ಚಿಕಿತ್ಸೆ ಮುಗಿಸಿಕೊಂಡು ಕನ್ನಡಕ ಧರಿಸಿ ಮತ್ತೆ ದೊಡ್ಮನೆಗೆ ಮರಳಿದ ಸಂಗೀತಾ- ಡ್ರೋನ್ ಪ್ರತಾಪ್!: ಕಣ್ಣಿಗೆ ಏನಾದ್ರು ಆಗಿದ್ಯಾ?
ಬಿಗ್ ಬಾಸ್ ಮನೆಗೆ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ವಾಪಸ್ ಬಂದಿದ್ದಾರೆ. ಗಂಧರ್ವರು ಹಾಗೂ ರಾಕ್ಷಸರ ನಡುವೆ ನಡೆದ ಟಾಸ್ಕ್‌ನಲ್ಲಿ ಗಂಧರ್ವರ ಟೀಮ್ ನಲ್ಲಿ ಇದ್ದಂತಹ ಸಂಗೀತಾ ಹಾಗೂ ಡ್ರೋಣ್ ಪ್ರತಾಪ್ ಅವರ ಕಣ್ಣಿಗೆ ಹಾನಿಯಾಗಿತ್ತು. ಹೀಗಾಗಿ ಇವರನ್ನು ಬಿಗ್ ಬಾಸ್ ಮನೆಯಿಂದ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಸದ್ಯಕ್ಕೆ ಈಗ ಕಣ್ಣಿಗೆ ಕನ್ನಡ ಧರಿಸಿಕೊಂಡು ವಾಪಸ್ ಮರಳಿದ್ದಾರೆ. ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಅವರನ್ನು ನೋಡಿದ ಮನೆಯ ಇತರ ಸದಸ್ಯರು ಶಾಕ್ ಆಗಿದ್ದಾರೆ. ಯಾಕೆ ಈ ರೀತಿ ಆಯಿತು ಎಂದು ತಮ್ಮ ನೇ ತಾವು ಪ್ರಶ್ನಿಸಿಕೊಂಡಂತೆ ಕಾಣುತ್ತಾ ಇದ್ದಾರೆ.
ಕೇವಲ ಕೆಲವೇ ನಿಮಿಷಗಳ ಟಾಸ್ಕ್ ವೈಯಕ್ತಿಕ ದ್ವೇಷಕ್ಕೆ ತಿರುಗಿ ಸಂಗೀತಾ ಹಾಗೂ ಡ್ರೋಣ್ ಪ್ರತಾಪ್ ಗುರಿಯದ್ರಾ ಎಂಬಂತಹ ಅನುಮಾನ ಹಲವರಲ್ಲಿ ಕಾಡುತ್ತಿದೆ. ಮೊದಲಿನಿಂದಲೂ ಸಂಗೀತಾ ಮೇಲೆ ವಿನಯ್ ಗೆ ಕೋಪವಿತ್ತು. ಟಾಸ್ಕ್ ವಿಚಾರ ಬಂದಾಗ ವಿನಯ್ ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ವಿನಯ್ ಸಂಗೀತಾ ಮುಖಕ್ಕೆ ನೀರನ್ನು ಅತಿ ಹೆಚ್ಚಾಗಿ ಹೊಡೆದ ಕಾರಣ ಅದು ಕಣ್ಣಿಗೆ ಹೋಗಿ ಹಾನಿಯನ್ನುಂಟು ಮಾಡಿದೆ ಎಂಬ ಅನುಮಾನ ಕೂಡ ಈಗ ವೀಕ್ಷಕರ ವರ್ಗದಲ್ಲಿ ಹುಟ್ಟಿಕೊಂಡಿದೆ. ಇನ್ನು ಉಸ್ತುವಾರಿ ವಹಿಸಿಕೊಂಡಿದ್ದಂತಹ ಸ್ನೇಹಿತ್ ಕೂಡ ಎಲ್ಲೋ ಒಂದು ಕಡೆ ಎಡವಿದ್ರಾ? ಎಂಬ ಪ್ರಶ್ನೆ ಮೂಡಿದೆ.

