BBK 10: ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ದಿಢೀರ್ ನಾಪತ್ತೆ.. ಮನೆಯಿಂದ ಹೊರ ಬಂದ್ರಾ? ಟಾಸ್ಕಾ?
ಬಿಗ್ ಬಾಸ್ ಮನೆಯಲ್ಲಿ ಆಗಾಗ ಒಂದೊಂದು ಟ್ವಿಸ್ಟ್ ಸಿಗುತ್ತಾ ಇರುತ್ತದೆ. ಇಂಟ್ರೆಸ್ಟಿಂಗ್ ಎನಿಸುವಂತ ಟಾಸ್ಕ್‌ಗಳನ್ನು ಆಡಿಸುತ್ತಾ ಇರುತ್ತಾರೆ. ಕೆಲವೊಮ್ಮೆ ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಒಂದೇ ಕಡೆ ಇದ್ದೂ ಇದ್ದು ಕೆಲವೊಮ್ಮೆ ಮನೆಯ ಸದಸ್ಯರು ಆಕ್ಟೀವ್ ಆಗುವುದನ್ನೇ ಮರೆತು ಬಿಡುತ್ತಾರೆ. ಆಗ ಬಿಗ್ ಬಾಸ್ ಆಕ್ಟೀವ್ ಆಗುತ್ತದೆ.
ಬಿಗ್ ಬಾಸ್ ಮನೆಯಲ್ಲಿ ಇದೀಗ ಹೊಸದೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಅದು ಸಂಗೀತಾ ಕಾಣೆಯಾಗಿದ್ದಾರೆ. ತಮಾಷೆಗಾಗಿಯೋ ಅಥವಾ ನಿಜವಾಗಿಯೂ ನಾಪತ್ತೆಯಾಗಿದ್ದಾರೋ ಅದೇ ಇಂಟ್ರೆಸ್ಟಿಂಗ್. ನಿನ್ನೆಯಿಂದ ತುಂಬಾನೇ ಕಣ್ಣೀರು ಬೇರೆ ಹಾಕುತ್ತಾ ಇದ್ದರು.

ಮನೆಯಲ್ಲಿ ಸಂಗೀತಾ ನಾಪತ್ತೆ
ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದ ಹಾಗೇ ಸಂಗೀತಾ ಕಾಣೆಯಾಗಿದ್ದಾರೆ. ನಿನ್ನೆಯೆಲ್ಲಾ ಮನೆಯಿಂದ ಪತ್ರ ಬೇರೆ ಬಂದಿತ್ತು. ಮನೆಯವರ ಆತ್ಮೀಯವಾದ ಪತ್ರ ನೋಡಿ ತುಂಬಾನೇ ಸಂತಸಗೊಂಡಿದ್ದರು. ಇಷ್ಟು ದಿನ ಮನೆಯವರನ್ನು ಬಿಟ್ಟು ಇದ್ದರು ಕೂಡ, ಮನೆಯೊಳಗೆ ಸಂಗೀತಾ ಹಾಗೂ ಕಾರ್ತಿಕ್ ಆ ಆತ್ಮೀಯತೆಯನ್ನು ತುಂಬಿದ್ದರು. ಹೀಗಾಗಿ ಮನೆಯಿಂದ ಲೆಟರ್ ಬೇಕೆ ಬೇಕು ಎಂಬ ಹಠವನ್ನೇನು ಸಂಗೀತಾ ಮಾಡಿರಲಿಲ್ಲ. ಆದರೆ, ಯಾರ ಕಣ್ಣು ಬಿತ್ತೋ ಮೂವರ ಸ್ನೇಹದ ಮೇಲೆ ಕರಿ ಛಾಯೆ ಬೀಸಿದಂತೆ ಆಗಿತ್ತು. ಮೂವರು ಕಣ್ಣೀರು ಹಾಕಿದ್ದರು. ಇವತ್ತು ಎಲ್ಲವೂ ಸರಿ ಇದೆ. ಆದರೆ ಮನೆಯಲ್ಲಿ ಸಂಗೀತಾರೇ ಕಾಣಿಸುತ್ತಿಲ್ಲ
ಕಾರ್ತಿಕ್, ತನಿಷಾ ಟೆನ್ಷನ್
ಸಂಗೀತಾ ಮತ್ತು ಕಾರ್ತಿಕ್ ಎಷ್ಟೇ ಕಿತ್ತಾಡಿದರು ಆ ಕಿತ್ತಾಟ, ಮನ:ಸ್ತಾಪ ಹೆಚ್ಚು ಸಮಯ ಇರುವುದೇ ಇಲ್ಲ. ಇಬ್ಬರು ಪರೋಕ್ಷವಾಗಿ ತಿರುಗೇಟು ಕೊಡುವ ಮೂಲಕ ಮತ್ತೆ ಅದೇ ಬಾಂಡಿಂಗ್ ಬೆಳೆಸಿಕೊಳ್ಳುತ್ತಾರೆ. ಇದೀಗ ನಿನ್ನೆಯೆಲ್ಲಾ ಕಿತ್ತಾಡಿದ್ದರು. ಇಂದು ಸಂಗೀತಾ ಕಾಣಲಿಲ್ಲ ಅಂತ ಕಾರ್ತಿಕ್ ಮನಸ್ಸು ವಿಲ ವಿಲ ಅಂತ ಒದ್ದಾಡಿದೆ. ಮನೆಯ ಮೂಲೆ ಮೂಲೆಯಲ್ಲೆಲ್ಲಾ ಹುಡುಕಾಡುವುದಕ್ಕೆ ಶುರು ಮಾಡಿದ್ದಾರೆ. ಕಾರ್ತಿಕ್ ಮಾತ್ರವಲ್ಲ ತನಿಷಾ ಕೂಡ ಹುಡುಕಾಟ ಶುರು ಮಾಡಿದ್ದಾರೆ.
