BBK10: ಹನಿ.. ಹನಿ ಟಾಸ್ಕ್ ನಲ್ಲಿ ತನಿಷಾಗೆ ಪೆಟ್ಟು.. ಸಿರಿ ಸೂಪರ್ ಆಟ..!
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳದ್ದೇ ಮನರಂಜನೆ. ಈಗಾಗಲೇ 50 ದಿನ ಪೂರೈಸಿರುವ ಬಿಗ್ ಬಾಸ್, ದಿನಕಳೆದಂತೆ ಇನ್ನಷ್ಟು ಕಠಿಣವಾಗುತ್ತಾ ಹೋಗುತ್ತಿದೆ. ಟಾಸ್ಕ್‌ಗಳಲ್ಲಿಯೂ ರಿಸ್ಕ್ ಎನಿಸುವಂತ ಟಾಸ್ಕ್‌ಗಳನ್ನೇ ನೀಡುತ್ತಿದೆ. ಒಬ್ಬೊಬ್ಬರೇ ಮನೆಯಿಂದ ಖಾಲಿಯಾಗುತ್ತಿರುವಾಗ, ಇನ್ನಿಬ್ಬರ ಆಗಮನವಾಗಿದೆ.
ಸ್ಪರ್ಧಿಗಳಿಗೆ ಇರುವುದರಲ್ಲಿಯೇ ಸ್ಪರ್ಧೆ ಸಿಗಲಿದೆ ಎಂದುಕೊಳ್ಳುವಾಗಲೇ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಇಬ್ಬರು ಬಂದಿದ್ದಾರೆ. ಹೀಗಾಗಿ ಇನ್ನಷ್ಟು ಕಾಂಪಿಟೇಷನ್ ಜಾಸ್ತಿಯಾಗಿದೆ. ಮನೆಯಲ್ಲಿ ಹೊಸದಾಗಿ ಬಂದಿರುವ ಪವಿ ಹಾಗೂ ಅವಿನಾಶ್ ಎಲ್ಲರ ಆಟವನ್ನು ಗಮನಿಸಿಯೇ ಬಂದಿದ್ದಾರೆ. ಹೀಗಾಗಿ ಹೇಗೆ ಆಡುತ್ತಾರೆ ಎಂಬ ಕುತೂಹಲ.

ಹನಿ.. ಹನಿ ಟಾಸ್ಕ್ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್ ನೀಡುವ ಟಾಸ್ಕ್ ಸಾಕಷ್ಟು ಗಮನ ಸೆಳೆಯುತ್ತದೆ. ಇವತ್ತು ಹನಿ.. ಹನಿ ಕಹಾನಿ ಟಾಸ್ಕ್ ನೀಡಿದ್ದಾರೆ. ಅದಕ್ಕಾಗಿ ಬಿಗ್ ಬಾಸ್ ಮನೆಯಲ್ಲಿ ಎರಡು ಟೀಂ ಮಾಡಿದೆ. ವಿಕ್ರಾಂತ್ ಹಾಗೂ ಮಣ್ಣಿನ ಮಕ್ಕಳು ಟೀಂ ಮಾಡಲಾಗಿದೆ. ಆ ಎರಡು ಟೀಂಗಳಲ್ಲಿ ಅವರವರೇ ಯಾವ ಟೀಂಗೆ ಹೋಗಬಹುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ಆದರೆ ಕಾರ್ತಿಕ್, ಪ್ರತಾಪ್ ತಂಡಕ್ಕೆ ಹೋದರು. ಆದರೆ ಅವರನ್ನೇ ಹೊರಗೆ ಇಟ್ಟರು. ಬಕೆಟ್‌ನಲ್ಲಿ ನೀರು ತೆಗೆದುಕೊಂಡು ಹೋಗಿ ಪೈಪ್ ಒಳಗೆ ಹಾಕಬೇಕು. ಕೆಳಗೆ ಬಾಕ್ಸ್‌ನಲ್ಲಿ ನೀರು ಸಂಗ್ರಹ ಮಾಡಬೇಕು. ಈ ರೀತಿ ಆಡಿದ ಟಾಸ್ಕ್‌ನಲ್ಲಿ ವಿಕ್ರಾಂತ್ ಹಾಗೂ ಮಣ್ಣಿನ ಮಕ್ಕಳು ವಿಕ್ರಾಂತ್ ಗೆಲುವು ಸಾಧಿಸಿದೆ.
