BBK10: ವಿನಯ್ ಗೌಡ ಪರ ಹೆಚ್ಚಾಯ್ತ ಪ್ರಚಾರ, ತಂಗಿಯ ಗಂಡ ಪರ ಅತ್ತಿಗೆಯ ಮನವಿ

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಇನ್ನು ಕೆಲವೇ ದಿನಗಳ ಆಟ ಮುಂದುವರೆಯಲಿದೆ. ಸದ್ಯಕ್ಕೆ ಇರುವ ಸ್ಪರ್ಧಿಗಳು ತುಂಬಾನೇ ಮುಂದೆ ಬಂದಿದ್ದಾರೆ. ಅದು ಖುಷಿಯ ವಿಚಾರ ಕೂಡ. ಆದರೆ ಇನ್ನು ಮುಂದೆ ಆಟಗಳು ಕಠಿಣವಾಗುತ್ತಾ ಹೋಗುತ್ತವೆ. ಸ್ಪರ್ಧಿಗಳ ನಡುವೆಯೇ ಸ್ಪರ್ಧೆ ಹೆಚ್ಚಾಗುತ್ತಾ ಹೋಗುತ್ತದೆ. ಈಗಾಗಲೇ ನೋಡುಗರಿಗೆ ಅದರ ಅನುಭವವಾಗುತ್ತಿದೆ.

ಇದರ ನಡುವೆ ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೆಲುವಿಗಾಗಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ವಿನಯ್ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಇಷ್ಟು ದಿನ ಅವರ ಬೆಂಬಲಿಗರಷ್ಟೇ ವೋಟ್ ಮಾಡುತ್ತಿದ್ದರು, ಪ್ರಚಾರ ಮಾಡುತ್ತಿದ್ದರು. ಆದರೆ ಈಗ ಸಂಬಂಧಿಕರೆಲ್ಲ ಸರಿ ತಪ್ಪುಗಳ ಬೆಂಬಲಕ್ಕೆ ನಿಂತಿದ್ದಾರೆ.

Bigg Boss Kannada Season 10 Sister in law Nishitha supporting Vinay video viral

ವಿನಯ್ ಗೆಲುವಿಗಾಗಿ ಧ್ವನಿ ಎತ್ತಿದ ನಿಶಿತಾ

ವಿನಯ್ ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್ ಆಗಿರುವ ಸ್ಪರ್ಧಿ ಅಂತಾನೇ ಹೇಳಬಹುದು. ಆರಂಭದಿಂದಾನೂ ತನ್ನ ಗತ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಆನೆ ಎಂಬ ಹೆಸರಿನೊಂದಿಗೆ ಬಿಗ್ ಬಾಸ್ ಮನೆಯಲ್ಲಿ ಇರುವ ವಿನಯ್, ಗಜನನ್ನು ಬಗ್ಗು ಬಡಿಯಲು ಯಾವ ಮಾವುತನು ಇಲ್ಲವೆಂದೆ ನಡೆದುಕೊಳ್ಳುತ್ತಿದ್ದಾರೆ. ತಮ್ಮದೇ ತಂಡವನ್ನು ಕಟ್ಟಿಕೊಂಡಿದ್ದಾರೆ. ತಮ್ಮದೇ ತಂಡದ ಜೊತೆಗೆ ಮುನ್ನುಗ್ಗುತ್ತಿದ್ದಾರೆ. ಇದೀಗ ವಿನಯ್ ಪರವಾಗಿ ಮತ್ತೊಂದು ಸಪೋರ್ಟಿವ್ ವಿಡಿಯೋವೊಂದು ಶೇರ್ ಆಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಅನು ಪೂವಮ್ಮ ವಿಡಿಯೋ ಮೂಲಕ ಬೆಂಬಲ ಸೂಚಿಸಿದ್ದರು. ವಿನಯ್ ಗೆಲ್ಲಲೇಬೇಕೆಂದು ಮನವಿ ಮಾಡಿದ್ದರು. ಇದೀಗ ನಿಶಿತಾ, ವಿನಯ್ ಪರ ಮಾತನಾಡಿದ್ದಾರೆ. ವಿನಯ್ ಹೇಗೆ ಆಡುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ವಿನಯ್, ನಿಶಿತಾಗೆ ಸೋದರ ಮಾವನ ಮಗ. ಈಗ ತಂಗಿಯ ಗಂಡ ಕೂಡ.

ವಿನಯ್ ಬಗ್ಗೆ ನಿಶಿತಾ ಹೇಳಿದ್ದೇನು..?

