BBK10: ಮನೆಯ ಕ್ಯಾಪ್ಟನ್ ಆದ ತನಿಷಾ : ಆಟದ ಜೊತೆಗೆ ಕುಟುಂಬಸ್ಥರ ಮನ ಗೆದ್ದಿದ್ದೇ ಲಾಭವಾಯ್ತಾ..?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಒಂದು ವಾರಗಳ ಕಾಲ ಕ್ಯಾಪ್ಟನ್ ಇರಲಿಲ್ಲ. ಇದಕ್ಕೆ ಕಾರಣ ಮನೆಯವರೇ ಮಾಡಿದ ಮೋಸದ ಸ್ಟಾಟರ್ಜಿ. ಇದಕ್ಕೆ ಕೋಪಗೊಂಡ ಬಿಗ್ ಬಾಸ್ ಒಂದು ವಾರಗಳ ಕಾಲ ಕ್ಯಾಪ್ಟನ್ ಸ್ಥಾನವನ್ನು ನೀಡದೆ, ಶಿಕ್ಷೆ ವಿಧಿಸಿತ್ತು. ಬಳಿಕ ಕ್ಷಮೆ ನೀಡಿದ ಬಿಗ್ ಬಾಸ್ ಕ್ಯಾಪ್ಟನ್ ಆಗುವುದಕ್ಕೆ ಅವಕಾಶವನ್ನು ನೀಡಿತ್ತು.

ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ, ಸುಮ್ಮನೆ ಅಂತು ಏನು ಸಿಗುವುದಿಲ್ಲ. ಸಣ್ಣದೊಂದು ಐಸ್ ಕ್ರೀಂ ಪಡೆದುಕೊಳ್ಳಬೇಕಾದರೂ ಅದಕ್ಕೆ ಕಷ್ಟಪಡಲೇಬೇಕು. ಇನ್ನು ಕ್ಯಾಪ್ಟನ್ ಆಗಬೇಕು ಎಂದರೆ ಸುಮ್ಮನೆ ಅಲ್ಲ. ಟಾಸ್ಕ್ ಗಳನ್ನು ಗೆದ್ದು ಕ್ಯಾಪ್ಟನ್ ಆಗಬೇಕು. ಅದೃಷ್ಟ ಚೆನ್ನಾಗಿತ್ತು ಎಂದರೆ ಬಿಗ್ ಬಾಸ್ ಕೊಡುವ ಟಾಸ್ಕ್‌ಗಳು ಸಿಕ್ಕಾಪಟ್ಟೆ ಕ್ರೇಜಿಯಾಗಿರುತ್ತದೆ. ಈ ಸಲ ತನಿಷಾಗೆ ಆ ಅದೃಷ್ಟ ಕೊಂಚ ಜಾಸ್ತಿಯೇ ಇತ್ತು ಎನಿಸುತ್ತದೆ.

Bigg Boss Kannada Season 10 Tanisha became new captain

ಕ್ಯಾಪ್ಟನ್ ಟಾಸ್ಕ್‌ನಲ್ಲಿ ಸಂಗೀತಾ-ತನಿಷಾ

ಬಿಗ್ ಬಾಸ್ ಮನೆಯಲ್ಲಿ ಶುಕ್ರವಾರ ಬಂತು ಅಂದರೆ ಕ್ಯಾಪ್ಟನ್ಸಿ ಟಾಸ್ಕ್ ಶುರುವಾಗುತ್ತದೆ. ಬಿಗ್ ಬಾಸ್ ಮನೆಯೊಳಗೆ ಬಂದವರೆಲ್ಲರಿಗೂ ಕ್ಯಾಪ್ಟನ್ ಆಗಬೇಕೆಂಬ ಆಸೆ ಇರುತ್ತದೆ. ಕೆಲವರಿಗೆ ಒಂದು ಬಾರಿಯೂ ಕ್ಯಾಪ್ಟನ್ ಆಗುವ ಅದೃಷ್ಟ ಇರುವುದಿಲ್ಲ. ಆದರೆ ಇನ್ನು ಕೆಲವರಿಗೆ ಎರಡೆರಡು ಬಾರಿ ಕ್ಯಾಪ್ಟನ್ ಆಗುವ ಅದೃಷ್ಟವೂ ಇರುತ್ತದೆ. ಇವತ್ತು ಕ್ಯಾಪ್ಟನ್ಸಿ ಟಾಸ್ಕ್ ರೇಸಲ್ಲಿ ತನಿಷಾ ಹಾಗೂ ಸಂಗೀತಾ ನಿಂತಿದ್ದರು. ಆದರೆ ಪ್ರತಾಪ್‌ನನ್ನು ಮನೆಯವರೆಲ್ಲಾ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟರು.

