ಡ್ರೋನ್ ಪ್ರತಾಪ್‌ಗೆ ಕೈ ತಪ್ಪಿದ ಬಿಗ್ ಬಾಸ್ ಟ್ರೋಫಿ: ಕೊಟ್ಟ ಮಾತಿನಂತೆ ಅರ್ಧ ಮೀಸೆ, ಗಡ್ಡ ತೆಗೆದ ಕ್ರೇಜಿ ಫ್ಯಾನ್!
ಬಿಗ್ ಬಾಸ್ ಕನ್ನಡ ಸೀಸನ್ 10 ಅದ್ದೂರಿಯಾಗಿ ತೆರೆ ಕಂಡಿದೆ. ಎರಡು ದಿನಗಳು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಅಲ್ಲಿಂದ ಹೊರ ಬಂದಿದ್ದಾರೆ. ನಿರೀಕ್ಷಿಸದೆಯೇ ಇರದ ಒಂದು ಗೆಲುವು ಡ್ರೋನ್ ಪ್ರತಾಪ್‌ಗೆ ಸಿಕ್ಕಿದ್ದು, ಅಭಿಮಾನಿಗಳು ಸಕತ್ ಪಾರ್ಟಿ ಮಾಡುತ್ತಿದ್ದಾರೆ
ಆದರೆ, ಇಲ್ಲೋಬ್ಬ ಅಭಿಮಾನಿ ಮಾತ್ರ ಡ್ರೋನ್ ಪ್ರತಾಪ್ ಸೋಲಿಗೆ ಸಕತ್ ಶಾಕ್‌ಗೆ ಒಳಗಾಗಿದ್ದಾರೆ. ಬಿಗ್ ಬಾಸ್ ಫಿನಾಲೆಯಲ್ಲಿ ಗೆಲುವು ಡ್ರೋನ್ ಪ್ರತಾಪ್‌ಗೆನೇ ಎಂದು ಹೇಳಿಕೊಂಡಿದ್ದ ಈ ಅಭಿಮಾನಿ ವಿಭಿನ್ನವಾದ ಚಾಲೆಂಜ್ ಮಾಡಿದ್ದರು. ಡ್ರೋನ್ ಪ್ರತಾಪ್ ವಿನ್ ಆಗದೇ ಹೋದರೆ ತಮ್ಮ ಮೀಸೆ ಮತ್ತು ಗಡ್ಡವನ್ನು ಅರ್ಧ ಬೋಳಿಸಿಕೊಳ್ಳುತ್ತೇನೆ ಎಂದಿದ್ದರು. ಅದರಂತೆಯೇ ಮಾಡಿಬಿಟ್ಟಿದ್ದಾರೆ!.

ಡ್ರೋನ್‌ಗೆ ಜಸ್ಟ್ ಮಿಸ್ ಆಯ್ತು ಬಿಗ್ ಬಾಸ್ ಟ್ರೋಫಿ!
ಬಿಗ್ ಬಾಸ್ ಕನ್ನಡ ಸೀಸನ್ 10ರ ಫಿನಾಲೆಯಲ್ಲಿ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ವೋಟಿಂಗ್ ಲೆಕ್ಕಾಚಾರದ ಪ್ರಕಾರ ಈ ಸೀಸನ್ ವಿಜೇತರಾಗಿ ಕಾರ್ತಿಕ್ ಮಹೇಶ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಒಂದು ಮೆಟ್ಟಿಲಿನ ಅಂತರದಲ್ಲಿ ಡ್ರೋನ್ ಪ್ರತಾಪ್‌ಗೆ ಬಿಗ್‌ಬಾಸ್ ಟ್ರೋಫಿ ಜಸ್ಟ್ ಮಿಸ್ ಆಗಿದೆ. ರನ್ನರ್ ಅಪ್ ಸ್ಥಾನ ಕೂಡ ಅವರಿಗೆ ಅನಿರೀಕ್ಷಿತವೆ.
ಆದರೆ, ಅಭಿಮಾನಿಗಳಿಗೆ, ದೊಡ್ಮನೆಯಿಂದ ಹೊರಗೆ ಇರುವವರಿಗೆ ಡ್ರೋನ್ ಮೇಲೆ ಇದ್ದ ಪ್ರೀತಿ ಎಂತಹದ್ದು ಎಂಬುದು ವೋಟಿಂಗ್ ಮೂಲಕ ಸಾಬೀತಾಗಿದೆ. ಘಟಾನುಘಟಿ ಸ್ಪರ್ಧಿಗಳ ನಡುವೆ ಧ್ವನಿಯೇ ಇದಲ್ಲದಂತೆ ಇದ್ದ, ಪ್ರತಿ ಬರಿ ಕಣ್ಣೀರು ಹಾಕುತ್ತಾ ಇದ್ದ ಡ್ರೋನ್ ಪ್ರತಾಪ್ ಸೈಲೆಂಟ್ ಆಗಿಯೇ ಜನರ ಮನಸ್ಸಿಗೆ ಕನ್ನ ಹಾಕಿರುವುದಂತು ಸತ್ಯ. ಅದಕ್ಕೆ ಅವರಿಗೆ ಬಂದಿರುವ ವೋಟುಗಳೇ ಸಾಕ್ಷಿ.
