BBK10: ಮಹಿಳೆಯರ ಹಾರ್ಟ್ ಬ್ರೇಕ್; 2ನೇ ರನ್ನರ್ ಅಪ್ ಬಳಿಕ ಸಂಗೀತಾ ಹೇಳಿದ್ದೇನು?
ಬಿಗ್ ಬಾಸ್ ಶೋನಲ್ಲಿ ಶೃತಿ ಅವರನ್ನು ಬಿಟ್ಟರೆ ಬೇರೆ ಯಾವ ಮಹಿಳಾ ಸ್ಪರ್ಧಿಗಳು ಜಯ ಗಳಿಸಿರಲಿಲ್ಲ. ಈ ಸೀಸನ್‌ನಲ್ಲಿ ಖಂಡಿತ ಮಹಿಳಾ ಸದಸ್ಯರೇ ಟ್ರೋಫಿ ಗೆಲ್ಲುತ್ತಾರೆ ಎಂದುಕೊಂಡಿದ್ದರು. ಆದರೆ, ಅದೆಲ್ಲವೂ ಉಲ್ಟಾ ಆಗಿದೆ.
ಸುಮಾರು ಜನರ ನಿರೀಕ್ಷೆಯಲ್ಲಿ ಸುದೀಪ್ ಅವರು ಕಡೆ ಗಳಿಗೆಯಲ್ಲಿ ಎತ್ತುವ ಕೈ ಅಕ್ಕ-ತಮ್ಮ ಅಂದರೆ ಸಂಗೀತಾ ಹಾಗೂ ಪ್ರತಾಪ್ ಅವರದ್ದು ಆಗಿರುತ್ತದೆ ಎಂದುಕೊಂಡಿದ್ದರು. ಅದರಂತೆ ಫಿನಾಲೆ ತನಕ ಸಂಗೀತಾ ಹಾಗೂ ಪ್ರತಾಪ್ ಜರ್ನಿ ಮುಂದುವರೆದಿತ್ತು. ಅದರಲ್ಲಿ ಇನ್ನೊಬ್ಬರು ಕೂಡ ಇದ್ದರು. ಅವರೇ ಕಾರ್ತಿಕ್. ಈ ಇಬ್ಬರ ನಡುವಿನ ಸ್ಪರ್ಧೆಯಲ್ಲಿ ಸಂಗೀತಾ ಔಟ್ ಆದರು.

ಬಿಗ್ ಬಾಸ್ ಮನೆಯಿಂದ ಸಂಗೀತಾ ಔಟ್
ಸಂಗೀತಾ, ಕಾರ್ತಿಕ್, ಪ್ರತಾಪ್ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ನಿಂತಿದ್ದರು. ಆದರೆ, ಅದರಲ್ಲೂ ಒಬ್ಬರು ಔಟ್ ಆಗಬೇಕಿತ್ತು. ಟಾಸ್ಕ್ ಶುರು ಮಾಡಿದ ಬಿಗ್ ಬಾಸ್ ಗ್ರೀನ್ ಅಂಡ್ ರೆಡ್ ಲೈಟ್ ಆನ್ ಆಗುವ ಬಾಕ್ಸ್‌ನಲ್ಲಿ ಮೂರು ಜನರನ್ನು ನಿಲ್ಲಿಸಲಾಗಿತ್ತು. ಆದರೆ, ಕೊನೆಯಲ್ಲಿ ಸಂಗೀತಾ ತಲೆ ಮೇಲೆ ರೆಡ್ ಲೈಟ್ ಸ್ಟಾಪ್ ಆಗಿತ್ತು. ಈ ಎಲಿಮಿನೇಷನ್ ಸಿಕ್ಕಾಪಟ್ಟೆ ಶಾಕ್ ನೀಡಿತ್ತು.
ಸಂಗೀತಾ ಔಟ್ ಆಗಿದ್ದಕ್ಕೆ ಸುಚಿ ಕಣ್ಣೀರು
ಸಂಗೀತಾ ಆಟ ನೋಡಿದ ಎಲ್ಲರೂ ಈ ಸಲ ಮಹಿಳಾ ಸ್ಪರ್ಧಿಯೇ ಗೆಲ್ಲುತ್ತಾರೆ ಎಂದುಕೊಂಡಿದ್ದರು. ಅವರ ಮನೆಯವರಂತು ಮಗಳ ಗೆಲುವಿಗಾಗಿ ಕಾಯುತ್ತಿದ್ದರು. ಆದರೆ, ಈ ಎಲಿಮಿನೇಷನ್ ಅವರ ಅತ್ತಿಗೆ ಸುಚಿ ಅವರಿಗೆ ನೋವುಂಟು ಮಾಡಿದೆ. ಕಣ್ಣಲ್ಲಿ ನೀರು ತುಂಬಿ ಹರಿದಿದೆ.
