2024 ವಿನಯ್ ಗೌಡ ಪಾಲಿಗೆ ರಾಜಯೋಗ!: ಗುರೂಜಿ ಭವಿಷ್ಯದಂತೆ ಬಿಗ್ ಬಾಸ್ ಟ್ರೋಫಿಗೆ ಮುತ್ತಿಡುತ್ತಾರಾ?
ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೇನು ಫಿನಾಲೆ ಹಂತಕ್ಕೆ ಬರುತ್ತಿದೆ. ಒಬ್ಬೊಬ್ಬರೆ ಸ್ಪರ್ಧಿಗಳು ಮನೆಯಿಂದ ಹೊರಹೋಗುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ವರ್ಷದ ಪ್ರಯುಕ್ತ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ವಿಶೇಷ ಅತಿಥಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದರು. ಈ ವೇಳೆ ಸ್ಪರ್ಧಿಗಳ ಭವಿಷ್ಯದ ಬಗ್ಗೆ ಮಾತನಾಡಿದ್ದರು. ಈಗ ಕಲರ್ಸ್ ಕನ್ನಡ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ, ವಿನಯ್ ಗೌಡ ಬಗ್ಗೆ ಹೇಳಿದ್ದ ಭವಿಷ್ಯವನ್ನು ಹಂಚಿಕೊಂಡಿದೆ.
ಶುಕ್ರನ ಆಡಳಿತಕ್ಕೆ ಬರುತ್ತದೆ. ನಿಮ್ಮ ಮನದನ್ನೆಯಿಂದ ಮಾತ್ರ ಬದುಕು ಚೆನ್ನಾಗಿ ನಡೆಯುತ್ತದೆ... ನಿಮಗೆ ಈ ವರ್ಷ ರಾಜಯೋಗವಿದೆ.... ಹೀಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ವಿನಯ್ ಗೌಡ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದನ್ನು ನೋಡಿ ಈ ಬಾರಿ ವಿನಯ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಡಲಿದ್ದಾರೆ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್.

ಮನದನ್ನೆಯಿಂದ ಮಾತ್ರ ವಿನಯ್‌ಗೆ ಸುಖ-ಸೌಕರ್ಯ!
ಮೊದಲಿಗೆ ದೀಪಕ್ಕೆ ಹಾಕಿರುವ ಹೂವಿನ ಹಾರದಲ್ಲಿ ಎರಡು ಬೆರಳುಗಳಿಂದ ಹೂವಿನ ದಳಗಳನ್ನು ತೆಗೆದುಕೊಳ್ಳಲು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ವಿನಯ್‌ಗೆ ಸೂಚಿಸುತ್ತಾರೆ. ಇದರಲ್ಲಿ 51 ದಳಗಳು ಬರುತ್ತವೆ. ಇದನ್ನು ನೋಡಿದ ಗುರೂಜಿ, ಐವತ್ತೊಂದು ಅಂದರೆ ಐದು ಮತ್ತು ಒಂದು ಒಟ್ಟು ಆರು. ಸಂಖ್ಯೆ 6 ಎಂದರೆ ಅದು ಶುಕ್ರದ ಸಂಕೇತ. 6ನೇ ಸಂಖ್ಯೆ ಶುಕ್ರ ಆಡಳಿತಕ್ಕೆ ಬರುತ್ತದೆ ಎಂದು ತಿಳಿಸುತ್ತಾರೆ.
ಮುಂದುವರಿದು, "ನಿಮ್ಮ ಜೀವನದಲ್ಲಿ ನಿಮ್ಮ ಸುಖ ಸೌಕರ್ಯವೆಲ್ಲಾ ಪ್ರಾಪ್ತವಾಗೋದು ಸ್ತ್ರೀಯಿಂದ ಮಾತ್ರ. ಅದರಲ್ಲೂ ಮನದನ್ನೆಯಿಂದ ಮಾತ್ರ ಸಿಗುವಂಥದ್ದು. ಇನ್ಯಾರಿಂದಲೂ ಸಿಗುವುದಿಲ್ಲ. ಬಹಳಷ್ಟು ನೋವು, ಕಷ್ಟಗಳನ್ನು ಹೆಣ್ಣಿನಿಂದಲೇ ಅನುಭವಿಸಿರುತ್ತೀರಿ" ಎಂದು ಗುರೂಜಿ ಹೇಳಿದ್ದಾರೆ.
2024ರಲ್ಲಿ ವಿನಯ್‌ಗೆ ರಾಜಯೋಗ!
ಜೊತೆಗೆ "ಒಟ್ಟಾರೆ ಶುಕ್ರ ಎಂದು ಬಂದಾಗ....ನೀವು ಅಲಂಕಾರ ಮಾಡಿಕೊಂಡರೆ ಮಾತ್ರವಲ್ಲ ನಿಮ್ಮ ಜೊತೆಯವರೂ ಅಲಂಕಾರ ಮಾಡಿಕೊಳ್ಳಬೇಕು ಎಂಬ ಭಾವನೆ ನಿಮ್ಮದು. ಅಂತಹ ಅಲಂಕಾರ ಪ್ರಿಯರು ನೀವು. ಜೊತೆಗೆ ನಿಮಗೆ ಎರಡು ಕಿವಿಗಳ ಕಡೆ ಅದೃಷ್ಟದ ಮಚ್ಚೆ ಇದೆ" ಎಂಬುದನ್ನು ಹೇಳಿದ್ದಾರೆ.

