BBK10: ಕಾರ್ತಿಕ್ ಕೋಪ ಸಹಿಸಿಕೊಂಡು ಗೆಲುವು ತಂದುಕೊಟ್ಟ ತನಿಷಾ: ತಾಳ್ಮೆ ಆಟಕ್ಕೆ ಶಬ್ಬಾಶ್ ಎಂದ ನೆಟ್ಟಿಗರು!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದ ತನಿಷಾರನ್ನು ನೋಡಿದಾಗ ತುಂಬಾ ಜೋರು ಎನಿಸುತ್ತಿತ್ತು. ವಾಯ್ಸ್ ಅಷ್ಟೇ ಗಟ್ಟಿಯಾಗಿಯೇ ಇತ್ತು. ಏನನ್ನೇ ಹೇಳುವಾಗಲೂ ಹೆದರುತ್ತಾ ಇರಲಿಲ್ಲ. ತನಿಷಾ ಕೂಡ ಸಾಕಷ್ಟು ಬಾರಿ ಹೇಳಿದ್ದರು. ನನ್ನ ಧ್ವನಿ ಇರುವುದೇ ಈ ರೀತಿ ಅಂತ. ಆದರೆ, ಆ ಧ್ವನಿಯೇ ತನಿಷಾಗೆ ಸಾಕಷ್ಟು ಸಲ ನೋವು ನೀಡಿದೆ.

ನಮ್ರತಾ ಅಂತು ಹಲವು ಬಾರಿ ತನಿಷಾಗೆ, ನಿಮ್ಮ ವಾಯ್ಸ್‌ನಿಂದ ಭಯ ಆಗುತ್ತೆ ಎಂದಿದ್ದಾರೆ. ಅಷ್ಟೇ ಯಾಕೆ ಅತಿಯಾಗಿ ಕ್ಲೋಸ್ ಇದ್ದಂತ, ಬೆಸ್ಟ್ ಫ್ರೆಂಡ್ ಎನಿಸಿಕೊಂಡಿದ್ದಂತ ಸಂಗೀತಾ ಕೂಡ, ಇಂದು ತನಿಷಾ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದಾರೆ. ತನಿಷಾ ವಾಯ್ಸ್ ನಿಜಕ್ಕೂ ಇರಿಟೇಟ್ ಮಾಡುತ್ತೆ ಅಂತ ನಮ್ರತಾ ಬಳಿ ಹೇಳಿದ್ದಾರೆ. ಆದರೆ ತನಿಷಾ ಇಷ್ಟೊಂದು ತಾಳ್ಮೆ ಇರುವ ವ್ಯಕ್ತಿ ಎಂಬುದನ್ನು ಟಾಸ್ಕ್‌ನಲ್ಲಿ ಪ್ರೂವ್ ಮಾಡಿದ್ದಾರೆ.

bigg-boss-kannada-10-karthik-and-tanisha

ತನಿಷಾಗೆ ಕಾಡುತ್ತಿದೆಯಾ ಒಂಟಿತನ?

ತನಿಷಾಗೆ ಬೆಂಕಿ ಎಂಬ ಹೆಸರು ಬಂದಿದ್ದೇ ಆ ಧ್ವನಿಯಿಂದಾಗಿಯೇ. ಆದರೆ, ಇತ್ತೀಚೆಗೆ ಆ ಬೆಂಕಿ ಎಂಬ ಹೆಸರಿಗೆ ತಕ್ಕಂತೆ ತನಿಷಾ ಕಾಣಿಸುತ್ತಾ ಇಲ್ಲ. ಒಂದು ಸಂಗೀತಾ ಜೊತೆಗೆ ದೂರಾದ ಮೇಲೆ ತನಿಷಾ ಜೊತೆಗೆ ಯಾರೂ ಇಲ್ಲ. ನೀತೂ ಅದೇ ಟೀಂನಲ್ಲಿಯೇ ಇದ್ದರೂ, ಅಷ್ಟೊಂದು ಬಾಂಧವ್ಯ ಬೆರೆತಂತೆ ಕಾಣುತ್ತಿಲ್ಲ. ಮಾತನಾಡುವುದಕ್ಕೆ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಯಾರೂ ಇಲ್ಲದೆ, ಒಂಟಿಯಂತೆ ಆಗಿಬಿಟ್ಟಿದ್ದಾರೆ ತನಿಷಾ.

ಕಾರ್ತಿಕ್ ಕೋಪ ಸಹಿಸಿಕೊಂಡ ತನಿಷಾ

ತನಿಷಾಗೆ ಕೋಪ ಕಡಿಮೆ ಏನು ಬರುವುದಿಲ್ಲ. ಹೋಗೆ ಅಂದರೆ ಹೋಗೆಲೆ ಎನ್ನುವ ಕ್ಯಾರೆಕ್ಟರ್ ತನಿಷಾರದ್ದು. ಆದರೆ, ಎದುರುಗಡೆ ಇದ್ದವರು ಕೋಪ ಮಾಡಿಕೊಂಡರು. ತಾಳ್ಮೆಯಿಂದ ಇರುವ ತನಿಷಾರನ್ನೂ ಇವತ್ತು ಕಂಡಿದ್ದಾರೆ. ಯಾವ ಸಮಯಕ್ಕೆ ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂಬುದನ್ನು ಚೆನ್ನಾಗಿಯೇ ಅರಿತವರಂತೆ ಕಾಣುತ್ತಿದ್ದಾರೆ. ಬಾಲ್ ಹಾಕುವ ಆಟದಲ್ಲಿ ಕಾರ್ತಿಕ್ ತಾಳ್ಮೆ ಕಳೆದುಕೊಂಡರು. ಬಾಲ್‌ನಂತೆಯೇ ತಾಳ್ಮೆಯನ್ನು ಬ್ಯಾಲೆನ್ಸ್ ಮಾಡಿದ್ದಾರೆ.

