ಕಾರ್ತಿಕ್ ಕಾಲೆಳೆದ ಕಿಚ್ಚ ಸುದೀಪ್; ಈ ವಾರ ಮನೆಯಿಂದ ಹೊರಗೆ ಹೋಗೋದು ಯಾರು ಎಂಬುದೇ ಸಸ್ಪೆನ್ಸ್!
ಬಿಗ್ ಬಾಸ್ ಸೀಸನ್ 10 ಹಲವಾರು ಕುತೂಹಲಗಳೊಂದಿಗೆ ಪ್ರಸಾರ ಕಾಣುತ್ತಿದೆ. ಈಗಾಗಲೇ 90 ದಿನಗಳ ಸಮೀಪಕ್ಕೆ ಬಿಗ್ ಬಾಸ್ ತಲುಪಿದ್ದು ಸೆಮಿ ಫೈನಲ್‌ಗೆ ಕ್ಷಣಗಣನೆ ಶುರುವಾಗಿದೆ. ಕಾರ್ತಿಕ್ ನಾಮಿನೇಟ್ ಆಗಿದ್ದರು ಸದ್ಯ ಅವರು ಸೇಫ್ ಅಗಿದ್ದಾರೆ. ಉಳಿದ ಮೈಕಲ್, ಪ್ರತಾಪ್, ವರ್ತೂರು ಸಂತು ಹಾಗೂ ತುಕಾಲಿ ಸಂತೋಷ್ ವೈಟಿಂಗ್ ಲಿಸ್ಟ್ ನಲ್ಲಿ ಇದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗೋದು ಯಾರು ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಕೂಡ ಕಾಡುತ್ತಿದೆ. ವರ್ತೂರು ಸಂತೋಷ್ ಹಾಗೂ ಮೈಕಲ್ ಇಬ್ಬರು ಕೂಡ ಈಗಾಗಲೇ ಮೆಂಟಲಿ ಪ್ರಿಪೇರ್ ಆಗಿದ್ದಾರೆ. ಹಲವಾರು ಬಾರಿ ನಾಮಿನೇಟ್ ಆಗಿ ಸೇವಾದ ಕಾರಣ ಇವರಿಗೆ ಮನೆಯಿಂದ ಹೊರಗೆ ಹೋಗೋದು ಕಷ್ಟದಂತೆ ಕಾಣುತ್ತಿಲ್ಲ.
ವರ್ತೂರು ಸಂತೋಷ್ ತನಿಷಾ ಬಳಿ ಈಗಾಗಲೇ ನಾನು ಮನೆಯಿಂದ ಹೊರಗೆ ಹೋದರು ಕೂಡ ಬೇಜಾರಿಲ್ಲ. ಮನೆಯಿಂದ ಹೊರಗೆ ಹೋದ ಮೇಲು ನೀನು ಯಾವ ರೀತಿ ಆಟವನ್ನ ಆಡುತ್ತೀಯಾ ಎಂಬುದನ್ನು ನೋಡುತ್ತೇನೆ ಚೆನ್ನಾಗಿ ಆಟವಾಡು. ಅಸಮರ್ಥರಲ್ಲಿ ಯಾರೇ ಗೆದ್ದರೂ ಕೂಡ ನನಗೆ ಖುಷಿಯಾಗುತ್ತದೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ. ವರ್ತೂರು ಸಂತೋಷ್ ಈ ಮಾತಿನಿಂದಲೇ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಹೋದರು ಸಹ ಅವರಿಗೆ ಬೇಸರ ಇಲ್ಲ ಎಂಬಂತೆ ತೋರುತ್ತಿದೆ. ಇನ್ನು ಮೈಕಲ್ ಕೂಡ ಒಮ್ಮೆ ಹೊರಗೆ ಹೋಗಿ ವಾಪಸ್ ಬಂದಿದ್ದಾರೆ ಅವರು ಕೂಡ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ ಸದ್ಯಕ್ಕೆ ಇವರ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂಬುದೇ ಕುತೂಹಲವಾಗಿದೆ.

