ಆಧ್ಯಾತ್ಮ ಟೀಚರ್ ಆದ ಸಂಗೀತಾ ವಿನಯ್‌ಗೆ ಲವ್ ಯು ಅಂದ್ರು...! ಇದೇನಪ್ಪ ಹೊಸ ವರಸೆ ಅಂತಿದ್ದಾರೆ ವೀಕ್ಷಕರು!
ಸಂಗೀತಾ ಶೃಂಗೇರಿ ಹಾಗೂ ವಿನಯ್ ನಡುವೆ ಒಂದಲ್ಲ ಒಂದು ಕಾರಣಕ್ಕೆ ತಿಕ್ಕಾಟಗಳು ನಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿ ಹೋಗಿತ್ತು. ಇನ್ನು ಎಲ್ಲ ಅನಿಷ್ಟಕ್ಕೂ ಶನೇಶ್ವರನೇ ಕಾರಣ ಎಂಬ ಗಾದೆ ಮಾತಿನಂತೆ ವಿನಯ್ ಯಾರ ಮೇಲೆ ಜಗಳ ಮಾಡಿದರು ಕೂಡ ಅದು ಸಂಗೀತಾರ ಕುಮ್ಮಕ್ಕಿನಿಂದ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರು.
ಇನ್ನು ಕಾರ್ತಿಕ್ ಏನಾದರೂ ವಿನಯ್ ಮೇಲೆ ಮುಗಿಬಿದ್ದರೆ ಸಂಗೀತಾ ಇದಕ್ಕೆಲ್ಲ ಕಾರಣ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ನಿನ್ನೆಯ ಎಪಿಸೋಡ್‌ನಲ್ಲಿ ಯಾರಿಂದ ಯಾರನ್ನು ಕಳೆದರೆ ಶೂನ್ಯವಾಗುತ್ತಾರೆ ಎಂದು ಹೇಳಿದಾಗ. ವಿನಯ್ ಸಂಗೀತಾರಿಂದ ಕಾರ್ತಿಕ್ ಅನ್ನು ಕಳೆದರೆ ಸಂಗೀತಾ ಶೂನ್ಯವಾಗುತ್ತಾರೆ. ಆದರೆ ಕಾರ್ತಿಕ್ ಶೂನ್ಯವಾಗುವುದಿಲ್ಲ ಎಂಬ ಮಾತನ್ನು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ವರಸೆ ಚೇಂಜ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಈಗ ಬಿಗ್ ಬಾಸ್ ಕನ್ನಡ ಪ್ರಾಥಮಿಕ ಪಾಠಶಾಲೆಯ ಒಂದು ಪರಿಕಲ್ಪನೆಯಲ್ಲಿ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಮನೆಯಲ್ಲಿರುವ ಸಂಗೀತಾಗೆ ಆಧ್ಯಾತ್ಮ ಟೀಚರ್ ಪಾತ್ರವನ್ನು ಕೊಡಲಾಗಿದೆ. ಆಧ್ಯಾತ್ಮ ಟೀಚರ್ ಆಗಿದ್ದು ಸಂಗೀತಾ ಎಲ್ಲರ ಮುಖದಲ್ಲೂ ನಗುತರಿಸುವ ಕೆಲಸವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾವು ಇನ್ಮುಂದೆ ಎಷ್ಟೇ ಜಗಳ ಮಾಡಿದರು ಕೂಡ ಸ್ನೇಹಿತರಾಗಿ ಇರೋಣ ಎಂದು ಹೇಳಿದ್ದಾರೆ. ಇದಕ್ಕಿದ್ದಂತೆ ಸಂಗೀತಾ ಬದಲಾಗಿದ್ದಾದರೂ ಯಾಕೆ ಎಂಬ ಅನುಮಾನ ಈಗ ವೀಕ್ಷಕರಲ್ಲಿ ಕಾಡುತ್ತಿದೆ. ಸಂಗೀತಾ ಕಣ್ಣಿಗೆ ಹಾನಿಯಾಗಿತ್ತು ಸಂಪೂರ್ಣವಾಗಿ ಈಗ ಗುಣವಾದಂತೆ ಕಾಣುತ್ತಿದ್ದು ಕಣ್ಣಿಗೆ ಹಾಕಿಕೊಂಡಿದ್ದ ಕನ್ನಡಕವನ್ನು ತೆಗೆದಿದ್ದಾರೆ. ಆಧ್ಯಾತ್ಮ ಟೀಚರ್ ಆಗಿದ್ದು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಬೋಧಿಸಿದ್ದಾರೆ.
