"ಅಂಧಾಭಿಮಾನ ಬೇಡ, ಅವ್ರು ಕೂಡ ದುಡ್ಡು ತಗೊಂಡು ನಟಿಸ್ತಾರೆ: ಕಿಚ್ಚನ ಬಗ್ಗೆ ಚಿತ್ರಾಲ್ ರಂಗಸ್ವಾಮಿ ಬೇಸರ
ಬಿಗ್‌ಬಾಸ್ ಕನ್ನಡ ಸೀಸನ್ -10 ಮುಗಿದು ಬಹಳ ದಿನಗಳಾಯ್ತು. ಕಾರ್ತಿಕ್ ಮಹೇಶ್ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದರು. 17 ಜನ ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿದ್ದರು. ವೇದಿಕೆಯಲ್ಲಿ ಲೈವ್ ಲೈವ್ ಆಡಿಯೆನ್ಸ್ ಬೆಂಬಲದ ಎಲ್ಲರನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ ಸೋತು ಹೊರಬಂದಿದ್ದರು.
ಗ್ರ್ಯಾಂಡ್ ಪ್ರೀಮಿಯರ್ ದಿನ 19 ಜನ ಬಿಗ್‌ಬಾಸ್ ವೇದಿಕೆ ಏರಿದ್ದರು. ಅದರಲ್ಲಿ ಸೋಶಿಯಲ್ ಮೀಡಿಯಾ ಇನ್ಪುಯೆನ್ಸರ್‌ಗಳಾದ ಸುರಸುಂದರ ಅವಿನಾಶ್ ಹಾಗೂ ಚಿತ್ರಾಲ್ ಮಾತ್ರ ಹೆಚ್ಚು ಅಂಕಗಳು ಪಡೆಯದೇ ನಿರಾಸೆ ಅನುಭವಿಸಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಆಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೊಮ್ಮೆ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಟ ಸುದೀಪ್ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

"ಸುದೀಪ್ ಸರ್ ನಟನೆಗಿಂತ ಅವರ ಸಂದರ್ಶನಗಳು ಬಹಳ ಇಷ್ಟ. ಅವ್ರು ಕೌಂಟರ್ ಕೊಡುವುದು ಇಷ್ಟ. ನನ್ನ ವೀಡಿಯೋಗಳನ್ನು ನೋಡಿ ಲೇಡಿ ಕಿಚ್ಚ ಎಂದು ಕೆಲವರು ಕಾಮೆಂಟ್ ಮಾಡ್ತಾರೆ. ನಾನೇನು ಅವರನ್ನು ಕಾಪಿ ಮಾಡಲ್ಲ, ನಾನು ಮಾತನಾಡುವುದೇ ಹಾಗೆ. ಆದರೆ ಸುದೀಪ್ ಸರ್ ಸಂದರ್ಶನಗಳಲ್ಲಿ ಮಾತನಾಡುವುದೇ ರಿಯಾಲಿಟಿಯಲ್ಲಿ ಇದ್ದರೂ ಚೆನ್ನಾಗಿರುತ್ತದೆ" ಎಂದು ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
"ನಾನು ಸುದೀಪ್ ಸರ್ ಅಭಿಮಾನಿ. ನನಗೆ ಇನ್ನು ಅರ್ಥ ಆಗಿಲ್ಲ. ನನ್ನನ್ನು ಯಾಕೆ ಬಿಗ್‌ಬಾಸ್ ಸ್ಪರ್ಧೆಗೆ ಆಯ್ಕೆ ಮಾಡಿದ್ರು, ಬಳಿಕ ರಿಜೆಕ್ಟ್ ಮಾಡಿದ್ರು ಅಂತ, ಅಷ್ಟು ದೊಡ್ಡ ನಟನಾಗಿ ಸುದೀಪ್ ಸರ್ ಕೇಳಬಹುದಿತ್ತು. ಇನ್ನು ವೇದಿಕೆಯಲ್ಲಿ ಪ್ರಸಾರ ಮಾಡಿದ ಎವಿಯಲ್ಲಿ ಕೂಡ ಸರಿಯಾದ ಫೋಟೊ, ವಿಡಿಯೋ ಬಳಸಿಲ್ಲ. ನಾನು ರಾಷ್ಟ್ರಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಡಿಯೋ ಕಳುಹಿಸಿದ್ದೆ. ಅದು ಬಿಟ್ಟು ಫೋಟೊಗಳನ್ನು ಬಳಸಿ ಸಿಲ್ಲಿಯಾಗಿ ತೋರಿಸಿದ್ದಾರೆ" ಎಂದು ಬೇರಸ ವ್ಯಕ್ತಪಡಿಸಿದ್ದಾರೆ.

