BBK10: ಬಿಗ್ ಬಾಸ್‌ಗಿಂತ ನಮ್ರತಾ ಮಾತೇ ಮುಖ್ಯವಾಯ್ತಾ ಸ್ನೇಹಿತ್‌ಗೆ? ತಪ್ಪು ಎಂದು ಗೊತ್ತಾದರೂ ಪಶ್ಚಾತ್ತಾಪವೇ ಇಲ್ಲ!

By ಎಸ್ ಸುಮಂತ್

ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಕ್ಯಾಪ್ಟನ್ ಆಗಿದ್ದಾರೆ. ಇದು ಎರಡನೇ ಬಾರಿ ಸ್ನೇಹಿತ್ ಕ್ಯಾಪ್ಟನ್ ಆಗಿರುವುದು. ಬಂದ ಮೊದಲ ವಾರದಲ್ಲಿಯೇ ಕ್ಯಾಪ್ಟನ್ ಆದಾಗ ಬಿಗ್ ಬಾಸ್ ಮನೆಯ ನೀತಿ -ನಿಯಮಗಳು ಗೊತ್ತಾಗದೆ ಕೆಲವೊಂದು ಸಲ ತಪ್ಪು ಮಾಡಿರುವುದು ಇದೆ. ಆದರೆ, ಈ ಬಾರಿ ಎರಡನೇ ಸಲ ಕ್ಯಾಪ್ಟನ್ ಆಗಿದ್ದಾರೆ. ಅದರಲ್ಲೂ 58 ದಿನಗಳನ್ನು ಮನೆ ಮಂದಿ ಕಳೆದಿದ್ದಾರೆ. ಇಷ್ಟು ದಿನಗಳಲ್ಲಿ ಈಗ ಸ್ನೇಹಿತ್ ವರ್ತನೆಯೇ ಬದಲಾಗಿದೆ.

ಇವತ್ತಿನಿಂದ ಬಿಗ್ ಬಾಸ್ ಮನೆ ಹೊಸ ಲೋಕವಾಗಿ ಬದಲಾವಣೆಯಾಗಿದೆ. ಶುಕ್ರವಾರದ ತನಕ ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರ ದರ್ಶನವೇ ಆಗುತ್ತದೆ. ಈ ಲೋಕದಲ್ಲಿ ಟಾಸ್ಕ್‌ಗಳು ಇರುತ್ತವೆ. ಆ ಟಾಸ್ಕ್‌ಗಳನ್ನು ಆಡುವುದಕ್ಕೆ ಎರಡು ಬಲಿಷ್ಠ ತಂಡಗಳು ಬೇಕಿತ್ತು. ಆದ್ರೀಗ ಈ ತಂಡದಲ್ಲಿಯೇ ಸ್ಮೇಹಿತ್ ತಪ್ಪು ಮಾಡಿದ್ದಾರೆ.

Bigg Boss Kannada Season 10 Snehith who gave importance to Namratas words

ಬಲಿಷ್ಠ ತಂಡಗಳನ್ನು ಮಾಡಲು ಸೂಚನೆ

ಗಂಧರ್ವ ಹಾಗೂ ರಾಕ್ಷಸರನ್ನು ಹುಟ್ಟು ಹಾಕುವುದಕ್ಕೂ ಮುನ್ನವೇ ಒಂದು ಬಿಗ್ ಬಾಸ್ ಒಂದು ಟಾಸ್ಕ್ ಅನ್ನು ನೀಡಿತ್ತು. ಮನೆಯಲ್ಲಿ ನೆಗೆಟಿವ್ ಮತ್ತು ಪಾಸಿಟಿವ್ ಯಾರು ಎಂಬುದನ್ನು ಸೂಚಿಸಲು ಹೇಳಿತ್ತು. ಅದರಲ್ಲಿ ಸಂಗೀತಾಗೆ ನೆಗೆಟಿವ್ ಹೂಗಳು, ವರ್ತೂರು ಸಂತೋಷ್‌ಗೆ ಪಾಸಿಟಿವ್ ಹೂಗಳು ಹೆಚ್ಚಾಗಿ ಬಂದಿತ್ತು. ಬಳಿಕ ಬಿಗ್ ಬಾಸ್ ಇಬ್ಬರನ್ನು ಒಂದೊಂದು ತಂಡದ ಲೀಡರ್ ಆಗಿ ನೇಮಕ ಮಾಡಿತ್ತು. ಆ ಟೀಂಗೆ ಸಮನಾಗಿ ಬಲಿಷ್ಠರನ್ನು ನೇಮಕ ಮಾಡಲು ಸೂಚನೆ ನೀಡಿತ್ತು.

