ಡ್ರೋನ್ ಪ್ರತಾಪ್ ಮದುವೆ ಯಾವಾಗ ; ಕೈ ಹಿಡಿಯುವ ಹುಡುಗಿ ಹೇಗಿರಬೇಕು ಗೊತ್ತಾ..?
ಡ್ರೋನ್ ಪ್ರತಾಪ್ ಭೂತಕಾಲ ಏನೇ ಇರಲಿ, ಆದರೆ ವರ್ತಮಾನದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಸಾರ್ವತ್ರಿಕ ವಲಯದಲ್ಲಿಇದ್ದ ಅಭಿಪ್ರಾಯಗಳು ಬದಲಾಗಿವೆ. ಇವತ್ತು ಡ್ರೋನ್ ಪ್ರತಾಪ್ ಅನೇಕರ ಕಣ್ಣಿಗೆ ಸಾಧಕನಂತೆ, ಇನ್ನೂ ಕೆಲವರ ಕಣ್ಣಿಗೆ ಬುದ್ದಿವಂತನಂತೆ, ಮತಷ್ಟು ಜನರ ಕಣ್ಣಿಗೆ ಮುಗ್ದನಂತೆ ಕಾಣ್ತಿದ್ದಾರೆ. ಒಂದರ್ಥದಲ್ಲಿ ಗಂಗೆಯಲ್ಲಿ ಮುಳುಗಿ ಎದ್ದರೆ ಮಾಡಿದ ಎಲ್ಲ ಪಾಪ ಪರಿಹಾರ ಆಗುತ್ತೆ ಎಂಬ ಮಾತಿನಂತೆ, ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದ ನಂತರ ಡ್ರೋನ್ ಪ್ರತಾಪ್ ಬದುಕು ಬದಲಾಗಿದೆ. ಡ್ರೋನ್ ಪ್ರತಾಪ್ ಹೆಸರಿಗೆ ಒಂದು ಬೆಲೆಯೂ ಬಂದಿದೆ. ಇದರ ನಡುವೆ ಡ್ರೋನ್ ಪ್ರತಾಪ್ ಮದುವೆ ಬಗ್ಗೆ ಚರ್ಚೆ ಆರಂಭವಾಗಿದೆ. ಡ್ರೋನ್ ಪ್ರತಾಪ್ ಮದುವೆಯಾಗುವ ಹುಡುಗಿ ಹೇಗೆ ಇರಬೇಕೆಂಬ ಕುತೂಹಲ ಮನೆ ಮಾಡಿದೆ.
ಇದಕ್ಕೆ ಉದಾಹರಣೆ ಎಂಬಂತೆ ನ್ಯೂಸ್ ಫಸ್ಟ್ ಗೆ ನೀಡಿರುವ ಸಂದರ್ಶನದಲ್ಲಿ ಮದುವೆಯ ಬಗ್ಗೆ ಮಾತನಾಡಿರುವ ಡ್ರೋನ್ ಪ್ರತಾಪ್, ನನ್ನ ತಂಗಿಗೆ ಮದುವೆ ಆಗಿದೆ. ನನಗೆ ಬೇಕಾದ ಹುಡುಗಿಯನ್ನ ನನ್ನ ತಂದೆ ನೋಡುತ್ತಾರೆ ಎಂದಿದ್ದಾರೆ. ಇನ್ನೂ ಹುಡುಗಿ ವಿಚಾರದಲ್ಲಿ ತೀರಾ ನಿರೀಕ್ಷೆಗಳಿಲ್ಲದೇ ಇದ್ದರೂ, ಮದುವೆಯಾಗುವ ಹುಡುಗಿ, ನನ್ನ ಬೆಂಬಲಕ್ಕೆ ಸದಾ ನಿಲ್ಲಬೇಕು, ತೀರಾ ಹಳೆಯ ಕಾಲದ ಆಲೋಚನೆಯನ್ನ ಬಿಟ್ಟು, ಈ ಕಾಲಕ್ಕೆ ಚೂರು ಅಪ್ಡೇಟ್ ಆಗಿರಬೇಕು ಎಂದಿದ್ದಾರೆ.