ಟಾಸ್ಕ್‌ನಲ್ಲಿ ತನಿಷಾಗೆ ಪೆಟ್ಟು
ಪೈಪ್‌ನಲ್ಲಿ ನೀರು ಹಾಕುವ ಟಾಸ್ಕ್ ನಲ್ಲಿ ಸ್ವಿಮ್ಮಿಂಗ್ ಪೂಲ್ ನಿಂದ ನೀರು ತೆಗೆದುಕೊಂಡು ಹೋಗಬೇಕು. ಎದುರಾಳಿಗಳು ಅದನ್ನು ತಡೆಯಬೇಕು. ಅದನ್ನು ಮೀರಿ ನೀರನ್ನು ಪೈಪ್‌ನಲ್ಲಿ ಹಾಕುವುದೇ ಟಾಸ್ಕ್. ಆ ರೀತಿ ಮಾಡುವಾಗ ತನಿಷಾ ಕೆಳಗೆ ಬಿದ್ದಿದ್ದಾರೆ. ಜೋರು ಪೆಟ್ಟಾಗಿದೆ. ತಕ್ಷಣ ಬಿಗ್ ಬಾಸ್ ಎಲ್ಲರನ್ನು ಒಳಗೆ ಹೋಗುವಂತೆ ಸೂಚನೆ ನೀಡಿದೆ. ಬಳಿಕ ತನಿಷಾ ಅವರನ್ನು ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದೆ. ಬಳಿಕ ಮನೆಯವರಿಗೂ ಧೈರ್ಯ ಹೇಳಿದ್ದಾರೆ. ತನಿಷಾಗೆ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಿರಿ ಆಟಕ್ಕೆ ಶಬ್ಬಾಶ್ ಗಿರಿ
ಸಿರಿಯನ್ನು ಯಾವಾಗಲೂ ನಾಮಿನೇಟ್ ಮಾಡುವಾಗ ಇನ್ನು ಆಕ್ಟಿವ್ ಆಗಿಲ್ಲ ಎಂಬ ಕಾರಣವನ್ನೇ ನೀಡುತ್ತಿದ್ದರು. ಆದರೆ, ಇವತ್ತಿನ ಸಿರಿ ಆಟಕ್ಕೆ ಶಬ್ಬಾಶ್ ಗಿರಿ ನೀಡಲೇಬೇಕು. ಬಕೆಟ್ ನಲ್ಲಿ ನೀರು ತೆಗೆದುಕೊಂಡು ಹೋಗುವಾಗ, ಎದುರಾಳಿ ತಡೆಯಲು ನೋಡಿದಾಗ, ಸಿರಿ ಟ್ಯಾಲೆಂಟ್ ಬಳಸಿಕೊಂಡು ಮುಂದೆ ಸಾಗಿದ್ದಾರೆ. ಎದುರಾಳಿಯನ್ನು ತಡೆಯುವಾಗಲೂ ತಮ್ಮ ಪ್ರತಿಭೆಯನ್ನೇ ಬಳಸಿದ್ದಾರೆ.
ಸಂತೋಷ್ ಜೊತೆಗೂ ಜಗಳ
ಇತ್ತ ಸಂತೋಷ್ ಹಾಗೂ ವಿನಯ್ ನಡುವೆಯೂ ಜಗಳ ನಡೆದಿದೆ. ಟಾಸ್ಕ್ ನಡುವೆ ನಡೆದ ಜಗಳದಲ್ಲಿ ವಿನಯ್ ಹಾಗೂ ಸಂತೋಷ್ ನಡುವೆ ಜಗಳವಾಗಿದೆ. ವಿನಯ್ ಈಗಾಗಲೇ ಮನನೊಂದಿದ್ದರು. ಹೀಗಾಗಿ ತುಕಾಲಿ ಸಂತೋಷ್ ಅವರನ್ನು ಸಮಾಧಾನ ಮಾಡಲು ಹೋಗಿ, ಇನ್ನಷ್ಟು ಕೋಪ ಮಾಡಿಕೊಂಡರು. ಇಲ್ಲಿ ಸಂತೋಷ್ ಬುದ್ದಿವಂತಿಕೆ ಪ್ರದರ್ಶನ ಮಾಡಿದರು. ಸರಿ ಈಗ ಹೋಗಿ ಆಮೇಲೆ ಮಾತನಾಡೋಣಾ ಎಂದರು. ಅಂದರೆ, ಆ ಕ್ಷಣದ ಕೋಪವನ್ನು ಕಡಿಮೆ ಮಾಡಲು ತುಕಾಲಿ ಸಂತೋಷ್ ಪ್ರಯತ್ನ ಮಾಡಿದರು.


Click it and Unblock the Notifications











