ಟಿಕೆಟ್ ಟು ಫಿನಾಲೆ ಟಾಸ್ಕ್ ಆಡೋರನ್ನ ಸೆಲೆಕ್ಟ್ ಮಾಡೋದೆ 'ಬೆಂಕಿ': ತನಿಷಾ ಕೈಯಲ್ಲಿ ಫಿನಾಲೆ ಸ್ಪರ್ಧಿಗಳ ಭವಿಷ್ಯ!?

By Shruthi Harishgowda

ತನಿಷಾ ತಮ್ಮ ಮಾತಿನ ಮೂಲಕವೇ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡವರು. ಸ್ನೇಹ ಎಂದರೆ ಏನು ಎಂಬುದಕ್ಕೆ ತನಿಷಾ ಒಂದು ಅರ್ಥ ತಂದು ಕೊಟ್ಟಿದ್ದರು. ಕಾರ್ತಿಕ್‌ನನ್ನು ಎಲ್ಲೂ ಕೂಡ ಸೋಲಲು ಬಿಡದೆ ರಕ್ಷಣೆ ನೀಡುತ್ತಾ ಬಂದಿದ್ದರು.

ಆದರೆ ಕಾರ್ತಿಕ್ ಮಾಡಿದ ಒಂದೇ ಒಂದು ನಾಮಿನೇಷನ್ ಈಗ ತನಿಷಾ ಹಾಗೂ ಕಾರ್ತಿಕ್ ಸ್ನೇಹಕ್ಕೆ ಮುಳುವಾಗಿದೆ. ಕಾರ್ತಿಕ್ ನಾಮಿನೇಟ್ ಮಾಡಿಲ್ಲ ಎಂದಿದ್ದರೆ ಅವರು ಈ ವಾರವೂ ಕೂಡ ಬಿಗ್ ಬಾಸ್ ಮನೆಯಲ್ಲಿ ನೆಮ್ಮದಿಯಿಂದ ಇರುತ್ತಿದ್ದರು. ಆದರೆ, ಈಗ ತನಿಷಾಗೆ ಸಿಕ್ಕಿರುವ ಹೊಸ ಅಧಿಕಾರ ಫಿನಾಲೆ ಟಾಸ್ಕ್ ಆಡಲು ಕೂಡ ಕಾರ್ತಿಕ್‌ಗೆ ಎಫೆಕ್ಟ್ ತಂದು ಕೊಡುತ್ತಿದೆ.

Bigg Boss Kannada Season 10: Tanisha got a special opportunity to select contestants for the finale task

ತನಿಷಾ ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಟಿಕೆಟ್ ಟು ಫಿನಾಲೆ ಟಾಸ್ಕ್ ಆಡಲು ತನಿಷಾ ಅವರಿಗೆ ಈಗ ಅವಕಾಶ ದೊರೆತಿದೆ. ಇದರ ಜೊತೆಗೆ ತಮ್ಮ ಪ್ರತಿಸ್ಪರ್ಧಿಗಳನ್ನು ಕೂಡ ತನಿಷಾ ಅವರೇ ಆಯ್ಕೆ ಮಾಡಬೇಕಾಗಿದೆ.

ಈ ವಿಚಾರವಾಗಿ ತನಿಷಾ ಹಾಗೂ ಕಾರ್ತಿಕ್ ನಡುವೆ ಮಾತುಕತೆ ನಡೆಯುತ್ತಲೇ ಇದೆ. ನನ್ನನ್ನು ಕೂಡ ನಿನ್ನ ತಂಡದಲ್ಲಿ ಆಟವಾಡಲು ಆಯ್ಕೆ ಮಾಡಿಕೋ ಎಂಬ ಮಾತನ್ನು ಕಾರ್ತಿಕ್ ಅವರು ತನಿಷಾ ಬಳಿಯಲ್ಲಿ ಕೇಳುತ್ತಾ ಇದ್ದಾರೆ. ಆದರೆ ಕಾರ್ತಿಕ್ ತನ್ನ ಸ್ನೇಹಕ್ಕೆ ಮೋಸ ಮಾಡಿದ್ದಕ್ಕಾಗಿ ತನಿಷಾ ಅವರು ಕಾರ್ತಿಕ ಅವಕಾಶವನ್ನು ಕೊಡದ ರೀತಿಯಲ್ಲಿಯೇ ಮಾತನಾಡುತ್ತಾ ಇದ್ದಾರೆ.

ಈಗ ಇದೇ ವಿಚಾರಕ್ಕೆ ಕಾರ್ತಿಕ್ ಹಾಗೂ ತನಿಷಾ ನಡುವೆ ಏನಾದರೂ ಜಗಳ ನಡೆದಿರಬಹುದು ಎಂದು ಕೂಡ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ನಿನ್ನೆ ತನಿಷಾ ನಾಮಿನೇಟ್ ಆಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಕಾರ್ತಿಕ್ ಮಾಡಿದ ತಪ್ಪು ವೀಕ್ಷಕರಿಗೂ ಕೂಡ ಇಷ್ಟವಾಗಿಲ್ಲ ಸ್ನೇಹ ಎಂಬುದಕ್ಕೆ ತನಿಷ ಹಾಗೂ ಕಾರ್ತಿಕ್ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ಅತ್ಯುತ್ತಮ ಉದಾಹರಣೆಯಾಗಿದ್ದರೂ ಆದರೆ ಕಾರ್ತಿಕ್ ತನ್ನ ಸ್ನೇಹಿತೆಗೆ ಈ ರೀತಿ ಮೋಸ ಮಾಡಿದ್ದು ಸರಿಯಲ್ಲ ಎಂದು ವೀಕ್ಷಕರು ಕೂಡ ಅಭಿಪ್ರಾಯಸಿದ್ದಾರೆ.

