Bigg Boss Season 10: ದಿನ ಟಿವಿಲಿ ಬರ್ತಾರೆ ಡಾಕ್ಟರ್‌ ಬ್ರೋ, ಆದ್ರೆ ಬಿಗ್‌ಬಾಸ್‌ನಲ್ಲಿ ಅಲ್ಲ!

'ಬಿಗ್ ಬಾಸ್ ಕನ್ನಡ ಸೀಸನ್ 10'ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸ್ವರ್ಧಿಗಳ ಬಗ್ಗೆ ಮಾತ್ರ ಭಾರೀ ಕುತೀಹಲ ಮೂಡಿದೆ. ಏಕೆಂದರೆ ಈ ಬಾರಿ ಚಾರ್ಲಿ 777 ಸಿನಿಮಾದ ನಾಯಿ ಕೂಡ ಬಿಗ್ ಬಾಸ್‌ ಮನೆಗೆ ಪ್ರವೇಶ ಮಾಡ್ತಾಯಿದೆ. ಈಗಾಗಲೇ ಈ ಸೀಸನ್ ಹಳೆಯ ಬಿಗ್‌ ಬಾಸ್‌ನಂತೆ ಅಲ್ಲ, ತುಂಬಾ ವಿಶೇಷ ಎಂದು ಘೋಷಣೆ ಮಾಡಲಾಗಿದೆ.

ಈ ಬಾರಿ ಬಿಗ್‌ ಬಾಸ್ ಮನೆಗೆ ಯಾವ ಯಾವ ಸೆಲಬ್ರೆಟಿಗಳು ಹೋಗುತ್ತಾರೆ ಎನ್ನುವ ಕುತೂಹಲಕ್ಕೆ ಇನ್ನೇನೂ ತೆರೆ ಬೀಳಲಿದೆ. ಇದರ ನಡುವೆ ಹಲವು ನಟ ನಟಿಯರು ತಾವು ಮನೆಗೆ ಹೋಗುತ್ತಿಲ್ಲ ಎಂಬ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇನ್ನು, ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವ ಹೊಂದಿರುವ ಡಾಕ್ಟರ್ ಬ್ರೋ ಸ್ಪರ್ಧಿಗಳ ವದಂತಿ ಪಟ್ಟಿಯಲ್ಲಿದ್ದ ಪ್ರಮುಖರು. ಆದರೆ, ಇವರು ಬಿಗ್‌ಬಾಸ್‌ಗೆ ಬರಲ್ಲ ಎಂಬುದು ಈಗ ನಿಜವಾಗಿದೆ.

Bigg Boss Kannada Season 10:Social Media Influencer Gagan Srinivas (Dr Bro) Will Not Enter Bigg Boss House

ಡಾಕ್ಟರ್ ಬ್ರೋ ಟಿವಿಲಿ ಬರ್ತಾರೆ, ಬಿಗ್‌ಬಾಸ್‌ಗೆ ಅಲ್ಲ!

ದೇಶ ವಿದೇಶಗಳನ್ನು ಸುತ್ತಿ ಕನ್ನಡದಲ್ಲಿ ಮಾಹಿತಿ ನೀಡುತ್ತಾ ಕನ್ನಡದ ಕಂಪು ಹರಿಸುತ್ತಿರುವ ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ವಿಡಿಯೋಗಳು ಮಿಲಿಯನ್‌ ಲೆಕ್ಕದಲ್ಲಿ ವೀಕ್ಷಣೆ ಪಡೆಯುತ್ತವೆ. ಲಕ್ಷಾಂತರ ಮಂದಿ ಫಾಲೋವರ್ಸ್ ಇರುವ ಇವರು ಈ ಬಾರಿಯ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಬಹು ಜನರ ಕನಸಾಗಿತ್ತು. ಹಲವು ಈ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಬೆಂಬಲ ನೀಡಿದ್ದರು. ಆದರೆ, ಅಭಿಮಾನಿಗಳ ಆಸೆ ಈಡೇರುತ್ತಿಲ್ಲ. ಏಕೆಂದರೆ ಅವರು ಬಿಗ್‌ಬಾಸ್‌ಗೆ ಬರುವುದಿಲ್ಲ ಎಂಬ ಬಗ್ಗೆ ಈಗಾಗಲೇ ಸ್ಪಷ್ಟನೆ ಸಿಕ್ಕಿದೆ.

