Bigg Boss: ಟಾಸ್ಕ್ ಗೆಲ್ಲಲು ತುಕಾಲಿ ಸಂತೋಷ್-ವಿನಯ್ ನಡುವೆ ಫೈಟ್.. ಇದು ಆಟವಲ್ಲ ಕಾದಾಟ ಎಂದ ನೆಟ್ಟಿಗರು!
ಬಿಗ್ ಬಾಸ್ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಂಡು ಸಾಗುತ್ತಾ ಇದೆ. ಈಗಾಗಲೇ ಬಿಗ್ ಬಾಸ್ 8 ವಾರಗಳನ್ನು ಪೂರೈಸಿದ್ದು ಮನೆಯಲ್ಲಿರುವ ಸ್ಪರ್ಧಿಗಳಿಗೆ ನಾವು ನೂರು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ವಿಜೇತರಾಗಬೇಕು ಎಂಬ ಉಮ್ಮಸ್ಸು ಬಂದಂತಿದೆ.
ಇದಕ್ಕಾಗಿ ಎಲ್ಲರೂ ಕೂಡ ಬಹಳ ಅಚ್ಚುಕಟ್ಟಾಗಿ ಆಟವನ್ನು ಆಡಬೇಕು ಎಂದುಕೊಂಡಿದ್ದಾರೆ. ಟೈಂ ಸಿಕ್ಕಿದಾಗಲೆಲ್ಲ ನಮ್ಮ ಶಕ್ತಿ ಎಂತದು ಎಂಬುದನ್ನು ಪ್ರದರ್ಶನಕ್ಕೆ ಇಡುತ್ತಾ ಇದ್ದಾರೆ. ಈಗ ಮನೆಗೆ ಹೊಸ ಸ್ಪರ್ಧಿಗಳು ಬಂದಿದ್ದು ಬಿಗ್ ಬಾಸ್ ಮನೆ ದೊಡ್ಡದಾಗಿದೆ. ಹೊಸದಾಗಿ ಬಂದವರು ಕೂಡ ಈಗ ಮನೆಯಲ್ಲಿ ಎಲ್ಲರ ಹಾವಭಾವಗಳನ್ನು ನೋಡುತ್ತಾ ಇದ್ದಾರೆ.

ಈಗ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಎರಡು ತಂಡಗಳನ್ನು ಮಾಡಿಕೊಂಡು ಆಡುತ್ತಾ ಗೆಲ್ಲಬೇಕಾಗಿದೆ. ತಮ್ಮ ತಂಡವನ್ನು ಗೆಲ್ಲಿಸಬೇಕು ಎಂದು ಕೊಂಡು ಜಗಳಗಳನ್ನು ಸಹ ಮಾಡಿಕೊಳ್ಳುತ್ತಾ ಇದ್ದಾರೆ. ಅದು ಆಟವೋ ಅಥವಾ ಕಾದಾಟವೋ ಒಂದು ಕೂಡ ತಿಳಿಯುತ್ತಿಲ್ಲ. ಎಲ್ಲವನ್ನು ವೈಯಕ್ತಿಕವಾಗಿ ತೆಗೆದುಕೊಂಡು ಟಾರ್ಗೆಟ್ ಮಾಡುವಂತಿದೆ ಬಿಗ್ ಬಾಸ್ ಸ್ಪರ್ಧಿಗಳ ನಡತೆ.
ಬಿಗ್ ಬಾಸ್ ಯಾವುದೇ ಟಾಸ್ಕ್ ನೀಡಿದರು ಸಹ ಅದು ಜಗಳದಿಂದಲೇ ಪ್ರಾರಂಭವಾಗಿ ಜಗಳದಲ್ಲೇ ಅಂತ್ಯವಾಗುತ್ತದೆ. ಇಲ್ಲಿಯವರೆಗೂ ಕೂಡ ಸೀಸನ್ 10ರಲ್ಲಿ ಯಾರು ಕೂಡ ಟಾಸ್ಕ್ ಅನ್ನು ಜಗಳ ಮಾಡದೆ ಆಡಿದವರೇ ಇಲ್ಲ. ಇಂದು ಕೂಡ ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದ್ದು ವಿನಯ್ ಹಾಗೂ ತುಕಾಲಿ ಸಂತೋಷ್ ಜಗಳವಾಡಿಕೊಂಡಿದ್ದಾರೆ.
ಇನ್ನು ತುಕಾಲಿ ಸಂತೋಷ್ ಮತ್ತೊಬ್ಬ ಸ್ಪರ್ಧಿ ವರ್ತೂರು ಸಂತೋಷ್ ಬಳಿಯಲ್ಲಿ ನಾವು ಮನೆಯಲ್ಲಿ ಇನ್ನಷ್ಟು ದಿನ ಇರುತ್ತೇವೋ ಗೊತ್ತಿಲ್ಲ. ಆದರೆ ನಾವು ನಮ್ಮತನವನ್ನು ಬಿಟ್ಟುಕೊಟ್ಟು ಮಾತ್ರ ಆಟವನ್ನು ಆಡಬಾರದು ಎಂದು ಹೇಳಿದ್ದಾರೆ. ಏನೇ ಆದರೂ ಸರಿಯೇ? ನಾವು ಈ ಮನೆಯಲ್ಲಿ ಯಾರು ಎಂಬುದನ್ನು ತೋರಿಸಬೇಕಾಗಿದೆ ಎಂದು ವರ್ತೂರು ಬಳಿ ಹೇಳಿದ್ದಾರೆ. ಅದೇ ನಿಯಮವನ್ನ ಆಟದಲ್ಲೂ ತೋರಿಸಲು ಮುಂದಾಗಿದ್ದಾರೆ. ವಿನಯ್ ಟೀಂ ಟ್ರಿಗರ್ ಮಾಡಿದಾಗ ತುಕಾಲಿ ಸಂತೋಷ್ ತಿರುಗಿ ಬಿದ್ದಿದ್ದಾರೆ. ನಾವೇನು ಕಮ್ಮಿ ಇಲ್ಲ ನಾವು ಸಹ ತಿರುಗಿ ಬೀಳುತ್ತೇವೆ ಎಂಬುದನ್ನು ವಿನಯ್ ಟೀಮ್‌ಗೆ ತೋರಿಸಿ ಕೊಟ್ಟಿದ್ದಾರೆ. ಆಟ ಕಾದಾಟವಾಗಿ ಪರಿವರ್ತನೆ ಆಗಿದೆ.

