BBK10: ತುಕಾಲಿ ಸಂತೋಷ್ ಕನ್ನಡಕ್ಕೆ ನಮ್ರತಾ, ಸಿರಿ, ಪ್ರತಾಪ್ ಟೆನ್ಶನ್ : ನಕಲಿ ಪದ ಬರೆಯಪ್ಪ ಅಂದ್ರೆ ಮಾಡಿದ್ದೇನು..?
ಬಿಗ್ ಬಾಸ್‌ನಲ್ಲಿ ವಾರಕ್ಕೆ ಒಮ್ಮೆ ಬೇಕಾದ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ವಾರಕ್ಕೆ ಎಷ್ಟು ಸಾಧ್ಯವೋ ಅಷ್ಟನ್ನು ಮನೆಯ ಮಂದಿಯೇ ಗಳಿಸಬೇಕು. ಅದಕ್ಕೆ ಅಂತ ಬಿಗ್ ಬಾಸ್ ಕೊಂಚ ಕಷ್ಟ ಎನಿಸುವ ಟಾಸ್ಕ್ ಅನ್ನೇ ನೀಡುತ್ತದೆ. ಆದರೆ, ಆ ಟಾಸ್ಕ್‌ಗಳನ್ನು ಆಡುವುದಕ್ಕೆ ಬುದ್ದಿವಂತಿಕೆ ಉಪಯೋಗಿಸಿದರೆ ಸಾಕು. ಬೇಕಾದ ಪದಾರ್ಥಗಳೆಲ್ಲ ಪಡೆಯಬಹುದು.
ಆದರೆ, ಬಿಗ್ ಬಾಸ್ ಸೀಸನ್ 10ರಲ್ಲಿ ಇರುವ ಸದಸ್ಯರು ಲಕ್ಸುರಿ ಬಜೆಟ್ ಬಗ್ಗೆಯೂ ಗಂಭೀರತೆ ಇಲ್ಲ. ರೂಲ್ಸ್ ಬ್ರೇಕ್ ಮಾಡುವುದರಲ್ಲಿ ಎತ್ತಿದ ಕೈ. ಅದರಲ್ಲೂ ಲಜ್ಸುರಿ ಬಜೆಟ್‌ನಲ್ಲೂ ಎಷ್ಟೋ ಬಾರಿ ರೂಲ್ಸ್ ಬ್ರೇಕ್ ಮಾಡಿ, ಬರಬೇಕಾದ ಪದಾರ್ಥಗಳನ್ನು ವಾಪಾಸ್ ಹೋಗುವಂತೆ ಮಾಡಿಕೊಂಡಿದ್ದಾರೆ. ಈ ವಾರವೂ ಬಿಗ್ ಮಿಸ್ಟೇಕ್ ಮಾಡಿದ್ದರು ಸಹ, ಬಿಗ್ ಬಾಸ್ ಕ್ಷಮೆ ನೀಡಿ, ಪದಾರ್ಥ ನೀಡಿದ್ದಾರೆ.

ಲಕ್ಸುರಿ ಬಜೆಟ್‌ಗೆ ಕನ್ನಡ ಪದದ ಟಾಸ್ಕ್
ಈ ವಾರದ ಲಕ್ಸುರಿ ಬಜೆಟ್‌ನಲ್ಲಿ ನೋಡದೆಯೇ ಕನ್ನಡ ಬರೆಯುವ ಟಾಸ್ಕ್ ನೀಡಲಾಗಿತ್ತು. ಟಿವಿಯಲ್ಲಿ ಕಾಣುವ ಕನ್ನಡದ ಪದವನ್ನು, ನೋಡದೆ ಬರೆಯಬೇಕು. ಆ ರೀತಿ ಬರೆದವರಿಗೆ ಸಾವಿರ ಪಾಯಿಂಟ್ ಪಡೆಯುತ್ತಾರೆ. ಆರು ಸದಸ್ಯರು ಆಡಬೇಕು. ಮೂವರು ಬರೆಯಬೇಕು, ಮೂವರು ಊಹಿಸಬೇಕು. ಈ ಟಾಸ್ಕ್ ಅನ್ನು ಬಿಗ್ ಬಾಸ್ ಈ ವಾರ ಮನೆ ಮಂದಿಗೆ ನೀಡಿದ್ದರು.
