ಹೊರಹೋಗಿ ಬಂದ ಮೇಲೆ ನಮ್ರತಾ ಮೇಲೆ ದ್ವೇಷ ಸಾಧಿಸುತ್ತಿದ್ದಾರಾ ಸ್ನೇಹಿತ್?: ವಿನಯ್ ಬೆಂಬಲಕ್ಕೆ ನಿಂತಿದ್ದೇಕೆ?
ಬಿಗ್ ಬಾಸ್ ಮನೆಗೆ ಈಗ ಹಳೆಯ ಸ್ಪರ್ಧಿಗಳು ಎಂಟ್ರಿಯನ್ನು ಕೊಟ್ಟಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಹೊಸ ಕಳೆ ಬಂದಂತೆ ಕಾಣಿಸುತ್ತಿದೆ. ಒಬ್ಬರಿಗೊಬ್ಬರು ತಮ್ಮ ಮುಖವನ್ನೇ ನೋಡುತ್ತಾ ಕಾಲ ಕಳೆಯುತ್ತಾ ಇದ್ದರು ಇವರಿಗೆಲ್ಲಾ ಬೂಸ್ಟ್ ಮಾಡಬೇಕು ಎಂದುಕೊಂಡು ಬಿಗ್ ಬಾಸ್ ಮನೆಗೆ ಹಳೆಯ ಸ್ಪರ್ಧಿಗಳನ್ನು ಮತ್ತೊಮ್ಮೆ ಕರೆಸಲಾಗಿದೆ. ಮನೆಯಿಂದ ಹೊರಗೆ ಹೋಗಿದ್ದ ಎಲ್ಲರೂ ಕೂಡ ಒಳಗೆ ಬಂದಿದ್ದಾರೆ. ಸ್ನೇಕ್ ಶ್ಯಾಮ್ ಹಾಗೂ ಗೌರೀಶ್ ಅಕ್ಕಿ ಇಬ್ಬರನ್ನು ಹೊರತು ಪಡಿಸಿ ಉಳಿದ ಸದಸ್ಯರು ಮನೆಗೆ ಬಂದಿದ್ದು ಬಿಗ್ ಬಾಸ್ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿನಯ್ ಗಂತೂ ತಮ್ಮ ಎಲ್ಲಾ ಸ್ನೇಹಿತ್‌ನನ್ನು ನೋಡಿದ ಕೂಡಲೇ ಸಕ್ಕತ್ ಖುಷಿಯಾಗಿದೆ. ನಮ್ಮ ಗ್ಯಾಂಗ್ ವಾಪಸ್ ಆಗಿದೆ ನನಗೆ ಒಂದು ರೀತಿಯ ಎನರ್ಜಿ ಬಂದಿದೆ ಎಂದು ವಿನಯ್ ಹೇಳಿದ್ದಾರೆ.
ಬಿಗ್ ಬಾಸ್ ಮನೆಗೆ ಬಂದಿರುವ ಹಳೆಯ ಸ್ಪರ್ಧಿಗಳು ಇನ್ನೇನು ಸೆಮಿ ಫೈನಲ್ ಎರಡು ವಾರಗಳಷ್ಟೇ ಬಾಕಿ ಇದ್ದು ಎಲ್ಲರಿಗೂ ಕೂಡ ಚೆನ್ನಾಗಿ ಆಟವನ್ನು ಆಡಿ ಎಂದು ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಬಿಗ್ ಬಾಸ್ ಮನೆಯನ್ನು ಬಿಟ್ಟು ಹೋದ ಮೇಲು ಪ್ರತಾಪ್ ಮೇಲೆ ದ್ವೇಷ ಇಟ್ಟಿರುವಂತೆ ಕಾಣಿಸುತ್ತಾ ಇದೆ. ಮನೆ ಒಳಗೆ ಎಂಟ್ರಿ ಕೊಡುತ್ತಿದ್ದಂತೆ ಪ್ರತಾಪ ಬಳಿ ಇದೆ ಮಾತನ್ನ ಹೇಳಿದ್ದಾರೆ. ಇಷ್ಟೆಲ್ಲಾ ಆದಮೇಲೆ ಸಂಗೀತ ಬಳಿ ಪ್ರತಾಪ್ ಬಗ್ಗೆ ಕಿವಿ ಚುಚ್ಚಿದ್ದಾರೆ. ಪ್ರತಾಪ್ ಇಲ್ಲಿವರೆಗೂ ಸಿಂಪತಿಯಿಂದಲೇ ನಡೆದುಕೊಂಡು ಬಂದಿದ್ದು ಇಲ್ಲಿತನಕ ರೀಚ್ ಆಗಿದ್ದಾನೆ ಎಂದು ಹೇಳಿದ್ದಾರೆ. ಆದರೆ ನೀತು ಮಾತ್ರ ಪ್ರತಾಪ್ ಹಾಗೂ ಸಂಗೀತ ನಡುವೆ ಆಗಿರುವ ಮನಸ್ತಾಪವನ್ನು ಸರಿ ಮಾಡಲು ಪ್ರಯತ್ನಿಸಿದ್ದಾರೆ.

