ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿದ್ಯಾ ತಾರತಮ್ಯ..! ಸಮಾನತೆಯ ಬಗ್ಗೆ ಧ್ವನಿ ಎತ್ತಿದ್ಯಾಕೆ ಸಂಗೀತಾ..?!

By Shruthi Harishgowda

ಬಿಗ್ ಬಾಸ್ ಸೀಸನ್ 10 ಈಗ 86 ದಿನಗಳನ್ನು ಪೂರೈಸಿದೆ. ಇನ್ನೇನು ಸೆಮಿಫೈನಲ್‌ ಹತ್ತಿರವಿದ್ದು ಸ್ಪರ್ಧಿಗಳಿಗೆ ವಿವಿಧ ರೀತಿಯಲ್ಲಿ ಟಾಸ್ಕ್ ನೀಡಲಾಗುತ್ತಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಮೂರು ಮಂದಿ ಮಹಿಳೆಯರು ಮಾತ್ರ ಬಿದ್ದು ಇನ್ನೂ ಉಳಿದ ಆರು ಮಂದಿ ಪುರುಷರು ಇದ್ದಾರೆ. ಇಲ್ಲಿ ಫಿಸಿಕಲ್ ಟಾಸ್ಕ್ ಎಂದು ಬಂದಾಗ ಗಂಡು ಮಕ್ಕಳೇ ಮುಂದೆ ಹೋಗಿ ನಿಲ್ಲುತ್ತಾರೆ. ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲೂ ಕೂಡ ಚಾನ್ಸ್ ಕೊಡುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ.

ಸಂಗೀತಾ ಕೂಡ ಎಲ್ಲಾ ಚಟುವಟಿಕೆಗಳಲ್ಲೂ ತಾನು ಭಾಗಿಯಾಗಬೇಕು ಎಂದುಕೊಂಡಿದ್ದಾರೆ. ಆದರೆ ಇಲ್ಲಿ ವಿನಯ್ ಅವರು ನಾವೇ ಈ ಟಾಸ್ಕ್‌ನ್ನು ಆಡುತ್ತೇವೆ ಎಂದು ಹೇಳುವುದು ಸಂಗೀತಾಗೆ ಇಷ್ಟವಾಗಿಲ್ಲ. ಮೊದಲಿನಿಂದಲೂ ಅಷ್ಟೇ ವಿನಯ್ ಹೆಣ್ಣು ಮಕ್ಕಳಿಗೆ ಸಾಕಷ್ಟು ಸ್ಪೇಸ್ ನೀಡುತ್ತಿಲ್ಲ ಎಂಬುವುದು ಸಂಗೀತಾ ವಾದವಾಗಿತ್ತು. ಯಾವಾಗಲೂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಾರೆ ಎಂದು ಸಂಗೀತಾ ಹೇಳಿದ್ದರು.

Bigg Boss Kannada Season 10: Sangeetha raised her voice in the Bigg Boss house

ಈಗ ಸಂಗೀತಾ ಕೂಡ ವಿನಯ್ ಬಳಿ ಬಂದು ನೀವೇ ಟಾಸ್ಕ್ ಆಡಬೇಕಾ ನಮ್ಮನ್ನು ಯಾಕೆ ಗಣನೆಗೆ ತೆಗೆದುಕೊಂಡಿಲ್ಲ ಎಂಬ ಮಾತನ್ನು ಕೇಳಿದ್ದಾರೆ. ಇನ್ನು ಇದೇ ವಿಚಾರವಾಗಿ ನಮ್ರತಾ ಬಳಿಯೂ ಮಾತನಾಡಿದ್ದಾರೆ. ಈ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲಾ ಗೇಮ್‌ಗಳನ್ನು ಕೂಡ ಗಂಡು ಮಕ್ಕಳೇ ಆಡುತ್ತೇವೆ ಎಂದು ಅನ್ನುತ್ತಾರೆ ಎಂದಿದ್ದಾರೆ. ಈಗ ಇಲ್ಲಿ ಪಾಯಿಂಟ್ಸ್ ಸೇರುವುದರಿಂದ ವಿನಯ್ ಅವರು ಹೆಣ್ಣು ಮಕ್ಕಳ ಹೆಸರನ್ನೇ ಟಾಸ್ಕ್ ಗೆ ತೆಗೆದುಕೊಂಡಿಲ್ಲ ಇದಕ್ಕೆ ಸಂಗೀತಾಗೆ ಬೇಸರವಾಗಿದೆ.

