BBK10: ಕಳಪೆಯೇ ಇಲ್ಲದೆ ಜೈಲು ಸೇರಿದ ತುಕಾಲಿ.. ಇತಿಹಾಸ ಪುಟ ಸೇರಲು ಹೊರಟ ಸಂತೋಷ್!
ಬಿಗ್ ಬಾಸ್ ಮನೆಯಲ್ಲಿ ಎಲ್ಲವೂ ಬಹಳ ಮುಖ್ಯವಾಗುತ್ತದೆ. ಉತ್ತಮ, ಕಳಪೆ, ನಾಮಿನೇಷನ್ ಹೀಗೆ ಎಲ್ಲವೂ. ಆದರೆ ನಿಯಮಗಳನ್ನು ಮೀರಿದರೆ ಅದಕ್ಕೆ ಶಿಕ್ಷೆ ಅಂತು ಖಂಡಿತ ಬಿಗ್ ಬಾಸ್ ನೀಡಲಿದೆ. ವಾರ ಪೂರ್ತಿ ಮನೆಯಲ್ಲಿ ಆಕ್ಟಿವ್ ಆಗಿಲ್ಲದೆ ಇರುವವರಿಗೆ ಕಳಪೆ ನೀಡುತ್ತಾರೆ. ಆ ಕಳಪೆ ನೀಡಿದಾಗಲಾದರೂ ಸದಸ್ಯರು ಆಕ್ಟಿವ್ ಆಗುತ್ತಾರೆ ಎಂಬ ನಂಬಿಕೆ ಅದು.
ಆದರೆ, ಈ ಸೀಸನ್‌ನಲ್ಲಿ ಒಂದು ಸಲ ಅಲ್ಲ ಎರಡು ಸಲ ಕಳಪೆಯನ್ನು ಕೊಡುವಾಗ ತಪ್ಪು ಆಯ್ಕೆ ಮಾಡಿದ್ದಾರೆ. ಅದನ್ನು ಪಂಚಾಯ್ತಿಯಲ್ಲಿ ಎರಡು ಬಾರಿ ಸುದೀಪ್ ಹೇಳಿದ್ದಾರೆ. ಆದರೂ, ಮತ್ತೆ ಮತ್ತೆ ಕಳಪೆ ನೀಡುವ ವಿಚಾರದಲ್ಲಿ ತಪ್ಪು ಮಾಡಿದ್ದಾರೆ. ಆದ್ರೀಗ ಈ ವಾರ ಕಳಪೆಯನ್ನೇ ಪಡೆಯದೆ ತುಕಾಲಿ ಸಂತೋಷ್ ಜೈಲು ಸೇರಿದ್ದಾರೆ.

ಜೈಲಿಗೆ ಕಳುಹಿಸಲು ಬಿಗ್ ಬಾಸ್ ಒಪ್ಪಿಗೆ
ಬಿಗ್ ಬಾಸ್ ಮನೆಯಲ್ಲಿ ಜೈಲಿಗೆ ಹೋಗುವುದು ಗಂಭೀರ ಶಿಕ್ಷೆ. ಆದರೆ ತುಕಾಲಿ ಮಾತು ಕೇಳಿ ವರ್ತೂರು ಸಂತೋಷ್ ಜೈಲಿಂದ ಹೊರಗೆ ಬಂದಿದ್ದರು. ಇದೇ ಕಾರಣಕ್ಕಾಗಿಯೇ ಕಿಚ್ಚನ ಪಂಚಾಯ್ತಿಯಲ್ಲಿ ತುಕಾಲಿಗೆ ಶಿಕ್ಷೆ ನೀಡಲು ಹೇಳಿದ್ದರು. ಮನೆಯವರೆಲ್ಲ ಒಮ್ಮತದಿಂದ ತುಕಾಲಿಯನ್ನು ಜೈಲಿಗೆ ಹಾಕಲು ನಿರ್ಧರಿಸಿದರು. ಅದಕ್ಕೆ ಒಪ್ಪಿಗೆ ನೀಡಿದ ಬಿಗ್ ಬಾಸ್ ಜೈಲಿನ ಕೀ ಕಳುಹಿಸಿಕೊಟ್ಟಿದೆ.
ಆರತಿ ಮಾಡಿ ಕಳುಹಿಸಿದ ತನಿಷಾ
ಬಿಗ್ ಬಾಸ್ ಒಪ್ಪಿಗೆ ನೀಡಿದರೂ ತುಕಾಲಿ ಅದಕ್ಕೆ ಒಪ್ಪಲಿಲ್ಲ. ಆದರೆ ಮನೆಯವರೆಲ್ಲಾ ಅದಕ್ಕೆ ಬಿಡಬೇಕಲ್ಲ. ತನಿಷಾ ಅಂತೂ ಸಿಕ್ಕಾಪಟ್ಟೆ ಖುಷಿ ಪಟ್ಟರು. ಅಷ್ಟೇ ಯಾಕೆ, ತುಕಾಲಿಗೆ ಬರಿ ಗೈನಲ್ಲಿಯೇ ಆರತಿ ಬೆಳಗಿ ಜೈಲಿನ ಒಳಗೆ ಬಿಟ್ಟು ಬಂದರು. ವರ್ತೂರು ಸಂತೋಷ್ ಮನನೊಂದುಕೊಂಡು, ಕಳುಹಿಸಿದರು. ಫ್ರೆಂಡ್‌ಶಿಪ್ ಗೋಸ್ಕರ ಜೈಲಿಗೆ ಹೋಗುತ್ತಾ ಇದ್ದೀನಿ ಅಂತ ಹೇಳಿದ ತುಕಾಲಿ, ಅಳುತ್ತಾ, ಕಷ್ಟಪಟ್ಟು ಜೈಲಿಗೆ ಇಳಿದರು.

