ರಕ್ಷಕ್ ನಟಿಸಿದ್ದರು. ಈ ಚಿತ್ರದಲ್ಲಿ ಒಂದಷ್ಟು ಸೆಲೆಬ್ರೆಟಿಗಳ ಮಕ್ಕಳು ನಟಿಸಿದ್ದರು. ರಕ್ಷಕ್‌ಗೆ ಪಾತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಬುಲೆಟ್ ಪ್ರಕಾಶ್ ಅಗಲಿಕೆ ಬಳಿಕ ತಂದೆ ಆಸೆಯಂತೆ ರಕ್ಷಕ್ ಚಿತ್ರರಂಗಕ್ಕೆ ಬಂದಿದ್ದಾರೆ.

Bigg Boss kannada season 10: Rakshak Bullet, contestant biography

ವೇದಿಕೆ ಏರಿದ ರಕ್ಷಕ್ ನನ್ನ ಬಗ್ಗೆ ನೆಗೆಟಿವ್ ಹಬ್ಬಿಸಿದರು. ಯಾಕೆ ಅನ್ನೋದು ಗೊತ್ತಿಲ್ಲ ಎಂದರು. ನಿಮ್ಮ ಹಿಂದೆ ಗ್ಯಾಂಗ್ ಇರುತ್ತದೆ ಏನದು ಗ್ಯಾಂಗ್ ಎಂದು ಸುದೀಪ್ ಪ್ರಶ್ನಿಸಿದರು. ನಾನು ನೆಗೆಟಿವ್, ಟ್ರೋಲ್ ಇಂದ ಒಳಗೆ ಹೋಗುತ್ತಿಲ್ಲ. ನಾನು ನಟನಾಗಿ ಚಿತ್ರರಂಗಕ್ಕೆ ಬಂದಿದ್ದೇನೆ. ಒಂದಷ್ಟು ಯಂಗ್‌ಸ್ಟರ್ಸ್‌ಗೆ ರೀಚ್ ಆಗಿದ್ದೇನೆ. ನಮ್ಮ ತಂದೆ ಹೆಸರು ಉಳಿಸಬೇಕು ಎಂದು ಒಳಗೆ ಹೋಗುತ್ತಿದ್ದೇನೆ" ಎಂದು ರಕ್ಷಕ್ ಮಾತನಾಡಿದ್ದಾರೆ.

ತಮ್ಮ ನೇರಾನೇರ ಮಾತುಗಳಿಂದ ರಕ್ಷಕ್ ಬುಲೆಟ್ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದು ಇದೆ. ರಕ್ಷಕ್ ವಿಡಿಯೋಗಳನ್ನು ರೋಸ್ಟ್ ಮಾಡಿದ್ದು ಇದೆ. ಈ ಬಗ್ಗೆ ಬಿಗ್‌ಬಾಸ್ ಸ್ಪೆಷಲ್ ಎವಿಯಲ್ಲಿ ರಕ್ಷಕ್ ಹೇಳಿಕೊಂಡಿದ್ದಾರೆ. "ನಾನ್ ವೆಜ್ ಅಂದ್ರೆ ನನಗೆ ಪ್ರಾಣ. ದಿನಕ್ಕೆ 3 ಸಲ ಕೊಟ್ರು ತಿಂತೀನಿ. ಬಿಗ್‌ಬಾಸ್ ಮನೆಯೊಳಗೆ ಊಟ ಬಿಟ್ಟು ಹೇಗೆ ಇರ್ತೀನಿ ಎನ್ನುವ ಭಯ ಇದೆ" ಎಂದಿದ್ದಾರೆ.

"ನೇರಾನೇರ ಮಾತಾಡ್ತೀನಿ ಅಂತಾರೆ. ನಮ್ಮ ತಂದೆ ಹಾಗೆ ಇದ್ದಿದ್ದು. ನಮ್ಮ ತಾತ ಕೂಡ ಅದೇ ತರ ಇದ್ದರು. ಅವರ ರಕ್ತ ಅಂದಮೇಲೆ ನಾನು ಹಾಗೆ ಇರ್ತೀನಿ ಬದಲಾಗಲ್ಲ. ಅಪ್ಪ ಅಂದ್ರೆ ಮುಖದ ಮೇಲೆ ನಗು ಬರುತ್ತದೆ. ಒಳ್ಳೆಯದು ಯಾವ್ದು ಕೆಟ್ಟದು ಯಾವ್ದು ಎಂದು ಹೇಳಿಕೊಟ್ಟವರು ಅವ್ರು. ಇದನ್ನು ಮುಂದೆ ನಾನು ತಗೊಂಡು ಹೋಗ್ತೀನಿ."