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ನಿಶಿತಾ, "ಎಲ್ಲರಿಗೂ ನಮಸ್ಕಾರ. ನಾನು ಈ ವಿಡಿಯೋ ಮಾಡುತ್ತಿರುವ ಉದ್ದೇಶ ಏನಪ್ಪ ಅಂದರೆ, ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ಆರಂಭವಾಗಿದೆ. ಯಾವುದೇ ಆಟವಾಗಲಿ ಸುಲಭವಾಗಿ ತೆಗೆದುಕೊಂಡು ಆಡುತ್ತಾರೆ. ವಿನಯ್ ಅಗ್ರೆಸ್ಸಿವ್ ಅದು ಇದು ಅಂತಾರೆ. ಆದರೆ ಅದಲ್ಲ. ನಾನು ನಮ್ಮ ಹುಡುಗ ಅಂತ ಹೇಳುತ್ತಾ ಇಲ್ಲ. ವಿನಯ್ ನಮ್ಮ ಸೋದರ ಮಾವನ ಮಗ, ನನ್ನ ತಂಗಿಯ ಗಂಡ. ವಿನಯ್ ಗೌಡ ಎಷ್ಟು ಚೆನ್ನಾಗಿ ಆಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತು. ನಿನ್ನೆಯ ಆಟದಲ್ಲಿ ಕೈಗೆ ಪೆಟ್ಟಾದರೂ ಅದನ್ನು ತೋರಿಸಿಕೊಳ್ಳದೆ, ಎಲ್ಲಿಯೂ ಹೇಳದೆ ಆಟವಾಡಿದ್ದಾರೆ" ಎನ್ನುತ್ತಾ ಬೆಂಬಲಕ್ಕೆ ಬಂದಿದ್ದಾರೆ.

ವಿನಯ್ ಸೆಂಟರ್ ಆಫ್ ಅಟ್ರಾಕ್ಷನ್

"ಬಿಗ್ ಬಾಸ್‌ನಲ್ಲಿ ನೀವೆಲ್ಲ ಬಣ್ಣಿಸಿರುವ ಹಾಗೇ, ಸೆಂಟರ್ ಆಫ್ ಅಟ್ರಾಕ್ಷನ್ ಅನ್ನುವ ಹಾಗೇ ವಿನಯ್ ಗೌಡ ಅವರಿದ್ದಾರೆ. ಬೈಯ್ಯುವುದಾದರೂ ವಿನಯ್ ಅವರನ್ನೇ ಬೈಯ್ಯುತ್ತಾರೆ. ಹೊಗಳುವುದಾದರೂ ವಿನಯ್ ಅವರನ್ನೇ ಹೊಗಳುತ್ತಾರೆ. ಅದೆಲ್ಲಾ ಏನೇ ಇರಲಿ. ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುವುದು ಏನಂದರೆ ವಿನಯ್ ಗೌಡ ಅವರನ್ನು ಗೆಲ್ಲಿಸಿ" ಎಂದಿದ್ದಾರೆ.

ಶಿವನಿಗೆ ಹೋಲಿಕೆ ಮಾಡಿದ ನಿಶಿತಾ

"ವಿನಯ್‌ರನ್ನು ನೋಡಿದಾಗ ಶಿವನನ್ನು ನೋಡಿದ ಹಾಗೇ ಆಗುತ್ತೆ. ಜಗತ್ತನ್ನು ಶಿವ ನಿರ್ವಹಿಸಿದಂತೆಯೇ ವಿನಯ್ ಬಿಗ್ ಬಾಸ್ ಮನೆಯನ್ನು ನಿರ್ವಹಿಸುತ್ತಿದ್ದಾರೆ. ಕೋಪ ಬಂದಾಗ ಶಿವನ ರೀತಿಯೇ ಕೋಪಿಸಿಕೊಳ್ಳುತ್ತಾರೆ. ನಾನು ಅವತ್ತು ಅವರ ಕೋಪದ ಮುಖ ಕಂಡು ಶಾಕ್ ಆಗಿದ್ದೆ. ಆದರೆ ಶಿವನ ರೀತಿಯೇ ಎಲ್ಲವನ್ನು ನಿಭಾಯಿಸುತ್ತಾರೆ. ಪ್ಲೀಸ್ ಎಲ್ಲರೂ ವಿನಯ್ ಗೌಡಗೆ ಸಪೋರ್ಟ್ ಮಾಡಿ" ಎಂದು ಕೇಳಿಕೊಂಡಿದ್ದಾರೆ.

More from Filmibeat

English summary
BBK 10 Sister in law Nishitha supporting Vinay video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X