ಒಬ್ಬರೇ ಮಲಗಲು ಭಯಪಟ್ಟ ತುಕಾಲಿ
ತಮಾಷೆ ಮಾಡಲು ಹೋಗಿ ಲಾಕ್ ಆದ ತುಕಾಲಿ. ಈಗ ಜೈಲಿನೊಳಗೆ ಕೂತು ಒಬ್ಬರೆ ಮಾತನಾಡುತ್ತಿದ್ದಾರೆ. "ಕಾಮಿಡಿಯಾಗಿ ಇರುತ್ತದೆ ಎಂದು ಹೇಳಿದರೆ ಸೀರಿಯಸ್ ಆಗಿ ಹೋಯಿತು. ಜೈಲಿಂದ ತಪ್ಪಿಸಿಕೊಂಡವರು ಹಾಸಿಗೆ ಮೇಲೆ ಆರಾಮವಾಗಿ ಮಲಗಿದ್ದಾರೆ. ಹಿಸ್ಟರಿ ಕ್ರಿಯೇಟ್ ಮಾಡು ಅಂತ ಹೇಳುವುದಕ್ಕೆ ಹೋಗಿ ಜೈಲು ಸೇರಿದ್ದೀನಿ. ಇಲ್ಲಿ ಒಬ್ಬನೆ ಬೇರೆ. ಇದೇ ಮೊದಲು ಒಬ್ಬನೆ ಮಲಗುತ್ತಿರುವುದು" ಎಂದು ಭಯದಿಂದಾನೇ ಮಲಗಿದ್ದಾರೆ.
ಪವಿಗೆ ಥ್ಯಾಂಕ್ಸ್ ಹೇಳಿದ ತುಕಾಲಿ
ಈ ವಾರವೂ ಹಲವರು ನಾಮಿನೇಟ್ ಆಗಿದ್ದರು. ಆದರೆ ವೈಕ್ಡ್ ಕಾರ್ಡ್ ಎಂಟ್ರಿಯಿಂದ ಮನೆಗೆ ಬಂದ ಇಬ್ಬರಿಗೆ ಇಬ್ಬರನ್ನು ನಾಮಿನೇಷನ್‌ನಿಂದ ಬಚಾವ್ ಮಾಡುವ ಅವಕಾಶವಿತ್ತು. ಅದರಲ್ಲಿ ತುಕಾಲಿ ಸಂತೋಷ್ ಕೂಡ ನಾಮಿನೇಷನ್ ಆಗಿದ್ದರು. "ತಂದಿಡುತ್ತೀಯಾ ತಂದಿಡುತ್ತೀಯಾ ಅಂತ ಹೇಳಿ ಹೇಳಿನೇ ನನ್ನ ನಾಮಿನೇಷನ್ ಮಾಡಿದ್ದರು" ಎಂದು ತುಕಾಲಿ ಜೈಲಿನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ನಾಮಿನೇಷನ್‌ನಿಂದ ಬಚಾವ್ ಮಾಡಿ ಎಂದು ವೈಲ್ಡ್ ಕಾರ್ಡ್ ಎಂಟ್ರಿಗೆ ಅವಕಾಶ ನೀಡಿದಾಗ, ಪವಿ ತುಕಾಲಿ ಸಂತೋಷ್ ಅವರನ್ನು ಬಚಾವ್ ಮಾಡಿದ್ದಾರೆ. ಇದಕ್ಕೆ "ಪವಿ ಅವರು ನಾಮಿನೇಷನ್‌ನಿಂದ ಸೇವ್ ಮಾಡಿದ್ದಾರೆ. ಈ ಮನೆಯಿಂದ ಸೇವ್ ಮಾಡುವುದಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯಿಂದ ಒಂದು ಹುಡುಗಿಯೇ ಬರಬೇಕಾಯಿತು" ಅಂತ ಖುಷಿ ಪಟ್ಟಿದ್ದಾರೆ.


Click it and Unblock the Notifications











