ಕಾರ್ತಿಕ್, ತನಿಷಾ, ಸಂಗೀತಾ ಸ್ನೇಹದಲ್ಲಿ ಬಿರುಕು: ಕಾರ್ತಿಕ್‌ನನ್ನು ದ್ವೇಷಿಸುತ್ತಿರುವ ಚಾರ್ಲಿ ಬೆಡಗಿ!

By Shruthi Harishgowda

ಬಿಗ್ ಬಾಸ್ ಸೀಸನ್ 10 ಶುರುವಾದ ವೇಳೆ ಕಾರ್ತಿಕ್ ಹಾಗೂ ಸಂಗೀತಾ, ತನಿಷಾ, ಅಸಮರ್ಥರಾಗಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟರು. ಇದೇ ವೇಳೆ ಮೂವರು ಸಹ ಉತ್ತಮ ಗೆಳೆಯರಾಗಿ ಒಬ್ಬರಿಗೊಬ್ಬರು ರಕ್ಷಣೆ ಮಾಡಿಕೊಂಡೆ ಒಂದಷ್ಟು ದಿನ ಆಟವನ್ನು ಆಡುತ್ತಾ ಬಂದರು. ಆದರೆ ಒಂದು ಸಣ್ಣ ಭಿನ್ನಾಭಿಪ್ರಾಯ ಮೂವರ ನಡುವೆಯೂ ಕೂಡ ಗೊಂದಲವನ್ನೇ ಸೃಷ್ಟಿಸಿ. ಈಗ ಜಗಳವಾಡಿ ಸ್ನೇಹವನ್ನೇ ಕಳೆದುಕೊಳ್ಳುವ ಅಂತ್ಯಕ್ಕೆ ಬಂದು ನಿಂತಿದೆ. ಸಂಗೀತಾ ಯಾವಾಗ ವಿನಯ್ ತಂಡಕ್ಕೆ ಒಂದು ವಾರ ಆಟವಾಡಲು ಹೋದರೋ ಅಂದಿನಿಂದಲೇ ತನಿಷಾ ಸಂಗೀತಾ ಅವರನ್ನ ದ್ವೇಷ ಮಾಡಲು ಶುರು ಮಾಡಿದ್ದರು.

ಇನ್ನು ಕಾರ್ತಿಕ್ ಸಹ ಸಂಗೀತಾ ಮೇಲೆ ಎಷ್ಟೇ ಒಲವಿದ್ದರೂ ಕೂಡ ಸಂಗೀತಾ ವಿನಯ್ ತಂಡಕ್ಕೆ ಹೋಗಿ ಬಂದ ಮೇಲೆ ಅಷ್ಟಕ್ಕಷ್ಟೇ ಎಂದು ಮಾತನಾಡಿಸುತ್ತಾ ಇದ್ದರು. ಇನ್ನೂ ಈ ವೇಳೆ ಸಂಗೀತಾ ಕಾರ್ತಿಕ್ ಯಾಕೋ ವಿನಯ್ ತಂಡಕ್ಕೆ ಬಕೆಟ್ ಹಿಡಿಯುತ್ತಾ ಇದ್ದಾರೆ ಎಂಬ ಮಾತನ್ನು ಆಡಿದರು. ಆದರೆ ಈ ಮಾತು ಕಾರ್ತಿಕ್‌ಗೆ ಇಷ್ಟವಾಗಿಲ್ಲ ಇದಕ್ಕಾಗಿ ಸಂಗೀತಾ ಸ್ನೇಹದಿಂದ ದೂರವಾಗಿದ್ದರು. ನಾನು ಯಾರಿಗೂ ಕೂಡ ಬಕೆಟ್ ಹಿಡಿಯುತ್ತಾ ಇಲ್ಲ ನನ್ನನ್ನು ಸಂಗೀತಾಯಿಂದ ಕಳೆದರೆ ಜೀರೋ ಎಂದು ಅಂದವರಿಗೆ ಉತ್ತರವನ್ನು ಕೊಡುತ್ತೇನೆ. ಇನ್ಮುಂದೆ ಸಂಗೀತಾ ಸಂಗೀತ ಜೊತೆಗೆ ಇರುವುದಿಲ್ಲ ಎಂದಿದ್ದರು. ಆದರೆ ತನಿಷಾ ಜೊತೆಗೆ ತಮ್ಮ ಸ್ನೇಹವನ್ನು ಮುಂದುವರಿಸಿದ್ದರು.