ಶಕ್ತಿ ಇರುವವರೆಲ್ಲಾ ಒಂದು ಕಡೆ

ಡ್ರೀಮ್ ಕಟ್ಟುವುದಕ್ಕೆ ಇಬ್ಬರ ಬಳಿಯೂ ಅಭಿಪ್ರಾಯ ಕೇಳುವುದು ಬಹಳ ಮುಖ್ಯವಾಗಿತ್ತು. ಸಂಗೀತಾ ಮೊದಲು ಮೈಕೆಲ್ ಹೆಸರನ್ನು ಸೂಚಿಸಿದ್ದರು. ಅದಕ್ಕೆ ಕಾರಣ ತನಿಷಾ ಕಾಲು ಸರಿ ಇಲ್ಲ. ಫಿಸಿಕಲ್ ಟಾಸ್ಕ್ ಆಡುವುದಕ್ಕೆ ಕಷ್ಟವಾಗುತ್ತದೆ. ಹೀಗಾಗಿ ಮೈಕೆಲ್ ಬೇಕು ಎಂದು ಹೇಳಿದ್ದರು. ಆದರೆ ಟೀಂ ಫಾರ್ಮ್ ಆದ ಮೇಲೆ ವರ್ತೂರು ಸಂತೋಷ್ ಟೀಂನಲ್ಲಿಯೇ ಶಕ್ತಿವಂತರೆಲ್ಲಾ ಸೇರಿಕೊಂಡರು.

Bigg Boss Kannada Season 10 Snehith who gave importance to Namratas words

ನಮ್ರತಾ ಮಾತು ಕೇಳಿ ಕೆಟ್ಟರಾ ಸ್ನೇಹಿತ್?

ಇತ್ತೀಚೆಗೆ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವುದಕ್ಕೆ ಟ್ರೈ ಮಾಡುತ್ತಲೇ ಇದ್ದಾರೆ. ಈಗ ಅವರೇಳಿದ ಮಾತಿನ ಮೇಲೆಯೇ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮ ಟೀಂನಲ್ಲಿ ವಿನಯ್ ಹಾಗೂ ಮೈಕೆಲ್ ಇದ್ದರೆ ತುಂಬಾ ಒಳ್ಳೆಯದು ಎಂದು ನಮ್ರತಾ ಹೇಳಿದಂತೆಯೇ ಸ್ನೇಹಿತ್ ನಿರ್ಧಾರ ತೆಗೆದುಕೊಂಡಿದ್ದಾರೆ.

ತನ್ನ ನಿರ್ಧಾರವೇ ಸರಿ ಇದೆ ಎಂದ ಸ್ನೇಹಿತ್

ಮೊದಲಿಗೆ ಮನೆಯ ಸದಸ್ಯರಿಗೆ ತಂಡಗಳನ್ನು ಸೇರಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು. ಆದರೆ, ಒಂದೇ ತಂಡಕ್ಕೆ ಹೆಚ್ಚಿನ ಜನ ಸೇರಿದ ಮೇಲೆ ಬಿಗ್ ಬಾಸ್ ಕ್ಯಾಪ್ಟನ್ ಸ್ನೇಹಿತ್‌ಗೆ ಅವಕಾಶ ನೀಡಿತ್ತು. ಎರಡು ತಂಡದಲ್ಲೂ ಬಲಿಷ್ಠ ಸ್ಪರ್ಧಿಗಳು ಇರುವಂತೆ ಹಂಚಿಕೆ ಮಾಡಬೇಕು ಎಂದು ಹೇಳಿದ್ದರು. ಆದರೆ ಸಂಗೀತಾ ತಂಡಕ್ಕೆ ಎಲ್ಲಾ ಕೊಂಚ ವೀಕ್ ಇರುವವರನ್ನು ಹಾಕಿ, ವರ್ತೂರು ಸಂತೋಷ್ ತಂಡಕ್ಕೆ ಎಲ್ಲಾ ಬಲಿಷ್ಠ ಸ್ಪರ್ಧಿಗಳನ್ನು ಹಾಕಿದ್ದಾರೆ. ಸಂಗೀತಾ ಸಾಕಷ್ಟು ಬಾರೀ ವಾದ ಮಾಡಿದರೂ, ತಾನೂ ಮಾಡಿದ್ದೆ ಸರಿ ಎಂದು ಸ್ನೇಹಿತ್ ವಾದ ಮಾಡಿದರು. ಕಡೆಗೆ ಇದು ಸರಿಯಲ್ಲ ಎಂದು ಬಿಗ್ ಬಾಸ್ ಕೂಡ ಅನಿಸಿದೆ. ಅದಕ್ಕೆ ಸ್ನೇಹಿತ್ ಬಳಿ ಕೇಳಿದ್ದಾರೆ. ನೀವೂ ತಂಡ ಮಾಡಿದ್ದು ನಿಮಗೆ ಸರಿ ಎನಿಸುತ್ತದೆಯೇ ಎಂದು ಕೇಳಿದ್ದಾರೆ. ಅದಕ್ಕೂ ಹೌದು ಅಂತಾನೇ ಸ್ನೇಹಿತ್ ಸ್ಟ್ಯಾಂಡ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೆ ಬಿಗ್ ಬಾಸ್ ಸುಮ್ಮನೆ ಆಗಿದ್ದಾರೆ.

More from Filmibeat

English summary
Bigg Boss Kannada Season 10 Snehith who gave importance to Namrata's words
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X