BBK 10: ಕಣ್ಣೀರಾಕುವಷ್ಟು ನೋವು ಕೊಟ್ಟು, ಪರವಾಗಿ ಆಡುತ್ತೇನೆಂದ ಸಂಗೀತಾ.. ಆದರೆ ತನಿಷಾ ಮನಸ್ಸಿಗ ಒಡೆದಾಗಿದೆ!

By ಎಸ್ ಸುಮಂತ್

ಫ್ರೆಂಡ್‌ಶಿಪ್‌ನಲ್ಲಿ ಎಷ್ಟೇ ಕಿತ್ತಾಡಿದರೂ ಮತ್ತೆ ಮತ್ತೆ ಒಂದಾಗುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಇದಕ್ಕೆ ಮ್ಯಾಚ್ ಆಗುವ‌ ಕಥೆ ನಡೆಯುತ್ತಲೆ ಇರುತ್ತದೆ. ಸಂಗೀತಾ ಹಾಗೂ ಕಾರ್ತಿಕ್ ನಡುವೆ ಇಂಥದ್ದೊಂದು ಸನ್ನಿವೇಶ ಕಾಣಿಸುತ್ತಲೇ ಇರುತ್ತದೆ. ಸಂಗೀತಾರಿಂದ ಯಾವುದೋ ಸಣ್ಣ ಪುಟ್ಟ ವಿಚಾರಕ್ಕೆ ಬೇಸರಗೊಳ್ಳುವ ಕಾರ್ತಿಕ್, ಮರು ದಿನ ಸಂಗೀತಾ ಅವರನ್ನು ಸಮಾಧಾನ ಮಾಡಿ ಬಿಡುತ್ತಾರೆ. ಮತ್ತೆ ಆ ಸ್ನೇಹ ಮುಂದುವರೆಯುತ್ತದೆ.

ಇದು ಕಾರ್ತಿಕ್ ಸ್ವಭಾವ. ಆದರೆ, ಎಲ್ಲರ ಸ್ವಭಾವವೂ ಒಂದೇ ರೀತಿ ಇರಬೇಕು ಅಂತ ಏನು ಇಲ್ಲ. ಕೆಲವೊಂದು ಸಲದ ಮಾಡುವ ನೋವುಗಳು ಮತ್ತೆ ಅವರೊಂದಿಗೆ ನಗು ತರಿಸುವುದು ಬಹಳ ಕಷ್ಟ. ಅದು ತನಿಷಾ ಹಾಗೂ ಸಂಗೀತಾ ವಿಚಾರದಲ್ಲಿ ನಡೆದಿದೆ.

bbk 10-sangeetha-tanisha-karthik

ಬಿಗ್ ಬಾಸ್‌ನಲ್ಲಿ ಎಮೋಷನಲ್ ಟಾಸ್ಕ್

ಬಿಗ್ ಬಾಸ್ ನೂರು ದಿನದ ಆಟದಲ್ಲಿ ಮನೆ ಮಂದಿ ತಿಂಗಳ ಮೇಲೆ ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಹೀಗಾಗಿ ಮನೆಯವರಿಗೆಲ್ಲ ಪೋಷಕರು ನೆನಪಾಗುತ್ತಿದ್ದಾರೆ. ಈ ಭಾವನೆಗಳಿಗೆ ಬಿಗ್ ಬಾಸ್ ಕೂಡ ಬೆಲೆ ಕೊಡುತ್ತದೆ. ಹೀಗಾಗಿ ಮನೆಯವರಿಗೆ ಮನೆಯಿಂದ ಸಿಗುವ ಪತ್ರಗಳಿಗೆ ಒಂದಷ್ಟು ಟಾಸ್ಕ್‌ಗಳನ್ನು ಆಡಿಸುತ್ತಿದೆ.

ತನಿಷಾ ಪರವಾಗಿ ಆಡಲು ಕೈ ಎತ್ತಿದ ಸಂಗೀತಾ

ಈ ವಾರ ಮನೆಯವರ ಪತ್ರಕ್ಕಾಗಿ ರೇಸಲ್ಲಿ ಓದುವವರು ತನಿಷಾ, ತುಕಾಲಿ, ಮೈಕೆಲ್, ವರ್ತೂರು ಸಂತೋಷ್ . ಈ ಪತ್ರಕ್ಕಾಗಿ ಅವರವರೇ ಟಾಸ್ಕ್ ಅನ್ನು ಆಡಬಹುದು. ಅಥವಾ ಮನೆಯಲ್ಲಿ ಸೂಕ್ತ ವ್ಯಕ್ತಿಗಳಿಂದ ಟಾಸ್ಕ್ ಆಡಿಸುವುದಕ್ಕೂ ಅವಕಾಶವಿದೆ. ತನಿಷಾ ಆಟವನ್ನು ತಾನೂ ಆಡುವುದಾಗಿ ಸಂಗೀತಾ ಕೈ ಎತ್ತಿದ್ದರು. ಆದರೆ, ತನಿಷಾಗೆ ಇನ್ನು ಆ ನೋವು ಕಡಿಮೆಯಾದಂತೆ ಕಂಡಿಲ್ಲ. ಸಂಗೀತಾರನ್ನು ಆಟಕ್ಕೆ ಆಯ್ಕೆ ಮಾಡಿಕೊಳ್ಳುವ ಉಸಾಬರಿಗೆ ಹೋಗಲೇ ಇಲ್ಲ.

