BBK10: ಬಿಗ್ ಬಾಸ್ ವಿನ್ನರ್ ವಿನಯ್..? ಮನೆಯೊಳಗೆ ಗುರೂಜಿ ಕೊಟ್ಟ ಸೂಚನೆ ಏನು..?

By ಎಸ್ ಸುಮಂತ್

ಬಿಗ್ ಬಾಸ್ ಶುರುವಾದಾಗಿನಿಂದ ಮನೆಯಲ್ಲಿ ಆನೆಯಂತೆ ಪಳಗಿರುವುದು ವಿನಯ್. ಆ ಗತ್ತು, ಏರುಧ್ವನಿ ಸುಮ್ಮನೆ ಎಲ್ಲರನ್ನು ಹೆದರಿಸುವಂತೆ ಇತ್ತು. ವಿನಯ್ ಒಂದು ಸ್ಟ್ರಾಂಗ್ ಗುಂಪನ್ನೇ ಕಟ್ಟಿಕೊಂಡಿದ್ದರು. ಆ ಗುಂಪಿನಲ್ಲಿ ಇದ್ದವರು ವಿನಯ್ ಗೆಲುವಿಗೆ ಬೆಂಬಲವಾಗಿ ನಿಂತಿದ್ದರು. ಸುದೀಪ್ ಆ ವಿಚಾರವನ್ನು ಸಾಕಷ್ಟು ಬಾರಿ ಸೂಕ್ಷ್ಮವಾಗಿ ಹೇಳಿದ್ದರು. ನೀವೆಲ್ಲಾ ಸೇರಿ ಫೈನಲಿಸ್ಟ್‌ನ ರೆಡಿ ಮಾಡುತ್ತಿದ್ದೀರಾ ಎಂದಿದ್ದರು.

ಬಳಿಕ ಆನೆಯನ್ನು ಪಳಗಿಸುತ್ತೀನಿ ಅಂತ ಮಾವುತನಾಗಿ ಅವಿನಾಶ್ ಬಂದಿದ್ದರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಆದರೆ, ಬಹಳ ದಿನಗಳ ಕಾಲ ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಂದಿವರೆಸಲೇ ಇಲ್ಲ. ನಿರೀಕ್ಷೆಗಿಂತ ಮೊದಲೇ ಮನೆಯಿಂದ ಮಾವುತ ಕಾಲ್ಕಿತ್ತಿತು. ಇದಿ ಆನೆ ಮತ್ತಷ್ಟು ಸ್ಟ್ರಾಂಗ್ ಆಗುವಂತೆ ಮಾಡಿತು.

Bigg Boss Kannada Season 10 Sri Vidyashankaranda Saraswati guruji about Vinay

ವಿನಯ್ ಸ್ಟ್ರಾಂಗ್ ಕಂಟೆಸ್ಟೆಂಟ್

ಬಿಗ್ ಬಾಸ್ ಮನೆಗೆ ವಿನಯ್ ಎಂಟ್ರಿ ಕೊಟ್ಟಲ್ಲಿಂದ ಅವರ ಜರ್ನಿಯನ್ನು ಗಮನಿಸಿದರೆ, ಎಲ್ಲಿಯೂ ಅವರು ವೀಕ್ ಆಗಿ ಕಂಡಿಲ್ಲ. ಟಾಸ್ಕ್ ವಿಚಾರ ಬಂದಾಗ 100% ಕೊಟ್ಟಿದ್ದಾರೆ. ಜಗಳ ಅಂತ ಬಂದರೆ ಎಲ್ಲರನ್ನು ಮೀರಿಸುವಂತೆ ಜಗಳವನ್ನು ಆಡಿದ್ದಾರೆ. ತೊಡೆ ತಟ್ಟಿಯೂ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಆರಂಭದಿಂದಲೂ ಸಂಗೀತಾ ಹಾಗೂ ವಿನಯ್ ನಡುವೆ ಕೋಲ್ಡ್ ವಾರ್ ನಡೆಯುತ್ತಲೆ ಇದೆ. ಅದು ಇಂದಿಗೂ ಸರಿ ಹೋಗಿಲ್ಲ.