ಗಗನ್ ಶ್ರೀನಿವಾಸ್ ಈ ಬಾರಿ ಕಲರ್ಸ್ ಕನ್ನಡದಲ್ಲಿ ಅಲ್ಲ. ಸ್ಟಾರ್ ಸ್ಪೋರ್ಟ್ ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಡಾಕ್ಟರ್ ಬ್ರೋ ದೇಶ, ವಿದೇಶಗಳ ವಿಡಿಯೋಗಳನ್ನು ತೋರಿಸುವುದು, ಅವುಗಳನ್ನು ಕನ್ನಡದಲ್ಲಿ ವಿವರಿಸುವ ಅವರ ಮೇಲೆ ಜನರಿಗೆ ವಿಪರೀತ ಪ್ರೀತಿ. ಆದರೆ, ಈ ಬಾರಿ ಅವರು ವಿಶೇಷ ಮಿಷನ್ ಮೇಲೆ ಹೋಗಿದ್ದಾರೆ. ಅದು ನಿಮ್ಮ ಮುಂದೆ ವಿಶ್ವಕಪ್ ಪಂದ್ಯಗಳನ್ನು ವಿವರಿಸುವುದು.

ಈ ಬಗ್ಗೆ ಸ್ಟಾರ್ ಸ್ಪೋರ್ಟ್ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಡಾಕ್ಟರ್ ಬ್ರೋ ವಿಡಿಯೋ ಹಂಚಿಕೊಂಡಿರುವ ಖಾತೆ, "ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್... ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ" ಎಂದು ಹೇಳಿದೆ.

ಡಾಕ್ಟರ್ ಬ್ರೋ ವಿಡಿಯೋದಲ್ಲಿ "ಎಂದಿನಂತೆ ನಾನು ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್​ಪೋರ್ಟ್​​ಗೆ ಬಂದಿದ್ದೇನೆ. ಆದರೆ, ಈ ಸಲ ಸ್ಪೆಷಲ್ ಮಿಷನ್​ಗೆ ಹೋಗ್ತಾ ಇದೀವಿ" ಎಂದು ಹೇಳಿ ವಿಶ್ವಕಪ್​ನ ಮೊದಲ ಭಾರತದ ಮ್ಯಾಚ್ ನಡೆಯಲಿರುವ ಚೆನ್ನೈನಲ್ಲಿ ಇಳಿದಿದ್ದಾರೆ. ನಂತರ ಆಟೋ ಏರಿ ಪಂದ್ಯ ನಡೆಯಲಿರುವ ಚಿದಂಬರಂ ಸ್ಟೇಡಿಯಂ ಮುಂದೆ ಇಳಿದ್ದಾರೆ. ಆಟೋದವರ ಜೊತೆಗೆ ಚಿಕ್ಕ ಚಿಟ್ ಚಾಟ್ ನಡೆಸಿದ ನಂತರ "ನಾನು ಗಂಟುಮೂಟೆ ಹೊತ್ತುಕೊಂಡು ಎಲ್ಲೆಲ್ಲಿ ವರ್ಡ್‌ಕಪ್ ಮ್ಯಾಚ್ ನಡೆಯುತ್ತದೆಯೋ ಅಲ್ಲಲ್ಲಿಗೆ ಹೋಗ್ತೀನಿ" ಎಂದು ಮಾಹಿತಿ ನೀಡಿದ್ದಾರೆ.

ಡಾಕ್ಟರ್ ಬ್ರೋ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್‌ ಮೂಲಕ ಶುಭಾಶಯ ಕೋರಿದ್ದಾರೆ. "ಗುರು ವಿಮಾದಲ್ಲಿ ಹೋಗಿ ಆಟೋದಲ್ಲಿ ಹೋಗಿದಿಯ.. ನಿಜ್ವಾಗ್ಲೂ ನಿನ್ ದೊಡ್ಡಮನುಷ್ಯ ದೇವ್ರು" ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಮತ್ತೊಬ್ಬರು "ಸ್ಟಾರ್ಸ್ ಸ್ಪೋರ್ಟ್ಸ್ ಕನ್ನಡ ಚಾನಲ್ಗೆ TRP ನೋ TRP....ಹೊಡಿ ಸಾವಗ್ಯಾನ್ ಮಜ್ಜಗಿ...ಡಾಕ್ಟರ್ ಬ್ರೋ ಬೆಂಕಿ ನೀನು" ಎಂದು ಖುಷಿ ಪಟ್ಟಿದ್ದಾರೆ.

More from Filmibeat

English summary
Bigg Boss Kannada Season 10: social media influencer gagan srinivas (dr bro) will not enter bigg boss house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X