ಇನ್ನೂ ಸಮಾನತೆ ಬಹುಮುಖ್ಯವೆಂದಿರುವ ಡ್ರೋನ್ ಪ್ರತಾಪ್, ಮದುವೆಯಾಗುವ ಹುಡುಗಿಗೆ ಕೊಡಬೇಕಾದ ಮರ್ಯಾದೆಯನ್ನ ನಾನು ಕೊಟ್ಟೇ ಕೊಡ್ತೀನಿ ಅದರ ಜೊತೆ ಸಮಾಜದಲ್ಲಿ ಅವರು ಏನಾದರೂ ಸಾಧನೆ ಮಾಡಬೇಕೆಂದು ಬಯಸ್ತೀನಿ ಎಂದಿದ್ದಾರೆ ಡ್ರೋನ್ ಪ್ರತಾಪ್. ಇನ್ನೂ ಕೆಲಸದ ಕಡೆಗೆ ಹೆಚ್ಚು ಗಮನ ಕೊಡಬೇಕು. ಅವರಿಷ್ಟದಂತೆ ಬದುಕಬೇಕು. ಪಟಾಫಟ್ ಅಂತ ರೆಡಿಯಾಗಬೇಕೆಂಬ ಷರತ್ತುಗಳನ್ನೂ ಕೂಡ ಹಾಕಿದ್ದಾರೆ ಡ್ರೋನ್ ಪ್ರತಾಪ್
ಬಿಗ್ ಬಾಸ್ ಮನೆಯಲ್ಲಿಯೂ ಆಗಿತ್ತು ಮದುವೆ ಬಗ್ಗೆ ಚರ್ಚೆ
ಬಿಗ್ ಬಾಸ್ ಮನೆಗೆ ಪ್ರತಾಪ್ ತಂದೆ ಹಾಗೂ ತಾಯಿ ಭೇಟಿ ಕೊಟ್ಟಾಗ ಕೂಡ ಮದುವೆಯ ಬಗ್ಗೆ ಚರ್ಚೆ ನಡೆದಿತ್ತು. ಮನೆಗೆ ಪ್ರತಾಪ್ ಪೋಷಕರ ಎಂಟ್ರಿಯಾಗುತ್ತಿದ್ದಂತೆ ವರ್ತೂರು ಸಂತೋಷ್ ಮೊದಲಿಗೆ ಡ್ರೋನ್ ಪ್ರತಾಪ್‌ರ ಮದುವೆ ಚರ್ಚೆ ಆರಂಭ ಮಾಡಿದ್ದರು. ಯಜಮಾನರೇ ನೀವು ಹೇಳಿದರೆ ನಿಮ್ಮ ಮಗ ಮದುವೆ ಆಗ್ತಾನಂತೆ, ನೀವು ಹೂ ಅನ್ನಿ ಎಂದು ವರ್ತೂರು ಸಂತೋಷ್ ಹೇಳಿದ್ದಕ್ಕೆ, ಪ್ರತಾಪ್‌ರ ತಂದೆ ನನ್ನ ಅಭ್ಯಂತರವೇನೂ ಇಲ್ಲ ಎಂದಿದ್ದರು. ನಿಮ್ಮ ಊರಲ್ಲೇ ಒಂದು ಒಳ್ಳೆಯ ಹೆಣ್ಣು ನೋಡಪ್ಪ ಎಂದು ವರ್ತೂರ್ ಸಂತೋಷ್ ಅವರಿಗೆ ಪ್ರತಾಪ್ ತಂದೆ ಹೇಳಿದ್ದರು.
ಆ ನಂತರ ಮದುವೆಯ ಚರ್ಚೆಗೆ ಎಂಟ್ರಿ ಕೊಟ್ಟಿದ್ದ ತುಕಾಲಿ ಸಂತು ಕೂಡ ನಮ್ಮ ಊರಲ್ಲಿ ಒಂದು ಒಳ್ಳೆಯ ಹೆಣ್ಣು ಇದೆ ನೀವು ಹೂ ಹೇಳಿ ನಾನು ಮಾತಾಡ್ತೀನಿ ಎಂದಿದ್ದರು. ನಾನು ಮಾತನಾಡಿದರೆ ಆ ಹುಡುಗಿ ಇಲ್ಲವೆನ್ನಲು ಸಾಧ್ಯ ಇಲ್ಲವೆಂದಿದ್ದರು.