ಕಲರ್ಸ್ ಕನ್ನಡದವರು ಇಂದು ಬಿಟ್ಟಿರುವ ಪ್ರೋಮೋದಲ್ಲಿ ಸಂಗೀತಾ ಹಾಗೂ ವಿನಯ್ ನಡುವೆ ಹೆಣ್ಣು ಗಂಡು ಎಂಬ ತಾರತಮ್ಯ ನಡೆಯುತ್ತಿದೆ ಎಂಬ ವಿಚಾರಕ್ಕೆ ಚರ್ಚೆಯಾಗಿದೆ. ಇಲ್ಲಿ ವಿನಯ್ ಅವರು ಸಂಗೀತಾ ಜೊತೆಯಲ್ಲಿ ಯುದ್ಧಕ್ಕೆ ನಿಂತವರಂತೆ ಮಾತನಾಡಿದ್ದಾರೆ. ‌ಪದೇಪದೇ ನೀನೆ ಬಿಗ್ ಬಾಸ್ ಮನೆಯಲ್ಲಿ ತಾರತಮ್ಯ ನಡೆಯುತ್ತಿದೆ ಎನ್ನುತ್ತಿದ್ದಿಯ ಇದು ಸರಿಯಲ್ಲ ಎಂದು ವಿನಯ್ ಸಂಗೀತಾಗೆ ಹೇಳಿದ್ದಾರೆ. ಆದರೆ ಸಂಗೀತಾ ಮಾತ್ರ ತಾವು ಆಡಿರುವ ಮಾತಿಗೆ ಬದ್ಧ ಎಂಬಂತೆ ವಾದ ಮಾಡುತ್ತಿದ್ದಾರೆ. ವಿಚಾರ ಬಂದಾಗ ಇಲ್ಲಿ ತಾರತಮ್ಯ ನಡೆಯುತ್ತಿದೆ ಎಂಬ ಮಾತನ್ನು ಸಂಗೀತಾ ಎಲ್ಲರ ಮುಂದೆ ಹೇಳಿ ವಿನಯ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿನಯ್- ಸಂಗೀತಾ ನಡುವೆ ಮತ್ತೆ ಜಗಳ

ಬಿಗ್ ಬಾಸ್ ಮನೆಯಲ್ಲಿ ತಾರತಮ್ಯ ನಡೆದಿದೆಯಾ?!

ಬಿಗ್ ಬಾಸ್ ಮನೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಸಂಗೀತಾ ಅವರು ಹೇಳಿದ್ದಾರೆ. ಇಂದು ಬಿಗ್ ಬಾಸ್ ಒಂದು ಟಾಸ್ ನೀಡಿದ್ದು ಸ್ವಿಮ್ಮಿಂಗ್ ಪೂಲ್ ಒಳಗಡೆ ಬಾಲನ್ನು ಇಡಲಾಗಿದೆ. ಆ ಬಾಲ್ ಗಳನ್ನು ಪೂಲ್‌ನಿಂದ ಮೇಲಕ್ಕೆ ತಂದು ಗುರಿ ಇಟ್ಟು ಬಾಲ್‌ಗಳನ್ನು ಒಂದು ಡಬ್ಬದ ಒಳಗೆ ಹೋಗುವಂತೆ ಮಾಡಬೇಕು. ಇನ್ನು ಹೆಣ್ಣು ಮಕ್ಕಳು ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿಯುವುದು ಬೇಡ ಎಂಬ ದೃಷ್ಟಿಯಿಂದ ಅಥವಾ ಈ ಟಾಸ್ಕನ್ನು ಗೆಲ್ಲಲೇಬೇಕು ಎಂಬ ಒಂದು ಗುರಿಯಿಂದಲೂ ವಿನಯ್ ಅವರು ಹೆಣ್ಣು ಮಕ್ಕಳ ಹೆಸರನ್ನು ಈ ಟಾಸ್ಕ್ ಆಡಲು ತೆಗೆದುಕೊಂಡಿಲ್ಲ. ಎಲ್ಲರ ಸಮ್ಮುಖದಲ್ಲಿ ನಾವು ಬರಿ ಗಂಡು ಮಕ್ಕಳೇ ಈ ಟಾಸ್ಕನ್ನು ಆಡುತ್ತೇವೆ ಎಂದು ಘೋಷಿಸಿದ್ದಾರೆ.