Bigg Boss Kannada Season 10: Tanisha got a special opportunity to select contestants for the finale task

ಫಿನಾಲೆ ಟಾಸ್ಕ್ ಆಡಲು ಅವಕಾಶ ಪಡೆದ ತನಿಷಾ

ಫಿನಾಲೆ ಟು ಫೈನಲ್ ಟಾಸ್ ಆಡಲು ತನಿಷಾಗೆ ಬಿಗ್ ಬಾಸ್ ಅವಕಾಶವನ್ನು ನೀಡಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಜೊತೆಗೆ ಆಡಲು ಪ್ರತಿಸ್ಪರ್ಧಿಗಳನ್ನು ಈಗ ತನಿಷಾ ಅವರೇ ಆಯ್ಕೆ ಮಾಡಿಕೊಳ್ಳಬೇಕಾಗಿದೆ. ತನಿಷಾ ಬಳಿ ಬಂದ ಇತರ ಸ್ಪರ್ಧಿಗಳು ತಮ್ಮನ್ನು ಅವರ ಜೊತೆ ಫಿನಾಲೆ ಟು ಟಾಸ್ಕ್ ಆಡಲು ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳುತ್ತಾ ಇದ್ದಾರೆ. ಎಲ್ಲರೂ ಕೂಡ ಒಂದೊಂದು ಅಭಿಪ್ರಾಯವನ್ನು ತಿಳಿಸುತ್ತಾ ಇದ್ದಾರೆ ಆದರೆ ಯಾರು ಅವರ ಜೊತೆಯಲ್ಲಿ ಆಟವಾಡಬೇಕು ಎಂಬುದನ್ನು ಈಗ ತನಿಷಾ ನಿರ್ಧಾರ ಮಾಡಬೇಕಾಗಿದೆ.

ಕಾರ್ತಿಕ್ ತನಿಷಾ ಅವರ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ ನನಗೂ ಕೂಡ ಫೈನಲ್ ಟು ಫಿನಾಲೆ ಟಾಸ್ಕ್ ಆಡಲು ಅವಕಾಶವನ್ನು ಮಾಡಿಕೊಡು ಎಂದು ತನಿಷ ಬಳಿಯಲ್ಲಿ ಕೇಳುತ್ತಿದ್ದಾರೆ. ಆದರೆ ತನಿಷಾ ನಾನು ಫೈನಲ್ ಕಂಟೆಸ್ಟೆಂಟ್ ಅಲ್ಲ ಎಂದು ಹೇಳಿದವರು ಯಾಕೆ ಫಿನಾಲೆಗೆ ಆಡಲು ಅವಕಾಶ ಕೇಳುತ್ತಿದ್ದೀರಾ ಎಂದು ಹೇಳಿದ್ದಾರೆ. ಆದರೆ ಕಾರ್ತಿಕ್ ಇದಕ್ಕೆ ಕೋಪ ಮಾಡಿಕೊಂಡಿದ್ದು ಈ ಮಾತು ಇಲ್ಲಿ ಬೇಡ ಆಗಲ್ಲ ಎಂದು ಹೇಳಿದರೆ ಆಗುತ್ತಿತ್ತು ಎಂದು ಹೇಳಿ ಹೊರಟು ಹೋಗಿದ್ದಾರೆ.

ತನಿಷಾ ಜೊತೆಗೆ ಆಡುವವರು ಯಾರು.. ಯಾರಿಗೆ ಸಿಗಲಿದೆ ಚಾನ್ಸ್?

ತನಿಷಾ ತಮ್ಮ ಜೊತೆ ಆಟವಾಡಲು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಈಗ ಇಲ್ಲಿರುವ ಪ್ರಶ್ನೆ ಕಾರ್ತಿಕ್ ಹಾಗೂ ವಿನಯ್ ಗೆ ಅವಕಾಶವನ್ನ ಕೊಟ್ಟರೆ ಅವರು ಪಾಯಿಂಟ್ ಗಳಿಸುವ ಅವಕಾಶ ಜಾಸ್ತಿ ಇದೆ. ಹೀಗಾಗಿ ತನಿಷಾ ಅವರು ತಮ್ಮ ಜೊತೆ ಆಡಲು ತುಕಾಲಿ ಸಂತೋಷ್ ಹಾಗೂ ತಮಗಿಂತ ಕಡಿಮೆ ಆಟವಾಡುವ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ತನಿಷಾ ಅವರು ಯಾರನ್ನು ಆಯ್ಕೆ ಮಾಡಿಕೊಂಡು ಆಟವಾಡುತ್ತಾರೆ ಎಂಬ ಕುತೂಹಲಕ್ಕೆ ಸಂಜೆ ತೆರೆ ಬೀಳಲಿದೆ.

More from Filmibeat

English summary
Bigg Boss 14th week: Tanisha got opportunity to select the contestants for the finale task.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X