"2024ರಲ್ಲಿ ನಿಮಗೆ ದೊಡ್ಡ ಮಟ್ಟದ ರಾಜಯೋಗವಿದೆ. ಕೆರಿಯರ್ ಲೈಫ್‌ನಲ್ಲಿ ಬದಲಾವನೆಯ ಯೋಗವಿದೆ. ನಿಮ್ಮ ಬಯಕೆಗಳು ಕರೆಯರ್ ಪೈಫ್‌ನಲ್ಲಿ ಫಲಿಸಿಯೇ ಫಲಿಸುತ್ತವೆ. ಖಂಡಿತ ಎ್ಲವೂ ನಿಮಗೆ ಶುಭದಾಯಕವಾಗಿದೆ" ಎಂದು ದೊಡ್ಡ ಸೂಚನೆಯನ್ನೇ ವಿನಯ್‌ಗೆ ನೀಡಿದ್ದಾರೆ.
ಇನ್ನು, ಗುರೂಜಿ ಭವಿಷ್ಯವಾಣಿಗೆ ವಿನಯ್ ಫ್ಯಾನ್ಸ್ ಫುಲ್ ಖುಶ್ ಆಗದ್ದಾರೆ. "ವಿನಯ್ ಲೈಕ್ ಡಿ ಬಾಸ್ ಏನು ವಿವಾದ ಮಾಡಿದ್ರೂ ಅವರಿಗೆ ಪ್ರೀತಿ ಕೊಟ್ಟರೆ ಪ್ರೀತಿ 100% ಕೊಡ್ತಾರೆ . ಕೆಣಕಿದರೆ ಮುಟ್ಟಿ ನೋಡ್ಕೊಳ್ತಾರೆ" ಎಂದು ಒಬ್ಬರು ಕಾಂಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಸೂಪರ್ ವಿನಯ್ ಬಿಗ್ ಬಾಸ್ ಟ್ರೋಫಿ ರಾಜಯೋಗವಿರೋ ನಿಮಗೆ" ಎಂದು ಹೇಳಿದ್ದಾರೆ.
ಬಿಗ್ ಬಾಸ್ ಗೆಲ್ತಾರಾ ವಿನಯ್!?
ಬಿಗ್ ಬಾಸ್ ಹತ್ತನೇ ಸೀಸನ್‌ನಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದ ಕೂಡಲೇ ಮೊದಲು ವಿನಯ್ ಹೆಸರು ಬರುತ್ತದೆ. ತಮ್ಮ ಕೆಲವು ನಡವಳಿಕೆಗಳಿಂದ ಪದೇ ಪದೇ ಟೀಕೆಗೆ ಗುರಿಯಾದರೂ ಕೂಡ ಸಕತ್ ಪೈಪೋಟಿ ನೀಡಬಲ್ಲ ಒಬ್ಬ ಸ್ಪರ್ಧಿ. ಮೊದಲೇ ತಾನು ಬಿಗ್ ಬಾಸ್ ಗೆಲ್ಲುತ್ತೇನೆ ಎನ್ನುತ್ತಿರುವ ಅವರಿಗೆ ಈಗ ಗುರೂಜಿ ಭವಿಷ್ಯ ಮತ್ತಷ್ಟು ಆತ್ಮಸ್ಥೈರ್ಯ ಮೂಡಿಸಿರುವುದು ಸುಳ್ಳಲ್ಲ.


Click it and Unblock the Notifications