Bigg Boss Kannada Season 10: Sangeetha raised her voice in the Bigg Boss house

ನಾನು, ಕಾರ್ತಿಕ್, ಮೈಕಲ್ ಹಾಗೂ ತುಕಾಲಿ ಸಂತೋಷ್ ಅವರು ಈ ಟಾಸ್ಕ್ ಆಡುತ್ತೇವೆ ಎಂದು ಹೇಳಿದಾಗ ಸಂಗೀತಾ ನೀವ್ಯಾಕೆ ಹೆಣ್ಣು ಮಕ್ಕಳ ಹೆಸರನ್ನು ತೆಗೆದುಕೊಳ್ಳಲಿಲ್ಲ ಎಂದು ಕೇಳಿದ್ದಾರೆ. ಆದರೆ ಇಲ್ಲಿ ವಿನಯ್ ಅವರು ಬಲಿಷ್ಠವಾಗಿ ಆಡುವವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದ್ದರಿಂದ, ಬೇಗ ಬೇಗ ಟಾಸ್ಕ್ ಕಂಪ್ಲೀಟ್ ಮಾಡಬೇಕು ಎಂದು ಸಂಗೀತಾ ಹೆಸರನ್ನ ಗಣನೆಗೆ ತೆಗೆದುಕೊಂಡಿಲ್ಲ. ಇದೇ ವಿಚಾರಕ್ಕೆ ಸಂಗೀತಾ ಹಾಗೂ ವಿನಯ್ ನಡುವೆ ಜಗಳ ನಡೆದಿದೆ.

ಸಂಗೀತಾಗೆ ಪ್ರಶ್ನೆ ಮಾಡಿದ ತನಿಷಾ

ಯಾಕೆ ಮೆನ್, ವಿಮೆನ್ ಅಂತೀಯಾ ಎಂದ ವಿನಯ್

ನನ್ನ ಹೆಸರನ್ನು ಏಕೆ ಗಣನೆಗೆ ತೆಗೆದುಕೊಂಡಿಲ್ಲ ಎಂದು ಸಂಗೀತಾ ಕೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂಬ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೊದಲು ವಿನಯ್ ಅವರು ನೀನು ಯಾಕೆ ಪದೇ ಪದೇ ಮೆನ್ ವಿಮೆನ್ ಎಂದು ಮಾತನಾಡುತ್ತೀಯಾ ನೀನು ಒಬ್ಬಳೇ ಈ ರೀತಿ ಮಾತನಾಡೋದು ಎಂದು ಹೇಳಿದ್ದಾರೆ. ಈ ಮಾತಿಗೂ ಕೂಡ ಸಂಗೀತಾ ಅವರು ಇದಕ್ಕೂ ಕೂಡ ತಿರುಗೇಟು ಕೊಟ್ಟಿದ್ದಾರೆ. ನಿಮಗೆ ಆಟವಾಡಲು ಅವಕಾಶ ಸಿಗುತ್ತಿದೆ ಎಂಬ ಕಾರಣಕ್ಕೆ ಇಲ್ಲಿ ಎಲ್ಲರ ಮಧ್ಯೆ ತಂದು ಇಡುವ ಕೆಲಸವನ್ನ ಮಾಡಬೇಡಿ ಎಂದು ವಿನಯ್ ಗೆ ವಾರ್ನಿಂಗ್ ನೀಡಿದ್ದಾರೆ.

ತನಿಷಾ ಕೂಡ ಸಂಗೀತಾ ವಿರುದ್ಧವೇ ಮಾತನಾಡಿದಂತೆ ಕಾಣುತ್ತಿದೆ ನೀವು ನಿಮಗೆ ಕೊಟ್ಟ ಎಲ್ಲಾ ಟಾಸ್ಕ್ ಗಳಲ್ಲೂ ಕೂಡ 100% ಕೊಟ್ಟಿದ್ದೀರಾ ಎಂಬ ಮಾತನ್ನು ಇಲ್ಲಿ ಕೇಳಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಒಂದು ಟಾಸ್ಕ್ ಆಡಲು ತಾರತಮ್ಯದ ಮಾತು ಕೇಳಿ ಬಂದಿದೆ. ಸೆಮಿ ಫೈನಲ್ ತಲುಪುತ್ತಿದ್ದಂತೆ ಸ್ಪರ್ಧಿಗಳು ಒಬ್ಬರಿಗೊಬ್ಬರು ಬದಲಾಗುತ್ತಾ ಆಟವಾಡುತ್ತಾರೆ ಇಲ್ಲಿ ಗೆಲುವಷ್ಟೇ ಮುಖ್ಯವಾಗಿದ್ದು ಸಂಗೀತಾ ಕೂಡ ತಮ್ಮ ಗೆಲುವಿಗೆ ಹೋರಾಡುತ್ತಿದ್ದಾರೆ.

More from Filmibeat

English summary
Bigg Boss 10: Sangeeta raised her voice in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X