ಟಾಸ್ಕ್ ಗೆದ್ದು ಕ್ಯಾಪ್ಟನ್ ಆದ ತನಿಷಾ

ಇಂದು ಕ್ಯಾಪ್ಟನ್ ರೇಸ್‌ನಲ್ಲಿ ಇದ್ದಂತ ತನಿಷಾ ಹಾಗೂ ಸಂಗೀತಾಗೆ ಬಾಲ್ ಹಾಕುವ ಟಾಸ್ಕ್ ಅನ್ನು ನೀಡಿದ್ದರು. ಹಗ್ಗದ ತುದಿಯಲ್ಲಿ ಬಾಲ್ ಬ್ಯಾಲೆನ್ಸ್ ಮಾಡಿಕೊಂಡು, ಮೂರು ಲೋಟಕ್ಕೂ ಒಂದೊಂದು ಬಾಲ್ ಹಾಕಬೇಕಿತ್ತು. ಇದು ನೋಡುವುದಕ್ಕೆ ಸುಲಭವೇ ಆದರೂ ಮಾಡುವುದು ಕಷ್ಟವಾಗಿತ್ತು. ಎರಡ್ಮೂರು ಸಲ ಇಬ್ಬರು ಎಡವಿದರು. ಬಾಲ್ ಹಾಕುವುದಕ್ಕೆ ಕಷ್ಟ ಪಟ್ಟರು. ಹಾಗೋ ಹೀಗೋ ತನಿಷಾ ಬಾಲ್ ಹಾಕಿ ಗೆದ್ದರು. ಈ ವಾರದ ಕ್ಯಾಪ್ಟನ್ ಆದರು.

ಮನೆಗೆ ಬಂದವರಿಂದಾನೂ ತನಿಷಾ ಹೆಸರು

ಒಮ್ಮೊಮ್ಮೆ ಅದೃಷ್ಟವೂ ಕೈಹಿಡಿದರೆ ಬೇಗ ಕ್ಯಾಪ್ಟನ್ ಆಗಬಹುದು. ಆ ಅದೃಷ್ಟ ಇಂದು ತನಿಷಾ ಪಾಲಿಗೆ ಒಲಿದಿದೆ. ಈ ವಾರ ಮನೆಯೊಳಗೆ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದರು. ಮಕ್ಕಳನ್ನು ನೋಡಿ ಖುಷಿ ಪಟ್ಟಿದ್ದಲ್ಲದೆ, ಎಲ್ಲರಿಗೂ ಧೈರ್ಯ ತುಂಬಿ ಹೋಗಿದ್ದರು. ಅದರ ಜೊತೆಗೆ ಬಿಗ್ ಬಾಸ್ ಕುಟುಂಬಸ್ಥರಿಗೆ ವಿಶೇಷ ಸ್ಥಾನಮಾನ ನೀಡಿತ್ತು. ಅದುವೇ ಕ್ಯಾಪ್ಟನ್ ಆಗುವುದಕ್ಕೆ ಯಾರು ಅರ್ಹರು ಎಂಬುದನ್ನು ಹೇಳಬೇಕಿತ್ತು. ಇದರಲ್ಲಿ ತನಿಷಾ ಹಾಗೂ ಸಂಗೀತಾ ಹೆಸರನ್ನು ಮನೆ ಮಂದಿ ಹೆಚ್ಚಾಗಿ ಹೇಳಿದ್ದರು. ಮನೆಯೊಳಗಿದ್ದವರು ಅವರವರ ಮನೆಯವರು ತೆಗೆದುಕೊಂಡ ಹೆಸರನ್ನೇ ತೆಗೆದುಕೊಂಡರು.

ಕ್ಯಾಪ್ಟನ್ ರೂಮಿಗೆ ಹೆಜ್ಜೆ ಇಟ್ಟ ತನಿಷಾ

ಈ ಬಾರಿಯ ಬಿಗ್ ಬಾಸ್‌ನಲ್ಲಿ ಕ್ಯಾಪ್ಟನ್ ಆದವರಿಗೆ ಒಂದು ವಿಶೇಷ ಉಡುಗೊರೆಯನ್ನು ನೀಡುತ್ತಿದೆ. ಫ್ಯಾಮಿಲಿ ಫೋಟೋ ನೀಡಿ, ಗೋಡೆ ಮೇಲೆ ಹಾಕುವುದಕ್ಕೆ ಅವಕಾಶ ನೀಡುತ್ತದೆ. ಬಿಗ್ ಬಾಸ್ 81 ದಿನದ ಹಾದಿಯಲ್ಲಿದೆ. ಈಗ ತನಿಷಾ ಕ್ಯಾಪ್ಟನ್ ಆಗಿದ್ದು, ಫ್ಯಾಮಿಲಿ ಫೋಟೋ ಕೈ ಸೇರಿದೆ. ಅಪ್ಪನ ಫೋಟೋ ನೋಡಿ ತನಿಷಾ ಖುಷಿ ಪಟ್ಟಿದ್ದಾರೆ.

More from Filmibeat

English summary
BBK 10 about Tanisha new captain:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X