BBK10: ಮದುವೆ ಎಂದರೆ ದೂರ ಓಡುತ್ತಿದ್ದ ಸಂಗೀತಾ ಶೃಂಗೇರಿ ಮನಸ್ಸು ಬದಲಿಸಿದ್ದೇಕೆ..?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ನ್ಯೂ ಕ್ರಶ್ ಆಗಿದ್ದಾರೆ. ಅದರಲ್ಲೂ ಆರಂಭದಿಂದಾನೂ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಒಳ್ಳೆಯ ಬಾಂಧವ್ಯವಿದೆ. ನೋಡಿದವರ ಕಣ್ಣಿಗೆ ಇಬ್ಬರು‌ ಪ್ರೇಮಿಗಳು ಎಂಬಂತೆ ಕಾಣಿಸಿಕೊಂಡಿದ್ದರು. ಒಳಗಡೆಯ ಸದಸ್ಯರು ಕೂಡ ಪ್ರೇಮಿಗಳು ಎಂದು ಆಡಿಕೊಳ್ಳುತ್ತಾ ಇದ್ದದ್ದು ಸಂಗೀತಾ‌ ಹಾಗೂ ಕಾರ್ತಿಕ್ ಗಮನಕ್ಕೆ ಬಹಳ ಬೇಗವೇ ಬಂದಿತ್ತು. ಹೀಗಾಗಿಯೇ ಸಂಗೀತಾ ಪದೇ ಪದೆ ನಾವಿಬ್ವರು ಬೆಸ್ಟ್ ಫ್ರೆಂಡ್ಸ್ ಎಂದೇ ಮನವರಿಕೆ ಮಾಡಿದ್ದರು.

ಸಂಗೀತಾ ಎಂದರೆ ಹಲವರಿಗೆ ಸಿಕ್ಕಾಪಟ್ಟೆ ಇಷ್ಟ. ಸೋಶಿಯಲ್ ಮೀಡಿಯಾ ನೋಡಿದರೆ ಅಥವಾ ಕಲರ್ಸ್ ಕನ್ನಡ ಹಂಚಿಕೊಳ್ಳುವ ಪ್ರೋಮೋಗಳಿಗೆ ಬರುವ ಕಮೆಂಟ್ ನೋಡಿದರೇನೆ ಸಂಗೀತಾಗಿರುವ ಫ್ಯಾನ್ ಫಾಲೋವರ್ಸ್ ಬಗ್ಗೆ ತಿಳಿದು ಬಿಡುತ್ತದೆ. ಅಂಥಹ ಫ್ಯಾನ್ಸ್‌ಗೆ ಸಂಗೀತಾ ಬಗ್ಗೆ ಒಂದಷ್ಟು ಪ್ರಶ್ನೆಗಳು ಇರುತ್ತವೆ. ಅದರಲ್ಲೂ ಅವರ ಮದುವೆ ಬಗ್ಗೆ. ವಿಸ್ತಾರ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮದುವೆ, ವರ್ಕೌಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

Bigg Boss Kannada Season 10 Sangeetha Shringeri marriage story

ಮದುವೆ ಬೇಡ ಎಂದುಕೊಂಡಿದ್ದ ಸಂಗೀತಾ

ಸಂಗೀತಾ ಶೃಂಗೇರಿ ಮಾತುಗಳೇ ಖಡಕ್. ಗನ್ ನಿಂದ ಬುಲೆಟ್ ಹೋದಂತೆ ಮಾತನಾಡುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಮಾತುಗಳಿಗೇನೆ ಫ್ಯಾನ್ಸ್ ಆದವರು ಹೆಚ್ಚು. ಆದರೆ, ಸಂಗೀತಾ ಅವರು ಒಂದು ಕಾಲದಲ್ಲಿ ಮದುವೆ ಎಂದರೆ ಆಸಕ್ತಿಯೇ ಇರಲಿಲ್ಲವಂತೆ.

ಸಂಗೀತಾಗೆ ಎಂತಹ ಪಾರ್ಟ್ನರ್ ಬೇಕು?