"ರಾತ್ರಿ 3 ಗಂಟೆಗೆ ಚಕ್ರಾಸನ, ಪುಶ್‌ಅಪ್ಸ್ ಮಾಡೋಕೆ ಹೇಳ್ತಾರೆ. ಎಲ್ಲಾ ಮಾಡಿದಾಯ್ತು. ಬಿಗ್‌ಬಾಸ್‌ನವರು ನಮ್ಮನ್ನು ರಿಜೆಕ್ಟ್ ಮಾಡೋಕೆ ಯಾರು? ನಮ್ಮಿಂದ ಅವರಿಗೆ ಕಂಟೆಂಟ್ ಸಿಗುತ್ತದೆ. ನಾನು ರಿಜೆಕ್ಟ್ ಆಗಿ ಬಂದ ಮೇಲೆ ಸುದೀಪ್ ಸರ್ ಬಗ್ಗೆ ನನಗೆ ಬೇಸರವಾಯಿತು. ಯಾರಿಗೂ ಅಭಿಮಾನಿ ಆಗಿ ಇರಬಾರದು ಅನ್ನಿಸಿತು. ಅಭಿಮಾನಿಯಾಗಿ ಇದ್ದಾಗ ಅವ್ರು ನಮ್ಮ ಪರವೂ ಮಾತನಾಡಬೇಕಿತ್ತು"
"ನಾನು ಸೋಶಿಯಲ್ ಮೀಡಿಯಾ ಇನ್ಪುಯೆನ್ಸರ್ ಆಗಿ ಆಲ್ಕೋಹಾಲ್, ಜೋತಿಷ್ಯ, ವಶೀಕರಣ, ಗೇಮಿಂಗ್ ಆಪ್, ಟ್ರೇಡಿಂಗ್ ಆಪ್ ಪ್ರಮೋಟ್ ಮಾಡಲ್ಲ. ನನಗೆ ಒಂದಷ್ಟು ಎಥಿಕ್ಸ್ ಇದೆ. ಸುದೀಪ್ ಸರ್ ಇರುವ ಕಡೆ ಅನ್ಯಾಯ ಆಗಲ್ಲ ಎಂದುಕೊಂಡಿದ್ದೆ. ಸಂದರ್ಶನಗಳಲ್ಲಿ ಕಾಣುವ ಸುದೀಪ್ ಬೇರೆ, ನಿಜವಾದ ಸುದೀಪ್ ಬೇರೆ ಎನಿಸುತ್ತದೆ. ಕಾರ್ಯಕ್ರಮ ಮುಗಿದ ಮೇಲೆ ಕೂಡ ಎಲ್ಲಾ ಸಂಗತಿ ಸುದೀಪ್ ಸರ್‌ಗೆ ಗೊತ್ತಾಗಿರುತ್ತದೆ. ಆ ಬಳಿಕವಾದರೂ ಅವರು ಕೇಳಬಹುದಿತ್ತು. ಈ ರೀತಿ ಆಗಿದ್ದಕ್ಕೆ ಆಕೆಗೆ ಏನಾದರೂ ಮಾಡಿ ಅಂತಾದರೂ ಹೇಳಬಹುದಿತ್ತು" ಎಂದು ಚಿತ್ರಾಲ್ ಆಗ್ರಹಿಸಿದ್ದಾರೆ.
ಕೊನೆಯದಾಗಿ "ಅಭಿಮಾನ ಇರಬೇಕು, ಅಂಧಾಭಿಮಾನ ಇರಬಾರದು. ಅವ್ರು ಮೇಕಪ್ ಹಾಕಿಕೊಂಡು ನಮ್ಮನ್ನು ರಂಜಿಸುವುದಕ್ಕೆ ಹಣ ಸಿಗುತ್ತದೆ. ಯಾರು ಬಿಟ್ಟಿಯಾಗಿ ರಂಜಿಸುವುದಿಲ್ಲ, ಹಾಗಾಗಿ ಅಭಿಮಾನ ಇರಲಿ ಅಷ್ಟೆ, ನಮಗೆ ಏನಾದರೂ ಅನ್ಯಾಯ ಆದಾಗ ಅವ್ರು ಬೆಂಬಲಿಸುತ್ತಾರೆ ಎನ್ನುವ ನಿರೀಕ್ಷೆಯಿಂದ ಅಭಿಮಾನಿ ಆಗಬೇಡಿ. ನಾನು ಸದ್ಯ ಯಾರಿಗೂ ಅಭಿಮಾನಿ ಅಲ್ಲ. ರವಿ ಸರ್‌ಗೆ ಮಾತ್ರ ಅಭಿಮಾನಿ. ಅವರ ಬಗ್ಗೆ ಗೊತ್ತು. ಒಂದು ಚಿತ್ರದಲ್ಲಿ ಕೂಡ ನಟಿಸಿದ್ದೀನಿ" ಎಂದು ಚಿತ್ರಾಲ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


Click it and Unblock the Notifications