ಪ್ರತಾಪ್ ಸೋಲು: ಕೊಟ್ಟ ಮಾತಿನಂತೆ ಮೀಸೆ, ಗಡ್ಡ ತೆಗೆದ ಫ್ಯಾನ್!
ಡ್ರೋನ್ ಪ್ರತಾಪ್‌ಗೆ ಕೋಟಿ ಕೋಟಿ ಅಭಿಮಾನಿಗಳಿರುವುದಂತು ಸತ್ಯ. ಇದರಲ್ಲಿ ಅಬಿರಾಜ್ ಎನ್ನುವವರು ತಮ್ಮ ಸೋಶೀಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಅವರಿಗಾಗಿ ಒಂದು ಸವಾಲು ಹಾಕಿದ್ದರು. ಫಿನಾಲೆಯಲ್ಲಿ ಈ ಬಾರಿ ಪ್ರತಾಪ್ ಅವರೇ ಗೆಲ್ಲುತ್ತಾರೆ. ನನ್ನ ಮಾತು ಸತ್ಯವಾಗುತ್ತದೆ. ಕರಿ ಸಿಂಹ, ಕರಿ ಚಿರತೆ ಪ್ರತಾಪ್ ವಿನ್ ಆಗೇ ಆಗುತ್ತಾರೆ. ನನ್ನ ಮಾತು ಸುಳ್ಳಾದರೇ ನಾನು ನನ್ನ ಅರ್ಧ ಮೀಸೆ ಮತ್ತು ದಾಡಿಯನ್ನು ತೆಗೆಯುತ್ತೇನೆ ಎಂದಿದ್ದರು.
ಅದೇ ರೀತಿ ಪ್ರತಾಪ್ ಬಿಗ್ ಬಾಸ್ ವಿನ್ನರ್ ಅಗದೇ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಹೀಗಾಗಿ ಅಬಿರಾಜ್ ತಮ್ಮ ಮೀಸೆ ಮತ್ತು ಗಡ್ಡ ಬೊಳಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಹಸಿ ಮೆಣಸಿನಕಾಯಿ ತಿನ್ನುವ ಚಾಲೆಂಜ್ ಕೂಡ ಹಾಕಿದ್ದರು. ಕೊಟ್ಟ ಮಾತಿನಂತೆ ಹಸಿ ಮೆಣಸಿನಕಾಯಿ ತಿಂದು ಕಣ್ಣೀರು ಹರಿಸಿದ್ದಾರೆ.
ನಿಜವಾದ ಅಭಿಮಾನಿ ಎಂದ ನೆಟ್ಟಿಗರು!
ಇನ್ನು, ಅಬಿರಾಜ್ ಹುಚ್ಚಾಟಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅವರ ಕೆಲಸವನ್ನು ಮೆಚ್ಚಿದರೆ, ಮತ್ತೆ ಕೆಲವರು ಡೋಂಗಿ ಪ್ರತಾಪ್‌್ನನ್ನು ನಂಬಿದರೇ ಇದೆ ಗತಿ ಎಂದು ಅಣಕವಾಡಿದ್ದಾರೆ. "ಅಳುಬ್ಯಾಡೊ ಅಣ್ಣ ನೀನು ನೀ ಕೊಟ್ಟ ಮಾತಿಗೆ ನಿಂತ ನಮ್ ನಮ್ಮ ಮನಸು ಮುಟ್ಟಿದಿ. hats off to you" ಎಂದು ಪ್ರತಾಪ್ ಫ್ಯಾನ್ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಅಣ್ಣಾ ನಿನ್ನ ಕಣ್ಣಲ್ಲಿ ನೀರು ಬರಬಾರದು ಯಾಕೆಂದ್ರೆ ಪ್ರತಾಪ್ ಅಣ್ಣ ಸೋತಿಲ್ಲ ಅವರು ಗೆದ್ದಿದ್ದಾರೆ..... ಅದ್ರೂ ನಿನ್ನ ಮಾತನ್ನ ನೀನು ಉಳಿಸಿಕೊಡಿಯಾ. am froud of you" ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