"ಗುರುಶಿಷ್ಯರು ನನ್ನ ಮೊದಲ ಸಿನಿಮಾ. ಅಲ್ಲಿಂದ ಸಿನಿಮಾ ಜರ್ನಿ ಶುರುವಾಯಿತು. ಅಪ್ಪನಿಗೆ ನಾನು ಚಿತ್ರರಂಗಕ್ಕೆ ಬರಬೇಕು ಎನ್ನುವ ಆಸೆಯಿತ್ತು. ಅಪ್ಪನ ಹೆಸರು ಬೆಳಸಬೇಕು ಎಂದು ಚಿತ್ರರಂಗಕ್ಕೆ ಬಂದಿದ್ದೀನಿ. ಅದನ್ನು ಮಾಡಿ ತೀರುತ್ತೇನೆ. ತಂದೆ ಬಳಿಕ ತಾಯಿ ನನಗೆ ಬೆಂಬಲವಾಗಿ ನಿಂತಿದ್ದಾರೆ" ಎಂದಿದ್ದಾರೆ.

"ಬಿಗ್‌ಬಾಸ್ ಅವಕಾಶ ಸಿಕ್ಕಿದೆ. ಮನೆಯೊಳಗೆ ಹೋಗಲು ಬಹಳ ಖುಷಿಯಿದೆ. ಲಾಸ್ಟ್ ಸೀಸನ್ ಅಲ್ಲಿ ನಮ್ಮ ಅಪ್ಪ ಹೇಳಿದ ಡೈಲಾಗ್ ನೆನಪಾಗುತ್ತಿದೆ. ಕಲಾಸಿಪಾಳ್ಯ ಹಲ್ವಾ ಕೊಡೋಕೆ ಈ ವರ್ಷ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದೀನಿ" ಎಂದು ರಕ್ಷಕ್ ಹೇಳಿದ್ದಾರೆ. ಇನ್ನು ತಾಯಿ ಮಂಜು ಪ್ರಕಾಶ್ ಮಾತನಾಡಿ ರಕ್ಷಕ್ ಬಿಗ್‌ಬಾಸ್‌ಗೆ ಹೋಗುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

ನಿಜ ಹೇಳಬೇಕು ಅಂದರೆ "ಇನ್ನೊಂದು ಹತ್ತು ಮಾಸ್ ಡೈಲಾಗ್ ಬಿಟ್ರೆ ಇಡೀ ಕರ್ನಾಟಕನೇ ನಮ್ದು, ಕೊಂಡ್ಕೊಬಹುದು" ಎನ್ನುವ ಅದೊಂದು ಡೈಲಾಗ್‌ನಿಂದಲೇ ರಕ್ಷಕ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಬಂದರು. ಅದು ಈಗ ಬಿಗ್‌ಬಾಸ್ ಮನೆ ತೆರೆಯುವಂತೆ ಮಾಡಿದೆ.

ಅಷ್ಟಕ್ಕೂ ಅಂದು ಸಂದರ್ಶನದಲ್ಲಿ ರಕ್ಷಕ್ ಏನು ಮಾತನಾಡಿದ್ದರು ಎನ್ನುವುದನ್ನು ನೋಡುವುದಾದರೆ ನಾಯಕನಾಗಿ ನಟಿಸೋ ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿತ್ತು. ಅದಕ್ಕೆ ರಕ್ಷಕ್ ನಾನು ಏನು ಮಾಡದೇನೇ ಜನ ಇಷ್ಟು ಪ್ರೀತಿ ಕೊಡ್ತಾ ಇದ್ದಾರೆ. ನಾನು ಹೇಳಿರೋದೆ ಎರಡು ಡೈಲಾಗ್ ಗುರು ಶಿಷ್ಯರು ಚಿತ್ರದಲ್ಲಿ. ಇನ್ನೊಂದು ಹತ್ತು ಮಾಸ್ ಡೈಲಾಗ್ ಬಿಟ್ರೆ ಇಡೀ ಕರ್ನಾಟಕನೇ ನಮ್ದು, ಕೊಂಡ್ಕೊಬಹುದು. 100% ಅದನ್ನು ಮಾಡೇ ಮಾಡ್ತೀನಿ. ಯಾಕೆಂದರೆ ಅಪ್ಪ ಹೇಳಿಕೊಟ್ಟಿರೋ ಒಂದಷ್ಟು ಮಾತುಗಳು, ಆ ಧೈರ್ಯ, ತಂದೆ - ತಾಯಿ ಆಶೀರ್ವಾದ ಹಾಗೂ ಜನರ ಪ್ರೀತಿ ನನ್ನ ಜತೆ ಇದೆ" ಎಂದಿದ್ದರು. ವೇದಿಕೆಗೆ ಬಂದ ರಕ್ಷಕ್ 52% ವೋಟ್ ಪಡೆದು ಕಾಯುವಂತಾಗಿತ್ತು. ಕೊನೆಗೆ ಜಸ್ಟ್ ಪಾಸ್ ಆಗಿದ್ದ ಎಲ್ಲರನ್ನು ಒಂದು ವಾರದ ಕಾಲಾವಧಿ ಕೊಟ್ಟು ಸುದೀಪ್ ಒಳಗೆ ಕಳುಹಿಸಿದ್ದಾರೆ.

More from Filmibeat

English summary
Bigg Boss kannada season 10: first contestant is Rakshak Bullet, Here's all you need to know about him;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X