ಬಿಗ್ ಬಾಸ್ ಸ್ಪರ್ಧಿ ಗೆಲ್ಲುವ ಮೊತ್ತದಲ್ಲಿ 25 ಲಕ್ಷ ಕಡಿತ : ಮರಳಿ ಪಡೆಯುವುದು ಸ್ಪರ್ಧಿಗಳ ಕೈಯಲ್ಲೇ ಇದೆ..!

By ಎಸ್ ಸುಮಂತ್

ಬಿಗ್ ಬಾಸ್ ಇದು ಹತ್ತನೇ ಸೀಸನ್. ಒಂಭತ್ತು ಸೀಸನ್‌ನ ಇತಿಹಾಸದಲ್ಲಿ ಹಲವು ವಿಚಿತ್ರಗಳು, ಶಾಕಿಂಗ್ ಎನಿಸುವ ಘಟನೆಗಳು ನಡೆದಿದ್ದು ಇದೇ ಸೀಸನ್‌ನಲ್ಲಿ. ರೂಲ್ಸ್ ಬ್ರೇಕ್ ಮಾಡಿದ್ದು ಇದೇ ಸೀಸನ್ ಸ್ಪರ್ಧಿಗಳು. ಲಕ್ಸುರಿ ಟಾಸ್ಕ್ ಗಳನ್ನು ಹೆಚ್ಚು ಬಾರಿ ಸೋತಿದ್ದು ಇದೇ ಸೀಸನ್ ಸ್ಪರ್ಧಿಗಳು.

ಈ ವಾರ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಗುರಿಯನ್ನು ತಲುಪುವುದಕ್ಕೆ ಉಳಿದಿರುವುದು ಇನ್ನು ಕೇವಲ ನಾಲ್ಕು ವಾರಗಳು ಮಾತ್ರ. ಆದರೆ ಗೆಲುವಿನ ಟ್ರೋಫಿಗೆ ಮುತ್ತಿಟ್ಟು, 50 ಲಕ್ಷ ರೂಪಾಯಿ ಪಡೆದುಕೊಳ್ಳುವುದು ಒಬ್ಬರು ಮಾತ್ರ. ಆದರೆ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಂಡ ನಿರ್ಧಾರದಿಂದ ಗೆಲ್ಲುವವರ ಮೊತ್ತದಲ್ಲಿ ಅರ್ಧದಷ್ಟು ಕಡಿಮೆಯಾಗಿದೆ. ಅಂದರೆ 50 ಲಕ್ಷದ ಮೊತ್ತ 25ಕ್ಕೆ ಇಳಿದಿದೆ.

Bigg Boss Kannada Season 10: The winner will get a prize of 25 lakhs only

ಮಾನ, ಮೌಲ್ಯ, ನಿರ್ಧಾರ ಮಾಡಲು ತಿಳಿಸಿದ ಬಿಗ್ ಬಾಸ್

ಬಿಗ್ ಬಾಸ್ ಮನೆಯ ಮಂದಿಗೆ ಹೊಸ ಟಾಸ್ಕ್ ಒಂದನ್ನು ನೀಡಿದೆ. ಅದುವೆ ದಿನಸಿ ಟಾಸ್ಕ್. ದಿನಸಿ ಚಟುವಟಿಕೆಯಲ್ಲಿ ನಿಮ್ಮ ಪಾಲು ಏನು ಎಂಬುದನ್ನು ನೀವೇ ನಿರ್ಧಾರ ಮಾಡಿ. ಅದರಲ್ಲಿ ಒಂಭತ್ತು ಫಲಕಗಳು ಒಂದೊಂದು ಮೌಲ್ಯವನ್ನು ಹೊಂದಿದೆ. ತಮ್ಮ ಮೌಲ್ಯ ಏನು ಎಂಬುದನ್ನು ವ್ಯಕ್ತಪಡಿಸಿ, ಮನೆಯವರ ಅಭಿಪ್ರಾಯದೊಂದಿಗೆ ಕುತ್ತಿಗೆಗೆ ಹಾಕಿಕೊಳ್ಳಬೇಕು. ನಿಮ್ಮ ಸ್ಥಾನ, ಮಾನ, ನಿರ್ಧಾರ ನಿಮ್ಮ ಕೈನಲ್ಲಿಯೇ ಇದೆ ಎಂದು ನಿರ್ಧಾರ ಮಾಡಿಕೊಳ್ಳುವುದಕ್ಕೆ ಬಿಗ್ ಬಾಸ್ ತಿಳಿಸಿದ್ದಾರೆ.

ಹೆಚ್ಚು ಮೊತ್ತ ಪಡೆದವರಿಗೆ ನಾಮಿನೇಷನ್ ಅಧಿಕಾರ

ದಿನಸಿ ಚಟುವಟಿಕೆಯಲ್ಲಿ ಎಲ್ಲಾ ಆಯಾಮದ ಮೇಲು ಮೌಲ್ಯವನ್ನು ನಿರ್ಧರಿಸಲಾಗಿದೆ. ಮನರಂಜನೆ, ಟಾಸ್ಕ್ ಎಲ್ಲಾ ವಿಚಾರವನ್ನು ಗಮನಿಸಿ ಮೌಲ್ಯವನ್ನು ನೀಡಲಾಗಿದೆ. ಅದರಲ್ಲಿ ಸಂಗೀತಾ, ವಿನಯ್, ತುಕಾಲಿ ಸಂತು, ನಮ್ರತಾ, ಕಾರ್ತಿಕ್‌ಗೆ ನಾಮಿನೇಷನ್ ಮಾಡುವ ಅಧಿಕಾರವನ್ನು ನೀಡಿದ್ದಾರೆ. ಐದು ಸುತ್ತಿನಲ್ಲಿ ನಾಮಿನೇಷನ್ ನಡೆದಿದೆ.

