ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೂ ಮುಂದುವರೆದ ಫ್ರೆಂಡ್‌ಶಿಪ್;ಸ್ನೇಹಿತ್-ರಕ್ಷಕ್ ಟೈಮ್ ಪಾಸ್

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 10 ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಆರಂಭದಲ್ಲಿ ಇದ್ದವರೆಲ್ಲಾ ಒಬ್ಬೊಬ್ಬರಾಗಿಯೇ ಹೊರ ಬರುತ್ತಿದ್ದು, ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳು, ಜನರ ಪ್ರೀತಿ ಗಳಿಸಿದ ಕಂಟೆಸ್ಟೆಂಟ್‌ಗಳು ಮನೆಯೊಳಗೆ ಉಳಿದುಕೊಂಡಿದ್ದಾರೆ‌. ಈ ವಾರದಿಂದ ಯಾರೂ ಹೊರಗೆ ಬರಬಹುದು ಎಂಬ ಕುತೂಹಲವೂ ಎಲ್ಲರಲ್ಲೂ ಮನೆ ಮಾಡಿದೆ. ಒಂದು ಸಂತಸದ ವಿಚಾರ ಎಂದರೆ ಈ ವಾರ ನಾಮಿನೇಷನ್ ಲಿಸ್ಟ್‌ನಲ್ಲಿ ಹೆಣ್ಣು ಮಕ್ಕಳು ಇಲ್ಲದೆ ಇರುವುದು. ಬಿಗ್ ಬಾಸ್ ಮನೆಯಲ್ಲಿ ಇರುವ ಸಂಗೀತಾ, ತನಿಷಾ, ನಮ್ರತಾ ಸೇಫ್ ಆಗಿದ್ದಾರೆ.

ಬಿಗ್ ಬಾಸ್ ಎಂದ ಮೇಲೆ ಜಗಳ, ಮನ:ಸ್ತಾಪಗಳು ಸಹಜವೇ ಅಲ್ಲವೆ. ಆಟದ ವಿಚಾರಕ್ಕೆ ಅಥವಾ ಇನ್ಯಾವುದೋ ವೈಯಕ್ತಿಕ ವಿಚಾರಗಳಿಗೆ ಕಿತ್ತಾಟಗಳೇ ನಡೆದು ಹೋಗುತ್ತವೆ. ಇದೆಲ್ಲಾ ಬಿಗ್ ಬಾಸ್‌ನಿಂದ ಹೊರಗೆ ಬಂದ ಮೇಲೂ ಎಫೆಕ್ಟ್ ಹೊಡೆಯುತ್ತದೆ. ಇನ್ನು ಕೆಲವರು ಮನೆಯೊಳಗಿದ್ದ ಬಾಂಧವ್ಯವನ್ನೇ ಹೊರಗೂ ಉಳಿಸಿಕೊಳ್ಳುತ್ತಾರೆ. ಅದರಲ್ಲಿ ಸ್ನೇಹಿತ್ ಹಾಗೂ ರಕ್ಷಕ್ ಉದಾಹರಣೆಯಾಗಿ ನಿಲ್ಲುತ್ತಾರೆ.

Bigg Boss Kannada, Season 10 Snehith and Rakshak met even after the exit

ಬಿಗ್ ಬಾಸ್ ಮನೆಯಲ್ಲೂ ಸ್ನೇಹಿತರಾಗಿದ್ದರು

ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಹದಿನೇಳು ಮಂದಿ ಇದ್ದರು. ಈ ಬಾರಿ ಸಮರ್ಥರು ಹಾಗೂ ಅಸಮರ್ಥರೆಂಬ ತಂಡಗಳಾಗಿದ್ದರಿಂದ ರಕ್ಷಕ್ ಅಸಮರ್ಥರಾಗಿ ಒಳಗೆ ಹೋಗಿದ್ದರೆ, ಸ್ನೇಹಿತ್ ಎರಡನೇ ಸ್ಪರ್ಧಿಯಾಗಿ, ಸಮರ್ಥರಾಗಿ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ದೂರ ದೂರವೇ ಇದ್ದರು, ದಿನ ಕಳೆದಂತೆ ಸ್ನೇಹಿತ್ ಹಾಗೂ ರಕ್ಷಕ್ ಕ್ಲೋಸ್ ಆಗಿದ್ದರು. ಮೊದಲ ಕ್ಯಾಪ್ಟನ್ ಸ್ನೇಹಿತ್ ಆದರೆ, ಎರಡನೇ ಕ್ಯಾಪ್ಟನ್ ರಕ್ಷಕ್ ಆಗಿದ್ದರು.