ಮತ್ತೆ ಮತ್ತೆ ತನಿಷಾ ಕಣ್ಣೀರು

ಈ ಬಾರಿ ಮೈಕಲ್, ತುಕಾಲಿ, ವರ್ತೂರು ತಮ್ಮ ಆಟವನ್ನು ತಾವೇ ಆಡುವುದಾಗಿ‌ ನಿರ್ಧಾರ ಮಾಡಿದ್ದರು. ತನಿಷಾ ಮಾತ್ರ ತನ್ನ ಪರವಾಗಿ ಕೈ ಎತ್ತಿದ್ದವರಲ್ಲಿ ಸ್ನೇಹಿತ್‌ರನ್ನು ಆಯ್ಕೆ‌ ಮಾಡಿಕೊಂಡರು. ಆಯ್ಕೆ ಪ್ರಕ್ರಿಯೆ ಮುಗಿದ ಮೇಲೂ ತನಿಷಾ ಕಣ್ಣಲ್ಲಿ ನೀರು ಕಡಿಮೆಯಾಗಿರಲಿಲ್ಲ. ಸಂಗೀತಾ ತನಗಾಗಿ ಆಡುವುದಾಗಿ ಕೈ ಎತ್ತಿದ್ದು ಕೂಡ ಅವರಿಗೆ ಮತ್ತಷ್ಟು ನೋವು ಕೊಟ್ಟಿದೆ ಎನಿಸುವಂತೆ ಕಾಣುತ್ತದೆ. ಇಷ್ಟು ದಿನ ಜೊತೆಯಲ್ಲಿದ್ದರು ಅರ್ಥ ಮಾಡಿಕೊಳ್ಳಲಿಲ್ಲವಾ ಎಂಬ ಭಾವನೆಯಲ್ಲಿ ತನಿಶಾ ಇದ್ದರು ಎನಿಸುತ್ತದೆ. ಆದರೆ, ಸಂಗೀತಾದು ಒಂದೇ ವಾದ, ತಾನೂ ಯಾವಾಗಲೂ ಸ್ನೇಹಿತರ ಪರವಾಗಿಯೇ ಇದ್ದರು, ಇವರು ಮಾತ್ರ ತನ್ನ ಪರವಾಗಿ ಇರುವುದಿಲ್ಲ ಎಂದು.

ಆರಂಭದಲ್ಲಿಯೇ ಸೋತ ಸ್ನೇಹಿತ್

ತನಿಷಾ ತನ್ನ ಪರವಾಗಿ ಆಡಲು ಸ್ನೇಹಿತ್ ರನ್ನು ಆಯ್ಕೆ ಮಾಡಿಕೊಂಡರು. ತಲೆಯ ಮೇಲೆ ಬಾಕ್ಸ್ ಹೊತ್ತು, ಮೇಲಿನ ಹಲಗೆಗೆ ಹೊರಗಿ ನಿಲ್ಲಬೇಕಿತ್ತು. ಕೊಂಚ ತಲೆ ಅಲ್ಲಾಡಿದರು ಬಾಕ್ಸ್ ಕೆಳಗೆ ಬೀಳುತ್ತದೆ ಯಾರ ಬಾಕ್ಸ್ ಬೀಳುತ್ತದೋ ಅವರು ಸೋತಂತೆ. ಬಹಳ ನಂಬಿಕೆ ಇತ್ತು. ಆದರೆ, ಸ್ನೇಹಿತ್ ಈ ಆಟದಲ್ಲಿ ಆರಂಭದಲ್ಲಿಯೇ ಸೋತರು. ಮೈಕೆಲ್ ಕೂಡ ಕಳೆದುಕೊಂಡರು. ತುಕಾಲಿ ಸಂತೂ ವರ್ಸಸ್ ವರ್ತೂರು ಸಂತೋಷ್ ನಡುವೆ ಆಟ ನಡೆಯುತ್ತಿದೆ. ಸ್ನೇಹಿತ್ ಆಟದಲ್ಲಿ ಸೋತರು ತನಿಷಾ ತುಂಬಾ ಬೇಸರ ಮಾಡಿಕೊಂಡಂತೆ ಕಾಣಲಿಲ್ಲ.

More from Filmibeat

English summary
Bigg Boss Kannada Season 10 Tanisha and Sangeeth Fight update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X