ಕುರ್ಚಿಯಿಂದ ಸಂಗೀತಾ ಹಾಗೂ ದ್ರೋಣ್ ಪ್ರತಾಪ್ ಅವರನ್ನು ಎಬ್ಬಿಸುವ ವೇಳೆ ಎದುರಾಳಿ ತಂಡಗಳು ಸಂಗೀತಾರನ್ನ ಟಾರ್ಗೆಟ್ ಮಾಡಿಕೊಂಡಿದ್ದರು. ಇದಕ್ಕಾಗಿ ಆ ನೀರಿನ ಒಳಗೆ ಡಿಟರ್ಜೆಂಟ್ ಪೌಡರ್, ಬಾತ್ ರೂಮ್ ಕ್ಲೀನ್ ಮಾಡುವ ಲಿಕ್ವಿಡ್ ಹಾಗೂ ಖಾರದ ಪುಡಿ ಇನ್ನೂ ಮುಂತಾದ ವಸ್ತುಗಳನ್ನು ಹಾಕಿ ದಾಳಿ ಮಾಡಿದ್ದಾರೆ. ಕೊನೆಗೆ ತಡೆದುಕೊಳ್ಳಲಾಗದೆ ಸಂಗೀತಾ ಕುರ್ಚಿಯಿಂದ ಮೇಲೆ ಎದ್ದು ಕನ್ಪೆಷನ್ಸ್ ರೂಮ್‌ಗೆ ಹೋಗಿ ತಮಗಾದ ನೋವನ್ನು ಹೇಳಿಕೊಂಡಿದ್ದರು. ಆ ವೇಳೆ ಡ್ರೋಣ್ ಪ್ರತಾಪ್ ಹಾಗೂ ಸಂಗೀತಾ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿತ್ತು.
ಸಂಗೀತಾ ನೋಡಿ ತನಿಷಾ- ಕಾರ್ತಿಕ್ ಕಣ್ಣೀರು, ಮೌನವಾಗಿ ನಿಂತುಕೊಂಡ ವಿನಯ್!
ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಇಬ್ಬರೂ ಕೂಡ ಚಿಕಿತ್ಸೆ ಪಡೆದುಕೊಂಡು ಮತ್ತೆ ಬಿಗ್ ಬಾಸ್ ಮನೆಗೆ ಮರಳಿದ್ದಾರೆ. ಲಿವಿಂಗ್ ಏರಿಯಾದಲ್ಲಿ ಮನೆಯ ಇತರ ಸ್ಪರ್ಧಿಗಳು ನಿಂತುಕೊಂಡಿರುವಾಗ ಇಬ್ಬರೂ ಕೂಡ ಗಾಢ ಬಣ್ಣದ ಕನ್ನಡಕ ಧರಿಸಿ ಬಂದಿದ್ದಾರೆ. ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಸ್ಥಿತಿಯನ್ನು ನೋಡಿ ತನಿಷಾ ಹಾಗೂ ಕಾರ್ತಿಕ್ ಕಣ್ಣೀರನ್ನು ಹಾಕಿದ್ದಾರೆ. ತನಿಷಾ ಸಂಗೀತಾರನ್ನು ತಬ್ಬಿಕೊಂಡು ಜೋರಾಗಿ ಅತ್ತಿದ್ದಾರೆ.

ಡ್ರೋಣ್ ಪ್ರತಾಪ್ ಬಂದ ತಕ್ಷಣವೇ ವರ್ತೂರು ಸಂತೋಷ್ ಹೋಗಿ ಪ್ರತಾಪ್ ಅವರ ಆರೋಗ್ಯವನ್ನು ವಿಚಾರಿಸಿಕೊಂಡಿದ್ದಾರೆ. ಈ ಕಡೆ ಸಂಗೀತಾರನ್ನು ಕಾರ್ತಿಕ್ ತನಿಷಾ ಇಬ್ಬರು ಹೋಗಿ ಏನಾಗಿದೆ ಎಂದು ಕೇಳಿದ್ದಾರೆ ಇದಕ್ಕೆ ಸಂಗೀತಾ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. ಇನ್ನು ತನಿಷಾ ಹಾಗೂ ಕಾರ್ತಿಕ್ ಇಬ್ಬರೂ ಕೂಡ ಸಂಗೀತಾ ಪರಿಸ್ಥಿತಿಯನ್ನ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಕಾರ್ತಿಕ್ ಗೆ ತನಿಷಾ ಸಮಾಧಾನ ಮಾಡುತ್ತಾ ತಾವು ಕೂಡ ಕಾರ್ತಿಕ್ ಜೊತೆಯಲ್ಲಿ ಕುಳಿತುಕೊಂಡು ಅಳುತ್ತಿದ್ದಾರೆ.
ಸಿರಿಗೆ ಸಂಗೀತಾ ಹೇಳಿದ್ದೇನು..? ಕಣ್ಣು ಕಾಣುತ್ತಿದೆ ಎಂದ ಪ್ರತಾಪ್
ಡ್ರೋನ್ ಪ್ರತಾಪ್ ಮಲಗಿದ ಕಡೆ ಬಂದ ವರ್ತೂರು ಸಂತೋಷ್ ಕಣ್ಣಿಗೆ ಏನಾಗಿದೆ ಎಂದು ಕೇಳಿದ್ದಾರೆ. ಇದಕ್ಕೆ ಡ್ರೋನ್ ನನಗೆ ಕಣ್ಣು ಸ್ವಲ್ಪ ಕಾಣಿಸುತ್ತಾ ಇದೆ ಎಂದಷ್ಟೇ ಉತ್ತರ ನೀಡಿದ್ದಾರೆ. ಇನ್ನೂ ಸಿರಿ ಸಂಗೀತಾ ಬಳಿ ಬಂದವರೇ ಹೇಗಿದ್ದೀಯಾ ಎಂದು ಕೇಳಿದ್ದಕ್ಕೆ ಸಂಗೀತಾ ಫೈನ್ ಎಂದಷ್ಟೇ ಉತ್ತರ ಕೊಟ್ಟಿದ್ದಾರೆ. ಇನ್ನು ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಪರಿಸ್ಥಿತಿಯನ್ನು ಮನೆಯ ಇತರ ಸದಸ್ಯರು ಬಹಳ ಆತಂಕದಿಂದ ನೋಡುತ್ತಾ ಇದ್ದಾರೆ. ವಿನಯ್ ಅಂತೂ ಪುಲ್ ಸೈಲೆಂಟ್ ಆಗಿ ಹೋಗಿದ್ದಾರೆ. ಇಂದು ಸಂಜೆ ಕಿಚ್ಚನ ಪಂಚಾಯಿತಿ ಇದ್ದು ಯಾರ್ಯಾರಿಗೆ ಸುದೀಪ್ ಗ್ರಹಚಾರ ಬಿಡಿಸುತ್ತಾರೆ ನೋಡಬೇಕಾಗಿದೆ.


Click it and Unblock the Notifications