ಗಾಸಿಪ್ ಗ್ಯಾಂಗ್ ಜೊತೆಗಿದ್ದ ರಕ್ಷಕ್

ವಿನಯ್ ಅಂಡ್ ಟೀಂ ಜೊತೆಗೂ ರಕ್ಷಕ್ ಗುರುತಿಸಿಕೊಂಡಿದ್ದರು ನಿಜ. ಆದರೆ, ಹೆಚ್ಚು ಕಾಲ ಕಳೆಯುತ್ತಾ ಇದ್ದದ್ದು ಮಾತ್ರ, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಜೊತೆಗೆ. ಅವರಿಬ್ಬರೂ ಗಾಸಿಪ್ ಮಾತನಾಡಿಕೊಳ್ಳುತ್ತಾ ಕುಳಿತಿದ್ದರೆ, ಅವರ ಜೊತೆಗೆ ಏನು ಮಾತನಾಡದೆ ಕಾಲ ಕಳೆಯುತ್ತಾ ಇದ್ದದ್ದು ರಕ್ಷಕ್.

Bigg Boss Kannada, Season 10 Snehith and Rakshak met even after the exit

ಬಿಗ್ ಬಾಸ್ ಜರ್ನಿ ಮುಗಿದ ಮೇಲೂ ಭೇಟಿ

ರಕ್ಷಕ್ ಕೊನೆಯ ತನಕ ಇರಲಿದ್ದಾರೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಹೊರಗಡೆ ಇದ್ದ ಅಗ್ರೆಸ್ಸಿವ್ ರಕ್ಷಕ್‌ಗೂ ಒಳಗಡೆ ಹೋದಾಗ ಸೈಲೆಂಟ್ ರಕ್ಷಕ್‌ಗೂ ಬಹಳ ವ್ಯತ್ಯಾಸವೇ ಇತ್ತು. ಹೆಚ್ಚೇನು ಆಡದೆ ಬೇಗ ಮನೆಯಿಂದ ಹೊರಗೆ ಬಂದೇ ಬಿಟ್ಟರು. ಸದ್ಯ ಹೊರಗೆ ಬಂದ ಮೇಲೆ ಅಭಿಮಾನಿಗಳ ಜೊತೆಗೆ ಫೋಟೋಗೆ ಪೋಸ್ ಕೊಡುವ ಮೂಲಕ ಮತ್ತೆ ಆಕ್ಟಿಉವ್ ಆಗಿದ್ದರು. ಇದರ ನಡುವೆ ಸ್ನೇಹಿತ್ ಜೊತೆಗೆ ಸಮಯ ಕಳೆಯುವ ಮೂಲಕ ಗಮನ ಸೆಳೆದಿದ್ದಾರೆ.

ರಕ್ಷಕ್ ನಡೆಗೆ ಫ್ಯಾನ್ಸ್ ದಿಲ್ ಖುಷ್

ಬಿಗ್ ಬಾಸ್ ಜರ್ನಿ ಮುಗಿದ ಮೇಲೂ ಸ್ಪರ್ಧಿಗಳು ಒಟ್ಟಾಗಿರುವುದು ಖುಷಿಯ ವಿಚಾರವೇ ಸರಿ. ಸ್ನೇಹಿತ್ ಹಾಗೂ ರಕ್ಷಕ್ ಸೇರಿ ಬಾಸ್ಕೇಟ್ ಬಾಲ್ ಆಡಿದ್ದಾರೆ. ಈ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಕ್ಷಕ್ ಹಾಗೂ ಸ್ನೇಹಿತ್‌ಗೆ ಕೂಡ ಈ ಫೋಟೋಗಳನ್ನು ಟ್ಯಾಗ್ ಮಾಡುತ್ತಿದ್ದಾರೆ. ಹೀಗೆ ಬಿಗ್ ಬಾಸ್ ಮುಗಿದ ಮೇಲೂ ಅದೇ ಫ್ರೆಂಡ್‌ಶಿಪ್ ಉಳಿಸಿಕೊಂಡಿರುವುದಕ್ಕೆ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಹಾರ್ಟ್ ಸಿಂಬಲ್ ಹಾಕಿ, ಹ್ಯಾಪಿ ಅಂತ ಹೇಳುತ್ತಿದ್ದಾರೆ.

More from Filmibeat

English summary
BBK 10 snehith and Rakshak met even after the end of Bigg Boss:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X