Bigg Boss: ಟಾಸ್ಕ್‌ನಲ್ಲಿ ಸಿರಿಯನ್ನು ತಳ್ಳಿದ ಸ್ನೇಹಿತ್.. ಮನೆಯಲ್ಲಿ ಉಳಿದುಕೊಳ್ಳಲು ಈ ಹೋರಾಟವೇ?

By ಫಿಲ್ಮಿಬೀಟ್ ಡೆಸ್ಕ್

ಬಿಗ್ ಬಾಸ್‌ನಲ್ಲಿ ಏನಾದರೂ ಒಂದು ಟಾಸ್ಕ್ ನಡೆಯುತ್ತಲೇ ಇರುತ್ತೆ. ಕೆಲವೊಮ್ಮೆ ಚಾಲೆಂಜಿಂಗ್ ಅಂತ ಅನಿಸಿದರೆ, ಮತ್ತೆ ಕೆಲವೊಮ್ಮೆ ಮಸ್ತ್ ಮಜಾ ಕೊಡುತ್ತೆ. ಈಗಾಗಲೇ ಸ್ಪರ್ಧಿಗಳು 50 ದಿನಗಳನ್ನು ಪೂರೈಸಿದ್ದರಿಂದ ಟಾಸ್ಕ್‌ನಲ್ಲಿ ಜೋಷ್‌ ಆಗಿ ಭಾಗವಹಿಸುತ್ತಿದ್ದಾರೆ. ಬಿಗ್ ಬಾಸ್ ಕೂಡ ಮನೆಯೊಳಗಿರುವ ಸ್ಪರ್ಧಿಗಳು ಟಫ್ ಆಗಿರುವ ಟಾಸ್ಕ್‌ಗಳನ್ನೇ ನೀಡುತ್ತಿದೆ.

ಇಂದು (ನವೆಂಬರ್ 29) ಬಿಗ್ ಬಾಸ್ ಮನೆಯೊಳಗೆ ಬೆಳಗ್ಗೆನೇ ಕೇಕ್ ತಿಂದು ರಸಪ್ರಶ್ನೆ ಆಟದ ಟಾಸ್ಕ್ ಅನ್ನು ನೀಡಲಾಗಿತ್ತು. ಇದರಲ್ಲಿ ಮೈಕಲ್ ಅಜಯ್ ಕನ್ನಡದಲ್ಲಿಯೇ ಮಾತಾಡಿ ಬಿಗ್ ಬಾಸ್ ಮನೆಯ ಸದಸ್ಯರನ್ನು ಹಾಗೂ ವೀಕ್ಷಕರ ಗಮನವನ್ನು ಸೆಳೆದಿದ್ದರು. ಆದರೆ, ಎರಡನೇ ಟಾಸ್ಕ್ ಮಾತ್ರ ಸಖತ್ ಚಾಲೆಂಜಿಂಗ್ ಆಗಿತ್ತು.

bigg-boss-kannada-10-siri-snehith

ಬಿಗ್ ಬಾಸ್ ಮನೆಯೊಳಗಿರುವ ಸದಸ್ಯರನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಬಳಿಕ ಅವರಿಗೆ ಕಾಲಿಗೆ ಹಗ್ಗ ಕಟ್ಟಿ ಬಾಲ್ ಅನ್ನು ನಂಬರ್ ಇರುವ ಜಾಗಕ್ಕೆ ಹಾಕಲಾಗಿತ್ತು. ಈ ಟಾಸ್ಕ್ ಸ್ಪರ್ಧಿಗಳ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಜಿಯೋ ಸಿನಿಮಾ ಹೊರಬಿಟ್ಟಿರುವ ಈ ಪ್ರೋಮೊದಲ್ಲಿ ಸಿರಿ ಕಣ್ಣೀರು ಹಾಕುತ್ತಾ ರೊಚ್ಚಿಗೆದ್ದಿದ್ದಾರೆ.

ಅಂದ್ಹಾಗೆ, ಟಾಸ್ಕ್ ಏನಂದ್ರೆ? ಎರಡೂ ಗುಂಪಿನ ಎಲ್ಲ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿಹೋಗಿ ಬಿಗ್‌ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಬಾಲ್‌ ಎತ್ತಿಕೊಂಡು ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಹಾಕುತ್ತಾರೋ ಆ ತಂಡ ಗೆದ್ದಂತೆ.

bigg-boss-kannada-10-siri-snehith

ಆಟ ಶುರುವಾಗುತ್ತಲೇ ಎರಡೂ ತಂಡದ ಆಟಗಾರರೂ ಜಿದ್ದಾಜಿದ್ದಿಗೆ ಬಿದ್ದು ಆಟವಾಡಿದ್ದಾರೆ. ಶತಯಾಗತಾಯ ಬಾಲನ್ನು ಕಸಿದುಕೊಂಡು ಜಾಲರಿಗೆ ಹಾಕಲು ಒದ್ದಾಡುತ್ತಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಈ ವೇಳೆ ಸಿರಿಯನ್ನು ಎದುರಾಳಿ ತಂಡದ ಸದಸ್ಯ ಸ್ನೇಹಿತ್ ತಳ್ಳಿದ್ದರಿಂದ ಬಿದ್ದಿದ್ದಾರೆ.

ಸಿರಿ ಬೀಳುತ್ತಿದ್ದಂತೆ ಸ್ನೇಹಿತ್ ಮೇಲೆ ಎಗರಾಡಿದ್ದಾರೆ. "ಇಷ್ಟೊಂದು ಫಿಜಿಕಲ್ ಆಗುವುದು ಬೇಕಾ?" ಎಂದು ಪ್ರಶ್ನಿಸಿದ್ದಾರೆ. ಸದ್ಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್ ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ.

ಆದರೆ, ಸ್ನೇಹಿತ್ ಕೇವಲ ಸಿರಿಯನ್ನೇ ಈ ಟಾರ್ಗೆಟ್ ಮಾಡುತ್ತಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣ, ಈ ವಾರ ಎಲಿಮಿನೇಟ್ ಆಗಬಹುದು ಎನ್ನುವ ಪೈಕಿ ಸಿರಿ ಹಾಗೂ ಸ್ನೇಹಿತ್ ಇಬ್ಬರೂ ಇದ್ದಾರೆ. ಇತ್ತ ಪ್ರತಾಪ್ ಮೈಂಡ್ ಗೇಮ್ ಆಗಿ ಸಿರಿಯನ್ನು ಬಚಾವ್ ಮಾಡುತ್ತಿದ್ದಾರೆ ಅನ್ನೋ ಆರೋಪ ಬೇರೆ ಇದೆ. ಹೀಗಾಗಿ ಸ್ನೇಹಿತ್ ಪೈಪೋಟಿಗೆ ಬಿದ್ದು ಆಡುವ ಜೋಷ್‌ನಲ್ಲಿ ಸಿರಿಯನ್ನು ತಳ್ಳಿದ್ದಾರೆಂಬ ಆರೋಪ ಕೇಳಿಬರುತ್ತಿದೆ.

More from Filmibeat

English summary
Bigg Boss Kannada Season 10: Siri fell down in a task and got injured
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X