Bigg Boss Kannada Season 10: Sangeetha Sringeri wants to end friendship with Karthik Mahesh

ಇನ್ನು ಕಾರ್ತಿಕ್ ಸಂಗೀತಾ ಕ್ಯಾಪ್ಟನ್ ಆದ ಮೇಲೆ ಸಂಗೀತಾ ಆಡಿದ ಪ್ರತಿಯೊಂದು ಮಾತಿಗೂ ಕೂಡ ಮೌನವಾಗೆ ಇದ್ದರು. ಆದರೆ ಕೆಲವೊಂದು ಮಾತುಗಳು ಕಾರ್ತಿಕ್‌ಗೆ ಇಷ್ಟವಾಗಿಲ್ಲ ಹೀಗಾಗಿ ಸಂಗೀತಾ ಮೇಲೆ ಕಿಡಿಕಾರಲು ಶುರು ಮಾಡಿದರು. ಕಾರ್ತಿಕ್ ಸಂಗೀತಾನನ್ನು ಬಿಗ್ ಬಾಸ್ ಮನೆಯಲ್ಲಿರುವ ಶನಿ ಎಂದು ಕರೆದಿದ್ದರು. ಈ ಮಾತು ಕಿಚ್ಚ ಸುದೀಪ್ ರವರ ಮುಂದೆ ಚರ್ಚೆಗೆ ಬಂದಾಗ ಸಂಗೀತಾಗೆ ಕಾರ್ತಿಕ್ ಮೇಲೆ ಇರುವ ಅಭಿಪ್ರಾಯವೇ ಬದಲಾಗಿ ಹೋಯಿತು. ಕ್ಯಾಪ್ಟನ್ ರೂಮ್‌ಗೆ ಹೋಗಿರುವ ಸಂಗೀತಾ ಬೇಸರದಿಂದಲೇ ಹೊರಬಂದರು.

ಹೊರಗಡೆ ಹೋದ ಮೇಲು ಮಾತಾಡಿಸೋಲ್ಲ: ಮುರಿದು ಬಿತ್ತು ಕಾರ್ತಿಕ್ - ಸಂಗೀತಾ ಸ್ನೇಹ

ಕಾರ್ತಿಕ್ ಹಾಗೂ ಸಂಗೀತಾ ನಡುವಿನ ಸ್ನೇಹ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಸೂಪರ್ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್ ಅವರು ಪ್ರತಿಯೊಬ್ಬರಿಗೂ ಕೂಡ ಹೊಸ ಹೊಸ ಟಾಸ್ಕ್‌ ನೀಡುತ್ತಾರೆ. ಇಂದು ಕೂಡ ನೀವು ಯಾರ ಫ್ರೆಂಡ್ಶಿಪ್ ಅನ್ನು ಮುರಿದುಕೊಳ್ತೀರ ಯಾರ ಫ್ರೆಂಡ್ಶಿಪ್ ಅನ್ನು ಮುಂದುವರಿಸುತ್ತೀರಾ ಎಂಬ ಹೊಸ ಆಟ ಆಡಿಸಿದ್ದಾರೆ. ಇಲ್ಲಿ ಕಾರ್ತಿಕ್ ನಾನು ಸಂಗೀತಾ ಜೊತೆಗೆ ಸ್ನೇಹವನ್ನು ಮುಂದುವರಿಸಲು ಒಪ್ಪಿಗೆ ಇದೆ ಎಂದಿದ್ದಾರೆ. ಆದರೆ ಸಂಗೀತಾಗೆ ಕಾರ್ತಿಕ್ ಜೊತೆ ಸ್ನೇಹ ಮುಂದುವರಿಸಲು ಇಷ್ಟವಿಲ್ಲ ನಾನು ಸ್ನೇಹವನ್ನು ಮುರಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Bigg Boss Kannada Season 10: Sangeetha Sringeri wants to end friendship with Karthik Mahesh