ಪ್ರತಾಪ್ ಕಾಲೆಳೆದಿದ್ದ ಸಂಗೀತಾ
ಇನ್ನೂ ಮದುವೆ ವಿಚಾರದಲ್ಲಿ ಸಂಗೀತಾ ಶೃಂಗೇರಿ, ಪ್ರತಾಪ್ ಕಾಲೆಳೆದಿದ್ದರು. ಆಗ ಮಾತನಾಡಿದ್ದ ಪ್ರತಾಪ್ ದಯವಿಟ್ಟು ಬಿಟ್ ಬಿಡಮ್ಮ. ನನಗೆ ಲೈಫ್‌ನಲ್ಲಿ ತುಂಬಾ ಗುರಿಗಳಿವೆ ಎಂದಿದ್ದರು. ನನಗೆ ಮುಂದೆ ಕೆರಿಯರ್ ಇದೆ. ನಮ್ಮಪ್ಪ ನೋಡಿದ ಹುಡುಗಿಯನ್ನೇ ನಾನು ಮದುವೆ ಆಗ್ತೀನಿ ಎಂದು ಆಗ್ಲೂ ಕೂಡ ಹೇಳಿದ್ದರು ಪ್ರತಾಪ್. ಪ್ರತಾಪ್ ಅವರ ಈ ಮಾತಿಗೆ ತಮಾಷೆಯಾಗಿಯೇ ಉತ್ತರ ನೀಡಿದ್ದ ಸಂಗೀತಾ, ಈಗ ನಾನೇ ಆ ಹುಡುಗಿ. ನಿಮ್ಮ ಅಪ್ಪನನ್ನು ಒಪ್ಪಿಸುತ್ತೇನೆ ಎಂದಿದ್ದರು. ನೀವು ನನಗೆ ಲವರ್ ತರ ಕಾಣುತ್ತಿದ್ದೀರಾ. ನನ್ನ ಫ್ಯೂಚರ್ ಹಸ್ಪೆಂಡ್ ನಿಮ್ಮಲ್ಲಿ ಕಾಣುತ್ತಿದ್ದೇನೆ. ನನಗೆ ನಿಮ್ಮ ಮೇಲೆ ತುಂಬಾ ಪ್ರೀತಿಯಿದೆ. ನಿಮ್ಮನ್ನು ನೋಡಿದಾಗಿನಿಂದ ನನಗೆ ಕ್ರಶ್ ಆಗಿಬಿಟ್ಟಿದೆ ಎಂದಿದ್ದರು ಸಂಗೀತಾ
ಸಂಗೀತಾ ಪ್ರಶ್ನೆಗೆ ಉತ್ತರಿಸಿದ್ದ ಪ್ರತಾಪ್ ನನಗೆ ಇದೆಲ್ಲ ಇಷ್ಟವಿಲ್ಲ. ನೀವು ಚೆನ್ನಾಗಿ ಕಾಣಿಸುತ್ತಿದ್ದೀರಾ. ಆದರೆ, ಅಕ್ಕನ ತರಹ. ಆಯ್ತು ನನ್ನತ್ರ ದುಡ್ಡಿಲ್ಲ ಎಂದಿದ್ದರು. ಆಗ ಸಂಗೀತಾ, ದುಡ್ಡಿಗಾಗಿ ಯಾರಾದ್ರೂ ಪ್ರೀತಿ ಮಾಡ್ತಾರಾ? ಮದುವೆ ಆಗ್ತಾರಾ? ನಿಮ್ಮ ಹೃದಯ, ಸ್ಮೈಲ್ ನೋಡಿ ಫ್ಲಾಟ್ ಆಗ್ಬಿಟ್ಟಿದ್ದೀನಿ ಎಂದು ಹೇಳಿದ್ದರು ಸಂಗೀತಾ. ಅದಕ್ಕೆ ಪ್ರತಾಪ್, ನಾನು ನಿಮ್ಮನ್ನು ಎಲ್ಲಿಗೂ ಕರೆದುಕೊಂಡು ಹೋಗಲ್ಲ. ನನ್ನದು ಬೋರಿಂಗ್ ಲೈಫ್. ವರ್ಷಗಳ ಕಾಲ ನಾನು ಹಾಗೆಯೇ ಇರೋದು. ಸಿನಿಮಾಗೆ ಹೋಗಲ್ಲ, ರೆಸ್ಟೋರೆಂಟ್‌ಗೆ ಹೋಗಲ್ಲ, ಪಾರ್ಕ್‌ಗೆ ಹೋಗಲ್ಲ ಎಂದರು. ಅದಕ್ಕೆ ಸಂಗೀತಾ, ನಾನು ಕರ್ಕೊಂಡ್ ಹೋಗ್ತೀನಿ. ನಾನೇ ಎಂಟಟೈನ್ಮೆಂಟ್ ಮಾಡ್ತೀನಿ. ಬದುಕಿರುವವರೆಗೂ ಜೊತೆಗೆ ಇರ್ತೀನಿ ಅಂತೆಲ್ಲಾ ಕಾಮಿಡಿ ಮಾಡಿದ್ದರು.


Click it and Unblock the Notifications