ವಿನಯ್ ಹಾರ್ಟ್‌ನಲ್ಲಿದ್ದಾರಂತೆ ಸಂಗೀತಾ
ಎಲ್ಲಾ ಕಡೆಯಲ್ಲೂ ಹುಡುಕಾಡುತ್ತಿರುವಾಗ ಎದುರುಗಡೆ ವಿನಯ್ ಸಿಕ್ಕಿದ್ದಾರೆ. ತಕ್ಷಣ ಸಂಗೀತಾಳನ್ನು ನೋಡಿದಿಯಾ? ಎಂದು ಕಾರ್ತೀಕ್ ಕೇಳಿದರೆ, ವಿನಯ್ ತನ್ನ ಎದೆ ಬಡಿದು, "ಇಲ್ಲಿ ಇಲ್ಲಿ ಇದ್ದಾಳೆ ನೋಡು" ಎಂದಿದ್ದಾರೆ. ಕಳೆದ ಎರಡು ದಿನದಿಂದ ಕಾರ್ತಿಕ್ ಮತ್ತು ಸಂಗೀತಾ ನಡುವೆ ಬಿರುಕು ಬಿಟ್ಟ ಮೇಲೆ, ವಿನಯ್ ಅದನ್ನು ಕಾಡಿಸುವುದಕ್ಕೆ ಶುರು ಮಾಡಿದ್ದರು. ಇವತ್ತು ಅದೇ ರೀತಿಯಲ್ಲಿ ರೇಗಿಸಿದ್ದಾರೆ.
ಬಿಗ್ ಬಾಸ್ ಬಳಿ ಕಾರ್ತಿಕ್ ಮನವಿ
ತನಿಷಾಗೆ ನಿಜಕ್ಕೂ ಆತಂಕ ಉಂಟಾಗಿದೆ. ಯಾಕೆಂದರೆ ಅದಾಗಲೇ ವರ್ತೂರು ಸಂತೋಷ್ ನಾಪತ್ತೆಯಾಗಿ ಸುಮಾರು ದಿನಗಳ ಕಾಲ ಬಂದಿರಲಿಲ್ಲ. ಈಗ ಸಂಗೀತಾಗೆ ಏನಾಗಿದದೆಯೋ ಎಂಬ ಭಯ. ತನಿಷಾ ಹುಡುಕುತ್ತಿರುವಾಗ, ಪ್ರತಾಪ್ ಅಲ್ಲಿಗೆ ಬಂದಿದ್ದಾರೆ. "ಅವರು ಬಚ್ಚಿಟ್ಟುಕೊಳ್ಳುವ ಬಗ್ಗೆ ನಿಮಗೆ ಹೇಳಿಲ್ಲವಾ? ನನಗೆ ಹೇಳಿದ್ದರು" ಎಂದಿದ್ದಾರೆ. ಇದು ಸತ್ಯವೇನೋ ಎಂಬಂತೆ ತನಿಷಾ ನಂಬುತ್ತಿದ್ದರು. ಆ ಸಮಯಕ್ಕೆ ಪ್ರತಾಪ್ ಮತ್ತೆ ರಿಯಾಕ್ಟ್ ಮಾಡಿದ್ದು, "ಇಲ್ಲ ಇಲ್ಲ ನೀವೂ ತಮಾಷೆಯಾಗಿ ಹುಡುಕುತ್ತಿರಬಹುದು ಎಂದುಕೊಂಡಿದ್ದೆ" ಎಂದು ಸತ್ಯ ಹೇಳಿದ್ದಾರೆ. ಇದೆಲ್ಲ ಆದ ಮೇಲೆ ತನಿಷಾ, ಕಾರ್ತಿಕ್ ಬಳಿ ಮೊದಲು ಹೋಗಿ ಬಿಗ್ ಬಾಸ್ ಬಳಿ ಮನವಿ ಮಾಡಿಕೊಳ್ಳಲು ಹೇಳಿದ್ದಾರೆ.


Click it and Unblock the Notifications