ಕಿಚ್ಚ ಸುದೀಪ್ ಅವರು ಮನೆಯ ಎಲ್ಲಾ ಸದಸ್ಯರಿಗೂ ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ. ಸ್ವಾರ್ಥಿಗಳಂತೆ ಆಟವಾಡುವುದನ್ನ ನಿಲ್ಲಿಸಿ ಎಲ್ಲರೂ ಕೂಡ ಪ್ರೀತಿಯಿಂದ ಆಟವಾಡಿ ಎಂದು ಹೇಳಿದ್ದಾರೆ. ಇದರ ಜೊತೆಗೆ ಎಲ್ಲರೂ ಕೂಡ ದುರಾಹಂಕಾರದಿಂದ ನಡೆದುಕೊಳ್ಳುತ್ತಾ ಇದ್ದೀರಾ ಅದನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ. ಇಲ್ಲವೇ ಮನೆಯ ಮುಖ್ಯದ್ವಾರವಾದ ಬಾಗಿಲನ್ನ ತೆಗೆಸುತ್ತೇನೆ ಎಲ್ಲರೂ ಮನೆಯಿಂದ ಹೊರಡಿ. ನಾನು ನಡೆಸುವ ಶೋನಲ್ಲಿ ಆ ರೀತಿ ನಡೆದುಕೊಳ್ಳುವುದು ನನಗೆ ಇಷ್ಟವಾಗುವುದಿಲ್ಲ ಎಂದು ಎಲ್ಲರಿಗೂ ಕೂಡ ಬಿಸಿ ಮುಟ್ಟಿಸಿದ್ದಾರೆ.
ಕಾರ್ತಿಕ್ ಕಾಲೆಳೆದ ಕಿಚ್ಚ, ನಕ್ಕು ನಲಿದ ಮನೆ ಮಂದಿ
ಕಾರ್ತಿಕ್ ಅವರು ಬಿಗ್ ಬಾಸ್ ಮನೆಯಲ್ಲಿರುವ ಸ್ಟ್ರಾಂಗ್ ಕಂಟೆಸ್ಟೆಂಟ್. ಸದ್ಯಕ್ಕೆ ಈ ವಾರವೂ ಕೂಡ ಸೇಫ್ ಆಗಿದ್ದು ತುಂಬಾ ಖುಷಿಯಲ್ಲಿ ಇದ್ದಾರೆ. ಇನ್ನು ಕಿಚ್ಚ ಸುದೀಪ್ ಅವರು ತಮ್ಮ ಸೂಪರ್ ಸಂಡೇ ವಿಥ್ ಸುದೀಪ ಕಾರ್ಯಕ್ರಮವನ್ನು ನಡೆಸಿಕೊಡಲು ಬಂದಿದ್ದಾರೆ. ಕಿಚ್ಚ ಸುದೀಪ್ ಈ ವಾರ ಸ್ಪರ್ದಿಗಳ ಮನಸ್ಸಿನಲ್ಲಿ ಯಾವ ರೀತಿಯ ಭಾವನೆ ಇದೆ ಅದನ್ನು ಹೊರಗೆ ತರಿಸುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಕಾರ್ತಿಕ್ ಅವರ ಕಾಲ್ ಎಳೆದು ಸ್ವಲ್ಪ ಎಂಟರ್ಟೈನ್ಮೆಂಟ್ ನೀಡಿದ್ದಾರೆ.

ಸ್ನೇಹಿತ್ ಹೋದ ಮೇಲೆ ನಮ್ರತಾ ಅವರಿಗೆ ಹೊಸ ಸ್ನೇಹಿತ ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಂಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. ಕೂಡಲೇ ಎಲ್ಲರೂ ಕೂಡ ಎಸ್ ಎಂಬ ಬೋರ್ಡನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ಸಂಗೀತ ಅವರು ನನ್ನ ಜೊತೆಯಲ್ಲಿ ಫಸ್ಟ್ ಆಫ್ ಇದ್ದರು ನಂತರ ನಮ್ರತಾ ಜೊತೆಯಲ್ಲಿ ಸೆಕೆಂಡ್ ಆಫ್ ಕಂಟಿನ್ಯೂ ಮಾಡಿದ್ದಾರೆ ಎಂದಿದ್ದಾರೆ. ಆ ಕೂಡಲೇ ಕಾರ್ತಿಕ್ ಈ ಮಾತನ್ನು ಸಂಗೀತ ನನಗೆ ಹೇಳುತ್ತಿದ್ದಾರೆ ಎಂದುಕೊಂಡು ಮಧ್ಯದಲ್ಲಿ ಮಾತನಾಡಲು ಹೋಗಿ ಕಿಚ್ಚ ಸುದೀಪ್ ಅವರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಕಿಚ್ಚನ ಮಾತಿಗೆ ನಕ್ಕ ಸ್ಪರ್ಧಿಗಳು
ಕಾರ್ತಿಕ್ ಅವರು ಇಲ್ಲ ಸರ್ ನಾನು ನಮ್ರತಾ ಜೊತೆಗೆ ಮೊದಲಿನಿಂದಲೂ ಸ್ನೇಹದಿಂದಲೇ ಇದ್ದೆ, ಅವರು ನನಗೆ ಮೊದಲೇ ಗೊತ್ತಿತ್ತು ಎಂದು ಹೇಳಲು ಹೊರಟಾಗ ಕಿಚ್ಚ ಸುದೀಪ್ ಅವರು ಕಾರ್ತಿಕ್ ಕಾಲೆಳೆದಿದ್ದಾರೆ. ನಾನು ಇಲ್ಲಿ ನಿಮ್ಮ ಹೆಸರನ್ನೇ ತೆಗೆದುಕೊಂಡಿಲ್ಲ. ನಿಮ್ಮ ಬಗ್ಗೆ ಮಾತನಾಡುತ್ತಾ ಇದ್ದೀನಿ ಎಂದು ಯಾವ ನನ್ನ ಮಗ ಹೇಳಿದ್ದು ಎಂದು ಹಾಸ್ಯ ಚಟಾಕಿಯನ್ನ ಆರಿಸಿದ್ದಾರೆ. ಕಾರ್ತಿಕಗೆ ಕನ್ಫ್ಯೂಸ್ ಮಾಡುವ ಮೂಲಕ ಇಡೀ ಮನೆಯಲ್ಲಿರುವ ಸದಸ್ಯರನ್ನೆಲ್ಲ ನಗಿಸಿದ್ದಾರೆ ಸೂಪರ್ ಸಂಡೆ ಕಾರ್ಯಕ್ರಮಕ್ಕಾಗಿ ವೀಕ್ಷಕರು ಕಾಯುತ್ತಾ ಇದ್ದಾರೆ.


Click it and Unblock the Notifications