ತನಿಷಾ ಹಾಗೂ ಕಾರ್ತಿಕ್ ನಡುವಿನ ಸ್ನೇಹ ಕೂಡ ಬಿರುಕು ಬಿಟ್ಟಿದ್ದು ಸಿರಿ ಕಾರ್ತಿಕಗೆ ಬುದ್ಧಿಯನ್ನ ಹೇಳಿದ್ದಾರೆ. ನೀನು ಮಾಡಿದ್ದು ಸರಿಯಲ್ಲ ಆದರೆ ಯಾರನ್ನು ಸೇವ್ ಮಾಡಲು ಹೋಗಿ ತನಿಖೆಯನ್ನು ನ್ಯಾಮಿನೇಟ್ ಮಾಡಿದ್ದು ತಪ್ಪು ಎಂಬ ಮಾತನ್ನು ಕಾರ್ತಿಕ್‌ಗೆ ಹೇಳಿದ್ದಾರೆ. ತನಿಶಾ ಬಳಿ ಬಂದ ಕಾರ್ತಿಕ್ ಸಾರಿ ಕೇಳಿದ್ದಾರೆ .ಆದರೆ ತನಿಶಾಗೆ ಕಾರ್ತಿಕ್ ಅಂದು ಮಾಡಿದ್ದೆ ಮನಸ್ಸಿನಲ್ಲಿ ಕೊರೆಯುತ್ತಿದೆ. ಸ್ನೇಹಿತ್ ಯಾಕೋ ನಮ್ರತಾ ಮೇಲೆ ಕೋಪ ಮಾಡಿಕೊಂಡಂತೆ ಕಾಣಿಸುತ್ತಿದೆ. ವಿನಯ್ ನನ್ನ ತಪ್ಪಿಕೊಂಡು ಮಿಸ್ ಯು ಬ್ರೋ ಎಂದು ಹೇಳಿದ್ದಾರೆ. ಜೊತೆಗೆ ವಿನಯ್‌ಗೆ ಒಂದು ಗಿಫ್ಟ್ ತಂದಿರುವುದಾಗಿ ಕೂಡ ಹೇಳಿದ್ದು, ಮನೆಯ ಇತರರು ನಮಗೆ ತಂದಿಲ್ವಾ ಎಂದು ಸ್ನೇಹಿತ್‌ನನ್ನು ಚೇಡಿಸಿದ್ದಾರೆ.
ವಿನಯ್‌ಗೆ ಬೆಂಬಲ, ನಮ್ರತಾ ಮೇಲೆ ಕೋಪ ಮಾಡಿಕೊಂಡ್ರಾ ಸ್ನೇಹಿತ್
ಬಿಗ್ ಬಾಸ್ ಮನೆಗೆ ಹಳೆಯ ಸ್ಪರ್ಧಿಗಳು ಬಂದಿದ್ದು ತಮಗೆ ಯಾವ ಸ್ಪರ್ಧಿಗಳು ಇಷ್ಟ ಎಂಬುದನ್ನು ಹೇಳುತ್ತಿದ್ದಾರೆ. ಸ್ನೇಹಿತ್ ನನಗೆ ವಿನಯ್ ಗೆಲ್ಲಲಿ ಎಂಬುದೇ ಆಸೆಯಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ನಮ್ರತಾ ಮುಖಭಾವವೇ ಚೇಂಜ್ ಆಗಿ ಹೋಗಿದೆ. ಕಾರ್ತಿಕ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದಕ್ಕೆ ಸ್ನೇಹಿತ್ ಮೇಲೆ ಕೋಪ ಮಾಡಿಕೊಂಡಂತೆ ಕಾಣಿಸುತ್ತಿದ್ದು ಸರಿಯಾದ ರೀತಿಯಲ್ಲಿ ಮಾತನಾಡಿಸುತ್ತಿಲ್ಲ. ಇದಕ್ಕೆ ನಮ್ರತಾ ಸ್ನೇಹ ಅಂದ್ರೆ ಇಷ್ಟೇನಾ ಕಣ್ಣೀರನ್ನ ಹಾಕಿದ್ದಾರೆ. ಪದೇ ಪದೇ ವಿನಯ್ ಗೆಲ್ಲಲಿ ಎಂದರೆ ನಾನೇನು ಮಾಡಿದೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