ಮನೆಯಲ್ಲಿ ಎಲ್ಲರಿಗೂ ಕೂಡ ಫಸ್ಟ್ರೇಷನ್ ಇದ್ದು ಅದನ್ನು ಹೇಗೆ ಹೊರ ಹಾಕಬೇಕು ಎಂಬುದನ್ನು ತಿಳಿಸಿದ್ದಾರೆ. ಇನ್ನು ಸಂಗೀತಾ ವಿನಯ್ ಬಳಿ ಬಂದು ನೀವು ಯಾವ ರೀತಿ ಫಸ್ಟ್ ರೇಶನ್‌ನನ್ನು ಹೊರಗೆ ಹಾಕುತ್ತೀರಾ ಎಂದು ಜೋರಾಗಿ ಹೇಳಿ ಎಂದಾಗ. ವಿನಯ್ ನನಗೆ ಫಸ್ಟ್ರೇಷನ್ ಇಲ್ಲ ನಾನು ಯಾವಾಗಲೂ ಕೂಲಾಗಿಯೇ ಇರುತ್ತೇನೆ ಎಂದಿದ್ದಾರೆ. ಇದಕ್ಕೆ ಎಲ್ಲರೂ ಕೂಡ ಜೋರಾಗಿ ನಕ್ಕಿದ್ದಾರೆ. ಇಲ್ಲಿ ಸಂಗೀತಾ ಹಾಗೂ ವಿನಯ್ ಇಬ್ಬರು ತುಂಬಾ ಚೆನ್ನಾಗಿ ಮಾತನಾಡಿದ್ದು ವೀಕ್ಷಕರ ಖುಷಿಗೂ ಕಾರಣವಾಗಿದೆ.
ಲವ್ ಯು ವಿನಯ್ ಎಂದ ಚಾರ್ಲಿ ಬೆಡಗಿ
ಮೈಕಲ್ ಬಳಿ ಬಂದ ಸಂಗೀತಾ ನೀವು ಫಸ್ಟ್ರೇಷನ್ ಹೊರೆಗೆ ಹಾಕಿ ಎಂದು ಕೇಳಿದ್ದಕ್ಕೆ ಮೈಕಲ್ ಲಕ್ಷುರಿ ಬಜೆಟ್ ಎಂದು ಹೇಳುವ ಮೂಲಕ ಜೋರಾಗಿ ಕಿರುಚಿದ್ದಾರೆ. ಆಗ ಮನೆಯ ಎಲ್ಲಾ ಸದಸ್ಯರು ನಕ್ಕಿದ್ದಾರೆ. ನಂತರ ವಿನಯ್ ಸ್ಕೇಟ್‌ನಲ್ಲಿ ಏನನ್ನು ಬರೆದು ಇದು ನಿಮಗೋಸ್ಕರ ಎಂದು ಹೇಳಿದಾಗ ಸಂಗೀತಾ ಖುಷಿಪಟ್ಟಿದ್ದಾರೆ. ಲವ್ ಯೂ ವಿನಯ್.. ಲವ್ ಯೂ ಆಲ್ ಎಂದು ಸಂಗೀತಾ ಹೇಳಿದ್ದು ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಿದೆ.

ವಿನಯ್‌ಗೆ ಸ್ಟಾರ್ ಕೊಟ್ಟ ಸಂಗೀತಾ
ಇನ್ನು ಇದೇ ವೇಳೆ ವಿನಯ್ ಅವರಿಗೆ ಸಂಗೀತಾ ಸ್ಟಾರ್ ನೀಡಿದ್ದಾರೆ. ಇದಕ್ಕೆ ಕಾರ್ತಿಕ್ ಹೊ ಎಂದು ಜೋರಾಗಿ ಕೂಗಿದ್ದಾರೆ. ನಂತರ ನಾವು ಏನೇ ಆದರೂ ಇದೇ ರೀತಿ ಇರೋಣ ಸ್ನೇಹದಿಂದಲೇ ವರ್ತಿಸೋಣ. ಯಾವುದೇ ರೀತಿಯ ಜಗಳಗಳು ಆದರೂ ಕೂಡ ನಾವು ಸ್ನೇಹದಿಂದ ಇರೋಣ ಎಂದು ಸಂಗೀತಾ ಹೇಳಿದ್ದು ಎಲ್ಲರೂ ಖುಷಿಪಟ್ಟಿದ್ದಾರೆ.
ಸಂಗೀತಾ ನಿಜವಾಗಿಯೂ ಬದಲಾಗಿದ್ದಾರಾ ಎಂಬ ಮಾತನ್ನು ವೀಕ್ಷಕರು ಕೇಳುತ್ತಿದ್ದಾರೆ. ಇದೇ ರೀತಿ ಬಿಗ್ ಬಾಸ್ ಮನೆ ಇದ್ದರೆ ಚೆನ್ನಾಗಿ ಇರುತ್ತದೆ. ಯಾವುದೇ ಜಗಳಗಳು ಇಲ್ಲದೆ ಬರಿ ಮನರಂಜನೆಯನ್ನು ನೀಡಿದಾಗ ಮಾತ್ರ ಖುಷಿಯಿಂದ ಇರಲು ಸಾಧ್ಯ ಎಂಬ ಮಾತನ್ನು ವೀಕ್ಷಕರು ಹೇಳುತ್ತಿದ್ದಾರೆ. ಸದ್ಯಕ್ಕೆ ಈಗ ಎಲ್ಲರೂ ಖುಷಿಯಿಂದ ಇದ್ದು ಮುಂದಿನ ಟಾಸ್ಕ್‌ಗಳಲ್ಲಿ ಯಾರು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದೇ ಕುತೂಹಲವಾಗಿದೆ.


Click it and Unblock the Notifications











