BBK10: ಶಾಲೆಯಲ್ಲಿ ನಮ್ರತಾ, ಸಂಗೀತಾ ಟೀಚರ್ ಸಿಕ್ಕಿದರೆ ವಿದ್ಯಾರ್ಥಿಗಳು ಫುಲ್ ಖುಷ್‌

By ಎಸ್ ಸುಮಂತ್

ಬಿಗ್ ಬಾಸ್ ಮನೆ ಈಗ ಪ್ರಾಥಮಿಕ ಶಾಲೆಯಾಗಿ ಬದಲಾಗಿದೆ. ಸದಸ್ಯರೆಲ್ಲಾ ಸ್ಟುಡೆಂಟ್‌ಗಳಾಗಿದ್ದಾರೆ. ಒಂದೊಂದು ದಿನ ಟೀಚರ್‌ಗಳ ಸರದಿ ಬದಲಾಗುತ್ತದೆ. ಅದರಂತೆ ವಿದ್ಯಾರ್ಥಿಗಳ ಸರದಿಯೂ ಬದಲಾಗುತ್ತದೆ. ನಿನ್ನೆಯಿಂದ ಆರಂಭವಾದ ಪ್ರಾಥಮಿಕ ಶಾಲೆಯಲ್ಲಿ ತನಿಷಾ, ಪ್ರತಾಪ್, ಮೈಕೆಲ್ ಟೀಚರ್ ಆಗಿದ್ದರು. ತಂಟೆ - ತುಂಟಾಟದೊಂದಿಗೆ ಮಕ್ಕಳ ಶಾಲೆ ಮುಕ್ತಾಯವಾಗಿತ್ತು. ಇವತ್ತು ಟೀಚರ್‌ಗಳ ಸರದಿ ಬದಲಾಗಿದೆ.

ಸಂಗೀತಾ, ನಮ್ರತಾ, ಸಿರಿ, ತುಕಾಲಿ ಸಂತೋಷ್ ಟೀಚರ್ ಆಗಿದ್ದಾರೆ. ಆದರೆ, ಇಂದು ವಿದ್ಯಾರ್ಥಿಗಳು ಯಾರು, ನಿನ್ನೆಯ ರೀತಿ ಕೆಟ್ಟದಾಗಿ ಆಡುತ್ತಿಲ್ಲ. ಜೋರು ಕಿರುಚಾಡುತ್ತಿಲ್ಲ. ಕಿರಿಕಿರಿ ಮಾಡುತ್ತಿಲ್ಲ. ಶಾಲೆ ಒಂಥರ ಮಜಭೂತವಾಗಿದೆ. ಟೀಚರ್ ಜೊತೆಗೆ ಸೇರಿ ಖುಷಿ ಖುಷಿಯಾಗಿದ್ದಾರೆ. ಸೀರಿಯಸ್ ಆಗಿ ಪಾಠ ಕೇಳಿದ್ದಾರೆ.

Bigg Boss Kannada Season 10 Sangeetha gives a lesson to get rid of boredom

ನೆಗೆಟಿವಿಟಿ - ಪಾಸಿಟಿವಿಟಿ ಅರ್ಥ ಮಾಡಿಸಿದ ಸಂಗೀತಾ

ಸಂಗೀತಾ ಟೀಚರ್ ಆಧ್ಯಾತ್ಮ ಹೇಳಿಕೊಡುವುದಕ್ಕೆ ಬಂದಿದ್ದಾರೆ. ಆಧ್ಯಾತ್ಮ ಎಂದರೆ ಏನು ಎಂಬುದಕ್ಕೆ ಬಿಗ್ ಬಾಸ್ ವಿದ್ಯಾರ್ಥಿಗಳು ಒಂದೊಂದು ಅರ್ಥ ಹೇಳಿದ್ದಾರೆ. ಕೆಟ್ಟ ಗುಣಗಳು ಏನು ಎಂಬುದನ್ನು ಪ್ರಾಕ್ಟಿಕಲ್ ಸಮೇತ ಸಂಗೀತಾ ಟೀಚರ್ ಪ್ರೂವ್ ಮಾಡಿದ್ದಾರೆ. ವರ್ತೂರು ಸಂತೋಷ್ ಕೈಯಿಂದ ನೀರಿಗೆ ಮಣ್ಣು ಹಾಕಿ, ನೆಗೆಟಿವಿಟಿ ಏನು ಎಂಬುದನ್ನು ಅರ್ಥ ಮಾಡಿಸಿದ್ದಾರೆ. ಮನೆಯಲ್ಲಿ ಎಷ್ಟು ನೆಗೆಟಿವಿಟಿ ಇದೆ ಎಂಬುನ್ನು ಸಂಗೀತಾ ಪಾಠದ ಮೂಲಕ ತಿಳಿಸಿದ್ದಾರೆ. ಮನೆಯಲ್ಲಿಯೂ ಆ ನೆಗೆಟಿವಿಟಿ ಕಳೆಯಲು ಯತ್ನಿಸಿದ್ದಾರೆ.