ಮದುವೆ ಬಗ್ಗೆ ಅಭಿಪ್ರಾಯ ಬದಲಾಗಿರುವ ಬಗ್ಗೆ ಮಾತನಾಡಿದ್ದಾರೆ. "ಈ ಮೊದಲು ಆ ರೀತಿಯ ನಿರ್ಧಾರ ಸಿಲ್ಲಿ ಎನಿಸಿತ್ತು. ಈಗಲೂ ನಂಗೆ ಆ ಮೈಂಡ್ ಸೆಟ್ ಇಲ್ಲ ಅಂತ ಅಲ್ಲ, ಲೈಟಾಗಿ ಇದೆ. ಆದರೆ, ಈಗ ನನ್ನ ಕರಿಯರ್ ನೋಡುವುದು ಬಹಳ ಮುಖ್ಯ ಎಂದಿದ್ದಾರೆ. ಮೊದಲು ಫ್ಯೂಚರ್ ನೋಡಿಕೊಂಡು, ಬಳಿಕ ಅದಕ್ಕೆ ಹೊಂದಿಕೊಳ್ಳುವ ಪಾರ್ಟ್ನರ್ ಸಿಕ್ಕಿದರೆ ಆ ಕಡೆಗೆ ಹೋಗುತ್ತೀನಿ. ಸದ್ಯಕ್ಕೆ ಆ ಯೋಚನೆ ಇಲ್ಲ" ಎಂದಿದ್ದಾರೆ.

ಫಿಟ್ನೆಸ್‌ನಲ್ಲಿ ಎತ್ತಿದ ಕೈ ಸಂಗೀತಾ

ಸಂಗೀತಾ ಶೃಂಗೇರಿ ಅಂದ್ರೆ ಫಿಟ್ನೆಸ್ ನೆನಪಿಗೆ ಬರುತ್ತದೆ. ಇದ್ದಕ್ಕಿದ್ದ ಹಾಗೇ ಸಿಕ್ಕಾಪಟ್ಟೆ ಫಿಟ್ನೆಸ್ ಮೆಂಟೈನ್ ಮಾಡುವುದಕ್ಕೆ ಶುರು ಮಾಡಿದ್ದರು. ಗಂಡು ಮಕ್ಕಳ ಕೈನಲ್ಲಿ ಆಗದೆ‌ ಇರುವ ಫಿಟ್ನೆಸ್ ಗಿಮಿಕ್‌ಗಳನ್ನೆಲ್ಲಾ ಸಂಗೀತಾ ಶೃಂಗೇರಿ ಮಾಡುತ್ತಿದ್ದರು. ಅವರ ಪಿಟ್ನೆಸ್ ವಿಡಿಯೋಗಳೇ ಅದೆಲ್ಲವನ್ನು ಹೇಳುತ್ತದೆ. ಆದರೆ, ಆ ರೀತಿ ಫಿಟ್ನೆಸ್ ಕಾಪಾಡಿಕೊಳ್ಳುವುದಕ್ಕೆ ಕಾರಣ ಏನು ಎಂಬುದನ್ನು ಸಂಗೀತಾ ತಿಳಿಸಿದ್ದಾರೆ.

ಸಂಗೀತಾಗಿರುವ ಆರೋಗ್ಯ ಸಮಸ್ಯೆ ಏನು?

ಸಂಗೀತಾ ಶೃಂಗೇರಿ ಅಷ್ಟೊಂದು ಫಿಟ್ನೆಸ್ ಮೆಂಟೈನ್ ಮಾಡಿದ್ದಕ್ಕೆ ಹಲವರು ಅವರಿಗೆ ಏನೋ ಕಾಯಿಲೆ ಇರಬೇಕು ಎಂದೆಲ್ಲಾ ಹೇಳಿದ್ದರು. ಇದಕ್ಕೆ ಉತ್ತರಿಸಿರುವ ಸಂಗೀತಾ, "ಹೌದು ನನಗೆ ಪಿಸಿಒಡಿ ಸಮಸ್ಯೆ ಇತ್ತು. ಆರಂಭದ ಪಿರಿಯಡ್‌ನಲ್ಲಿಯೇ ಅನಿಯಮಿತವಾಗಿತ್ತು. ಆದರೆ ಆಗ ಅದರ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ಯಾಕಂದ್ರೆ ಆ ಸಮಯದಲ್ಲಿ ಯಾರು ಹೇಳಿಕೊಡುವುದಕ್ಕೆ ಇರಲಿಲ್ಲ. 80 ಹೆಂಗಸರಲ್ಲಿ ಪಿಸಿಒಡಿ ಸಮಸ್ಯೆ ಇರುತ್ತದೆ. ಆದರೆ ಅದನ್ನು ಹೇಳಿಕೊಳ್ಳಲು ಕೆಲವರು ಹಿಂಜರಿಯುತ್ತಾರೆ. ಹೆಣ್ಣು ಮಕ್ಕಳಿಗೆ ಈ ಬಗ್ಗೆ ಶಿಕ್ಷಣ ತುಂಬಾ ಮುಖ್ಯ. ನಾನು ಪೀರಿಯಡ್ ಪ್ರಾಬ್ಲಮ್ ನಾರ್ಮಲ್ ಆಗಲಿ ಅಂತಾನೇ ವರ್ಕೌಟ್ ಆರಂಭಿಸಿದೆ" ಎಂದಿದ್ದಾರೆ.

More from Filmibeat

English summary
BBK about Sangeetha shringeri marriage story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X