ವಿನಯ್ ಗೆಲ್ಲುತ್ತಾರೆ ಎಂದವರೇ ಹೆಚ್ಚು

ವಿನಯ್ ಅವರನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಅವರ ಗುಣ ಅರ್ಥವಾಗುತ್ತದೆ. ತಮ್ಮ ಜೊತೆಗೆ ಇದ್ದವರನ್ನು ಅವರು ಬಿಟ್ಟು ಕೊಡುವುದಿಲ್ಲ. ಅದಕ್ಕೆ ಉದಾಹರಣೆ ಸ್ನೇಹಿತ್ ಹಾಗೂ ಮೈಕಲ್. ಒಮ್ಮೆ ವರ್ತೂರು ಸಂತೋಷ್ ಅವರಿಗೂ ಕ್ಯಾಪ್ಟನ್ ಟಾಸ್ಕ್‌ನಲ್ಲಿ ಸಹಾಯ ಮಾಡಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದವರೆಲ್ಲಾ ವಿನಯ್ ಕೂಡ ಟಾಪ್ ಲಿಸ್ಟ್‌ನಲ್ಲಿ ಇರಲಿದ್ದಾರೆ. ಹಾಗೇ ನೋಡಿದರೆ ವಿನಯ್ ಫೈನಲ್ ಆಗಿ ಗೆಲ್ಲಬಹುದು ಎಂದೇ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಬಿಗ್ ಬಾಸ್ ಮನೆಯೊಳಗೆ ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಕೂಡ ಹೋಗಿದ್ದು, ಸ್ಪರ್ಧಿಗಳ ಭವಿಷ್ಯ ನುಡಿದ್ದಿದ್ದಾರೆ.

Bigg Boss Kannada Season 10 Sri Vidyashankaranda Saraswati guruji about Vinay

ವಿನಯ್ ಗೆಲುವಿಗಾಗಿ ಫ್ಯಾನ್ಸ್ ಪ್ರಚಾರ

ವಿನಯ್ ಗೆಲುವಿಗಾಗಿ ಬಹಳ ದಿನಗಳಿಂದಾನೂ ಕ್ಯಾಂಪೇನ್ ಆರಂಭವಾಗಿದೆ. ವಿನಯ್ ಮನೆಯಲ್ಲೂ ಹೊರಗೆ ಇರುವಂತೆಯೇ ಇರುವುದು. ಆಟದಲ್ಲೂ 100% ಕೊಟ್ಟಿದ್ದಾರೆ. ದಯವಿಟ್ಟು ಅವರನ್ನು ಗೆಲ್ಲಿಸಿ ಎಂದು ಸ್ನೇಹಿತರು, ಸಂಬಂಧಿಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಅವರ ಫಾಲೋವರ್ಸ್ ಕಡೆಯಿಂದ ವೋಟ್‌ಗಳು ಹೆಚ್ಚಾಗುತ್ತಿವೆ. ಟಾಪ್ ಐದರಲ್ಲಿ ವಿನಯ್, ಕಾರ್ತಿಕ್, ಸಂಗೀತಾ, ಪ್ರತಾಪ್, ವರ್ತೂರು ಸಂತೋಷ್ ಇರಬಹುದು ಎಂಬ ಊಹೆ ಎಲ್ಲರಿಂದಾನು ಶುರುವಾಗಿದೆ. ಇನ್ನು ಕೆಲಸವೇ ದಿನಗಳಲ್ಲಿ ಬಿಗ್ ಬಾಸ್ ಜರ್ನಿಗೆ ತೆರೆ ಬೀಳಲಿದೆ. ಅಂದು ಫೈನಲಿಸ್ಟ್ ಸಾಲಿನಲ್ಲೂ ಯಾರು ನಿಲ್ಲುತ್ತಾರೆ. ಸುದೀಪ್ ಎಡಗಡೆ ಹಾಗೂ ಬಲಗಡೆ ಯಾರು ಇರುತ್ತಾರೆ ಎಂಬ ಕುತೂಹಲ ಖಂಡಿತ ಎಲ್ಲರಲ್ಲೂ ಇದೆ.

ಗೂರೂಜಿ ಮುನ್ಸೂಚನೆ ನೀಡಿದ್ರಾ ?

ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜಿ ಬಿಗ್‌ಬಾಸ್‌ನ ಸ್ಟ್ರಾಂಗ್ ಕಂಟೆಸ್ಟೆಂಟ್ ವಿನಯ್ ಭವಿಷ್ಯ ನುಡಿಯುವುದಕ್ಕೂ ಮುನ್ನ ದಳಗಳನ್ನು ತೆಗೆಸಿದರು. ಅದರಲ್ಲಿ 51 ದಳ ಬಂತು ಅಂದರೆ 6. ಶುಕ್ರ ಆಡಳಿತಕ್ಕೆ ಬರುತ್ತದೆ. ನಿಮ್ಮ ಸುಖ, ಸಂಪತ್ತು ವೃದ್ದಿಸುವುದು ಮನದನ್ನೆಯಿಂದ ಮಾತ್ರ. ನಿಮ್ಮ ಹೆಂಡತಿಯ ಬಿಗಿ ಹಿಡಿತದಿಂದಾಗಿ ಬದುಕು ತುಂಬಾ ಚೆನ್ನಾಗಿ ನಡೆಯುತ್ತಿದೆ. 2024ರಲ್ಲಿ ಬಹುದೊಡ್ಡ ಯೋಗವಿದೆ. ರಾಜಯೋಗವಿದೆ. ನಿಮ್ಮ ಬಯಕೆಗಳು ಫುಲ್ ಫಿಲ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

More from Filmibeat

English summary
BBK 10 Sri Vidyashankaranda Saraswati guruji hints Vinay Biggboss winner ?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X