ನಾನು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋದ ಮೇಲು ಕೂಡ ಕಾರ್ತಿಕ್ ಜೊತೆ ಗೆಳೆತನದಿಂದ ಇರೋದಿಲ್ಲ. ಯಾವುದೇ ರೀತಿಯ ಪ್ಯಾಚ್ ಅಪ್ ಮಾಡಿಕೊಳ್ಳಲಿಲ್ಲ ಎಂದು ಸಂಗೀತಾ ಕಡ್ಡಿ ತುಂಡು ಮಾಡಿದಂತೆ ಇಂದಿಗೆ ನಮ್ಮಿಬ್ಬರ ಸ್ನೇಹವಮುಗಿಯಿತು ಎಂಬ ಮಾತು ಆಡಿದ್ದಾರೆ. ಸಂಗೀತಾ ಆಡಿದ ಮಾತುಗಳು ಕಾರ್ತಿಕ್‌ಗೆ ಬೇಸರವನ್ನ ತರಿಸಿದೆ. ಎಲ್ಲೋ ಒಂದು ಕಡೆ ಕಾರ್ತಿಕ್ ಒಂಟಿಯಾಗಿ ಉಳಿದುಕೊಳ್ಳುತ್ತೇನೆ ಎಂದು ಯೋಚನೆ ಮಾಡುತ್ತಾ ಇದ್ದಾರೆ. ಇಷ್ಟು ದಿನ ಎಲ್ಲರೂ ಸ್ನೇಹಿತರಂತೆ ಇದ್ದು ಇಂದು ದ್ವೇಷ ಮಾಡಲು ಶುರು ಮಾಡಿದ್ದು ಕಾರ್ತಿಕ್ ಗೆ ನುಂಗಲಾಗದ ತುತ್ತಾಗಿದೆ.

ಕಾರ್ತಿಕ್ ಸ್ನೇಹ ಬೇಡವೆಂದ ತನಿಷಾ ಕುಪ್ಪಂಡ

ಕಾರ್ತಿಕ್ ಹಾಗೂ ತನಿಷಾ ಇಬ್ಬರೂ ಕೂಡ ಉತ್ತಮವಾದ ಗೆಳೆತನ ಹೊಂದಿದ್ದರು. ಆದರೆ ಈಗ ಕಾರ್ತಿಕ್ ಅಂದು ತನಿಷಾ ಅವರನ್ನು ನಾಮಿನೇಟ್ ಮಾಡಿದ್ದಕ್ಕಾಗಿ ತನಿಷಾ ಅವರಿಗೂ ಕೂಡ ಕಾರ್ತಿಕ್ ಫ್ರೆಂಡ್ಶಿಪ್ ಬೇಡವಾಗಿದೆ. ಹೀಗಾಗಿ ನಾನು ಕಾರ್ತಿಕ್ ಜೊತೆಗಿನ ಗೆಳೆತನವನ್ನು ಮುರಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಕಾರ್ತಿಕ್ ಜೊತೆಗೆ ಸಂಗೀತಾ ಹಾಗೂ ತನಿಷಾ ಬಹಳಷ್ಟು ಕ್ಲೋಸ್ ಆಗಿ ಇದ್ದರು. ಈ ಮೂವರು ಬೇರೆ ಬೇರೆಯಾಗಿದ್ದಾರೆ.

ವಿನಯ್ ಮೊದಲಿನಿಂದಲೂ ಕೂಡ ನಮ್ರತಾ ಜೊತೆಗೆ ಸ್ನೇಹದಿಂದ ಇದ್ದರು. ಈಗಲೂ ಕೂಡ ನಮ್ರತಾ ಜೊತೆಗಿನ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ. ಈಗ ಕಾರ್ತಿಕ್ ಎಲ್ಲರಿಂದಲೂ ಕೂಡ ದೂರಾಗಿದ್ದಾರೆ. ದೊಡ್ಮನೆಯಲ್ಲಿ ಒಂಟಿ ಪಯಣಿಗರಾಗಿದ್ದಾರೆ.

More from Filmibeat

English summary
Bigg Boss Kannada 10: Sangeetha and Tanisha wants to end friendship with Kartik.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X