ಕಾರ್ತಿಕ್ ಕಡೆಯಿಂದ ರೂಲ್ಸ್ ಬ್ರೇಕ್
ಕಾರ್ತಿಕ್ ಆಟವನ್ನು ತಮಗೆ ಹೇಗೆ ಬೇಕೋ ಆ ರೀತಿ ಆಡುವುದಕ್ಕೆ ಶುರು ಮಾಡಿದರು. ಇದನ್ನು ಕಂಡು ನಮ್ರತಾ ವೆಲ್ ಡನ್ ಎಂದು ಹೊಗಳಿದರು. ತಕ್ಷಣ ಬಿಗ್ ಬಾಸ್, ನಮ್ರತಾ ಅವರ ಬಳಿ ಪ್ರಶ್ನೆ ಕೇಳಿದರು. ಲಕ್ಸುರಿ ಬಜೆಟ್‌ನಲ್ಲಿ ಕಳೆದ ಬಾರಿ ಎಷ್ಟು ಪಾಯಿಂಟ್ಸ್ ಇತ್ತು. ಎಷ್ಟು ಕಳೆದು ಕೊಂಡಿದ್ದೀರಿ ಎಂಬುದನ್ನು ಕೇಳಿ ಎಚ್ಚರಿಸಿದರು. "ಕಾರ್ತಿಕ್ ಬುದ್ದಿವಂತಿಕೆಯಿಂದ ಆಡುವುದಕ್ಕೂ ಅಪ್ರಾಮಾಣಿಕತೆಯಿಂದ ಆಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಾರ್ತಿಕ್ ನೋಡಿಕೊಂಡು ಆಡುವುದು ಸರಿಯಲ್ಲ. ಐದು ಸಾವಿರ ಪಾಯಿಂಟ್ ಹಿಂತೆಗೆದುಕೊಳ್ಳುತ್ತಿದ್ದಾರೆ. ಉಳಿದ ಹತ್ತು ಸಾವಿರ ಪಾಯಿಂಟ್‌ಗೆ ಬೇರೆ ಸದಸ್ಯರು ಆಡಬೇಕು" ಎಂದು ಹೇಳಿದರು.
ತುಕಾಲಿ ಕನ್ನಡಕ್ಕೆ ಸಿರಿ ಸುಸ್ತು
ತನಿಷಾ ಆದ ಮೇಲೆ ತುಕಾಲಿ ಆಟ ಆಡುವುದಕ್ಕೆ ಬಂದರು. ತುಕಾಲಿಗೆ ಬಂದ ಪದಗಳು, ಮಾತು, ನಕಲಿ, ನಗು, ಸರಳ, ಜೇನು. ಇಷ್ಟು ಸರಳ ಪದಗಳಲ್ಲಿ ತುಕಾಲಿ ಬರೆಯುತ್ತಿದ್ದದ್ದು ಮಾತ್ರ ಅದ್ಭುತ. ಅದೇನು ಕನ್ನಡ ಪದವೋ ಪ್ರಾಣಿಯ ಚಿತ್ರವೋ ಒಂದು ಗೊತ್ತಾಗುತ್ತಾ ಇರಲಿಲ್ಲ. ನಮ್ರತಾ, ಸಿರಿ, ಪ್ರತಾಪ್ ಸಾಕಷ್ಟು ಕಷ್ಟ ಪಟ್ಟು ಎರಡು ಪದವನ್ನು ಕಂಡು ಹಿಡಿದರು. ಆದರೆ, ಇನ್ನುಳಿದ ಪದಗಳಿಗೆ ಸಿರಿ ತಲೆ ತಲೆ ಚಚ್ಚಿಕೊಂಡರು.
ಕ್ಷಮೆ ನೀಡಿದ ಬಿಗ್ ಬಾಸ್
ಮನೆ ಮಂದಿಯೆಲ್ಲಾ ಸೇರಿ ಆರೂವರೆ ಸಾವಿರ ಪಾಯಿಂಟ್ಸ್ ಗಳಿಸಿತ್ತು. ಕಾರ್ತಿಕ್ ತಪ್ಪು ಮಾಡಿದ್ದಕ್ಕೆ ಆ ಪಾಯಿಂಟ್ಸ್ ಕಳೆದುಕೊಂಡಿದ್ದರು. ಆದರೆ, ಬಿಗ್ ಬಾಸ್ ಈ ತಪ್ಪನ್ನು ಈ ಬಾರಿ ಕ್ಷಮಿಸಿ, ಎಂಟೂವರೆ ಸಾವಿರ ಪಾಯಿಂಟ್ಸ್ ಅನ್ನು ನೀಡಿದೆ. ಆ ಪಾಯಿಂಟ್ಸ್‌ಗೆ ಚಿಕನ್ ಅನ್ನೆ ಹತ್ತು ಕೆಜಿ ತೆಗೆದುಕೊಂಡಿದ್ದಾರೆ. ಇದು ಸಂಗೀತಾಗೆ ಬೇಸರ ಮೂಡಿಸಿದೆ. ನಾನು ಚಿಕನ್ ತಿನ್ನಲ್ಲ ಎಂದರೂ, ಪನ್ನೀರು ತೆಗೆದುಕೊಳ್ಳಲೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.


Click it and Unblock the Notifications