Bigg Boss Kannada Season 10: The winner will get a prize of 25 lakhs only

25 ಲಕ್ಷ ಕಳೆದುಕೊಂಡ ಮನೆ ಮಂದಿ, ಲಕ್ಷ ಲಕ್ಷ ಹಣ ಹೋದರೂ ಗಾಂಭೀರ್ಯತೆ ಇಲ್ಲ!

ಬಿಗ್ ಬಾಸ್‌ನಲ್ಲಿ ನೂರು ದಿನಗಳ ಕಾಲ ಕಷ್ಟಪಟ್ಟು ಇರುವುದೇ ಹಣಕ್ಕಾಗಿ. ಕಡೆಯಲ್ಲಿ ವಿನ್ ಆಗುವವರಿಗೆ 50 ಲಕ್ಷ ಸಿಗಲಿದೆ. ಅದಕ್ಕಾಗಿ ಎಷ್ಟೇ ಕಷ್ಟವಾದರೂ ಟಾಸ್ಕ್ ಆಡುತ್ತಾರೆ. ಆದರೆ ಸದಸ್ಯರ ನಿರ್ಲಕ್ಷ್ಯದಿಂದ 25 ಲಕ್ಷ ಕಳೆದುಕೊಂಡಿದ್ದಾರೆ. ನಾಮಿನೇಷನ್ ಆದವರ ಕೊರಳಲ್ಲಿ ಇದ್ದ ಮೌಲ್ಯದ ಒಟ್ಟು ಮಾಡಿ, ಅದರಲ್ಲಿ ಮೈನಸ್ ಮಾಡಿದೆ‌. ಗೆಲ್ಲುವವರಿ ಮಿತ್ತದಲ್ಲಿ 25 ಲಕ್ಷ ಕಳೆದುಕೊಂಡಿದ್ದರು ಮನೆಯವರ ಮುಖದಲ್ಲಿ ಆ ಗಾಂಭೀರ್ಯತೆಯೇ ಕಾಣಿಸುತ್ತಿಲ್ಲ.

25 ಲಕ್ಷ ವಾಪಾಸ್ ಪಡೆಯುವ ದಾರಿ ಯಾವುದು..?

25 ಲಕ್ಷ ಕಳೆದುಕೊಂಡಿದ್ದು ಗೊತ್ತಾದ ಮೇಲೆ ಹಲವರು ಶಾಕ್ ಆಗಿ ಕುಳಿತಿದ್ದರು. ಇನ್ನು ಕೆಲವರ ಮುಖದಲ್ಲಿ ಅದು ಹಾಸ್ಯದ ರೀತಿಯೇ ಕಾಣಿಸುತ್ತಿತ್ತು. ಮಧ್ಯದಲ್ಲಿ ಮಾತನಾಡಿದ ಬಿಗ್ ಬಾಸ್, 50 ಲಕ್ಷ ರೂಪಾಯಿಯಿಂದ ಕಡಿತಗೊಂಡಿದ್ದು 25 ಲಕ್ಷ ಸಿಗಲಿದೆ. ಸಂಥಿಂಗ್ ಸ್ಪೆಷಲ್ ಮಜವಾಗಿದೆ ಅಲ್ಲವೆ. ಯಾರು ಇದಕ್ಕೆ ಹೆದರಿಕೊಳ್ಳುವ ಅಗತ್ಯವಿಲ್ಲ. ಕಳೆದುಕೊಂಡಿರುವವರು ಎದೆಗುಂದುವ ಅಗತ್ಯವಿಲ್ಲ. ಕಳೆದುಕೊಂಡಿದ್ದನ್ನು ಮರಳಿ ಪಡೆಯಬಹುದು.

ಮುಂದಿನ ವಾರ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಟಾಸ್ಕ್‌ಗೆ ಮೊತ್ತವನ್ನು ನೀಡಲಾಗುತ್ತದೆ. ಪ್ರತಿ ಟಾಸ್ಕ್ ಗೆಲ್ಲುವ ಮೂಲಕ ಆ ಮೊತ್ತ ಪಡೆಯಬಹುದು. ಈ ಮೂಲಕ ಗೆಲ್ಲುವವರಿಗೆ ಸಿಗುವ ಮೊತ್ತ ಎಷ್ಟು ಎಂಬುದು ನಿರ್ಧಾರವಾಗಲಿದೆ ಎಂದು ಬಿಗ್ ಬಾಸ್ ತಿಳಿಸಿದೆ. ಈಗ ಹಣ ಗಳಿಸುವ ರಿಸ್ಕ್ ಮನೆ ಮಂದಿಗೆ ಇದೆ.

More from Filmibeat

English summary
BBK 10: winning amount 25 lakhs only
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X