ಮನಸ್ಸಿನ ಭಾರ ಹೊರ ಹಾಕಲು ಪ್ರಯತ್ನ

ಮಕ್ಕಳ ಮನಸ್ಸು ಒಂದು ಬಿಳಿ ಹಾಳೆಯ ಹಾಗೆ. ಅದರ ಮೇಲೆ ಪೋಷಕರು, ಶಿಕ್ಷಕರು ಹೇಗೆ ಚಿತ್ರ ಬಿಡಿಸುತ್ತಾರೋ ಆ ಚಿತ್ರ ಮೂಡುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲೂ ವಿದ್ಯಾರ್ಥಿಗಳು ಇದ್ದಾರೆ. ಆದರೆ ಹಿಂದೆ ನಡೆದ ಕೆಲವೊಂದು ಘಟನೆಗಳು ಮನಸ್ಸಲ್ಲಿ ಹಾಗೆಯೇ ಉಳಿದಿದೆ. ಆ ಬೇಸರವನ್ನು ಸಂಗೀತಾ ಆಟದ ಮೂಲಕ ಹೊರ ಹಾಕುವಂತೆ ಮಾಡಿದ್ದಾರೆ.

ಕಾರ್ತಿಕ್ ಐ ಲವ್ ಯೂ ಹೇಳಿದ ಸಂಗೀತಾ

ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ 66 ದಿನಗಳನ್ನು ಮುಗಿಸಿದ್ದಾರೆ. ಇನ್ನು ಉಳಿದಿರುವುದು 34 ದಿನಗಳು ಮಾತ್ರ. ನೂರನೇ ದಿನಕ್ಕೆ ಎಲ್ಲರೂ ಹೊರಗೆ ಬಂದು, ವೇದಿಕೆ ಮೇಲೆ ಗೆದ್ದವರು ನಿಂತಿರುತ್ತಾರೆ. ದಿನಗಳು ಉರುಳುತ್ತಿರುವುದಕ್ಕೆ ಸಂಗೀತಾ ಮನಸ್ಸಾರೆ ಎಲ್ಲರಿಗೂ ಕ್ಷಮೆ ಕೇಳಿದ್ದಾರೆ. ಎಲ್ಲರೂ ಖುಷಿ ಖುಷಿಯಾಗಿ ಇರೋಣಾ ಎಂದು ಬಯಸಿದ್ದಾರೆ. ಕ್ಷಮೆಯನ್ನು ಕೇಳಿದ್ದಾರೆ. ಹೊರಗಡೆ ಹೋದಾಗ ಹೀಗೆಲ್ಲಾ ಇರುವುದಕ್ಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತನ್ನೆಲ್ಲಾ ವಿದ್ಯಾರ್ಥಿಗಳನ್ನು ಹಗ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ.

Bigg Boss Kannada Season 10 Sangeetha gives a lesson to get rid of boredom

ನಮ್ರತಾ ಮಿಸ್ ಸೂಪರ್

ನಮ್ರತಾ ಟೀಚರ್ ಬಂದ ಕೂಡಲೇ ಎಲ್ಲರೂ ಖುಷಿ ಪಟ್ಟಿದ್ದಾರೆ. ಡ್ಯಾನ್ಸ್, ನಾಟಕಗಳನ್ನು ಮಾಡಿಸಿದ್ದಾರೆ. ವರ್ತೂರು ಸಂತೋಷ್ ಬಳಿ ಶೃಂಗಾರ ರಸ, ಪ್ರತಾಪ್ ಬಳಿ ಹಾಸ್ಯ ರಸ ಮಾಡಿಸಿದ್ದಾರೆ. ಇದೆಲ್ಲ ಮುಗಿದ ಮೇಲೆ ಗ್ರೌಂಡ್‌ಗೆ ಕರೆದುಕೊಂಡು ಹೋಗಿ, ಡ್ಯಾನ್ಸ್ ಮಾಡಿಸಿದ್ದಾರೆ. ಬಿಗ್ ಬಾಸ್ ಕೂಡ ನಮ್ರತಾ ಟೀಚರ್ ಗೆ ಬೆಂಬಲ ನೀಡಿ, ಬ್ಯಾಕ್ ಟು ಬ್ಯಾಕ್ ಹಾಡುಗಳನ್ನು ಹಾಕಿದ್ದಾರೆ. ಇದೆಲ್ಲಾ ಮುಗಿದ ಮೇಲೆ ನಮ್ರತಾ ಟೀಚರ್ ತನಿಷಾಗೆ ಮೊದಲ ಸ್ಟಾರ್ ಕೊಟ್ಟಿದ್ದು, ಡ್ರೋನ್ ಪ್ರತಾಪ್ ಅವರಿಗೆ ಹಾಸ್ಯ ಮಾಡಿದ್ದಕ್ಕೆ ಮತ್ತೊಂದು ಸ್ಟಾರ್ ಕೊಟ್ಟಿದ್ದಾರೆ.

More from Filmibeat

English summary
BBK 10 December 13th episode about Sangeetha gives a lesson to get rid of boredom:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X