ಟಾಸ್ಕ್ ಗೆಲ್ಲಲು ಬಿಗ್ ಬಾಸ್ ಮನೆಯಲ್ಲಿ ಕಾದಾಟ
ಇಂದು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಅನ್ನು ನೀಡಲಾಗಿದೆ. ಅದರಲ್ಲಿ ಮಣ್ಣಿನ ಮಕ್ಕಳು ಹಾಗೂ ವಿಕ್ರಾಂತ್ ಎಂದು ಎರಡು ತಂಡಗಳನ್ನು ಮಾಡಲಾಗಿದೆ. ಎರಡು ಪೈಪ್‌ಗಳನ್ನು ಇಟ್ಟಿದ್ದು ಅದರ ಕೆಳಗೆ ಒಂದು ದೊಡ್ಡ ಡಬ್ ಇಡಲಾಗಿದೆ. ಯಾರು ಮೊದಲು ಪೈಪ್ ಮೂಲಕ ಡಬ್ಬಿಗೆ ನೀರನ್ನು ತುಂಬಿಸುತ್ತಾರೆ ಎಂಬುದು ಆಟದ ನಿಯಮವಾಗಿದೆ. ಎದುರಾಳಿ ತಂಡದವರು ನೀರು ತುಂಬಿಸುವಾಗ ನೀರನ್ನು ತುಂಬಿಸಿದಂತೆ ತಡೆಯಬೇಕು ಇದು ಟಾಸ್ಕ್‌ನ ನಿಯಮವಾಗಿದೆ.
ಇದನ್ನು ವೈಯಕ್ತಿಕವಾಗಿ ಬಳಸಿಕೊಂಡಂತೆ ಕಾಣುತ್ತಿದೆ. ತುಕಾಲಿ ಸಂತೋಷ್ ನೀರು ತುಂಬಲು ಹೋದಾಗ ಸ್ನೇಹಿತ್ ಅಡ್ಡ ಬಂದು ತುಕಾಲಿ ಸಂತೋಷ್ ಅವರನ್ನು ತಳ್ಳಿದ್ದಾರೆ. ಈ ವೇಳೆ ತುಕಾಲಿ ಇದು ಮೋಸ ಜೋರಾಗಿ ತಳಬಾರದಿತ್ತು ಎಂದಿದ್ದಾರೆ. ಇನ್ನು ಇದೇ ವೇಳೆ ತುಕಾಲಿ ಸಂತೋಷ್ ನೀನು ಬೇಕು ಎಂದು ನನ್ನನ್ನು ತಳ್ಳಿದಿಯಾ ಎಂದು ವಿನಯ್ ಬಳಿ ಹೇಳಿದ್ದಾರೆ. ಇನ್ನು ವಿನಯ್ ಇದೇ ವೇಳೆ ಕೋಪ ಮಾಡಿಕೊಂಡು ತುಕಾಲಿ ಸಂತೋಷ್‌ಗೆ ಹೋಗೋಲೋ ಎಂದು ಹೇಳಿದ್ದಾರೆ.
ಇದು ಆಟವಲ್ಲ ಕಾದಾಟ ಎಂದ ನೆಟ್ಟಿಗರು
ತುಕಾಲಿ ಸಂತೋಷ್ ಕಾರ್ತಿಕ್‌ಗೆ ನಿಮ್ಮ ರೀತಿ ಆಟವಾಡುವುದು ಬೇಡ ಗುರು ಎಂದು ಹೇಳಿದಾಗ ವಿನಯ್ ಸುಮ್ಮನೆ ಇದ್ದಿದ್ದರೂ ಆಗುತ್ತಿತ್ತು. ಆದರೆ ತುಕಾಲಿ ಸಂತೋಷ್ ಅವರು ಮಾತು ಮುಂದುವರಿಸಿದಾಗ ಹೋಗೋಲೋ ಎಂದು ಮಾತನಾಡಿದ್ದಾರೆ. ವಿನಯ್ ಮಾತು ಕೇಳಿದ ನೆಟ್ಟಿಗರು ಇದು ಆಟವಲ್ಲ ಕಾದಾಟ, ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಾ ಇದ್ದಾರೆ ಎಂದಿದ್ದಾರೆ. ಈಗಾಗಲೇ 50 ದಿನಗಳು ಸಂಪೂರ್ಣವಾಗಿ ಕಳೆದಿದ್ದು ಎಲ್ಲರಿಗೂ ಗೆಲವು ಸಾಧಿಸಬೇಕು ಎಂಬ ಹಠ ಬಂದಿದೆ ಇದಕ್ಕಾಗಿ ಮನೆಯಲ್ಲಿ ಜಗಳಗಳು ಆಗುತ್ತಿವೆ.


Click it and Unblock the Notifications











