ವಿನಯ್ ಜೊತೆ ಸೇರಿ ಮೋಸ ಮಾಡಿ ಕ್ಯಾಪ್ಟನ್ ಆದ್ರಾ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್‌?: ಕ್ಯಾಪ್ಟನ್ ಕೋಣೆಗೆ ಬೀಗ!

ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಆರಂಭವಾದಾಗಿನಿಂದ ಸುದ್ದಿಯಲ್ಲಿರುವುದು ಹಳ್ಳಿಕಾರ್ ಒಡೆಯ, ಮಾಡ್ರನ್ ರೈತ ಎಂದು ಕರೆಸಿಕೊಳ್ಳುವ ವರ್ತೂರ್ ಸಂತೋಷ್‌. ಇದೇ ಮೊದಲ ಬಾರಿಗೆ ಬಿಗ್‌ ಬಾಸ್‌ನಲ್ಲಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದರು. ಆದರೆ, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಅವರ ಕ್ಯಾಪ್ಟನ್ಸಿ ಆಯ್ಕೆ ಮೇಲೆ ಪ್ರಶ್ನೆ ಬಂದಿದ್ದು, ಮುಖಭಂಗ ಎದುರಿಸಿದ್ದಾರೆ.

ಪ್ರತಿ ಶುಕ್ರವಾರದಂತೆ ಈ ವಾರವೂ ಕೂಡ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಅದರಲ್ಲಿ ಮೊದಲ ಬಾರಿಗೆ ವರ್ತೂರ್ ಸಂತೋಷ್‌ ಕ್ಯಾಪ್ಟನ್ ಮನೆಯ ಆಗಿ ಆಯ್ಕೆ ಕೂಡ ಆಗಿದ್ದಾರೆ. ಆದರೆ, ಅವರ ಆಯ್ಕೆಯಲ್ಲಿ ಮೋಸ ನಡೆದಿದೆ ಎಂಬುದು ಕಿಚ್ಚ ಸುದೀಪ್ ಮಾತು. ಇದೇ ವಿಷಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಯಾಗಿದ್ದು, ಮೋಸದ ಆಟ ಎಂದು ಸುದೀಪ್ ಸಕತ್ ಕಿಡಿಕಾರಿದ್ದಾರೆ.

 Bigg Boss Kannada Season 10: Shocking.. Kichcha Sudeep Locks Captain Room in weekend with kichcha

ವಿನಯ್ ಜೊತೆ ಸೇರಿ ಮೋಸ ಮಾಡಿದ ವರ್ತೂರ್ ಸಂತೋಷ್!

ಶುಕ್ರವಾರ ನಡೆದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ವರ್ತೂರು ಸಂತೋಷ್ ಅವರ ಗೆಲ್ಲಬೇಕು ಎಂದು ವಿನಯ್ ಸಹಾಯ ಮಾಡಿದ್ದಾರೆ. ವರ್ತೂರ್ ಜೊತೆಗೆ ಹಾಗೂ ಮೈಕಲ್ ಅಜಯ್‌ಗೂ ವಿನಯ್ ಸಹಾಯ ಮಾಡಿದ್ದರು. ಇದು ಕಿಚ್ಚನ ಕೆಂಗಣ್ಣಿಗೆ ಗುರಿಯಾಗಿದೆ. ಟಾಸ್ಕ್‌ನಲ್ಲಿ ಚೇರ್ ಮೇಲೆ ಕುಳಿತ್ತಿದ್ದ ವರ್ತೂರ್ ಹಾಗೂ ಮೈಕಲ್ ಅವರಿಗೆ ಹೊರಗಡೆಯಿಂದ ಸಮಯ ಎಣಿಸಿ ವಿನಯ್ ಗೌಡ ಸಿಗ್ನಲ್ ನೀಡಿದ್ದರು. ಈ ಮೋಸವನ್ನು ಕಿಚ್ಚ ಪ್ರಶ್ನಿಸಿದ್ದಾರೆ.

ಬಿಗ್ ಬಾಸ್ ನೀಡಿದ್ದ ಟಾಸ್ಕ್ ಗೆದ್ದು ವರ್ತೂರು ಸಂತೋಷ್ ದೊಡ್ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ ಇದು ಮೋಸದ ಆಟ. ಅವರು ನ್ಯಾಯವಾಗಿ ಆಟ ಗೆಲ್ಲಲಿಲ್ಲ. ಹೀಗಾಗಿಯೇ ಮೋಸದ ಆಟದಿಂದ ಗೆದ್ದು ಕ್ಯಾಪ್ಟನ್ ಆದ ವರ್ತೂರು ಸಂತೋಷ್ ಅವರ ಕ್ಯಾಪ್ಟನ್ ಪಟ್ಟವನ್ನು ಸುದೀಪ್ ಕಿತ್ತು ಹಾಕಿದ್ದಾರೆ.

ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ ಕಿಚ್ಚ ಸುದೀಪ್!

ಕಲರ್ಸ್ ಕನ್ನಡ ಹೊರ ಬಿಟ್ಟಿರುವ ಹೊಸ ಪ್ರೋಮೋದಲ್ಲಿ ನಟ ಕಿಚ್ಚ ಸುದೀಪ್ ವರ್ತೂರ್ ಅವರನ್ನು, 'ನೀವು ನ್ಯಾಯವಾಗಿ ಟಾಸ್ಕ್ ಗೆದ್ದಿದ್ದಿರಾ ವರ್ತೂರ್..? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ನಮ್ರತಾ ಗೌಡ, 'ವಿನಯ್ ಹೊರಗಿನಿಂದ ಕೌಂಟ್ ಮಾಡಿ ವರ್ತೂರು ಸಂತೋಷ್‌ ಅವರುಗೆ ಸಿಗ್ನಲ್ ಕೊಟ್ಟರು' ಎಂದು ಹೇಳಿದ್ದಾರೆ. ಹೀಗಾಗಿ ಕೋಪಗೊಂಡ ಸುದೀಪ್ ಕ್ಯಾಪ್ಟನ್ ಪಟ್ಟದಿಂದ ವರ್ತೂರ್ ಅವರನ್ನು ಹೊರಹಾಕಿದ್ದಾರೆ.

 Bigg Boss Kannada Season 10: Shocking.. Kichcha Sudeep Locks Captain Room in weekend with kichcha

ಕ್ಯಾಪ್ಟನ್ ಸ್ಥಾನದ ಮೇಲೆ ಗೌರವ ಬರುವವರೆಗೆ ಈ ಮನೆಯಲ್ಲಿ ಕ್ಯಾಪ್ಟನ್ ಇರುವುದಿಲ್ಲ ಎಂದಿರುವ ಸುದೀಪ್ ಆ ರೂಂಗೆ ಬೀಗ ಹಾಕಿಸಿದ್ದಾರೆ. ಕಳೆದ ವಾರದ ಕ್ಯಾಪ್ಟನ್ ಸ್ನೇಹಿತ್ ಕ್ಯಾಪ್ಟನ್ ರೂಂಗೆ ಬೀಗ ಹಾಕಿದ್ದಾರೆ. ಹೀಗಾಗಿ ಈಗ ದೊಡ್ಮನೆಯಲ್ಲಿ ಕ್ಯಾಪ್ಟನ್ ಎನ್ನುವವರು ಯಾರು ಇಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಂದಿನ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸಿಗಲಿದೆ.

ಕ್ಯಾಪ್ಟನ್ಸಿ ಟಾಸ್ಕ್ ಏನಿತ್ತು...?

ಕ್ಯಾಪ್ಟನ್ಸಿ ಟಾಸ್ಕ್ ಏನಿತ್ತು ಎಂದರೆ, ಒಂದು ಚೇರ್ ಮೇಲೆ ಕುಳಿತು ಸ್ವರ್ಧಿಗಳು 13 ನಿಮಿಷ ಏಣಿಸಬೇಕು. ಚೇರ್ ಮೇಲೆ ಸದಸ್ಯರನ್ನು ಇತರ ಸದಸ್ಯರು ತಿರುಗಿಸಬೇಕು. ನಂಬರ್ ಎಣಿಸುವಾಗ ಮನೆ ಮಂದಿ ಡಿಸ್ಟರ್ಬ್ ಮಾಡಬಹುದು. ಅವರು ಸರಿಯಾಗಿ ಕೌಂಟ್ ಮಾಡದ ರೀತಿ ನೋಡಿಕೊಳ್ಳಬೇಕು. ಅದನ್ನು ಮೀರಿ ಹದಿಮೂರು ನಿಮಿಷದ ಆಸುಪಾಸಿನಲ್ಲಿ ಕೌಂಟ್ ಮಾಡಿದರೆ ಅವರು ಕ್ಯಾಪ್ಟನ್ ಆಗುತ್ತಾರೆ ಎಂದಿತ್ತು. ಇದರಲ್ಲಿ ಗೆಲ್ಲಲ್ಲು ವರ್ತೂರ್ ಸಂತೋಷ್ ಮತ್ತು ಮೈಕಲ್‌ಗೆ ವಿನಯ್ ಗೌಡ ಸಹಾಯ ಮಾಡಿದ್ದರು.

More from Filmibeat

English summary
Kichcha Sudeep locks captain room in Bigg Boss kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X