ಸ್ನೇಹಿತ್ ಹಾಗೂ ನಮ್ರತಾ ನಡುವೆ ಒಂದು ಸ್ನೇಹವಿತ್ತು. ಆದರೆ ಸ್ನೇಹಿತ್ ಮನೆಯಿಂದ ಹೊರಗಡೆ ಹೋದ ಮೇಲೆ ನಮ್ರತಾ ತಮ್ಮ ಆಟವನ್ನು ಬದಲಾಯಿಸಿದರು ಎಲ್ಲರೊಂದಿಗೆ ಕೂಡ ಬೆರೆಯಲು ಶುರು ಮಾಡಿದರು. ಕಾರ್ತಿಕನ್ನು ಗೋಳಾಡಿಸುವುದು ಡೇಟ್‌ಗೆ ಕರೆಯುವುದು ಎಲ್ಲವನ್ನು ಕೂಡ ಮಾಡಿದ್ದರು ಈ ಒಂದು ವರ್ತನೆ ಸ್ನೇಹಿತರಿಗೆ ಇಷ್ಟವಾದಂತೆ ಕಾಣಿಸುತ್ತಿಲ್ಲ. ಇದಕ್ಕಾಗಿ ಬಿಗ್ ಬಾಸ್ ಮನೆಗೆ ಬಂದ ಮೇಲೆ ಸ್ನೇಹಿತ್ ನಮ್ರತಾ ಮೇಲೆ ಕೋಪ ತೋರಿಸುತ್ತಿದ್ದಾರೆ.
ಸ್ನೇಹಿತ್ ಮಾತಿಗೆ ನಮ್ರತಾ ಕಣ್ಣೀರು..!
ಸ್ನೇಹಿತ್ ಅವರು ಬಿಗ್ ಬಾಸ್ ಶೋನಲ್ಲಿ ಯಾರೂ ಗೆಲ್ಲಬೇಕು ಎಂದು ಕೇಳಿದರೆ ನನ್ನ ಆಯ್ಕೆ ವಿನಯ್ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇತ್ತೀಚಿಗೆ ನಮ್ರತಾ ಡಿಮೋಟಿವ್ ಆಗಿದ್ದಾರೆ ಅವರು ಗೆದ್ದರೆ ನನ್ನಷ್ಟು ಖುಷಿಪಡುವವನು ಯಾರು ಇಲ್ಲ ಎಂಬ ಮಾತನ್ನು ಕೂಡ ಹೇಳಿದ್ದಾರೆ. ಈ ವೇಳೆ ನಮ್ರತಾ ಎಷ್ಟು ಜನರನ್ನ ಗೆಲ್ಲಿಸುತ್ತೀರಾ ಸ್ನೇಹಿತ್ ಎಂದು ಪ್ರಶ್ನೆ ಮಾಡಿದ್ದಾರೆ.
ಸ್ನೇಹಿತ್ ಮಾತು ಕೇಳಿದ ಮೇಲೆ ನಮ್ರತಾಗೆ ಅಳು ಬಂದಿದೆ ನನ್ನ ಜೊತೆಗೆ ಸ್ನೇಹದಿಂದ ಇದ್ದಿದ್ದು ಎಲ್ಲವೂ ಕೂಡ ಫೇಕ್ ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ವಿನಯ್ ಗೆಲ್ಲಬೇಕು ಎಂದರೆ ನಾನೇನು ಮಾಡಿದ್ದೆ ಇಲ್ಲಿ ಬಂದು ಅಟೆಂಶನ್ ಕ್ರಿಯೇಟ್ ಮಾಡಿಕೊಳ್ಳುತ್ತಾ ಇದ್ದಾರಾ ಎಂದು ನಮ್ರತಾ ಸ್ನೇಹಿತ್ ಬಗ್ಗೆ ಮಾತನಾಡಿದ್ದಾರೆ. ಕಾರ್ತಿಕ್ ಜೊತೆಗೆ ಸ್ನೇಹದಿಂದ ಇದ್ದಿದ್ದೆ ನಮ್ರತಾಗೆ ಈಗ ಮುಳುವಾಗಿ ಹೋಯಿತಾ ಎಂಬ ಪ್ರಶ್ನೆ ಕಾಡುತ್ತಿದೆ.


Click it and Unblock the Notifications