ತಂಡಕ್ಕಾಗಿ ಎಲ್ಲಾ ಸಹಿಸಲು ಜೈ

ಕಾರ್ತಿಕ್‌, ಸಂಗೀತಾ ಹಾಗೂ ತನಿಷಾ ನಡುವೆ ಈಗ ಮೊದಲಿದ್ದಂತ ಬಾಂಧವ್ಯ ಕಾಣುತ್ತಿಲ್ಲ. ಎಲ್ಲವೂ ಸರಿಯಾಗುತ್ತೆ ಎಂಬ ನಂಬಿಕೆಯೂ ಇಲ್ಲ. ಆದರೆ, ತನಿಷಾ ಒಬ್ಬಂಟಿಯಾಗಿ ಆದರೂ ಸರಿ, ತಂಡವಾಗಿ ಆದರೂ ಸರಿ. ಆಟವನ್ನು ನಿಯತ್ತಾಗಿ ಆಡುವುದಕ್ಕೆ ಸಿದ್ದವಾಗಿರುವವರಂತೆ ಕಾಣುತ್ತಿದ್ದಾರೆ. ತಂಡದ ಗೆಲುವು ಎಂದು ಬಂದಾಗ ತನಿಷಾ ಮೆಣಸಿನಕಾಯಿಯನ್ನು ತಿಂದಿದ್ದಾರೆ. ಈಗ ತಂಡದ ಗೆಲುವಿಗಾಗಿ ಕಾರ್ತಿಕ್‌ ದೊಡ್ಡ ಮಟ್ಟದಲ್ಲಿ ತಾಳ್ಮೆ ಕಳೆದುಕೊಂಡರೂ ಸಹ ಕೂಲ್ ಕೂಲ್.. ಮೊದಲು ಆಟ ಆಡೋಣಾ, ಆಮೇಲೆ ವಾದ ಮಾಡೋಣಾ‌ ಅಂತ ಕಾರ್ತಿಕ್‌ನನ್ನು ಸಮಾಧಾನ ಮಾಡಿ ಮಾಡಿ ಕೊನೆಗೂ ಆಟದಲ್ಲಿ ಗೆದ್ದಿದ್ದಾರೆ.

ಬೆಂಕಿ ಬದಲಾವಣೆಗೆ ಶಬ್ಬಾಶ್ ಗಿರಿ

ತನಿಷಾ ವಾಯ್ಸ್‌ನಲ್ಲಿ ಮಾತ್ರ ಜೋರು. ಆದರೆ, ಮನೆಯ ಜವಾಬ್ದಾರಿ ಅಂತ ಹೊತ್ತಾಗ ರಾಣಿಯಾಗಿಯೇ ಮೆರೆಯುತ್ತಾರೆ. ಅಡುಗೆ ಮನೆಗೆ ಹೋದಾಗ ಎಲ್ಲರಿಗೂ ಅನ್ನಪೂರ್ಣೇಶ್ವರಿಯಾಗುತ್ತಾರೆ. ಬೋನಿನ ಒಳಗೆ ನಿಂತು ಆಟವಾಡುವಾಗಲೂ ಅಷ್ಟೇ, ಆಟ ಮುಗಿದ ಕೂಡಲೇ ಒಳಗೆ ಇರುವವರು ಹೊರಗೆ ಬರಲು, ಬಾಗಿಲು ತೆಗೆದು ಸಹಾಯ ಮಾಡಿದರು. ಅದು ಎದುರಾಳಿ ತಂಡವೇ ಆದರೂ ಮಾನವೀಯತೆ ಮೆರೆದರು. ಇವತ್ತು ಕಾರ್ತಿಕ್ ಕೋಪದ ಮುಂದೆ ತಾಳ್ಮೆ ಕಳೆದುಕೊಳ್ಳದ ತನಿಷಾಗೆ ನೋಡುಗರಿಂದ ಶಬ್ಬಾಶ್ ಗಿರಿ ಸಿಕ್ಕಿದೆ. ಕ್ಯಾಪ್ಟನ್ ರೇಸ್‌ನಲ್ಲೂ ತನಿಷಾಗೆ ಅವಕಾಶ ಕೊಟ್ಟರೆ ಕಾರ್ತಿಕ್ ದೊಡ್ಡ ಮನುಷ್ಯರಾಗಬಹುದು.

More from Filmibeat

English summary
Bigg Boss Kannada Season 10 Tanisha's patience calmed Karthik's anger and brought victory
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X