ಮಹಿಳೆಯರಿಗೆ ಕಿಚ್ಚ ಹೇಳಿದ್ದೇನು?
ಎಷ್ಟೋ ಜನಕ್ಕೆ ಇದು ಹಾರ್ಟ್ ಬ್ರೇಕ್ ಆಗಿರುತ್ತೆ. ವೋಟ್ ಹಾಕಿರೋದು ನೀವೆ. ಯಾರೂ ನಿರೀಕ್ಷೆ ಮಾಡಿರಲಿಲ್ಲ ಅವರು ಹೊರಗೆ ಬರುತ್ತಾರೆಂದು. ಈ ಸಲ ಖಂಡಿತ ಮಹಿಳಾ ಸ್ಪರ್ಧಿ ಗೆಲ್ಲುತ್ತಾರೆ ಎಂದು ಭಾವಿಸಿದ್ರಿ. ಆದರೆ, ಇಂದು ಕೊನೆ ಗಳಿಗೆಯಲ್ಲಿ ಅವರು ಹೊರಗೆ ಬಂದಿದ್ದಾರೆ. ಕರ್ನಾಟಕದ ಕ್ರಶ್ ಆಗಿ ಬಂದಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಹೊರ ಬಂದ ಸಂಗೀತಾ ಮಾತು
ಸಂಗೀತಾ ಕೂಡ ಸುದೀಪ್ ಅವರ ಒಂದು ಕೈನಲ್ಲಿ ನನ್ನ ಕೈ ಇರುತ್ತೆ ಎಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ನಿರೀಕ್ಷೆಯೇ ಮಾಡದಂತೆ ಈಗ ಸಂಗೀತಾ ಹೊರಗೆ ಬಂದಿದ್ದಾರೆ. ಈ ವೇಳೆ ಮಾತನಾಡಿದ ಸಂಗೀತಾ, "ನಿಮಗೋಸ್ಕರ ಆಡುತ್ತಾ ಹೋದೆ. ನೀವೂ ನನ್ನ ನಂಬಿದ್ದಕ್ಕೆ ಥ್ಯಾಂಕ್ಸ್. ಸುಚಿ ಕಣ್ಣೀರು ಹಾಕಬೇಡ. ಪ್ರತಿ ಸಲ ಸಪೋರ್ಟ್ ಮಾಡ್ತಾ ಇದ್ರಿ. ಇಲ್ಲಿವರೆಗೂ ಬರೋದಕ್ಕೂ ಸುಚಿ ಕಾರಣ. ನಾನು ಟ್ರೋಫಿ ಗೆಲ್ಲದೆ ಇರಬಹುದು. ಆದರೆ, ನಿಮ್ಮೆಲ್ಲರ ಮನಸ್ಸನ್ನು ಗೆದ್ದಿದ್ದೇನೆ. ಇಡೀ ಜರ್ನಿ ಮೆಮೋರಿಯಾಗಿ ಉಳಿಯುತ್ತದೆ. ಬಿಗ್ ಬಾಸ್ ಬಗ್ಗೆ ಕಂಪ್ಲೀಟ್ ಮನಸ್ಸು ಬದಲಾಗಿದೆ. ಇಲ್ಲು ಏನನ್ನು ಪಡೆದುಕೊಂಡಿದ್ದೀನೋ ಅದನ್ನು ಲೈಫ್ ಲಾಂಗ್ ಉಳಿಸಿಕೊಂಡು ಹೋಗುತ್ತೀನಿ. ಕರ್ನಾಟಕದ ಕ್ರಶ್ ಎಂಬ ಬಿರುದು ಕೊಟ್ಟಿದ್ದೀರಿ. ಅದಕ್ಕಿಂತ ಮುಕ್ತಾಯ ಏನಿಲ್ಲ. ನಾನಿಲ್ಲಿ ಬರುವುದಕ್ಕೆ ಮುಖ್ಯ ಕಾರಣ ಸುಚಿ. ಬಿಗ್‌ಬಾಸ್‌ಗೆ ಹೋಗುವುದೇ ಇಲ್ಲ ಎಂದು ಹೇಳುತ್ತಿದ್ದೆ. ಆದರೆ ಈಗ ಮನಸ್ಸು ಬದಲಾಗಿದೆ" ಎಂದಿದ್ದಾರೆ. ಸುದೀಪ್ ಅವರು ಕೂಡ ಜರ್ನಿಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ, ಏಳು ಲಕ್ಷ ಬಹುಮಾನ ನೀಡಿದ್ದಾರೆ.


Click it and Unblock the Notifications











